ಸುಲಿಗೆ ಪ್ರಕರಣ:
ಮಂಗಳೂರು ಪೂರ್ವ ಠಾಣೆ;
ಅಸ್ವಾಬಾವಿಕ ಮರಣ ಪ್ರಕರಣ:
ಮಂ. ಉತ್ತರ ಠಾಣೆ;
ಮಂಗಳೂರು ಪೂರ್ವ ಠಾಣೆ;
- ದಿನಾಂಕ 12-06-2013ರಂದು ಪಿರ್ಯಾದಿದಾರರು ತನ್ನ ಸ್ನೇಹಿತೆಯಾದ ಸವೀತಾ ಜೊತೆಯಲ್ಲಿ ವಾಸ್ಲೈನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ವಾಸ್ಲೈನ್ ಎನ್ಕ್ಲೇವ್ ಅಪಾಟರ್್ಮೆಂಟ್ ಬಳಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುಗಡೆಯಿಂದ ದ್ಚಿಚಕ್ರ ವಾಹನದಲ್ಲಿ ಬಂದ ಯುವಕರು ಪಿರ್ಯಾದಿದಾರರ ಬಳಿಗೆ ತಲುಪಿದಾಗ ಬೈಕ್ನ್ನು ನಿಧಾನ ಮಾಡಿದ್ದು ಬೈಕ್ನ ಹಿಂಬದಿ ಸವಾರ ಪಿರ್ಯಾದಿದಾರರ ಕುತ್ತಿಗೆಗೆ ಏಕಾಎಕಿಯಾಗಿ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 42,000/- ರೂ ಬೆಲೆ ಬಾಳುವ ಸುಮಾರು 14 ಗ್ರಾಂ ತೂಕದ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ಲೂಟಿ ಮಾಡಿಕೊಂಡು ವಾಸ್ಲೈನ್ ರಸ್ತೆಯಲ್ಲಿ ಪರಾರಿಯಾಗಿದ್ದು ಪಿರ್ಯಾದಿದಾರರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದ ಯುವಕರು ಪ್ರಾಯ ಸುಮಾರು 22 ರಿಂದ 28 ವರ್ಷದೊಳಗಿನವರಾಗಿದ್ದು ಎಣ್ಣೆ ಕಪ್ಪು ಮೈಬಣ್ಣದವರಾಗಿರುತ್ತಾರೆ. ಎಂಬುದಾಗಿ ಪಿರ್ಯಾದಿದಾರರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ .85-2013 ಕಲಂ 392 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಅಸ್ವಾಬಾವಿಕ ಮರಣ ಪ್ರಕರಣ:
ಮಂ. ಉತ್ತರ ಠಾಣೆ;
- ಫೀರ್ಯಾದಿದಾರರು ಸುಮಾರು 2 ತಿಂಗಳ ಹಿಂದೆ ಮಂಗಳೂರು ನಗರದ ಭವಂತಿಸ್ಟ್ರೀಟ್ನಲ್ಲಿರುವ ಹೋಟೇಲ್ ಸಿಟಿ ಪ್ಯಾಲೇಸ್ ಲಾಡ್ಜ್ ನಲ್ಲಿ ಸ್ವಾಗತಕಾರನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10-06-2013 ರಂದು 21:00 ಗಂಟೆಗೆ ಹೆಸರು ಜಯಶೆಟ್ಟಿ, ಸರಪಾಡಿ, ಬಂಟ್ವಾಳ ಎಂಬವರು ಪಿರ್ಯಾದಿದಾರರ ಲಾಡ್ಜ್ ನಲ್ಲಿ ರೂಂ 12 ನ್ನು ಪಡೆದುಕೊಂಡಿದ್ದು, ದಿನಾಂಕ 12-06-2013 ರಂದು ಬೆಳಿಗ್ಗೆ ಹೊರಗೆ ಹೋಗಿದ್ದು, ನಂತರ ಸಂಜೆ ತಾನು ಪಡೆದುಕೊಂಡಿದ್ದ ರೂಂ ಗೆ ವಾಪಾಸ್ಸಾಗಿದ್ದು, ನಂತರ ಆತನನ್ನು ಪಿರ್ಯಾದಿದಾರರು ನೋಡದೇ ಇದ್ದು, ದಿನಾಂಕ 12-06-2013 ರಂದು 19:00 ಗಂಟೆಗೆ ಪಿರ್ಯಾದಿದಾರರು ಪ್ರತಿಯೊಂದು ರೂಮ್ ನ್ನು ಚೆಕ್ ಮಾಡಿ ರೂಂ ನಂಭ್ರ 12 ನ್ನು ತೆರೆಯುವಂತೆ ಬಾಗಿಲನ್ನು ಬಡಿದಾಗ ತೆರೆಯದೇ ಇದ್ದು, ಪದೇ ಪದೇ ಕರೆದಾಗಲೂ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದುದರಿಂದ, ಈ ಬಗ್ಗೆ ಪೊಲೀಸ್ರಿಗೆ ಮಾಹಿತಿ ನೀಡಿದ್ದು, ಪೊಲೀಸ್ರು ಬಂದು ರೂಂ ನಂಬ್ರ 12 ರವರ ಹೆಸರನ್ನು ಹೇಳಿ ಕೂಗಿ ಕರೆದಾಗಲೂ ಬಾಗಿಲು ತೆರೆಯದೇ ಇದ್ದುದರಿಂದ ಪೊಲೀಸರು ಮತ್ತು ಪಿರ್ಯಾದಿದಾರರು ಹಾಗೂ ರೂಮ್ ಬಾಯ್ ಸೇರಿಕೋಂಡು ಬಲತ್ಕಾರದಿಂದ ಬಾಗಿಲನ್ನು ತೆರೆದಾಗ ರೂ ನಂಬ್ರ 12 ರಲ್ಲಿ ಉಳಕೊಂಡಿದ್ದ ಜಯಶೆಟ್ಟಿ ಸರಪಾಡಿ ಬಂಟ್ವಾಳ ರವರು ರೂಂ ನಂಬ್ರ 12 ರಲ್ಲಿ ಅಳವಡಿಸಿದ್ದ ಫ್ಯಾನ್ ನ ಬಳಿ ಇರುವ ಹುಕ್ ಗೆ ನೈಲಾನ್ ಹಗ್ಗದಿಂದ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ್ಯದು ಕಂಡು ಬಂದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಧೂರಿನಂತೆ ಶೇಖ್ ಅಬ್ದುಲ್ಲಾ ಅಜೀಜ್, ಪ್ರಾಯ 46 ವರ್ಷ, ತಂದೆ: ಕೆ. ಪೀರ್ ಸಾಹೇಬ್, ವಾಸ: ಮುಡೈಕೋಡಿ ಬ್ರೆಟ್ಟು ಮನೆ, ಅಮ್ಮಂಜೆ ಅಂಚೆ, ಬಂಟ್ವಾಳ ತಾಲ್ಲೂಕು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 22/2013 ಕಲಂ 174 ಸಿಆರ್ಪಿಸಿ ರಂತೆ ಪ್ರಕರಣ ದಾಖಲ;ಇಸಿ ತನಿಖೆ ಕೈಗೊಳ್ಳಲಾಗಿದೆ.
No comments:
Post a Comment