Saturday, June 15, 2013

Daily Crime Incidents for June 15, 2013

ಕಳವು ಪ್ರಕರಣ 

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ವಿಕ್ರಂ. ಕೆ ಮಗರ್ ರವರು ಮಂಗಳೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ಉಪನೋಂದಣಾಧಿಕಾರಿಯಾಗಿದ್ದು, ಕಚೇರಿಯಲ್ಲಿ ದಿನಾಂಕ    13-06-2013 ರಂದು ಸಾರ್ವಜನಿಕರಿಂದ ನಗದಾಗಿ ಪಡೆದ ನೋಂದಣಿ, ಮುದ್ರಾಂಕ  ಮತ್ತು ಇತರ ಶುಲ್ಕಗಳ ಬಾಬ್ತು ಕಚೇರಿಯಲ್ಲಿ ಸಂಗ್ರಹವಾದ ರೂ. 68,380/- ನಗದನ್ನು ದಿನಾಂಕ  14-06-2013 ರಂದು ಬ್ಯಾಂಕಿಗೆ ಜಮಾ ಮಾಡುವ ಸಲುವಾಗಿ, ಕಚೇರಿಯ ಅಟೆಂಡರ್ ಶ್ರೀಮತಿ.ಚಂದ್ರಕಲಾರವರಿಗೆ ಚಲನ್ನೊಂದಿಗೆ ಹಸ್ತಾಂತರಿಸಿದ್ದು, ಬ್ಯಾಂಕ್ ಅವಧಿ ಮುಗಿದಿರುವುದರಿಂದ ಶ್ರೀಮತಿ.ಚಂದ್ರಕಲಾರವರು ಸದ್ರಿ ಹಣವನ್ನು ಕಚೇರಿಯ ಗೋದ್ರೇಜ್ ಕಪಾಟಿನಲ್ಲಿ ಚೀಲವೊಂದರಲ್ಲಿ ಇಟ್ಟು ಬೀಗ ಹಾಕಿ ಭದ್ರಪಡಿಸಿ ಇಟ್ಟಿದ್ದು, ದಿನಾಂಕ:13-06-13 ರಂದು ಸುಮಾರು 7-00 ಗಂಟೆಯ ವೇಳೆಗೆ ಫಿಯರ್ಾದುದಾರರು ಮತ್ತು  ಉಳಿದ ಸಿಬ್ಬಂದಿಯವರು ಕರ್ತವ್ಯ ಮುಗಿಸಿ ಕಚೇರಿಗೆ ಬೀಗ ಹಾಕಿ ತೆರಳಿದ್ದು, ಎಂದಿನಂತೆ ದಿನಾಂಕ: 14-06-2013 ರಂದು ಬೆಳಿಗ್ಗೆ ಸುಮಾರು 08-30 ಗಂಟೆಗೆ ಅಟೆಂಡರ್ ಶ್ರೀಮತಿ. ಚಂದ್ರಕಲಾರವರು ಕಚೇರಿಗೆೆ ಬಂದಾಗ, ಬಾಗಿಲಿನ ಬೀಗ ಮುರಿದು ಕಛೇರಿಗೆ ಕಳ್ಳರು  ನುಗ್ಗಿದ ವಿಚಾರವನ್ನು ಫಿಯರ್ಾದಿದಾರರಿಗೆ ತಿಳಿಸಿದ್ದು, ಫಿಯರ್ಾದುದಾರರು ಕಛೇರಿಗೆ ಬಂದು ಪರಿಶೀಲಿಸಿದಾಗ,  ಶ್ರೀಮತಿ.ಚಂದ್ರಕಲಾರವರು ಕುಳಿತುಕೊಳ್ಳುವ ಮೇಜಿನ ಹಿಂಬದಿಯಲ್ಲಿರುವ ಮೂರು ಕಪಾಟುಗಳನ್ನು ಬಲತ್ಕಾರದಿಂದ ಮುರಿದು ತೆರೆಯಲಾಗಿದ್ದು, ಅದರಲ್ಲಿ 1 ನೇ ಕಪಾಟಿನಲ್ಲಿ ಶ್ರೀಮತಿ. ಚಂದ್ರಕಲಾರವರು ಬ್ಯಾಂಕ್ಗೆ ಜಮಾ ಮಾಡುವರೇ ಇಟ್ಟಿದ್ದ ರೂ. 68,380/- ನಗದನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಎಂಬಿತ್ಯಾದಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿಕ್ರಂ. ಕೆ ಮಗರ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ.ನಂ. 146/13, ಕಲಂ 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಾಣೆ ಪ್ರಕರಣ

ದಕ್ಷಿಣ ಠಾಣೆ


  • ಫಿಯರ್ಾದುದಾರರಾದ ಶ್ರೀ ಅರುಣ್ ರೋಡ್ರಿಗಸ್ ರವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ, ಕೊಡಗು ಜಿಲ್ಲೆ, ಸೋಮವಾರಪೇಟೆ, ಶುಂಟಿಕೊಪ್ಪ ನಿವಾಸಿ ಪಿ.ಎ ವೆಂಕಟಪ್ಪ ರವರ ಮಗ ಪಿ.ವಿ ಮಹೇಶ್ ಪ್ರಾಯ 20 ವರ್ಷ ಎಂಬವರು ದಿನಾಂಕ 13-06-2013 ರಂದು ಬೆಳಿಗ್ಗೆ 09-30 ಗಂಟೆಗೆ ಫಿಯರ್ಾದುದಾರರ ಮನೆಯಲ್ಲಿ ತಿಂಡಿ ತಿಂದು, ಮನೆಯಿಂದ ಹೊರಗಡೆ ಹೋದವನು ವಾಪಾಸು ಬಾರದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಪಿ.ವಿ ಮಹೇಶ್ ರವರ ಮನೆಯಲ್ಲಿ ಹಾಗೂ ಇತರ ಎಲ್ಲಾ ಕಡೆ ಹುಡುಕಾಡಿದರೂ ಈವರೆಗೂ ಪತ್ತೆಯಾಗಿರುವುದಿಲ್ಲ. ಆದುದರಿಂದ ಕಾಣೆಯಾದ ಪಿ.ವಿ ಮಹೇಶ್ ರವರನ್ನು ಪತ್ತೆ ಮಾಡಿಕೊಡುವಂತೆ ಅರುಣ್ ರೋಡ್ರಿಗಸ್ ರವರು ನೀಡಿದ ದೂರಿನಂತೆ ದಕ್ಷಿಣ ಠಾಣೆ ಮೊ ನಂ 147/13, ಕಲಂ ಮನುಷ್ಯಕಾಣೆ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

ಸುರತ್ಕಲ್ ಠಾಣೆ


  • ದಿನಾಂಕ 02-06-13 ರಂದು ಮಂಗಳೂರು ಕೆ.ಬಿ ಕಟ್ಟೆಯ ಬಳಿ ಮೆಟ್ಟಿಲುಗಳಲ್ಲಿ ಮಲಗಿದದ ಸ್ಥಿತಿಯಲ್ಲಿ ಇದ್ದ ಹನುಮಂತ ಎಂಬ ವ್ಯಕ್ತಿಯನ್ನು 108 ಆ್ಯಂಬುಲೆನ್ಸ್ ವಾಹನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದು ದಿನಾಂಕ 05-06-13 ರಂದು ವೆನ್ಲಾಕ್ ಆಸ್ಪತ್ರೆಯಲ್ಲಿ ಹನುಮಂತ ಎಂಬ ವ್ಯಕ್ತಿ ಮೃತಪಟ್ಟ ಬಗ್ಗೆ ಪಿರ್ಯಾದಿದಾರರಿಗೆ ಮಾಹಿತಿ ಬಂದಿದ್ದು ಅದಂತೆ ಕೆ. ಬಿ ಕಟ್ಟೆಯ ಬಳಿಯಿಂದ ಆಸ್ಪತ್ರೆಗೆ ಸಾಗಿಸಿದ್ದ ಹನುಮಂತ ಮೃತಪಟ್ಟಿರುವನೆಂದು ಪಿರ್ಯಾದಿ ಬಾವಿಸಿ ಮಂಗಳೂರು ನಗರ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆ ಬಗ್ಗೆ ಯುಡಿಆರ್  ನಂಬ್ರ 19/13 ರಂತೆ ಪ್ರಕರಣ ದಾಖಲಾಗಿದ್ದು  ಬಳಿಕ ದಿನಾಂಕ 07-06-13 ರಂದು ಸದ್ರಿ ಕೆಬಿ ಕಟ್ಟೆಯ ಬಳಿಯಿಂದ ಆಸ್ಪತ್ರೆಗೆ ಸಾಗಿಸಿದ್ದ ಹನುಮಂತ ಮೃತ ಪಡದೇ ಜೀವಂತವಿರುವುದಾಗಿಯೂ ದಿನಾಂಕ 02-06-13 ರಂದು ಸುರತ್ಕಲ್ನಿಂದ ಅಸ್ವಸ್ಥಗೊಂಡಿದ್ದ ವ್ಯಕ್ತಿಯನ್ನು (ಹನುಮಂತ) ಬಜಪೆ 108 ಆ್ಯಂಬುಲೆನ್ಸ್ ವಾಹನದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು ಆತ ಮೃತ ಪಟ್ಟಿರುವ ವಿಚಾರ ತಿಳಿದಿದ್ದು ಪಿರ್ಯಾದಿದಾರರ ತಪ್ಪು ತಿಳುವಳಿಕೆಯಿಂದ ಮಂಗಳೂರು ನಗರ ಉತ್ತರ ಪೊಲೀಸ್  ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆಯ ಬಗ್ಗೆ ಪ್ರಕರಣವನ್ನು ಸುರತ್ಕಲ್ ಠಾಣೆಗೆ ವಗರ್ಾಯಿಸಿರುವುದು ಮತ್ತು ಸುರತ್ಕಲ್ ಪೊಲೀಸ್ ಠಾಣಾ ಯು.ಡಿ.ಆರ್ ನಂ: 15/2013 ಕಲಂ: 174 ದಂ.ಪ್ರ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

No comments:

Post a Comment