ಅಸ್ವಾಭಾವಿಕ
ಮರಣ ಪ್ರಕರಣ:
ಉರ್ವಾ ಠಾಣೆ:
- ಈ ಪ್ರಕರಣದ ಸಾರಂಶವೆನಂದರೆ ಪಿರ್ಯಾದಿದಾರರ ತಮ್ಮನಾದ ಪ್ರಭು (24) ಎಂಬುವವರು ಬಟ್ಟೆ ವ್ಯಾಪರ ಹಾಗೂ ಫೈನಾನ್ಸ್ ವ್ಯವಹಾರದಲ್ಲಿ ನಷ್ಟ ಆಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದವನು ದಿನಾಂಕ 02.06.2013 ರಂದು ರಾತ್ರಿ 23:00 ಗಂಟೆಗೆ ಆಫೀಸ್ ರೂಂನಲ್ಲಿ ಮಲಗಲು ಹೋಗಿದ್ದನ್ನು ಕಂಡು ಸಂಶಯಗೊಂಡ ಪಿರ್ಯಾದಿದಾರರು ನೋಡಲಾಗಿ ಒಳಗಿನಿಂದ ಲಾಕ್ ಮಾಡಿದ್ದು, ಕಿಟಕಿ ಮೂಲಕ ನೋಡಲಾಗಿ ಪ್ರಭು ತನ್ನ ಕುತ್ತಿಗೆಗೆ ಬೈರಾಸ್‌ನಿಂದ ಫ್ಯಾನ್‌ಗೆ ನೇಣು ಬಿಗಿದು ನೇತಾಡುತ್ತಿರುವುದನ್ನು ಕಂಡು ಸ್ನೇಹಿತ ಸಂತೋಷ್‌ನ ಜೊತೆ ಒಳಗೆ ಹೋಗಿ ನೇಣಿನಿಂದ ಬಿಡಿಸಿ ಎ.ಜೆ ಆಸ್ಪತ್ರೆಗೆ ಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪಿರ್ಯಾದಿದಾರರ ತಮ್ಮ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಶಿವಕುಮಾರ (32) ವಾಸ: ಕೋಡಿಕಲ್ ಮಂಗಳೂರು ರವರು ನೀಡಿದ ದೂರಿನಂತೆ ಉರ್ವಾ ಠಾಣೆ ಯು.ಡಿ.ಅರ್ ನಂಬ್ರ 12/2013 ರಂತೆ ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ:
ಸಂಚಾರ ಪೂರ್ವ ಠಾಣೆ;
- ಪ್ರ್ರಕರಣದ ಸಾರಾಂಶವೇನೆಂದರೆ, ದಿನಾಂಕ: 02-06-2013 ರಂದು ಸಮಯ ಸುಮಾರು 23.30 ಗಂಟೆಗೆೆ ಮಾರುತಿ ಒಮ್ನಿ ಕಾರು ನಂಬ್ರ ಏಂ-19 ಓ- 7567 ನ್ನು ಚಾಲಕರಾಗಿದ್ದ ಲೊಕೇಶ್ ಎಂಬವರು ಕುಲಶೇಖರ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಬಿಕರ್ನಕಟ್ಟೆಯ ವೈದ್ಯನಾಥ ಜ್ಯೂಸ್ ಸೆಂಟರ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಕಾರು ಡಿಕ್ಕಿಯಾದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಹಣೆಗೆ, ಗದ್ದಕ್ಕೆ, ಎಡಕೈ ಕಿರುಬೆರಳಿಗೆ ರಕ್ತಗಾಯವಾಗಿ ಎಡಕಣ್ಣಿನ ಬಳಿ ಮತ್ತು ಕುತ್ತಿಗೆ ಕೆಳಭಾಗಕ್ಕೆ ಗುದ್ದಿದ ಗಾಯವಾಗಿ ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ಬ್ಗೆ ಅರೋಪಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಜಗದೀಶ್ ಸೇಮಿತ್ (62) ತಂದೆ: ಕಾಂತು ಸೇಮಿತಾ ವಾಸ: ಶ್ರೀ ಸನ್ನಿಧಿ ಹೌಸ್, ಪದವು, ಅಳಕೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ 99/13 ಕಲಂ- 279, 337 ಐಪಿಸಿ, 134 (ಛ) ಮೋ.ವಾ. ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ: 01-06-2013 ರಂದು ಸಮಯ ಸುಮಾರು 21.00 ಗಂಟೆಗೆೆ ಸ್ಕೂಟರ್ ನಂಬ್ರ ಏಂ-19 ಇಉ-8661 ನ್ನು ಸವಾರರಾಗಿದ್ದ ರೋಶನ್ ಲೊಬೊ ಎಂಬವರು ಬೆಂದೂರ್ವೆಲ್ನ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ರಸ್ತೆಯಲ್ಲಿದ್ದ ಡಿವೈಡರ್ಗೆ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಭುಜಕ್ಕೆ ಮತ್ತು ಬಲಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪ ಗಾಯವಾಗಿ ಮತ್ತು ಮುಖಕ್ಕೆ ರಕ್ತಗಾಯವಾಗಿ ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ ಎಂಬುದಾಗಿ ದಿಲೀಪ್ ಲೋಬೊ (32) ತಂದೆ: ಸಿರಿಲ್ ಲೋಬೊ. ವಾಸ: #6/186, ಲೋಬೋ ಕಾಂಪೌಚಿಡ್, ಜಪ್ಪಿನಮೊಗ್ರು, ಮಂಗಳೂರು ರವರು ನೀಡಿದ ದೂರಿನಂತೆ 98/13 ಕಲಂ-279, 338 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment