Monday, August 19, 2013

Instruction to Adhere SC Directions About Tinted Glasses in MV

    ವಾಹನಗಳಿಗೆ ಪಾರದರ್ಶಕ ಗಾಜು ಅಳವಡಿಸುವ ಬಗ್ಗೆ ಕೇಂದ್ರ ಮೋಟಾರು ವಾಹನ ನಿಯಾಮಾವಳಿ 1989ರ ನಿಯಮ 100(2) ರ ಪ್ರಕಾರ ವಾಹನದ ಮುಂಭಾಗ ಹಾಗೂ ಹಿಂಭಾಗದ ಗಾಜುಗಳು 70% ರಷ್ಟು ಪಾರದರ್ಶಕವಾಗಿರಬೇಕು. ವಾಹನದ ಎಡ ಮತ್ತು ಬಲಭಾಗದ ಬಾಗಿಲ ಗಾಜುಗಳು 50% ರಷ್ಟು ಪಾರದರ್ಶಕವಾಗಿರತಕ್ಕದ್ದು ಎಂದು ಹೇಳಲಾಗಿದೆ. ಆದರೆ ಬಹಳಷ್ಟು ವಾಹನಗಳ ಗಾಜುಗಳಿಗೆ ಸನ್ ಪಿಲಂ (Sun film) ನ್ನು ಉಪಯೋಗಿಸುತ್ತಿದ್ದುದರಿಂದ ದೇಶದಲ್ಲಿ ಹೆಚ್ಚುತ್ತಿರುವ ಮರಣಾಂತಿಕ ಹಾಗೂ ಮರಣಾಂತಿಕವಲ್ಲದ ಅಪರಾಧಗಳಿಗೆ ಪೂರಕ ಅಂಶವಾಗಿದ್ದು, ಈ ಹಿನ್ನಲೆಯಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು WP(Civil) No 265/2011, ದಿನಾಂಕ 27-04-2012 ರಂದು ನೀಡಿರುವ ತೀರ್ಪಿನಲ್ಲಿ ಈ ಮೇಲೆ ತಿಳಿಸಿದ ನಿಯಾಮಾವಳಿ 100(2)ನ್ನು ದಿನಾಂಕ 04-05-2012 ರಿಂದ ಕಟ್ಟುನಿಟ್ಟಾಗಿ ಜ್ಯಾರಿಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿರುತ್ತದೆ.

            ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ 27-04-2012ತೀರ್ಪಿನಲ್ಲಿ ತಿಳಿಸಿರುವ ಆದೇಶದಂತೆ ಜನತೆ ತಮ್ಮ ವಾಹನಗಳ ಮುಂಭಾಗ ಹಾಗೂ ಹಿಂಭಾಗದ ವಿಂಡ್ ಸ್ಕ್ರೀನ್ ಗಳನ್ನು 70% ರಷ್ಟು ಪಾರದರ್ಶಕತೆ ಹಾಗೂ ವಾಹನದ ಎರಡು ಬದಿಗಳನ್ನು 50% ರಷ್ಟು ಹೊಂದಿರುವ ಗಾಜುಗಳನ್ನು ಹೊಂದಿರಬಹುದು. ಆದರೆ ಈ ಪ್ರಮಾಣದ ಸನ್ ಪಿಲಂಗಳನ್ನು ಯಾವುದೇ ಅಂಗಡಿ, ಕಾರ್ ಆಕ್ಸೆಸರೀಸ್ ಅಂಗಡಿಗಳಲ್ಲಿ ಅಳವಡಿಸುವಂತಿಲ್ಲ. ಅದು ಯಾವುದೇ ತಯಾರಿಕ ಕಂಪೆನಿಯು ತಯಾರಿಕಾ ಸಮಯ ಗಾಜು ಅಳವಡಿಸುವಾಗ ಈ ಮಾನದಂಡಗಳನ್ನು ಅನುಸರಿಸಬೇಕೆಂದು ಆದೇಶ ಇರುತ್ತದೆ. ಅಲ್ಲದೇ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಪ್ರಕಾರ ತಮ್ಮ ವಾಹನಗಳ ಗಾಜುಗಳಿಗೆ ಯಾವುದೇ ರೀತಿಯ ಸನ್ ಪಿಲಂ (Sun film) ಗಳನ್ನಾಗಲಿ ಅಥವಾ ಬೇರೆ ತರಹದ ಕಪ್ಪು ಫಿಲಂಗಳನ್ನು, ಪರದೆಗಳನ್ನು ಅಳವಡಿಸುವಂತಿಲ್ಲ. ಇದನ್ನು ಉಲ್ಲಂಘಿಸಿದ ವಾಹನ ಮಾಲೀಕರ ಮೇಲೆ ನಿಯಮಾನುಸಾರ ದಂಡ ವಸೂಲಿ ಮಾಡುವ ಕ್ರಮ ಕೈಗೊಳ್ಳುವುದಲ್ಲದೇ, ಸನ್ ಪಿಲಂ (Sun film) ನ್ನು ತೆರವುಗೊಳಿಸಲು ಸಹಾ ಕ್ರಮ ಕೈಗೊಳ್ಳಲಾಗುವುದು.

     ಆದರೆ ಇತ್ತೀಚೆಗೆ ಕೆಲವೊಂದು ವಾಹನ ಚಾಲಕರು ಪುನಃ ಲಘು ಟಿಂಟ್ ಫಿಲಂಗಳನ್ನು ಅಳವಡಿಸಿ ವಾಹನ ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ವಿಚಾರಿಸಲಾಗಿ ಕಾರ್ ಆಕ್ಸೆಸರೀಸ್ ಅಂಗಡಿಯವರು ಮೇಲ್ಕಾಣಿಸಿದ ಪ್ರಮಾಣದ ಟಿಂಟ್ ಇರುವ ಫಿಲಂನ್ನು ಅಳವಡಿಸಬಹುದು ಎಂದು ತಪ್ಪು ಮಾಹಿತಿ ನೀಡುತ್ತಿರುವ ವಿಚಾರವು ಗಮನಕ್ಕೆ ಬಂದಿರುತ್ತದೆ. ಇದು ಸರಿಯಲ್ಲ. ಸರ್ವೋಚ್ಛ ನ್ಯಾಯಾಲಯದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಜರುಗಿಸಲು ಸಂಚಾರ ಅಧಿಕಾರಿಗಳು ಬದ್ಧರಾಗಿರುತ್ತಾರೆ.

ಆದ್ದರಿಂದ ಮಾಹಿತಿ ಕೊರತೆಯಿಂದ ಟಿಂಟ್ ಫಿಲಂ ಅಳವಡಿಸಿರುವ ವಾಹನ ಮಾಲೀಕರು ಕೂಡಲೇ ಅವುಗಳನ್ನು ತೆರವುಗೊಳಿಸತಕ್ಕದ್ದು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸುವುದರ ಜೊತೆಗೆ ಟಿಂಟ್ ಫಿಲಂನ್ನು ತೆರವುಗೊಳಿಸಲಾಗುವುದು.

     ಸಾರ್ವಜನಿಕರು ತಮ್ಮ ಸುರಕ್ಷೆಯ ದೃಷ್ಠಿಯಿಂದ ನಮ್ಮೊಂದಿಗೆ ಸಹಕರಿಸಲು ಈ ಮೂಲಕ ಕೋರಲಾಗಿದೆ.

No comments:

Post a Comment