Thursday, June 12, 2014

Daily Crime Reports 11-06-2014

ದೈನಂದಿನ ಅಪರಾದ ವರದಿ.

ದಿನಾಂಕ 11.06.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

3

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 09-06-2014 ರಂದು ಪಿರ್ಯಾದಿದಾರರಾದ ರವಿಚಂದ್ರನ್ ರವರು ಯೆಯ್ಯಾಡಿಯಿಂದ ಮಂಗಳೂರಿಗೆ ಪೈಂಟಿಂಗ್ಸಾಮಾಗ್ರಿಗಳನ್ನು ಖರೀದಿಸಲು ಸಜಿತ್ಎಂಬವರ ಬಾಬ್ತು ಕೆಎ 19 ಇಜಿ 1767 ನೇ ಮೋಟಾರ್ಸೈಕಲಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ಹೋಗುತ್ತಾ ಯೆಯ್ಯಾಡಿ ವರ್ಧಮಾನ ಹೋಟೇಲ್ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು 12-10 ಗಂಟೆ ವೇಳೆಗೆ ಅವರ ಹಿಂದುಗಡೆಯಿಂದ ಅಂದರೆ ಯೆಯ್ಯಾಡಿ ಕಡೆಯಿಂದ ಒಂದು ಓಮ್ನಿ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಬೈಕನ್ನು ಓವರ್ಟೇಕ್ಮಾಡಿ ಮುಂದಕ್ಕೆ ಹೋಗುವ ಸಮಯ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ಸವಾರ ಮತ್ತು ಪಿರ್ಯಾದಿದಾರರು ಬೈಕ್ಸಮೇತ ರಸ್ತೆಗೆ ಬಿದ್ದ ಪರಿಣಾಮ ಬೈಕ್ಸವಾರ ಸಜಿತ್ ಮುಖದ ಬಲಗಡೆ, ಕಣ್ಣಿನ ಳಿ , ಬಲಕಾಲಿಗೆ, ಬಲಕೈಗೆ ರಕ್ತಗಾಯ ಉಂಟಾಗಿದ್ದಲ್ಲದೆ, ಪಿರ್ಯಾದಿದಾರರ ಎಡಕಾಲಿನ ಮೊಣಗಂಟು, ಎಡಕೈಯ ಬೆರಳುಗಳಿಗೆ ತರಚಿದ ಗಾಯವಾಗಿದ್ದು, ಕೆಳಗೆ ಬಿದ್ದವರನ್ನು ಅವರ ಹಿಂದಿನಿಂದ ಬಂದ ಸಜಿತ್ ಅಣ್ಣ ಅನೀಶನು ಉಪಚರಿಸಿ ಮಂಗಳೂರಿನ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಸಜಿತ್ ಒಳರೋಗಿಯಾಗಿ ಮತ್ತು ಪಿರ್ಯಾದಿದಾರರನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಹಾಗೂ ಡಿಕ್ಕಿಯನ್ನುಂಟು ಮಾಡಿದ ಓಮ್ನಿ ಕಾರನ್ನು ಅದರ ಚಾಲಕನು ನಿಲ್ಲಿಸದೇ ಪರಾರಿಯಾಗಿದ್ದು, ನಂತರ ವಿಚಾರಿಸಿದ್ದಲ್ಲಿ ಅದರ ನಂಬ್ರ ಕೆಎ 20 ಎಂ 6461 ಎಂದು ತಿಳಿದು ಬಂದಿರುತ್ತದೆ.

 

2.ಮಂಗಳೂರು ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಬಸವರಾಜ್ ರವರು ಕದ್ರಿ ಮಾರ್ಕೆಟ್ ಬಳಿ ಗೂಡಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಗೂಡಂಗಡಿಗೆ ಕಂಬಗಳನ್ನು ನೆಡಲು ಯಾರೂದರು ಜನ ಇದ್ದರೆ ಕಳುಹಿಸುವಂತೆ ಸ್ನೇಹಿತ ಸತೀಶ್ ನಿಗೆ ತಿಳಿಸಿದ್ದು ಅದರಂತೆ ದಿನಾಂಕ 10-06-2014 ರಂದು ಸತೀಶ್ ನು ಸುಧೀರ್ ಎಂಬಾತನನ್ನು ಗೂಡಂಗಡಿ ಹತ್ತಿರ ಕರೆದುಕೊಂಡು ಬಂದಿದ್ದು, ಅವನಿಗೆ ಕಂಬಗಳನ್ನು ನೆಡುವಂತೆ ಪಿರ್ಯಾದಿಯು ತಿಳಿಸಿರುತ್ತಾನೆ. ಆರೋಪಿ ಸುಧೀರ್ ನು ಮೂರು ಕಂಬಗಳನ್ನು ನೆಟ್ಟು ಕುಡಿಯಲು 200/- ರೂ ಹಣ ಕೇಳಿದಕ್ಕೆ ಪಿರ್ಯಾದಿಯು ನೀನು ಪೂರ್ಣ ಕೆಲಸ ಮಾಡಿದ ಮೇಲೆ ಹಣ ಕೊಡುತ್ತೇನೆಂದು ತಿಳಿಸಿದ್ದು. ಆಗ ಆರೋಪಿಯು ಪಿರ್ಯಾದಿಗೆ ಅಲ್ಲಿಯೇ ತಡೆದು ನಿಲ್ಲಿಸಿಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತ  ಕೈಯಿಂದ ಹೊಡೆದು ಒಮ್ಮೆಲೆ ಪಿರ್ಯಾದಿಯನ್ನು ದೂಡಿದ ರಭಸಕ್ಕೆ ಅಲ್ಲಿಯೇ ಪಕ್ಕದ ತಗ್ಗಿನಲ್ಲಿದ್ದ ಪಾಳು ಬಿದ್ದ ಚರಂಡಿಗೆ ಪಿರ್ಯಾದಿ ಬಿದ್ದಾಗ ಯಾವುದೋ ಚೂಪಾದ ವಸ್ತು ತಾಗಿ ಪಿರ್ಯಾದಿಯ ಬೆನ್ನಿನ ಬಲಭಾಗಕ್ಕೆ ಸೊಂಟದಿಂದ ಸ್ವಲ್ಪ ಮೇಲಕ್ಕೆ ತೀವ್ರ ಗಾಯವಾಗಿ ರಕ್ತ ಸ್ರಾವವಾಗಿರುತ್ತದೆ.

 

3.ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 09-06-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ದಿನೇಶ್ ರವರು ಸಂಸಾರ ಸಮೇತರಾಗಿ ಊಟ ಮಾಡಿ ರಾತ್ರಿ ಸುಮಾರು 11-00 ಗಂಟೆಗೆ ಮಲಗಿ ಬೆಳಿಗ್ಗೆ ಸುಮಾರು 06-00 ಗಂಟೆಗೆ ಪಿರ್ಯಾದಿ ಅಣ್ಣ ದಿವಾಕರ ಎಂಬವರು  ಎದ್ದು ನೋಡಿದಾಗ ಅಡುಗೆಯ ಮನೆಯ ಬಾಗಿಲು ತೆರೆದಿರುವುದನ್ನು ನೊಡಿ ಅನುಮಾನಗೊಂಡು ಮನೆಯ ಒಳಗೆ ಪರಿಶೀಲಿಸಿದಾಗ ಮನೆಯ ಹೊರಗೆ ಕಪಾಟಿನ ಒಳಗಡೆ ಇಟ್ಟಿದ್ದ ಚಿನ್ನಾಭರಣ ಇಡುವ ಬಾಕ್ಸ್ಗಳು ಬಿದ್ದಿರುವುದನ್ನು ನೋಡಿ ಅನುಮಾನ ಗೊಂಡು ಮನೆಯ ಒಳಗೆ ಬಂದು ನೊಡಿದಾಗ  ಕಪಾಟು ಕೂಡಾ ತೆರೆದಿದ್ದು ಕಪಾಟಿನ ಒಳಗೆ ಇದ್ದ ಹವಳದ ಚಿನ್ನದ ಸರ – 2, ಚಿನ್ನದ ಬಳೆಗಳು -3,  ಚಿನ್ನದ ಚೈನ್‌ - 4, ಚಿನ್ನದ ಉಂಗುರ – 6, ಚಿನ್ನದ ಬ್ರಾಸ್ಲೆಟ್‌ - 2, ಕಿವಿಯ ಚಿನ್ನದ ಜುಮುಕಿ – 1 ಜೊತೆ, ಕಿವಿಯ ಚಿನ್ನದ ಬೆಂಡೋಲೆ – 2 ಜೊತೆ, ಮಕ್ಕಳ ಕಿವಿಯ ಚಿನ್ನದ ಗುಂಡು – 1 ಜೊತೆ, ಚಿನ್ನಾಭರಣಗಳು ಕಳವಾಗಿದ್ದು ಯಾರೋ ಕಳ್ಳರು ಅಡುಗೆ ಮನೆ ಚೀಲಕವನ್ನು ಯಾವುದೋ ಸಾದನದಿಂದ ತೆರೆದು ಮನೆಯ ಒಳಗೆ ಪ್ರವೇಶ ಮಾಡಿ ಕಪಾಟಿನಲ್ಲಿದ್ದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ  ಸುಮಾರು  3.50.000/- ರೂ ಆಗಬಹುದು.

