Thursday, November 22, 2012

One of the Ravi Poojari Associates Arrested

ದಿನಾಂಕ: 12/10/2012 ರಂದು ಬೆಳಿಗ್ಗೆ ಸುಮಾರು 9:45 ಗಂಟೆಗೆ ಕಿನ್ನಿಗೋಳಿಯ ಉದ್ಯಮಿ  ಶ್ರೀ ಸಿಪ್ರಿಯನ್‌ ಡಿಸೋಜಾ ಎಂಬವರು ತನ್ನ ಬಾಬ್ತು ಕೆಎ-19-ಜೆಡ್‌‌-5938ನೇ ಕಾರಿನಲ್ಲಿ ಕಿನ್ನಿಗೋಳಿಯಿಂದ ತನ್ನ ಮನೆಗೆ ಬರುತ್ತಾ ಮಂಗಳೂರು ತಾಲೂಕು ಕಿನ್ನಿಗೋಳಿ ಅಪ್ಪನಕೋಡಿ ಎಂಬಲ್ಲಿಗೆ ತಲುಪಿದಾಗ 4 ಜನ ಆರೋಪಿತರು ಕಾರಿನಲ್ಲಿ ಬಂದು ಸಿಪ್ರಿಯನ್‌ ಡಿಸೋಜರ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಅದರಿಂದ 3 ಜನ ಅಪರಿಚಿತ ಯುವಕರುಗಳು ಇಳಿದು ಬಂದು ಸಿಪ್ರಿಯನ್‌ನ ಕಾರಿನೊಳಗೆ ಕುಳಿತು ಅವರುಗಳ ಪೈಕಿ ಓರ್ವನು ತನ್ನಲ್ಲಿದ್ದ ಪಿಸ್ತೂಲಿನಿಂದ ಸಿಪ್ರಿಯನ್‌ನ ತಲೆಗೆ ಇಟ್ಟು ಕಾರನ್ನು ಮುಂದಕ್ಕೆ ತೆಗೆಯುವಂತೆ ಬೆದರಿಸಿ ಕಾರಿನೊಂದಿಗೆ ಸಿಪ್ರಿಯನ್‌‌ನನ್ನು ಅಪಹರಿಸಲು ಯತ್ನಿಸಿದ ವೇಳೆ ಸಿಪ್ರಿಯನ್‌‌‌ನು ಕಾರಿನಿಂದ ಹಾರಿ ತನ್ನ ಓಡಿ ಹೋದಾಗ ಚಾಲೂ ಸ್ಥಿತಿಯಲ್ಲಿದ್ದ ಕಾರು ಹಿಮ್ಮುಖವಾಗಿ ಚಲಿಸಿ ತಗ್ಗು ಜಾಗಕ್ಕೆ ಬಿದ್ದಾಗ ಅಪಹರಣಕಾರರು ಕಾರನ್ನು ಬಿಟ್ಟು ಅವರು ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದು,  ಈ ಬಗ್ಗೆ  ಮುಲ್ಕಿ ಠಾಣೆಯ ಅಪರಾಧ ಕ್ರಮಾಂಕ: 128/2012 ಕಲಂ: 341, 506, 363,511 ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿತ್ತು. ಅಲ್ಲದೇ ಮರುದಿನ ರವಿ ಪೂಜಾರಿ ಎಂಬವನು ಸಿಪ್ರಿಯನ್‌ನ ಮೊಬೈಲ್‌‌ ಪೋನ್‌‌ಗೆ ಕರೆ ಮಾಡಿ 2 ಕೋಟಿ ಹಪ್ತಾ ಹಣವನ್ನು ನೀಡುವಂತೆ ಬೇಡಿಕೆಯಿಟ್ಟಿದ್ದಲ್ಲದೇ ಹಿಂದಿನ ದಿನ ತನ್ನ ಹುಡುಗರು ಅಪಹರಣಕ್ಕೆ ಯತ್ನಿಸಿದ್ದಾಗಿ ತಿಳಿಸಿದ್ದನು.ಅಲ್ಲದೇ ರವಿ ಪೂಜಾರಿಯು 2010 ರಲ್ಲಿ ಉದ್ಯಮಿ ಸಿಪ್ರಿಯನ್‌‌‌ಗೆ ಪೋನ್‌ ಮೂಲಕ 50 ಲಕ್ಷ ಹಪ್ತಾ ಹಣವನ್ನು ನೀಡುವಂತೆ ಬೆದರಿಕೆ ಒಡ್ಡಿದ್ದ ಬಗ್ಗೆ ಮುಲ್ಕಿ ಠಾಣೆಯಲ್ಲಿ ಅ.ಕ್ರ: 51/2012 ಕಲಂ: 506, 507 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿತ್ತು.
ಮುಲ್ಕಿ ಠಾಣೆಯ ಅ.ಕ್ರ: 128/2012 ಪ್ರಕರಣಕ್ಕೆ  ಸಂಬಂಧಿಸಿ ದಿನಾಂಕ: 22/11/2012 ರಂದು  ಆರೋಪಿ ಚಿತ್ತರಂಜನ್‌ ಶೆಟ್ಟಿ ಪ್ರಾಯ: 35 ವರ್ಷ, ತಂದೆ: ದಿ|| ದಾಮೋಧರ ಶೆಟ್ಟಿ, ವಾಸ: ಸುಮತಿ ನಿಲಯ, ಪಿಲಾರ್‌‌‌, ಪ್ರಕಾಶ್‌ ನಗರ, ಪಂಡಿತ್‌‌ ಹೌಸ್‌‌, ಸೋಮೇಶ್ವರ ಗ್ರಾಮ, ಕೋಟೇಕಾರ್‌‌‌‌ ಅಂಚೆ, ಮಂಗಳೂರು ತಾಲೂಕು ಎಂಬಾತನನ್ನು ಖಚಿತ ವರ್ತಮಾನದಂತೆ  ಮುಲ್ಕಿ ಠಾಣೆಯ ಬಶೀರ್‌ ಅಹ್ಮದ್‌ರವರು ವಿಚಾರಣೆಗೊಳಪಡಿಸಿದಾಗ  ಈತನು ತಪ್ಪನ್ನು ಒಪ್ಪಿಕೊಂಡು ತಮ್ಮ ಬಾಸ್‌ ರವಿ ಪೂಜಾರಿ (ಭೂಗತ ಪಾತಕಿ) ಎಂಬವರ ಪ್ರೇರಣೆಯಂತೆ ಸುರತ್ಕಲ್‌‌ನ ಸುಬ್ರಹ್ಮಣ್ಯ @ ಸುಬ್ಬು, ಬೆಂಗ್ರೆಯ ಭರತೇಶ @ ಭರತ್‌‌ ಮತ್ತು ಕಾರು ಚಾಲಕನೊಂದಿಗೆ  ಇಂಡಿಕಾ ಕಾರಿನಲ್ಲಿ ಬಂದು ಉದ್ಯಮಿ ಸಿಪ್ರಿಯನ್‌‌‌ನನ್ನು ಹಪ್ತಾ ಹಣ ವಸೂಲಿಗಾಗಿ ಕಾರು ಸಮೇತ ಅಪಹರಣ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದು, ಆರೋಪಿಯನ್ನು ಪ್ರಕರಣಕ್ಕೆ ಸಂಬಂಧಿಸಿ ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿ ಚಿತ್ತರಂಜನ್ ಶೆಟ್ಟಿಯು ಕೋಣಾಜೆ ಪೊಲೀಸ್‌‌ ಠಾಣೆಯ ಅಪರಾಧ ಕ್ರಮಾಂಕ: 16/2009 ಕಲಂ:143 147 148 324 341 307   ಜೊತೆಗೆ 149 ಐ.ಪಿ.ಸಿ ಮತ್ತು  ಉಳ್ಳಾಲ ಪೊಲೀಸ್‌ ಠಾಣೆಯ ಅಪರಾಧ ಕ್ರಮಾಂಕ: 22/1998 ಕಲಂ:341, 504, 323, 324 ಜೊತೆಗೆ 34 ಐ.ಪಿ.ಸಿ. ಪ್ರಕರಣದಲ್ಲಿ ಒಳಗೊಂಡಿರುವ ಆರೋಪಿಯಾಗಿರುತ್ತಾನೆ.
ಆರೋಪಿ ಸುಬ್ಬು @ ಸುಬ್ರಹ್ಮಣ್ಯನು ಪ್ರಸ್ತುತ ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ಅಪರಾಧ ಕ್ರಮಾಂಕ: 181/2012 ಕಲಂ: 384, 506, 507, 120(ಬಿ) ಜೊತೆಗೆ 34 ಐ.ಪಿ.ಸಿ.  ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಜಿಲ್ಲಾ ಕಾರಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ. ಅಲ್ಲದೇ ಈತನು ಮಂಗಳೂರು ಸೌತ್‌ ಪೊಲೀಸ್‌‌ ಠಾಣೆಯ ಅ.ಕ್ರ: 144/2012 ಕಲಂ: 302, 201, 120(ಬಿ), ಜೊತೆಗೆ 34 ಐ.ಪಿ.ಸಿ. ಮತ್ತು ಕಲಂ: 3, 25, 27 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ  ಪ್ರಕರಣದಲ್ಲಿ ಕೂಡಾ ಒಳಗೊಂಡ ಆರೋಪಿಯಾಗಿರುತ್ತಾನೆ. ಆರೋಪಿ ಭರತೇಶ @ ಭರತ್‌‌‌ನು  ಬರ್ಕೆ ಪೊಲೀಸ್‌‌ ಠಾಣೆಯ ಅ.ಕ್ರ:05/2001 ಕಲಂ: 324, 506,ಜೊತೆಗೆ 34 ಐ.ಪಿ.ಸಿ.  ಮತ್ತು ಉರ್ವ ಪೊಲೀಸ್ ಠಾಣೆಯ ಅ.ಕ್ರ: 80/2007 ಕಲಂ: 143, 147, 148, 341, 324, 326, 307 ಜೊತೆಗೆ 149 ಐ.ಪಿ.ಸಿ. ಮತ್ತು ಪಣಂಬೂರು ಪೊಲೀಸ್‌ ಠಾಣೆಯ ಅ.ಕ್ರ: 43/2005 ಕಲಂ: 427, 504, 323, 506 ಜೊತೆಗೆ 34 ಐ.ಪಿ.ಸಿ. ಪ್ರಕರಣದಲ್ಲಿ ಒಳಗೊಂಡಿರುವ ಆರೋಪಿಯಾಗಿರುತ್ತಾರೆ.
ಆರೋಪಿಗಳು ಭೂಗತ ಲೋಕದ ಪಾತಕಿ ರವಿ ಪೂಜಾರಿಯ ಸಹಚರರಾಗಿದ್ದು, ವಿದೇಶದಲ್ಲಿರುವ ರವಿ ಪೂಜಾರಿಯ ಸೂಚನೆಯಂತೆ ಭಾರತದ ವಿವಿದ ಕಡೆಗಳಲ್ಲಿನ ಉದ್ಯಮಿಗಳಿಗೆ  ಬೆದರಿಕೆ ಒಡ್ಡಿ ಹಪ್ತಾ ಹಣವನ್ನು ಸಂಗ್ರಹಿಸುವ ಕೃತ್ಯಗಳನ್ನು ಎಸಗುತ್ತಿದ್ದವರಾಗಿರುತ್ತಾರೆ.
ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀ ರವಿ ಕುಮಾರ್‌‌ರವರ ಮಾರ್ಗದರ್ಶನದಲ್ಲಿ ಮುಲ್ಕಿ ಠಾಣೆಯ ಇನ್ಸ್‌ಪೆಕ್ಟರ್‌‌ ಶ್ರೀ ಟಿ. ಬಶೀರ್‌ ಅಹ್ಮದ್‌‌ರವರು ತನಿಖೆ ನಡೆಸುತ್ತಿದ್ದು, ಕಾರ್ಯಾಚರಣೆಯಲ್ಲಿ ಮುಲ್ಕಿ ಪಿ.ಎಸ್.ಐ. ಶ್ರೀ ಸೋಮಯ್ಯ, ಮತ್ತು ಸಿಬ್ಬಂದಿಯವರು ಸಹಕರಿಸಿರುತ್ತಾರೆ

No comments:

Post a Comment