ಅಸ್ವಾಭಾವಿಕ ಮರಣ ಪ್ರಕರಣ
ಮುಲ್ಕಿ ಠಾಣೆ
ಕಾವೂರ್ ಠಾಣೆ
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
ಸಂಚಾರ ಪೂರ್ವ ಠಾಣೆ
ಮುಲ್ಕಿ ಠಾಣೆ
- ಪಿರ್ಯಾದಿದಾರರಾದ ಹರೀಶ್ ಪ್ರಜಾರಿ ಪ್ರಾಯ:29 ವರ್ಷ ತಂದೆ: ನಾರಾಯಣ ಪ್ರಜಾರಿ ವಾಸ: ಪ್ಮಣ್ಕೆದಡಿ ಮನೆ, ಕೆಮ್ರಾಲ್ ಗ್ರಾಮ ಮಂಗಳೂರು ತಾಲೂಕು ರವರ ತಮ್ಮ ಸಂತೋಷ ಪೂಜಾರಿ ಪ್ರಾಯ 25 ವರ್ಷ ಎಂಬವರು ದಿನಾಂಕ 06.06.2013 ರಂದು ಬೆಳಿಗ್ಗೆ 6.00 ಗಂಟೆಯ ನಂತರ ಕೂಲಿ ಕೆಲಸಕ್ಕಾಗಿ ಕೆಮ್ರಾಲ್ ಗ್ರಾಮದ ಬೊಂಗೊಟ್ಟು ಕಂಬಳಗದ್ದೆ ಎಂಬಲ್ಲಿರುವ ಕೆರೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ್ಗೆ ಆಕಸ್ಮಿಕವಾಗಿ ಕಾಲುಜಾರಿ ನೀರು ತುಂಬಿದ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು ಮೃತದೇಹವು ದಿನಾಂಕ 9.06.2013 ರಂದು ಬೆಳಗ್ಗಿನ ಜಾವ ಸುಮಾರು 7 ಗಂಟೆಗೆ ಕೆರೆಯಲ್ಲಿ ತೇಲುತ್ತಿರುವುದು ಕಂಡುಬಂದಿರುತ್ತದೆ ಎಂಬುದಾಗಿ ಹರೀಶ್ ಪ್ರಜಾರಿ ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಯು.ಡಿ.ಆರ್ ನಂಬ್ರ 13/2013 ಕಲಂ: 174 ಸಿ.ಆರ್.ಪಿ;.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಕಾವೂರ್ ಠಾಣೆ
- ಪಿರ್ಯಾದಿದಾರರಾದ ಐವನ್ ಡಿಸೋಜಾ ಪ್ರಾಯ:36 ವರ್ಷ ತಂದೆ: ಜೆರಾಲ್ಡ್ ಡಿಸೋಜಾ ವಾಸ: ವಿಲ್ಸನ್ ನಿವಾಸ, ಬೊಲ್ಪುಗುಡ್ಡೆ ಅಶೋಕ ನಗರ ಅಂಚೆ ಮಂಗಳೂರು ತಾಲೂಕು ರವರ ಅಣ್ಣನಾದ ರೋನಿ ಡಿಸೋಜಾರವರು ಕಾವೂರು ಬೋಳ್ಪುಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಒಬ್ಬಂಟಿಗರಾಗಿ ವಾಸವಾಗಿದ್ದು ದಿನಾಂಕ 5.06.2013 ರಂದು ರೋನಿಡಿಸೋಜಾರವರು ಅಸ್ವಸ್ಥರಾಗಿದ್ದ ವಿಷಯ ನೆರೆಕೆರಯವರಿಂದ ತಿಳಿದು ಪಿರ್ಯಾದಿದಾರರು ಅವರನ್ನು ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು ನಂತರ ತನ್ನ ಮನೆಗೆ ಕರೆದುಕೊಂಡು ಹೋಗಿದ್ದು ದಿನಾಂಕ 6.6.2013 ರಂದು ಪುನಃ ಅಸ್ವಸ್ಥರಾದವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದವರನ್ನು ಚಿಕಿತ್ಸೆ ಫಲಕಾರಿಯಾಗದೇ ಹೊಟ್ಟೆಗೆ ಆಹಾರವಿಲ್ಲದೇ ಯಾವುದೋ ಖಾಯಿಲೆಯಿಂದ ದಿನಾಂಕ 9.06.2013 ರಂದು 2.30 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಐವನ್ ಡಿಸೋಜಾ ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಯು.ಡಿ.ಆರ್ ನಂಬ್ರ 17/12 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಪಘಾತ ಪ್ರಕರಣ
ಸಂಚಾರ ಪೂರ್ವ ಠಾಣೆ
- ದಿನಾಂಕ 09-06-2013 ರಂದು ಸಮಯ ಸುಮಾರು 00.05 ಗಂಟೆಗೆ ಕಾರು ನಂ ಏಂ-19 ಒಅ 1646 ನ್ನು ಚಾಲಕರಾಗಿದ್ದ ಇತಿಹಾಸ್ ಶೆಟ್ಟಿರವರು ಕಾರಿನಲ್ಲಿ ಚಂದ್ರಶೇಖರ್ ಮತ್ತು ಸುಮಂತ್, ಆದೇಶ್, ಶ್ರೀಮತಿ ಸತ್ಯ ಗೊಲ್ಲರಕೇರಿ ಹಾಗೂ ಕರಣ್ ಎಂಬವರನ್ನು ಕುಳ್ಳಿರಿಸಿಕೊಂಡು ಸಕ್ಯರ್ೂಟ್ ಹೌಸ್ ಜಂಕ್ಷನ್ ಕಡೆಯಿಂದ ಪದವು ಜಂಕ್ಷನ್ ಕಡೆಗೆ ಕದ್ರಿ ಪಾಕರ್್ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕದ್ರಿ ಬಾಲಭವನ ಬಳಿ ತಲಪುವಾಗ ಕಾರಿನ ವೇಗವನ್ನು ನಿಯಂತ್ರಿಸಲಾಗದೆ ಕಾರು ಸ್ಕಿಡ್ ಆಗಿ ಬಾಲಭವನದ ಕಾಂಪೌಂಡ್ ಗೋಡೆಗೆ ಡಿಕ್ಕಿಯಾಗಿದ್ದು ಚಾಲಕರಾಗಿದ್ದ ಇತಿಹಾಸ್ಶೆಟ್ಟಿರವರು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಮತ್ತು ಕಾರಿನಲ್ಲಿದ್ದ ಚಂದ್ರಶೇಖರ್ ಮತ್ತು ಸುಮಂತ್, ಆದೇಶ್, ಶ್ರೀಮತಿ ಸತ್ಯ ಗೊಲ್ಲರಕೇರಿ ಹಾಗೂ ಕರಣ್ರವರುಗಳು ರಕ್ತಗಾಯಗೊಂಡು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಚಂದ್ರ ಶೇಖರ (20)ತಂದೆ- ಗುರುಬಸವರಾಜ್ ವಾಸ- ಸುರಕ್ಷಾ , ಬಿಜೈ ಕಾಪಿಕಾಡು, ಬಿಜೈ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಮೊ.ನಂಬ್ರ 103/2013 ಕಲಂ-279, 337, 304(ಂ)ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಸಂಚಾರ ಪೂರ್ವ ಠಾಣೆ
- ದಿನಾಂಕ: 08-06-2013 ರಂದು ಸಮಯ ಸುಮಾರು 21.15 ಗಂಟೆಗೆೆ ಜೀಪು ನಂಬ್ರ ಏಂ-19 ಓ-4963 ನ್ನು ಅದರ ಚಾಲಕರು ಪಂಪ್ವೆಲ್ ಕಡೆಯಿಂದ ಕಂಕನಾಡಿ ಸರ್ಕಲ್ ಕಡೆಗೆ ಕಂಕನಾಡಿ ಹಳೆ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಂಕನಾಡಿ ಸರ್ಕಲ್ನಲ್ಲಿ ಮುಖ್ಯ ರಸ್ತೆಗೆ ಏಕಾಏಕಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಆರೀಫ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋ.ಸೈಕಲ್ ನಂಬ್ರ ಏಂ-18 ಇ-5377 ಕ್ಕೆ ಜೀಪು ಡಿಕ್ಕಿಯಾದ ಮಾಡಿದ ಪರಿಣಾಮ ಆರೀಫ್ರವರು ಮೋ.ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಗಂಭೀರ ಸ್ವರೂಪದ ರಕ್ತಗಾಯ ಉಂಟಾಗಿ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುಶಾಂತ್ ಕುಮಾರ್ (37)ತಂದೆ- ಕೆ. ವಿಠಲ ವಾಸ- ರಾಜಗೃಹ, ಮೇಘಾ ನಗರ, ಪಡೀಲ್ ಆಳಪೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 104/2013 ಕಲಂ-279, 338,ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 09-06-2013 ರಂದು ಸಮಯ ಸುಮಾರು 18-45 ಗಂಟೆಗೆ ಕಾರು ನಂ ಏಂ-19-ಒಂ-924 ನ್ನು ಅದರ ಚಾಲಕ ಬಿಜೈ ನ್ಯೂ ರೋಡ್ ಕಡೆಯಿಂದ ಬಿಜೈ ನ್ಯೂ ರೋಡ್ ಜಂಕ್ಷನ್ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮುಖ್ಯ ರಸ್ತೆಗೆ ಪ್ರವೇಶಿಸುವ ವೇಳೆ ನಿಂತು ಕಾರನ್ನು ಮುಂದಕ್ಕೆ ಚಲಾಯಿಸದೇ ನೇರವಾಗಿ ಚಲಾಯಿಸಿದ ಪರಿಣಾಮ ಅ ಕಡೆಯಿಂದ ಬಿಜೈ ನ್ಯೂ ರೋಡ್ ಜಂಕ್ಷನ್ ಕಡೆಗೆ ಬರುತ್ತಿದ್ದ ಮೋಟಾರು ಸೈಕಲ್ ನಂಬ್ರ ಏಂ-01-ಇಏ-1914 ನೇಯದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಸವಾರ ಸ್ವರೂಣ್ ರಾಜ್ (28 ವರ್ಷ) ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಸಮಯ ಸುಮಾರು 19-50 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ವರದರಾಜ್ ಶೆಣೈ (27) ತಂದೆ- ಜಿ.ಎ. ಶೆಣೈ.ವಾಸ- # 103, ಆನಂದ ಅಪಾಟರ್್ಮೆಂಟ್.ಕೆಕೋಡಿಯಲ್ ಬೈಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 105/2013 ಕಲಂ-279, 304(ಂ)ಐಪಿಸಿ, & ಆರ್ಆರ್ ರೂಲ್ 8 ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Who I do report\complain, in case chewable tobacco products are still stored and sold in Mangalore?
ReplyDelete