 

4.ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ಮಾನವ ಹಕ್ಕು ಆಯೋಗದ ಹೆಸರು ಹಾಗೂ ಲಾಂಛನವನ್ನು ಕೆಲವು ವ್ಯಕ್ತಿಗಳು ದುರ್ಬಳಕೆ ಮಾಡಿಕೊಂಡು ರಾಷ್ಟ್ರೀಯ ಮಾನವ ಹಕ್ಕುಗಳ ಕೌನ್ಸಿಲಿಂಗ್, ರಾಷ್ಟ್ರೀಯ ಮಾನವ ಹಕ್ಕುಗಳ ಕೇಂದ್ರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಲಾಂಛನದಂತೆ ಹೋಲುವ ಲಾಂಛನ ಮತ್ತು AFFLIATED TO NATIONAL HUMAN RIGHTS COMMISSION ಎಂದು ಕಾನೂನು ಬಾಹಿರ ಚಟುವಟಿಕೆಯಿಂದ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವುದಾಗಿದೆ.

 

5.ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-06-2014 ರಂದು ಫಿರ್ಯಾದುದಾರರಾದ ಶ್ರೀ ಪವನ್ ನೆಜ್ಜೂರ್, ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ದಕ್ಷಿಣ ಉಪವಿಭಾಗ, ಮಂಗಳೂರು ನಗರ ರವರು ತನ್ನ ಕಛೇರಿಯಲ್ಲಿರುವ ಸಮಯ ಬೆಳಿಗ್ಗೆ 10-00 ಗಂಟೆಗೆ ಬಂದ ಖಚಿತ ಮಾಹಿತಿಯಂತೆ ಕಛೇರಿಯ ಸಿಬ್ಬಂದಿಗಳನ್ನು ಇಲಾಖಾ ವಾಹನದಲ್ಲಿ ಕರೆದುಕೊಂಡು ಹೋಗಿ ಗೂಡ್ ಶೆಡ್ ರಸ್ತೆಯಲ್ಲಿ ನಿಲ್ಲಿಸಿ ಗಮನಿಸಿದಾಗ ನಗರದ ಗೂಡ್ ಶೆಡ್ ರಸ್ತೆಯಲ್ಲಿರುವ ಸಿಮೆಂಟ್ ಗೋಡೌನ್ ಸಮೀಪ ಗುಂಪು ಕಟ್ಟಿಕೊಂಡು ನೆಲದಲ್ಲಿ ಹಳೆಯ ವಾರ್ತಾ ಪತ್ರಿಕೆಯನ್ನು ಹಾಸಿಕೊಂಡು ಹಣವನ್ನು ಪಣವಾಗಿಟ್ಟು, ಅಂದರ್ ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದರು. ಫಿರ್ಯಾದುದಾರರು ಹಾಗೂ ಸಿಬ್ಬಂದಿಗಳು ಕೂಡಲೇ ಅವರನ್ನು ಸುತ್ತುವರಿದು ಆರೋಪಿಗಳಾದ ಅಬ್ದುಲ್ ಲತೀಫ್, ಲೋಕನಾಥ್ ಶೆಟ್ಟಿ, ಮೌಲಾಸಾಬ್, ಸಂತೋಷ್, ಸಂಗಪ್ಪಾ ಸರಣಪ್ಪಾ ಎಂಬವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇವರುಗಳು ಆಟಕ್ಕೆ ಬಳಸುತ್ತಿದ್ದ ರೂ 4265/-, 52 ಇಸ್ಪಿಟ್ ಎಲೆಗಳು, ನೋಕಿಯಾ ಕಂಪೆನಿಯ 2 ಮೊಬೈಲ್ ಹಾಗೂ ಹಳೆಯ ವಾರ್ತಾ ಪತ್ರಿಕೆಯನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ.

 

6.ಬಜ್ಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07-06-14 ರಂದು ಬೆ. 7.15 ಗಂಟೆಗೆ ಮಂಗಳೂರು ತಾಲೂಕಿನ ಮಳವೂರು ಗ್ರಾಮದ ಜರಿನಗರ ಎಂಬಲ್ಲಿ ವಾಸವಾಗಿರುವ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಅನ್ಸರ್ ರವರ ಮನೆಗೆ ಆರೋಪಿಗಳು ನಾಲ್ಕು ಮಂದಿ ಬಂದು ನಿನ್ನ ಮೇಲೆ ಸಿಬಿಐ ಕೇಸು ಇದೆ, ಕೇಸು ತೆಗೆಯಬೇಕಾದರೆ ರೂಪಾಯಿ 5 ಲಕ್ಷ ಕೊಡಬೇಕು. ಕೇಸು ಇಲ್ಲದ ಹಾಗೆ ಮಾಡುತ್ತೇವೆ ಎಂದು ಹೇಳಿದಾಗ 5 ಲಕ್ಷ ಇಲ್ಲ 50000 ರೂಪಾಯಿ ಕೊಡುತ್ತೇನೆ ಎಂದು ಹೇಳಿದಾಗ ಅವರು ದಿನಾಂಕ 09-06-14 ರಂದು ಬರುತ್ತೇವೆ ಎಂದು ಹೇಳಿ ಹೋದುದಲ್ಲದೆ ದಿನಾಂಕ 09-06-14 ರಂದು ಅವರು ಬಾರದೇ ಇದ್ದು ದಿನಾಂಕ 09-06-2014 ರಂದು ಬೆಳಿಗ್ಗೆ 7.00 ಗಂಟೆಗೆ ಪೋನ್ ಮಾಡಿ ಪಂಪ್ವೆಲ್ಗೆ ಬರುವಂತೆ ಹೇಳಿರುತ್ತಾರೆ. ಅಲ್ಲಿಗೆ ಪಿರ್ಯಾದಿದಾರರು ಹೋಗದೆ ಮರವೂರುಗೆ ಬರಲು ಹೇಳಿದಾಗ ಬೆ. 10.00 ಗಂಟೆಗೆ ಮರವೂರು ಸೇತುವೆ ಬಳಿ ಶರೀಫ್ ಎಂಬಾತನು ಬಂದಿದ್ದು ಅಲ್ಲಿಗೆ ಪಿರ್ಯಾದಿ ಮತ್ತು ಆತನ ಸ್ನೇಹಿತರು ಹೋದಾಗ ಸದ್ರಿ ಶರೀಫ್ ಓಡಿ ಮರವೂರು ನದಿಗೆ ಹಾರಿ ಪರಾರಿಯಾಗಲು ಯತ್ನಿಸಿದವನನ್ನು ಠಾಣೆಗೆ ಒಪ್ಪಿಸಿದ್ದು ಆರೋಪಿಗಳು ಬಲತ್ಕಾರವಾಗಿ ಹಣ ವಸೂಲಿ ಮಾಡಲು ಪ್ರಯತ್ನಿಸಿ, ಹಣ ಕೊಡದಿದ್ದರೆ ಏಡ್ಸ್ ಇಂಜೆಕ್ಷನ್ ಕೊಡುತ್ತೇವೆ, ನಿನ್ನನ್ನು ಕೊಂದು ಲಾಕಪ್ಡೆತ್ಎಂದು ಮಾಡುತ್ತೇವೆ, ಅಲ್ಲದೆ ನಿನ್ನ ಹೆಂಡತಿಯ ಮುಖಕ್ಕೆ ಆಸೀಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ.

 

7.ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 10-06-2014 ರಂದು 15-20 ಗಂಟೆ ಸಮಯಕ್ಕೆ  ಫಿರ್ಯಾದುದಾರರಾದ ಶ್ರೀ ತಿಲಕ್ ರವರು ತನ್ನ ಬಾಬ್ತು ಕೆಎ 19 ಇಇ 3676 ನೇದರಲ್ಲಿ ಸತೀಶ ಎಂಬವರನ್ನು ಸಹ ಸವಾರನನಾಗಿ ಕುಳಿರಿಸಿಕೊಂಡು ಉಳ್ಳಾಲದಿಂದ ಸೋಮೆಶ್ವರ ಕಡೆಗೆ ಸವಾರಿ ಮಾಡುತ್ತಾ ಉಳ್ಳಾಲ ಅಬ್ಬಕ್ಕ ಸರ್ಕಲ ಬಳಿ ತಲುಪುತ್ತಿದಂತೆ ಕೆಎ 19 ಡಿ 6635 ನೇ ನಂಬ್ರದ ಭಾರತ ಸ್ಕೊಲ್ ಬಾಬ್ತು ಮಿನಿ ಬಸ್ ನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿರುತ್ತಾನೆ ಅಪಘಾತದಿಂದ ರಸ್ತೆಗೆ ಬಿದ್ದ ಸತೀಶರವರ ತಲೆಯ ಹಿಂಬದಿಗೆ ಹಾಗೂ ಹಣೆಯ ಬದಿಗೆ ಗಂಭಿರ ಗಾಯವಾಗಿದ್ದು ಅವರನ್ನು ಮಂಗಳೂರು ಯುನಿಟಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿದೆ.

No comments:

Post a Comment