ವಿಶೇಷ ಹಾಗೂ
ಸ್ಥಳೀಯ ಕಾನೂನುಗಳು:
ಸುರತ್ಕಲ್
ಠಾಣೆ;
- ದಿನಾಂಕ 16-06-13 ರಂದು ಠಾಣಾ ಅಪರಾಧ ಪತ್ತೆ ವಿಭಾಗದ ಪಿಎಸ್ಐ ರಾಜೇಂದ್ರ ರವರು ಸಿಬ್ಬಂಧಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 09:50 ಗಂಟೆಗೆ ಕುತ್ತೆತ್ತೂರು ಕೇಂಜ ಮೈದಾನದ ಬಳಿ ಉಳಾಯಿ ಪಿದಾಯಿ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಲಾಖಾ ಜೀಪ್ ನಲ್ಲಿ ಮೇಲ್ಕಂಡ ಸ್ಥಳಕ್ಕೆ ಹೋಗಿ ನೋಡಲಾಗಿ ಅಲ್ಲಿ 1. ಪ್ರಕಾಶ 2. ಸಂದೇಶ 3. ರತನ್ 4) ಹನೀಫ್ 5) ಕೃಷ್ಣ 6) ದಯಾನಂದ 7) ಯೋಗೀಶ ಎಂಬವರು ಗುಂಪಾಗಿ ಕುಳಿತು ಇಸ್ಪೀಟ್ ಎಲೆಗಳನ್ನು ಬಳಸಿ ಒಟ್ಟು ರೂ.3 460/-ಹಣವನ್ನು ಪಣವಾಗಿಟ್ಟು ಉಳಾಯಿ -ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದವರನ್ನು 10:30 ಗಂಟೆಗೆ ಧಾಳಿ ನಡೆಸಿ ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು ಕೊಂಡಿರುವುದಾಗಿದೆ ಎಂಬುದಾಗಿ ರಾಜೇಂದ್ರ ಬಿ ಪೊಲೀಸ್ ಉಪನೀರಿಕ್ಷಕರು ಸುರತ್ಕಲ್ ಠಾಣೆ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 157/13 PÀ®AB 87 ಕೆ.ಪಿ ಅಕ್ಟನಂತೆ ಪ್ರಕರಣ ದಾಘಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ:
ಸುರತ್ಕಲ್ ಠಾಣೆ;
- ದಿನಾಂಕ 16-06-13 ರಂದು ಪಿರ್ಯಾದಿದಾರರಾದ ಮಾಂತೇಶ ಎಂಬವರು ಸವದತ್ತಿ ಡಿಪೋಗೆ ಸೇರಿದ ಕೆಎ-25-ಎಪ್-2957 ನೇ ಕೆ.ಎಸ್.ಅರ್. ಟಿ.ಸಿ. ಬಸ್ ನ ಚಾಲಕರಾಗಿದ್ದು ಚಂದ್ರಶೇಖರ ಬಸಪ್ಪ ಧಾರವಾಡ ಎಂಬವರು ನಿರ್ವಾಹಕರಾಗಿದ್ದು ಸವದತ್ತಿಯಿಂದ ಮಂಗಳೂರು ಕಡೆಗೆ ಪ್ರಯಾಣಿಕರನ್ನು ಕುಳ್ಳಿರಿಸಿ ಬಸ್ಸನ್ನು ಚಲಯಿಸುತ್ತಾ ಮಂಗಳೂರು ಕಡೆಗೆ ಬರುತ್ತಾ ರಾ.ಹೆ. 66 ರಲ್ಲಿ ಪಾವಂಜೆ ಸೇತುವೆ ಬಳಿ ಸಂಜೆ 6-45 ಗಂಟೆಗೆ ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆಎ 02 ಎಬಿ 2516 ನೇ ನಂಬ್ರದ ಲಾರಿಯನ್ನು ಅದರ ಚಾಲಕ ಮಂಜುನಾಥ ಎಂಬವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಲಾರಿಯನ್ನು ರಸ್ತೆಯ ಬಲಬದಿಗೆ ಚಲಾಯಿಸಿದ ಪರಿಣಾಮ ಲಾರಿಯ ಲೋಡಿನ ಟಾರ್ಪಾಲ್ ಬಸ್ಸಿನ ಬಲಗಡೆಯ ಕನ್ನಡಿ ಹಾಗೂ ಹಿಂಭಾಗದ ಕನ್ನಡಿಗಳಿಗೆ ತಾಗಿ ಜಖಂ ಉಂಟಾಗಿರುತ್ತದೆ. ಎಂಬುದಾಗಿ ಮಾಂತೇಶ 31 ವರ್ಷ ವಾಸ: ಸವದತ್ತಿ ತಾಲೂಕು ಬೆಳಗಾಂ ಜಲ್ಲೆ ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 158/13 ಕಲಂ 279 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಭಾವಿಕ
ಪ್ರಕರಣ:
ದಕ್ಷಿಣ ಠಾಣೆ;
- ದಿನ ದಿನಾಂಕ 16-06-2013 ರಂದು ಬೆಳಿಗ್ಗೆ ಮನೆಯಿಂದ ಹೊರಟು ಹೋದವರು ಮಧ್ಯಾಹ್ನ ಸುಮಾರು 2-00 ಗಂಟೆಗೆ ಮನೆಗೆ ಬಂದು ಮನೆಯ ಒಳಗೆ ರೂಮಿನಲ್ಲಿ ಚಿಲಕವನ್ನು ಹಾಕಿ ಕುಳಿತು ಕೊಂಡಿದ್ದರು. ಈ ವೇಳೆಗೆ ಫಿಯರ್ಾದುದಾರರು ಹಾಗೂ ಅವರ ತಾಯಿಯವರು ಮನೆಯಲ್ಲಿದ್ದು ಟಿ.ವಿ.ಕಾರ್ಯಕ್ರಮವನ್ನು ನೋಡುತ್ತಿದ್ದು, ಸುಮಾರು 2-30 ಗಂಟೆಯ ಸಮಯಕ್ಕೆ ಆರ್ಥರ್ ಮೆಲ್ವಿಲ್ರವರನ್ನು ಊಟಕ್ಕೆಂದು ಕರೆದಾಗ, ಅವರು ಮಾತನಾಡದೇ ಇದ್ದುದನ್ನು ಕಂಡು ಕೋಣೆಯ ಬಾಗಿಲಿನ ಸಂಧಿಯಿಂದ ನೋಡಿದಾಗ, ಆರ್ಥರ್ ಮೆಲ್ವಿಲ್ ರವರು ರೂಮಿನ ಒಳಗಡೆ ಅಳವಡಿಸಿದ್ದ ಸೀಲಿಂಗ್ ಪ್ಯಾನ್ಗೆ ಬೈರಾಸ್ನಿಂದ ಕುತ್ತಿಗೆಗೆ ನೇಣು ಬಿಗಿದು ಕೊಂಡಿದ್ದನ್ನು ಕಂಡು ಕೂಡಲೇ ಫಿಯರ್ಾದುದಾರರು ಇತರರ ಸಹಾಯದಿಂದ ಆರ್ಥರ್ ಮೆಲ್ವಿಲ್ರವರನ್ನು ಕೆಳಗಿಳಿಸಿ ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಪರೀಕ್ಷಿಸಿದಾಗ ಆರ್ಥರ್ ಮೆಲ್ವಿಲ್ರವರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಆರ್ಥರ್ ಮೆಲ್ವಿಲ್ ರವರು ಕುಡಿತದ ಚಟ ಹೊಂದಿದ್ದು, ಯಾವುದೋ ಕಾರಣಕ್ಕಾಗಿ ಜೀವನದಲ್ಲಿ ಜುಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿದ್ದು, ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಲಿಖಿತ ಫಿರ್ಯಾಧಿಯ ಸಾರಾಂಶವಾಗಿದೆ ಎಂಬುದಾಗಿ ರೆಜಿನೋಲ್ಡ್ ಸಂಜಯ್ ಸೋನ್ಸ್ ಪ್ರಾಯ 23 ವರ್ಷ, ತಂದೆ: [ದಿ.] ಆರ್ಥರ್ ಮೆಲ್ವಿಲ್, ವಾಸ: ಈಡಾನ್ ಗಾರ್ಡನ್ ವುಡ್ಸೈಡ್ ಹೌಸ್ ಬಳಿ, ಜೆಪ್ಪು ಮಾಕರ್ೆಟ್, ಮಂಗಳೂರು ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಯು.ಡಿ.ಆರ್. ನಂ: 51/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಳಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment