ಕಳವು ಪ್ರಕರಣ
ಪಣಂಬೂರು ಠಾಣೆ
ಪಣಂಬೂರು ಠಾಣೆ
- ದಿನಾಂಕ 15-06-13 ರಂದು ಪಿರ್ಯಾಧಿದಾರರಾದ ಎಂ.ಆರ್ ರವೀಂದ್ರ ಕಂಪೆನಿ ಕಮಾಂಡರ್ ಸಿ.ಐ.ಎಸ್.ಎಫ್. ಯುನಿಟ್ ಎಂ.ಎನ್.ಎಂ.ಪಿ.ಟಿ ಪಣಂಬೂರು ರವರು ಎನ್.ಎಂ.ಪಿ.ಟಿ ಬಂದರು ಮಂಡಳಿಯಲ್ಲಿ ಬೆಳಿಗ್ಗೆ 05.00 ಗಂ.ಯಿಂದ 13.00 ಗಂ. ವರೆಗೆ ಕರ್ತವ್ಯದಲ್ಲಿರುವ ಸಮಯ ಬಂದರು ಒಳಗಡೆಯಿಂದ ಕೆ.ಎ-04-ಬಿ-6963 ನೇ ಟಿಪ್ಪರ್ ಲಾರಿಯನು ಅದರ ಚಾಲಕರು ಹೊರಗೆ ಹೋಗುವರೇ ಚಲಾಯಿಸಿಕೊಂಡು ಬರುತ್ತಿರುವಾಗ ಗೇಟಿನಲ್ಲಿ ಖಾಲಿ ಟಿಪ್ಪರ್ ಎಂಬುದಾಗಿ ತಿಳಿಸಿದ್ದು ಆದರೆ ಅದನ್ನು ತಪಾಸಣೆ ನಡೆಸಿದಾಗ ಅದರಲ್ಲಿ ಅರ್ಧ ಲೋಡಿನಷ್ಟು ಸುಮಾರು 5000 ಕೆ.ಜಿ.ಯಷ್ಟು ಕೋಲ್ ಕಂಡು ಬಂದಿದ್ದು ಅರೋಪಿ ಟಿಪ್ಪರ್ ಲಾರಿಯ ಚಾಲಕರು ಕೋಲ್ ಅನ್ನು ಬಂದರು ಒಳಗಡೆ ಬತರ್್ ನಂ 8 ರಿಂದ ಎಂ.ಟಿ.ಎಲ್ ಯಾಡರ್ಿಗೆ ಖಾಲಿ ಮಾಡಬೇಕಾಗಿದ್ದು ಅದನ್ನು ಖಾಲಿ ಮಾಡದೇ ಕಳವು ಮಾಡಿಕೊಂಡು ಹೋಗುತ್ತಿರುವುದಾಗಿದೆ ಎಂಬಿತ್ಯಾದಿ. ಮೌಲ್ಯ ಸುಮಾರು ರೂ 12,500/-ಎಂಬುದಾಗಿ ಎಂ.ಆರ್ ರವೀಂದ್ರ ರವರು ನೀಡಿದ ದೂರಿನಂತೆ ಪಣಂಬೂರು ಠಾಣಾ ಅ.ಕ್ರ 92/2013 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಜುಗಾರಿ ಆಡುತ್ತಿದ್ದವರ ಬಂಧನ
ಸುರತ್ಕಲ್ ಠಾಣೆ
- ದಿನಾಂಕ 15-06-13 ರಂದು ಠಾಣಾ ಕಾನೂನು ಸುವ್ಯವಸ್ಥೆ ಪಿಎಸ್‌ಐ ಕುಮಾರೇಶ್ವರನ್‌ರವರು ಅಪರಾಧ ಪತ್ತೆ ವಿಭಾಗದ ಪಿಎಸ್‌ಐ ರಾಜೇಂದ್ರರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಂಜೆ 18-30 ಗಂಟೆಗೆ ಕುತ್ತೆತ್ತೂರು ಕೇಂಜ ಮೈದಾನದ ಬಳಿ ಉಳಾಯಿ ಪಿದಾಯಿ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಇಲಾಖಾ ಜೀಪ್ ನಂಬ್ರ ಕೆಎ 19 ಜಿ 237 ರಲ್ಲಿ ಚಾಲಕ ಪಿಸಿ 461 ಹಾಗೂ ಹೆಚ್ಸಿ 1799, ಹೆಚ್ಸಿ 755, ಪಿಸಿ 2091 ಹಾಗೂ ಪಿಸಿ 637 ನೇ ಸಿಬ್ಬಂದಿಯವರ ಜೊತೆ ಕುತ್ತೆತ್ತೂರು ಗ್ರಾಮದ ಕೇಂಜ ಮೈದಾನದ ಬಳಿ ಹೋಗಿ ನೋಡಲಾಗಿ ಅಲ್ಲಿ 1. ಗುಂಡಪ್ಪ 2. ಯೋಗೀಶ 3. ಕೃಷ್ಣ 4. ನವೀನ 5. ಪ್ರಶಾಂತ 6. ಸಂದೇಶ ಎಂಬವರು ಗುಂಪಾಗಿ ಕುಳಿತು ಮೇಣದ ಬತ್ತಿಯ ಬೆಳಕಿನ ಸಹಾಯದಿಂದ ಇಸ್ಪೀಟ್ ಎಲೆಗಳನ್ನು ಬಳಸಿ ಒಟ್ಟು ರೂ.3 970/-ಹಣವನ್ನು ಪಣವಾಗಿಟ್ಟು 100 ರೂಪಾಯಿ ಉಳಾಯಿ ಹಾಗೂ 100 ರೂಪಾಯಿ ಪಿದಾಯಿ ಎಂಬ ಜುಗಾರಿ ಆಟವನ್ನು ಆಡುತ್ತಿದ್ದವರನ್ನು 19-15 ಗಂಟೆಗೆ ಧಾಳಿ ನಡೆಸಿ ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು ಕೊಂಡಿರುವುದಾಗಿದೆ ಮತ್ತು ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 156/13 ಕಲಂ 87 ಕೆಪಿಆ್ಯಕ್ಟ್ ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment