ದೈನಂದಿನ ಅಪರಾದ ವರದಿ.
ದಿನಾಂಕ 26..12.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗನಂತಿದೆ.
ಕೊಲೆ ಪ್ರಕರಣ 0
ಕೊಲೆ ಯತ್ನ : 0
ದರೋಡೆ ಪ್ರಕರಣ : 0
ಸುಲಿಗೆ ಪ್ರಕರಣ : 0
ಮನೆ ಕಳವು ಪ್ರಕರಣ 0
ಸಾಮಾನ್ಯ ಕಳವು : 0
ವಾಹನ ಕಳವು 0
ಮಹಿಳೆಯ ಮೇಲಿನ ಪ್ರಕರಣ 0
ರಸ್ತೆ ಅಪಘಾತ ಪ್ರಕರಣ 5
ವಂಚನೆ ಪ್ರಕರಣ : 0
ಮನುಷ್ಯ ಕಾಣೆ ಪ್ರಕರಣ 0
ಇತರ ಪ್ರಕರಣ : 1
1.ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ : 25-12-.2013 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ಪಿರ್ಯಾದಿದಾರರು ಮಂಗಳೂರು ನಗರದ ಭಾರತ್‌ಮಾಲ್ ಎದುರು ರಸ್ತೆಯಲ್ಲಿ ತಮ್ಮ ಆಟೋ ರಿಕ್ಷಾದಲ್ಲಿ ಕುಳಿತು ಬಾಡಿಗೆಗಾಗಿ ಕಾಯುತ್ತಿದ್ದಾಗ, ಸದ್ರಿ ರಸ್ತೆಯ ಎದುರಿನ ಆ ಕಡೆಯ ರಸ್ತೆ ಬದಿಯಲ್ಲಿ ಒಬ್ಬರು ಮದ್ಯ ವಯಸ್ಕರು ಮತ್ತು ಇನ್ನೊಬ್ಬ ಯುವಕನು ನಿಂತುಕೊಂಡಿದ್ದು, ಅದೇ ಸಮಯಕ್ಕೆ ಬಿಜೈ ಕಡೆಯಿಂದ ಒಂದು ಹೋಂಡಾ ಡಿಯೋ ದ್ವಿಚಕ್ರ ವಾಹನ ನಂಬ್ರ KA-19-EC-8498 ನೇದನ್ನು ಅದರ ಸವಾರ ತೀರಾ ನಿರ್ಲಕ್ಷ್ಯತನದಿಂದ ಹಾಗೂ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಿಂತಿದ್ದ ಮದ್ಯ ವಯಸ್ಕನಿಗೆ ಡಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿಯು ರಸ್ತೆಯ ಮೇಲೆ ಕುಸಿದು ಬಿದ್ದು, ತಲೆಗೆ ತೀವ್ರತರದ ರಕ್ತ ಗಾಯ ಮತ್ತು ಸೊಂಟಕ್ಕೆ ಗುದ್ದಿದ ನಮೂನೆಯ ಗಾಯಗೊಂಡವರನ್ನು ದಾಖಲುಮಾಡಿರುವುದಾಗಿದೆ.
2.ಮಂಗಳೂರು ಸಂಚಾರ ಪೂರ್ವ ಠಾಣೆಯಲ್ಲಿ ವರದಿಯಾದ ಪ್ರಕರಣ ದಿನಾಂಕ : 26-12-.2013 ರಂದು ಬೆಳಿಗ್ಗೆ ಯಶವಂತ ಉಚ್ಚಿಲ್ ಎಂಬವರು ಮತ್ತು ಅವರ ಬಾವನವರಾದ ಜನಾರ್ಧನರವರು ಕೊಟ್ಟಾರದಿಂದ ಬಸ್ ಹತ್ತಿ ಲಾಲ್‌ಬಾಗ್ ಬಳಿ ಇಳಿದು, ರಾಮಕೃಷ್ಣ ವಿದ್ಯಾರ್ಥಿನಿ ನಿಲಯದ ಬಳಿ ರಸ್ತೆ ಬದಿಯಲ್ಲಿ ನಿಂತುಕೊಂಡು ಮಾತನಾಡಿಕೊಂಡಿದ್ದಾಗ ಸಮಯ ಸುಮಾರು 10:00 ಗಂಟೆಗೆ ಲೇಡಿಹಿಲ್ ಕಡೆಯಿಂದ ಲಾಲ್‌ಬಾಗ್ ಕಡೆಗೆ ವಾಹನ ನಂಬ್ರ KA-19-AA-1033 ನೇದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಶವಂತ ಉಚ್ಚಿಲ್‌ರವರೊಂದಿಗೆ ಇದ್ದ ಜನಾರ್ಧನರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಕಾಂಕ್ರಿಟ್ ರಸ್ತೆಯ ಅಂಚಿಗೆ ಬಿದ್ದು ತಲೆಗೆ ತೀವ್ರತರದ ಗುದ್ದಿದ ನಮೂನೆಯ ಗಾಯಗೊಂಡವರನ್ನು ಎ.ಜೆ. ಆಸ್ಪತ್ರೆಗೆ ದಾಖಲುಮಾಡಿರುವುದಾಗಿದೆ
