ಅಕ್ರಮ ಮನೆ ಪ್ರವೇಶಿಸಿ, ಹಲ್ಲೆ
ನಡೆಸಿದ ಪ್ರಕರಣ:
ಕಾವೂರು ಠಾಣೆ:
- ದಿನಾಂಕ 13-06-2013 ರಂದು ರಾತ್ರಿ 7-30 ಗಂಟೆಗೆ ಯೋಗೇಂದ್ರ ರವರು ಮನೆಯಲ್ಲಿಲಾದ್ದಾಗ ಫಿರ್ಯಾದಿದಾರರಿಗೆ ಗುರುತು ಪರಿಚಯ ರುವ ಮಿಥುನ್, ತಿಲಕ್, ಅನುಪ್, ದೀವೇಶ್, ಚೇತನ್ ಎಂಬವರು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ` ``ಯೋಗೇಂದ್ರ ಎಲ್ಲಿದ್ದಾನೆ, ಬೋಳಿ ಮಗ’ ಅವನನ್ನು ಕರೆಯಿರಿ ಎಂದು ಕೈಯಲ್ಲಿ ತಲವಾರು ಹಿಡಿದು ಜಳಪಿಸುತ್ತ ಫಿರ್ಯಾದಿದಾರರ ಪತ್ನಿಯ ಮೇಲೆ ಕೈಹಾಕಿ, ಫಿರ್ಯಾದಿದಾರರ ತಾಯಿಯನ್ನು ಅವಾಚ್ಯ ಶಬ್ಧಗಳಿಂದ ಬಯ್ದು ಕೈಯಿಂದ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಯೋಗೇಂದ್ರ ತಂದೆ: ಸದಾಶಿವ, 24 ವರ್ಷ, ವಾಸ: #4-107 ಮಣಿಕಂಠ ನಿಲಯ, ಆನಂದನಗರ 1 ನೇ ಕ್ರಾಸ್, ಆಕಾಶಭವನ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 123/2013 ಕಲಂ 143, 144, 147, 148, 448, 504, 354, 323 r/w 149 ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 13-06-2013 ರಂದು ರಾತ್ರಿ 7-00 ಗಂಟೆಗೆ ವಿಶಾಲ್ ಕುಮಾರ್ ರವರು ಮನೆಯಲ್ಲಿದ್ದಾಗ ಮಿಥುನ್ ಮತ್ತು ಫಿರ್ಯಾದಿದಾರರಿಗೆ ನೋಡಿ ಪರಿಚಯ ಇರುವ ಹೆಸರು ತಿಳಿಯದ ಇಬ್ಬರು ಯುವಕರು ಫಿರ್ಯಾದಿದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದಿದಾರರನ್ನು ಹಿಡಿದು ```ಬೇವರ್ಸಿ ರಂಡೆ ಮಗ, ಪಿದಯಿ ಬಲ’ ಎಂದು ಹೇಳುತ್ತಾ ಫಿರ್ಯಾದಿದಾರರನ್ನು ಹೊರಗೆ ಎಳೆದುಕೊಂಡು ಬಂದಾಗ ಅಂಗಳದಲ್ಲಿ ನಿಂತಿದ್ದ ವಿಜೇಶ್, ಅನೂಪ್, ಸಂಜು ಶಕ್ತಿನಗರ, ದಿವೇಶ್, ಬಾಬು, ಕುಮಾರ್ ಸೇರಿ ಫಿರ್ಯಾದಿದಾರರಿಗೆ ಹೊಡೆದಿದ್ದು, ಫಿರ್ಯಾದಿದಾರರ ತಾಯಿ ಶ್ರೀಮತಿ ಪುಷ್ಪಲತಾ ರವರು ಬಿಡಸಲು ಬಂದಾಗ ಮಿಥುನ್ ತಾಯಿಯ ಕೆನ್ನೆಗೆ ಹೊಡೆದು ತಾಯಿಯ ಮೈಮೇಲೆ ಕೈಹಾಕಿ ದೂಡಿ ಹಾಕಿ ನಂತರ ಫಿರ್ಯಾದಿದಾರರನ್ನು ಮನೆಯ ಎದುರು ಇರುವ ಅಯ್ಯಪ್ಪಗುಡಿಯವರೆಗೆ ಎಳೆದುಕೊಂಡು ಹೋಗಿ ನೆಲದ ಮೇಲೆ ದೂಡಿ ಹಾಕಿ ಕಾಲುಗಳಿಂದ ತುಳಿದಿರುತ್ತಾರೆ, ಅವರ ಪೈಕಿ ಮಿಥುನ್, ವಿಜೇಶ್ ಮತ್ತು ಸಂಜು ಸೋಡಾ ಬಾಟಲಿಯಿಂದ ಫಿರ್ಯಾದಿದಾರರ ತಲೆಗೆ ಹೊಡೆದಿರುತ್ತಾರೆ, ಅಲ್ಲೇ ಕಾರೊಂದರಲ್ಲಿ ಕುಳಿತ್ತಿದ್ದ ತಿಲಕ್ ಎಂಬವನು `ಆಯನ್ ಬುಡೋಡ್ಚಿ, ಆಯಗ್ ಹಾಕ್ ಲಯ’ ದು ಹೇಳುತ್ತಾ ಗಲಾಟೆಗೆ ಪ್ರೋತ್ಸಾಹ ನೀಡಿರುತ್ತಾನೆ, ಹಲ್ಲೆಯಿಂದ ಫಿರ್ಯಾದಿದಾರರ ತಲೆಗೆ, ಮೂಗಿಗೆ, ತುಟಿಗೆ ರಕ್ತಬರುವ ಗಾಯವಾಗಿರುತ್ತದೆ ಎಂಬುದಾಗಿ ವಿಶಾಲ್ ಕುಮಾರ್ ತಂದೆ: ಜಗದೀಶ್ ಸುವರ್ಣ, 19 ವರ್ಷ, ವಾಸ: ಜಯಲತಾ ನಿವಾಸ, ಅಯ್ಯಪ್ಪಗುಡಿಯ ಬಳಿ, ಆನಂದನಗರ, ಆಕಾಶಭವನ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಠಾಣೆ ಅಪರಾದ ಕ್ರಮಾಂಕ 124/2013 ಕಲಂ 143, 144, 147, 148, 448, 504, 323, 354, 114 r/w 149ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment