ಕಾವೂರ್ ಠಾಣೆ
ಕೊಲೆ ಪ್ರಯತ್ನ
- ಪಿರ್ಯಾದುದಾರರಾದ ಶ್ರೀ ಎಂ ಅಬ್ದುಲ್ ರಝಾಕ್ ಎಂಬವರ ಹಿರಿಯ ಮಗ ಶೇಖ್ ಮಹಮ್ಮದ್ ಆನ್ಸಾರ್ ಎಂಬಾತನನ್ನು ಕೊಲ್ಲುವ ಉದ್ದೇಶದಿಂದ ದಿನಾಂಕ 23-06-2013 ರಂದು ರಾತ್ರಿ 11-30 ಗಂಟೆ ಸಮಯಕ್ಕೆ ಮೂಡುಶೆಡ್ಡೆ ಬಸ್ಸ್ ಸ್ಟಾಪಿನ ಹಿಂಬದಿ ಆರೋಪಿಗಳಾದ ಚರಣ್ , ವಿಜಿತ್ @ ಪೊಡಿ ಮತ್ತು ಗುಂಡ ಎಂಬವರು ತಲವಾರಿನಿಂದ ಶೇಖ್ ಮಹಮ್ಮದ್ ಆನ್ಸಾರ್ ನ ತಲೆಯ ಹಿಂಬದಿಗೆ ಎಡ ಕಿವಿಯ ಬಳಿ, ಕುತ್ತಿಗೆಗೆ ಎಡ ಕಣ್ಣಿನ ಬಳಿ, ಎಡ ಮತ್ತು ಬಲ ಕಿಬ್ಬೊಟ್ಟೆಯ ಬಳಿ, ಎದೆಗೆ ಹಾಗೂ ಎಡಕೈ ಅಂಗೈಗೆ ತಲವಾರಿನಿಂದ ಕಡಿದು ಗಂಭೀರ ಗಾಯಗೊಳಿಸಿದ್ದು, ಶೇಖ್ ಮಹಮ್ಮದ್ ಆನ್ಸಾರ್ ನನ್ನು ಚಿಕಿತ್ಸೆಯ ಬಗ್ಗೆ ಎಸ್.ಸಿ.ಎಸ್ ಆಸ್ಪತ್ರೆಗೆ ದಾಖಲಿರಿಸುವುದಾಗಿದೆ ಎಂಬುದಾಗಿ ಎಂ ಅಬ್ದುಕ್ ರಝಕ್, ತಂದೆ: ದಿ ಶೇಖ್ ಅಹಮ್ಮದ್ , ವಾಸ”: 3-410, ಜಾರದ ಬೆಟ್ಟು, ಮೂಡುಶೆಡ್ಡೆ, ಮಂಗಳೂರು ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆ ಅ.ಕ್ರ. ನಂಬ್ರ 128/2013 ಕಲಂ 307 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment