Saturday, June 29, 2013

Daily Crime Incidents for June 29, 2013

ಹಲ್ಲೆ  ಪ್ರಕರಣ

ಮೂಡಬಿದ್ರೆ ಠಾಣೆ


  • ದಿನಾಂಕ ; 26-06-2013 ರಂದು ಕೆಎ 19 ಡಿ 2195 ನೇ ನಿಶ್ಮಿತಾ ಬಸ್ಸನ್ನು ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ರಾತ್ರಿ 7-20 ಗಂಟೆಗೆ ವಿದ್ಯಾಗಿರಿ ಆಳ್ವಾಸ್‌ ಕಾಲೇಜು ಬಳಿಗೆ ತಲುಪಿದಾಗ ಹಿಂದಿನಿಂದ ಒಂದು ಹಸಿರು ಬಣ್ಣದ ಮಾರುತಿ ಓಮ್ನಿ ಕಾರನ್ನು ಚಲಾಯಿಸಿಕೊಂಡು ಬಂದ ವ್ಯಕ್ತಿಯು ನನ್ನ ಬಸ್ಸಿನ ಎದುರಿಗೆ ಬಂದು ಅಡ್ಡಗಟ್ಟಿ ನಿಲ್ಲಿಸಿದಾಗ ಬಸ್ಸಿನಲ್ಲಿ ಪ್ರಯಾಣಿಕರಾಗಿ ಬಂದಿದ್ದ ಮೂರು ಮಂದಿ ನನ್ನ ಬಳಿಗೆ ಬಂದು ರಂಡೇ ಮಗನೇ ಬೇವರ್ಸಿ ನೀನು ಬಾರೀ ಹಾರಾಡುತ್ತಿಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಅವರ ಪೈಕಿ ಸತೀಶ ಎಂಬಾತನು ಆತನ ಜೊತೆಯಲ್ಲಿ ತಂದಿದ್ದ ಕಲ್ಲಿನಿಂದ ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು ಇತರ ಇಬ್ಬರು ಕೈಯಿಂದ ಹೊಡೆದಿರುತ್ತಾರೆ ನಂತರ ಈ ಮೂವರು ಬಸ್ಸಿನಿಂದ ಇಳಿಯುತ್ತಾ ಇನ್ನೂ ಮುಂದೆಯೂ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿ ಬಸ್ಸನ್ನು ಅಡ್ಡಗಟ್ಟಿದ ಮಾರುತಿ ಓಮ್ನಿ ಕಾರಿನಲ್ಲಿ ಪರಾರಿಯಾಗಿರುತ್ತಾರೆ.           ಈ ಘಟನೆಗೆ ನಾಲ್ಕು ದಿನದ ಹಿಂದೆ ಸತೀಶ ಎಂಬಾತನು ಮೋಟಾರು ಸೈಕಲಿನಲ್ಲಿ ಹೊಗುತ್ತಿರುವಾಗ ಸೈಡ್‌ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮೂಡಬಿದ್ರೆಯ ನಾಗರಕಟ್ಟೆಯ ಬಳಿ ಗಲಾಟೆ ಮಾಡಿದ್ದು ಇದೇ ವಿಚಾರಕ್ಕೆ ಈ ದಿನ ಈ ಕೃತ್ಯ ಮಾಡಿದ್ದು, ಗಾಯಗೊಂಡ ನಾನು ಚಿಕಿತ್ಸೆಯ ಬಗ್ಗೆ ಆಳ್ವಾಸ್‌ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬುದಾಗಿ ದೀಪಕ್‌ ಪ್ರಾಯ 58 ವರ್ಷ, ತಂದೆ : ಅನಂದ ರಾವ್‌, ವಾಸ : ಹೋಲಿ ಡೆಲ್‌ ಚರ್ಚ್‌ ಬಳಿ, ಕುಲಶೇಖರ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಮೂಡಬಿದ್ರೆ ಠಾಣಾ ಅ.ಕ್ರ 138/2013 ಕಲಂ : 341, 323, 324, 504, 506, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

ಸುರತ್ಕಲ್ ಠಾಣೆ


  • ಫಿರ್ಯಾದಿದಾರರಾದ ಸುರೇಶ್ ಎಸ್‌ ಶೆಟ್ಟಿಯವರು ದಿನ ದಿನಾಂಕ 26-06-2013 ರಂದು ಸೂರಿಂಜೆ ಕೋಟೆ ಎಂಬಲ್ಲಿಗೆ ಬಂದಿದ್ದಾಗ ಅವರ ಪರಿಚಯದ  ರಾಘವೇಂದ್ರ ರಾವ್ ಎಂಬವರು ವಿಪರೀತ ಮದ್ಯ ಪಾನ ಮಾಡಿ ತೂರಾಡಿಕೊಂಡಿದ್ದು ಬಸ್ ಸ್ಟಾಂಡ್ ಪ್ರಯಾಣಿಕರು ಕುಳಿತುಕೊಳ್ಳುವ ದಂಡೆಯಲ್ಲಿ ಕುಳಿತುಕೊಂಡಿದ್ದವರು ಬೆಳಿಗ್ಗೆ 10-30 ಗಂಟೆಗೆ ಅಲ್ಲಿಂದ ಒಮ್ಮೆಲೆ ಕೆಳಕ್ಕೆ ಬಿದ್ದು ಮುಖಕ್ಕೆ, ಹಣೆಗೆ, ತುಟಿಗೆ ರಕ್ತಗಾಯವಾಗಿ ಮಾತನ್ನಾಡದೇ ಇದ್ದವರನ್ನು ಅಲ್ಲಿದ್ದ ಕಮಲಾಕ್ಷ ಹಾಗೂ ಇತರರ ಜೊತೆ ಆಂಬುಲೆನ್ಸ್ ನಲ್ಲಿ ಸುರತ್ಕಲ್ ಮಿಸ್ಕಿತ್ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಪರೀಕ್ಷಿಸಿ ರಾಘವೇಂದ್ರ ರಾವ್ ರವರು ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತದೇಹವನ್ನು ಸುರತ್ಕಲ್ ಜಾಕೋಬ್ ರವರ ಶವಾಗಾರದಲ್ಲಿ ಇರಿಸಿರುವುದಾಗಿದೆ ಎಂಬುದಾಗಿ ಫಿರ್ಯಾದಿದಾರರಾದ ಸುರೇಶ್ ಎಸ್‌ ಶೆಟ್ಟಿಯವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಯುಡಿಆರ್ ನಂಬ್ರ. 17/13 ಕಲಂ ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


No comments:

Post a Comment