ಹಲ್ಲೆ ಪ್ರಕರಣ
ಸುರತ್ಕಲ್ ಠಾಣೆ
- ದಿ 05-06-13 ರಂದು ಫಿರ್ಯಾಧಿದಾರರಾದ, ದಿನೇಶ ಪುತ್ರನ್ (50) ತಂದೆ: ದಿ ರಾಮ ಸಾಲ್ಯಾನ್ ವಾಸ: ಜಾರಂದಾಯ ಕಾಲಾನಿ ಇಡ್ಯಾಗ್ರಾಂ, ಮಂಗಳೂರು ರವರು ಅವರ ತಾಯಿ ವಾಸವಾಗಿರುವ ಕುಳಾಯಿ ಗ್ರಾಮದ ಕುಳಾಯಿಯ ಮಾಸ್ಟರ್ ಐಸ್ ಪ್ಲಾಂಟ್ ಬಳಿಯ ಮನೆಯ ಚರಂಡಿಯನ್ನು ಕ್ಲೀನ್ ಮಾಡಲು ಬೆಳಿಗ್ಗೆ ಕೆಲಸದವರನ್ನು ಕರೆಯಿಸಿದಾಗ ಪಕ್ಕದ ಮನೆಯ ಪರಮೇಶ್ವರ ಎಂಬವರು ಆಕ್ಷೇಪಿಸಿದ ವಿಚಾರವನ್ನು ತಂಗಿ ವೇದವತಿಯಿಂದ ತಿಳಿದು, ಈ ದಿನ ದಿ: 05-06-13ರ ಸಂಜೆ 5:00 ಗಂಟೆಗೆ ಫಿರ್ಯಾಧಿದಾರರು ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಮೇಶ್ವರ ರವರ ಮನೆಯ ಗೇಟ್ ನ ಬಳಿ ಸದ್ರಿ ಪರಮೇಶ್ವರರವರಲ್ಲಿ ಹೊರಗೆ ಬರುವಂತೆಯೂ ಮಾತನಾಡಲು ಇದ್ದೆ ಎಂದು ಹೇಳುತ್ತಿರುವಾಗ ಪರಮೇಶ್ವರ ಹಾಗೂ ಅವರ ಹಿಂದಿನಿಂದ ಬಂದ ಹರ್ಷಿತ್ ಮತ್ತು ರಾಕೇಶ ಎಂಬವರು ಫಿರ್ಯಾಧಿದಾರರನ್ನು ಉದ್ದೇಶಿಸಿ “ಬೇರ್ವಾಸಿ ಗಲಾಟೆ ಮಾಡುತ್ತೀಯಾ “ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಹರ್ಷಿತ್ ಮತ್ತು ಪರಮೇಶ್ವರವರು ತಂಪು ಪಾನಿಯಾ ಬಾಟ್ಲಿಯಿಂದ ಫಿರ್ಯಾಧಿದಾರರ ತಲೆಗೆ ಹೊಡೆದು ಗಾಯಗೊಳಿಸಿದ್ದು, ರಾಕೇಶ್ ರವರು ಎಕ್ಸೋ ಬ್ಲೇಡ್ ನಿಂದ ಫಿರ್ಯಾಧಿದಾರ ಬಲ ಕೈಯ ಮೊಣಗಂಟಿನ ಕೆಳಗಡೆ ಹಾಗೂ ಎಡಕಣ್ಣಿಗೆ ಚುಚ್ಚಿದ್ದು, ಫಿರ್ಯಾಧಿದಾರರ ತಾಯಿ ಹಾಗೂ ಸುರೇಶ ಎಂಬವರು ಗಲಾಟೆಯನ್ನು ಬಿಡಿಸಿ, ಗಾಯಗೊಂಡ ಫಿರ್ಯಾಧಿದಾರರನ್ನು ಸುರೇಶ ಎಂಬವರು ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಾಗಿದ್ದು, ಚರಂಡಿ ವಿಚಾರಲ್ಲಿ ವೈಮಾನಸ್ಸಿದ ಮೇಲ್ಕಂಡ ಅಪಾದಿತರು ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ ದಿನೇಶ ಪುತ್ರನ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 152/2013 ಕಲಂ 504, 324 ಜೊತೆಗೆ 34 ಭಾ.ದ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
- ದಿನಾಂಕ 05-06-2013 ರಂದು ಬೆಳಿಗ್ಗೆ ಸುಮಾರು 10-30 ಗಂಟೆಫಿರ್ಯಾದಿದಾರರಾದ ಪರಮೇಶ್ವರ(58) ತಂದೆ: ದಿ| ಅಚ್ಚುತ ಕಕರ್ೇರಾ ವಾಸ: ಮನೆ ನಂಬ್ರ 6151/5, ಶ್ರೀ ರಕ್ಷಾ, ನಿವಾಸ, ಮಾಸ್ಟರ್ ಐಸ್ ಪ್ಲಾಂಟ್ ಬಳಿ, ಕುಳಾಯಿ ಅಂಚೆ, ಮಂಗಳೂರು ತಾಲೂಕು ರವರು ಅವರ ನೆರೆ ಮನೆಯ ರಾಜೀವಿಯವರಿಗೂ ಮಳೆಗಾಲದ ಸಮಯದಲ್ಲಿ ಸಾರ್ವಜನಿಕ ಹೊರ ಚರಂಡಿಯಲ್ಲಿ ನೀರು ಹೋಗುವ ವಿಚಾರದಲ್ಲಿ ಮಾತುಕತೆಯಾಗುತ್ತಿದ್ದು ರಾಜೀವಿಯವರ ಕೆಲಸದವರು ಚರಂಡಿಯ ಹೊಯಿಗೆ ತೆಗೆಯುತ್ತಿದ್ದಾಗ ಫಿರ್ಯಾದಿದಾರರು ಹೊಯಿಗೆ ತೆಗೆಯುವಾಗ ಕಂಪೌಂಡು ಬಗ್ಗೆ ಜಾಗ್ರತೆ ವಹಿಸಿ ಎಂದು ರಾಜೀವಿಯವರ ಅಳಿಯನಲ್ಲಿ ಹೇಳಿದ್ದು ಕೆಲಸದವರು ಕೆಲಸ ಮಾಡದೇ ಹೋಗಿರುತ್ತಾರೆ. ಸಂಜೆ ಸುಮಾರು 4-50 ಗಂಟೆಗೆ ಆರೋಪಿ ದಿನೇಶ ಪುತ್ರನ್ ಎಂಬಾತನು ಫಿರ್ಯದಿದಾರರ ಮನೆಯ ಒಳಗೆ ಬಂದು ಈಯೆನಾ, ಯಾನ್ ಏರುಂದ್ ಗೊತ್ತುಂಡ, ಈ ಎಂಕ್ಲೆಡ ಎಂಚಿನ ಲಪ್ಡಾ ಮಲ್ಪುನಾ ಬೇವಸರ್ಿ, ಸೂಳೆಮಗ ಎಂಬುದಾಗಿ ಅವ್ಯಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಫಿರ್ಯಾದಿದಾರರ ಮೈಮೇಲೆ ಕೈಹಾಕಿ ಕೈಯಿಂದ ಕೆನ್ನೆಗೆ ಹೊಡೆದಾಗ ಫಿರ್ಯಾದಿದಾರರ ಹೆಂಡತಿ ಬಿಡಿಸಲು ಬಂದಾಗ ಆಕೆಗೂ ಕೈಯಿಂದ ಹೊಡೆದು ಆಕೆಯ ಕುತ್ತಿಗೆಗೆ ಕೈಹಾಕಿ ನೈಟಿಯನ್ನು ಹರಿದು ಹಾಕಿ ಫಿರ್ಯಾದಿದಾರರನ್ನು ಎಳೆದುಕೊಂಡು ಹೋಗಿ ಫಿರ್ಯಾದಿದಾರರ ಮನೆಯ ಎದುರು ಇರುವ ನಾಗೇಶ ಎಂಬವರ ಅಂಗಡಿಯಲ್ಲಿದ್ದ ಸೋಡಾ ಬಾಟ್ಲಿಯನ್ನು ತೆಗೆದು ಫಿರ್ಯಾದಿದಾರರ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ತಡೆಯಲು ಬಂದ ಫಿರ್ಯಾದಿದಾರರ ಅಣ್ಣನ ಮಗ ರಾಕೆಶನಿಗೂ ಹೊಡೆದಿದ್ದು ರಂಡೆ ಬಾಲೆಲೆ ನಿಕ್ಲೆನು ಪೂರಾ ಕಡ್ತ್ದ್ ಪಾಡುವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂಬುದಾಗಿ ಪರಮೇಶ್ವರ(58) ತಂದೆ: ದಿ| ಅಚ್ಚುತ ಕಕರ್ೇರಾ ವಾಸ: ಮನೆ ನಂಬ್ರ 6151/5, ಶ್ರೀ ರಕ್ಷಾ, ನಿವಾಸ, ಮಾಸ್ಟರ್ ಐಸ್ ಪ್ಲಾಂಟ್ ಬಳಿ, ಕುಳಾಯಿ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 151/2013 ಕಲಂ: 448, 323, 354, 324, 504, 506 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ
No comments:
Post a Comment