Friday, June 13, 2014

Daily Crime Reports 13-06-2014

ದೈನಂದಿನ ಅಪರಾದ ವರದಿ.

ದಿನಾಂಕ 13.06.201416:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

1

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11/06/2014 ರಂದು ಸಮಯ ಸುಮಾರು 20:40 ರಿಂದ 21:00 ಗೋಟೆಗೆ ಮಧ್ಯೆದ ಅವಧಿಯಲ್ಲಿ  ಬೀಳಿ ಬಣ್ಣದ ಕಾರೊಂದನ್ನು ಅದರ ಚಾಲಕ ಡಾ: ಅಂಬೆಡ್ಕರ್ ಸರ್ಕಲ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಹಂಪನಕಟ್ಟೆ ಬಳಿ ಇರುವ ಕ್ಯಾಥೋಲಿಕ್ ಕ್ಲಬ್ ಎದುರು ರಸ್ತೆ ದಾಟಲು ನಿಂತಿದ್ದ ನವೀನಚಂದ್ರ ಎಂಬುವರಿಗೆ ಡಿಕ್ಕಿ ಮಾಡಿ ಆರೋಪಿ ಕಾರು ಚಾಲಕ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ. ಗಾಯಾಳು ನವೀನಚಂದ್ರ ಅವರ ಮುಖಕ್ಕೆ ಗಂಭಿರ ಸ್ವರೂಪದ ಗಾಯಗೊಂಡು ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ. ಡಿಕ್ಕಿ ಮಾಡಿದ ಕಾರಿನ ಚಾಲಕ ನೋದಣಿ ಸಂಖ್ಯೆ ತಿಳಿದು ಬಂದಿರುವುದಿಲ್ಲ.

 

2.ಮಂಗಳೂರು  ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12/06/2014 ರಂದು 15:05 ಗಂಟೆಗೆ ಕಾರು ನಂಬ್ರ KA-02-MH-7604 ನ್ನು ಅದರ ಚಾಲಕ AJ ಆಸ್ಪತ್ರೆ ಕಡೆಯಿಂದ ಕುಂಟಿಕಾನ್ ಜಂಕ್ಷನ್ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು AJ ಆಸ್ಪತ್ರೆಯ ಮೇನ್ ಗೇಟಿನ ಬಳಿ ಇರುವ ಕ್ಯಾಂಟಿನ್ ಎದುರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾ: ಆಕಾಶ ಎಂಬುವರಿಗೆ ಡಿಕ್ಕಿ ಮಾಡಿರುವುದರಿಂದ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು AJ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾರೆ.

 

3.ಮಂಗಳೂರು  ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯದಿದಾರರಾದ ಶ್ರೀ ನವೀನ್ ಕುಮಾರ್ ರವರು ಮಂಗಳೂರು ಅಳಕೆ ಶ್ರೀ ಗೊಕರ್ಣನಾಥೇಶ್ವರ ಟೆಂಪಲ್ ರಸ್ತೆ, ನಾಗಬ್ರಹ್ಮ ದೇವಸ್ಥಾನದ ಎದುರು ಇರುವ ಶ್ರೀ ಸಾಯಿದುರ್ಗಾ ಏಲೆಕ್ಟ್ರಿಕಲ್ ಪಾಯಿಂಟ್ ಎಂಬ ಏಲೆಕ್ಟ್ರಿಕಲ್ ಸಂಸ್ಥೆಯಲ್ಲಿ ಸುಮಾರು 9 ತಿಂಗಳಿನಿಂದ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಅಂಗಡಿಯ ಹೊರಗಡೆ ಕೇಬಲ್ ಬಂಡಲ್ ಗಳನ್ನು ಇರಿಸಿದ್ದು, ಪಿರ್ಯಾದಿದಾರರು ದಿನಾಂಕ 11-06-2014 ರಂದು ರಾತ್ರಿ 20:00 ಗಂಟೆಗೆ ಅಂಗಡಿಯನ್ನು ಮುಚ್ಚಿ ಹೋಗುವಾಗ ಎಲ್ಲಾ ಬಂಡಲ್ ಗಳನ್ನು ಪರಿಶೀಲಿಸಿ ಹೋಗಿದ್ದು, ದಿನಾಂಕ 12-06-2014 ರಂದು ಬೆಳಿಗ್ಗೆ 09:00 ಗಂಟೆಗೆ ಅಂಗಡಿ ಬಾಗಿಲು ತೆರೆದು ಹೊರಗಡೆ ಇದ್ದ ಕೇಬಲ್ ಬಂಡಲ್ ಗಳನ್ನು ಪರಿಶೀಲಿಸಿದಾಗ ಹೊರಗಡೆ ಇದ್ದ ಒಂದು ಬಂಡಲ್ ಕೇಬಲ್ ಕಾಣೆಯಾಗಿದ್ದು, ಇದನ್ನು ಯಾರೋ ಕಳ್ಳರು ಕಳುವು ಮಾಡಿದ್ದಾಗಿದ್ದು, ಇದರ ಮೌಲ್ಯ ರೂ. 1,00,000/- ಆಗಿರುತ್ತದೆ.

 

4.ಮಂಗಳೂರು  ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 04-06-2014 ರಂದು 11-30 ಗಂಟೆಯಿಂದ ದಿನಾಂಕ 05-06-2014ರಂದು ಬೆಳಿಗ್ಗೆ 06-00 ಗಂಟೆಯ ಮದ್ಯೆ ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ  ರಿಟ್ರೀಟ್ ಅಪಾರ್ಟ್ ಮೆಂಟ್ ಎದುರುಗಡೆ ಪಾರ್ಕ್ ಮಾಡಿದ್ದ ಪಿರ್ಯಾದಿದಾರರಾದ ಶ್ರೀ ರಾಜೇಶ್ ಕುಮಾರ್ ಅರೋರಾ ರವರ ಆರ್. ಸಿ. ಮಾಲಕತ್ವದ 2005ನೇ ಮೋಡಲ್ ಅಂದಾಜು ರೂಪಾಯಿ 49000/- ಬೆಲೆ ಬಾಳುವ ಸಿಲ್ವರ್ ಬಣ್ಣದ KA 19 MD 4136 ನೇ ನೊಂದಣಿ ಸಂಖ್ಯೆಯ MARUTH 800 ಕಾರನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಕಾರಿನ ಡ್ಯಾಶ್ ಬಾಕ್ಸ್ ನಲ್ಲಿ ಸದ್ರಿ ಕಾರಿಗೆ ಸಂಬಂದಿಸಿದ ಆರ್.ಸಿ. ಮತ್ತು ಇನ್ಸುರೆನ್ಸ್ ಜೇರಾಕ್ಸ್ ಪ್ರತಿ ಕೂಡ  ಇರುತ್ತದೆ. ಕಳವಾದ ಕಾರನ್ನು ಮಂಗಳೂರು ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.

 

5.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಆಸಿಫ್ ಎಂಬವರ ಚಿಕ್ಕಮ್ಮ ಶ್ರಿ ಮತಿ ನಸ್ರೀನ್ ತಾಜ್ ಪ್ರಾಯ 23 ವರ್ಷ ಎಂಬುವರು ಚಿಕ್ಕಮಗಳೂರು ಜಲ್ಲೆಯ ಮೂಡುಗೆರೆ, ಬೆದ್ರಾಳಿ ಗ್ರಾಮದಲ್ಲಿ ಗಂಡನ ಮನೆಯಲ್ಲಿ ವಾಸ ಮಾಡಿಕೊಂಡಿದ್ದು 3 ತಿಂಗಳಿನಿಂದ ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಿದ್ದು ಶ್ರಿಮತಿ ನಸ್ರೀನ್ ತಾಜ್ ಳು ದಿನಾಂಕ 07-06-2014 ರಂದು ಮೂಡುಗೆರೆ ಯಿಂದ ಹೊರಟು ಚಿಕ್ಕಮ್ಮನ ಮನೆ ಗುರುಕಂಬಳಕ್ಕೆ ಬಂದಿದ್ದು ದಿನಾಂಕ 09-06-2014 ರಂದು ವಾಪಸ್ಸು ಮೂಡುಗೆರೆ, ಬೆದ್ರಾಳಿಗೆ ಬಸ್ಸಿನಲ್ಲಿ ಹೊರಟು ಹೋದವರು ಗಂಡನ ಮನೆಗೆ ಹೋಗದೆ ಕಾಣೆಯಾಗಿದ್ದು ಗಂಡನ ಮನೆಯ ಸಂಬಂಧಿಕರಲ್ಲಿ ಹಾಗೂ ಗುರುಕಂಬಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಕಾಣೆಯಾದ ಶ್ರಿಮತಿ ನಸ್ರೀನ್ ತಾಜ್ ರವರ ಚಹರೆ ಹೆಸರು - ಶ್ರೀ ಮತಿ ನಸ್ರೀನ್ ತಾಜ್ ಪ್ರಾಯ 23 ವರ್ಷ, ಎತ್ತರ- 5 ಅಡಿ 6 ಇಂಚು ಬಣ್ಣ - ಬಿಳಿ ಮೈ ಬಣ್ಣ ಬಾಷೆ - ಉರ್ದು, ಹಿಂದಿ, ಕನ್ನಡ, ತುಳು ದರಿಸಿರುವ ಬಟ್ಟೆ- ಹಸಿರು ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಬುರ್ಕಾ,ಕಿವಿಯಲ್ಲಿ ಚಿನ್ನದ ಓಲೆ 1 ಜೋತೆ, ಕುತ್ತಿಗೆಯಲ್ಲಿ ಚಿನ್ನದ ಸರ ಧರಿಸಿರುತ್ತಾಳೆ.

 

6.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಶ್ರೀನಾಥ್ ಕಾಮತ್ ರವರು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ  ಇಎನ್ಟಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 12-06-2014 ರಂದು ಪಿರ್ಯಾಧಿದಾರರು ಆಸ್ಪತ್ರೆಯಿಂದ ಕರ್ತವ್ಯ ಮುಗಿಸಿ ತೊಕ್ಕೊಟ್ಟುವಿನ ಕ್ಲಿನಿಕ್‌‌ಗೆ ಹೋಗುವರೇ ಮದನಿ ನಗರದ ಸಮೀಪ ಹೋಗುತ್ತಿದ್ದಂತೆಯೇ ಸಮಯ ಸುಮಾರು ಸಂಜೆ 3:55 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಬಾಬ್ತು ಕಾರು ನಂಬ್ರ: ಕೆ.. 19- ಎಂ.-ಸಿ- 5996 ನೇ ಮಾರುತಿ ಸ್ವಿಫ್ಟ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಪಿರ್ಯಧಿದಾರರ ಮುಂದಿನಿಂದ ಹೋಗುತ್ತಿದ್ದ ಮಾರುತಿ ಓಮ್ನಿ ಕಾರು ನಂಬ್ರ: ಕೆ.. 19-ಎನ್‌- 9637 ನೇ ದನ್ನು  ಅದರ ಚಾಲಕ ನಿಲ್ಲಿಸಿದಾಗ ಪಿರ್ಯಧಿದಾರರು ತನ್ನ ಕಾರನ್ನು ನಿಲ್ಲಿಸಿದಾಗ ಸಮಯ ಪಿರ್ಯಧಿದಾರರ ಹಿಂದುಗಡೆಯಿಂದ ಬಸ್ಸೊಂದನ್ನು ಅದರ ಚಾಲಕ ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಧಿದಾರರ ಕಾರಿನ ಹಿಂಬದಿಗೆ ಒಮ್ಮೇಲೆ ಢಿಕ್ಕಿ ಹೊಡೆದಿದ್ದರಿಂದ ಪಿರ್ಯಧಿದಾರರು ನಿಲ್ಲಿಸಿದ ಕಾರು ಮುಂದಕ್ಕೆ ಚಲಿಸಿ ಎದುರುಗಡೆ ನಿಲ್ಲಿಸಿದ್ದ ಮಾರುತಿ ಕಾರಿನ ಹಿಂಬದಿಗೆ ಹೋಗಿ ತಾಗಿತು. ಪಿರ್ಯಾಧಿದಾರರ ಕಾರು ಮುಂದೆ ನಿಲ್ಲಿಸಿದ ಮಾರುತಿ ಓಮ್ನಿ ವಾಹನಕ್ಕೆ ತಾಗಿದುದರಿಂದ ಮಾರುತಿ ಓಮ್ನಿ ವಾಹನದ ಹಿಂದುಗಡೆ ಜಖಂ ಉಂಟಾಗಿರುತ್ತದೆ. ಅಲ್ಲದೆ ಪಿರ್ಯಧಿದಾರರ ಕಾರಿನ ಮುಂದುಗಡೆಯ ಬಂಪರ್  ಹಾಗೂ ಕಾರಿನ ಹಿಂದಿನ ಭಾಗ ಸಂಪೂರ್ಣ ಜಖಂ ಗೊಂಡಿರುತ್ತದೆ.  ಅಪಘಾತಕ್ಕೆ ಬಸ್ ನಂಬ್ರ: ಕೆ.-21-4256 ನೇ ಬಸ್ ಚಾಲಕನು ತನ್ನ ಬಾಬ್ತು ಬಸ್ಸನ್ನು ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಢಿಕ್ಕಿ ಮಾಡಿರುವುದೇ ಕಾರಣವಾಗಿರುತ್ತದೆ.

 

7.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-06-204 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಶ್ರೀ ಚಂದ್ರು ರವರು ಅವರ ಪರಿಚಯದ ಜಾಪರ್ ಮಂಜುನಾಥ, ಪ್ರಕಾಶ್ ಹಾಗೂ ಇತರರೊಂದಿಗೆ ಅವರ ಧಣಿಯವರಾದ ರವೀಂದ್ರರವರ ಜೊತೆಯಲ್ಲಿ ಕಾಟಿಪಳ್ಳದ 6 ನೇ ಬ್ಲಾಕ್ ಗೆ ಬಂದಿದ್ದು ಅಲ್ಲಿ ಬೆಳಗಾಂ ಜೋಗಿನ್ ಎಲೆಕ್ಟ್ರಿಕಲ್ಸ್ ಸೂಪರ್ ವೈಸರ್ ಆದ ಮಧು ಸುಭಾಷ್ ಟೋಂಬ್ರಿ ಎಂಬವರು ರಸ್ತೆಯ ಉತ್ತರ ಬದಿಯ ಕಂಬಗಳಿಗೆ ಏರಿಯಲ್ಸ್ ಬೆಂಚ್ ಕೇಬಲ್ಗಳನ್ನು ಅಳವಡಿಸುವ ಕೆಲಸ ನೀಡಿದ್ದು ಹಾಗೆಯೇ ಅಲ್ಲಿನ ಹೈ ಟೆನ್ಸ್  ವಿದ್ಯುತ್ ನ್ನು ಆಪ್ ಮಾಡಿದ್ದು ಹಾಗೆ ಕಾಟಿಪಳ್ಳದ ನ್ಯಾಯ ಬೆಲೆ ಅಂಗಡಿಯ ಎದುರಿನಲ್ಲಿರುವ ಹೈ ಟೆನ್ಸ್ವಿದ್ಯುತ್ ಇರುವ ಕಂಬಕ್ಕೆ ಜಾಪರ್ ಹತ್ತಿ ಕೆಲಸ ಮಾಡುತ್ತಿರುವಾಗ ಅಲ್ಲಿನ ರಸ್ತೆಯ ದಕ್ಷಿಣ ಬದಿಯಲ್ಲಿ ವಿದ್ಯುತ್ ಕಂಬಕ್ಕೆ ಏಣಿಯನ್ನು ಹಾಕಿ ಟಿವಿ ಕೇಬಲ್ ನ್ನು ನೆಲದಿಂದ ಮೇಲಕ್ಕೆ ಕಟ್ಟಲು ಸಾಯಿ ಸೆಟಲೈಟ್ ಕೇಬಲ್ನ್ನು ರಾಜು ಎಂಬವರು ಸಂಜೆ ಸುಮಾರು 4-15 ಗಂಟೆಗೆ ಒಮ್ಮೆಲೆ ನಿರ್ಲಕ್ಷತನದಿಂದ ಮೇಲಕ್ಕೆ ಎತ್ತಿದಾಗ ಸದ್ರಿ ಟಿ ವಿ ಕೇಬಲ್ ದಕ್ಷಿಣ ಬದಿಯ ಹೆಚ್ ಟಿ ಕಂಬದಲ್ಲಿನ ಹೈ ಟೆನ್ಸ್ ವೈರ್ ಗೆ ತಾಗಿ ಅದರ ಕರೆಂಟ್ ಟಿವಿ ಕೇಬಲ್ ಸಪೋರ್ಟ್ಗೆ ಇದ್ದ ತಂತಿ ಮುಖೇನ ವಿದ್ಯುತ್ ಹರಿದು ಜಾಪರ್ ಗೆ ಶಾಕ್ ಹೊಡೆದು ಸುಮಾರು 13 ಅಡಿ ಕೆಳಗೆ ಬಿದ್ದು ಅಲ್ಲಿದ್ದ ಕಲ್ಲು ಆತನ ತಲೆಗೆ ಬಡಿದು ಗಂಭೀರ ಸ್ವರೂಪದ ಗಾಯಗೊಂಡವರನ್ನು ಅಲ್ಲಿಗೆ ಬಂದ ವಾಹನದಲ್ಲಿ ಬಸವರಾಜುರವರು ಚಿಕತ್ಸೆ ಬಗ್ಗೆ ಮಂಗಳೂರಿನ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಜಾಪರವರು ಸಂಜೆ ಸುಮಾರು 6-07 ಗಂಟೆಗೆ ಮೃತಪಟ್ಟದ್ದಾಗಿರುತ್ತದೆ. ಮೇಲ್ಕಂಡ ಸ್ಥಳಗಳಲ್ಲಿ ಸುಮಾರು 13 ಅಡಿ ಎತ್ತರದಲ್ಲಿ ಕಂಬ ಹತ್ತಿ ಕೆಲಸ ಮಾಡುವ ಮೇಲ್ಕಂಡ ಕೆಲಸಗಾರರಿಗೆ ಮಧು ಸುಭಾಷ್ ಟೋಂಬ್ರಿ ಯವರು ಸೇಪ್ಟಿ ಬೆಲ್ಟ್ ಆಗಲಿ ತಲೆಗೆ ಹೆಲ್ಮೆಟ್ ಆಗಲಿ ಸುರಕ್ಷತೆ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಯಾವುದೇ ಸಾಧನಗಳನ್ನು ನೀಡದೇ ನಿರ್ಲಕ್ಷತನ ವಹಿಸಿದ ಪರಿಣಾಮ ಹಾಗೂ ರಾಜುರವರು ಕೂಡ ನಿರ್ಲಕ್ಷತನದಿಂದ ಟಿ ವಿ ಕೇಬಲನ್ನು ಮೇಲೆಕ್ಕೆ ಎತ್ತಿದ ಪರಿಣಾಮ ವಿದ್ಯುತ್ ಹರಿದು ಸುಮಾರು 13 ಅಡಿ ಕೆಳಗೆ ಜಾಪರವರು ಬಿದ್ದು ಮೃತಪಡಲು ಕಾರಣರಾಗಿರುತ್ತಾರೆ.

 

8.ಸುರತ್ಕಲ್ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 11-06-2014 ರಂದು ಸುರತ್ಕಲ್ ಎನ್ ಟಿ ಕೆ ಯಲ್ಲಿರುವ DASA (Direct Admission of Students Abroad) ದಕ್ಕೆ www.dasafacemash.in ನೇದರಿಂದ ಮೇಲ್ ಸಂದೇಶ ಬಂದಿದ್ದು ಇದರಲ್ಲಿ ಏಪ್ರಿಲ್ ಮೇ 2014   DASA -2014 UG Admission ಹೆಣ್ಣು ಮಕ್ಕಳ ಪೋಟೊಗಳನ್ನು ಹಾಕಿದ್ದು ಯಾರೋ ದುಷ್ಕರ್ಮಿಗಳು DASA website ನ್ನು ಹ್ಯಾಕ್ ಮಾಡಿ ದುರ್ಬಳಕೆ ಮಾಡಿರುವುದಾಗಿದೆ.

No comments:

Post a Comment