3.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 25/12/2013 ರಂದು ದಿನೇಶ್ ಎಂಬವರು ತನ್ನ ಮೋಟಾರು ಸೈಕಲ್ KA 19 EH 3691 ನೇದರಲ್ಲಿ ತನ್ನ ಹೆಂಡತಿ ಹರ್ಷಿತಾ ಮತ್ತು ಮಗ ವಂಶಿತ್ ರವರನ್ನು ಕುಳ್ಳಿರಿಸಿಕೊಂಡು ಮೂಡಬಿದ್ರೆ ಕಡೆಗೆ ಹೋಗುತ್ತಾ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಗಾಂಧಿನಗರ ಎಂಬಲ್ಲಿಗೆ ಸಂಜೆ ಸುಮಾರು 5.30 ಗಂಟೆಗೆ ತಲುಪುವಾಗ ಪಿರ್ಯಾದಿದಾರರ ಹಿಂದಿನಿಂದ ಒಂದು ರಿಕ್ಷಾಟೆಂಪೋ ನಂ. KA 19 D 65 ನೇದ್ದನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದಿನೇಶ್ ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದಿನೇಶ್ ಅವರ ಹೆಂಡತಿ ಮತ್ತು ಮಗುವಿನೊಂದಿಗೆ ಮೋ. ಸೈಕಲ್ ಸಮೇತ ರಸ್ತೆಗೆ ಬಿದ್ದು, ದಿನೇಶ್ ಅವರಿಗ, ಹರ್ಷಿತಾರವರಿಗೆ ಮತ್ತು ವಂಶಿತ್ ಗೆ ಸಾದಾ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಳರೋಗಿಯಾಗಿ ದಾಖಲಿಸಿರುತ್ತಾರೆ
4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ದಿನಾಂಕ: 15-12-2013 ರಂದು ಮಂಗಳೂರು ನಗರದ ಸೆಂಟ್ರಲ್ ಮಾರ್ಕೆಟಿಗೆ ಬಂದಿದ್ದು, ಸಂಜೆ ಸಮಯ ಸುಮಾರು 18-30 ಗಂಟೆಗೆ ಓಸ್ವಾಲ್ಡ್ ಪಿರೇರಾ ರ ಶರ್ಟಿನ ಕಿಸೆಯಲ್ಲಿದ್ದ Samsung Grand Quattro 18552 ನೇ ಮೊಬೈಲ್ ಹ್ಯಾಂಡ್‌ಸೆಟ್ ಕಳುವಾಗಿದ್ದು, ಕಳುವಾದ ಮೊಬೈಲ್ ಹ್ಯಾಂಡ್‌ಸೆಟ್ Samsung Grand Quattro 18552 ನೇದರ ಐಎಂಇಐ ನಂಬ್ರ 357091051818084 ಬೆಲೆ ರೂ. 16966.82/- ಆಗಿರುತ್ತದೆ
5.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ರಾಜೇಶ್ ಎಂಬವರು ಕೆ ಎ 19-ಎಲ್-1456 ನೇ ಮೋಟಾರು ಸೈಕಲ್ ನಲ್ಲಿ ದಿನಾಂಕ 25-12-2013 ರಂದು ರಾತ್ರಿ ಮನೆಗೆ ತೆರಳುವರೇ ಕಾಟಿಪಳ್ಳ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ತಾರು ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ರಾತ್ರಿ 22-15 ಗಂಟೆಗೆ ಕಾಟಿಪಳ್ಳ ಗ್ರಾಮದ 7ನೇ ಬ್ಲಾಕಿನ ಮೆಸ್ಕಾಂ ಕಛೇರಿ ಬಳಿ ತಲುಪುತ್ತಿದ್ದಂತೆ ಕೆ ಎ 19 ಇಎಪ್ 8426 ನೇ ಮೋಟಾರು ಸೈಕಲ್ ನ್ನು ಚೊಕ್ಕಬೆಟ್ಟು ಕಡೆಯಿಂದ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ರಾಜೇಶ್ ರ ಮೋಟಾರು ಸೈಕಲ್ ಗೆ ಡಿಕ್ಕಿ ಪಡಿಸಿದ್ದು ಅದರ ಪರಿಣಾಮ ರಾಜೇಶ್ ರಕ್ತ ಬರುವ ಗಾಯವಾಗಿರುತ್ತದೆ
6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿ:25.12.2013 ರಂದು ಗಣೇಶ್ ಬಂಢಾರಿ ಕೆಲಸ ಮುಗಿಸಿ ತನ್ನ ಕಾರಿನಲ್ಲಿ ಮನೆ ಕಡೆಗೆ ಬರುತ್ತಾ ರಾತ್ರಿ ಸುಮಾರು 09.30 ಗಂಟೆಗೆ ನೀರುಮಾರ್ಗ ಕೆಲ್ರಾಯಿ ವೃತ್ತದಿಂದ ಸ್ವಲ್ಪ ಮುಂದೆ ತಲುಪಿದಾಗ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಅನಂತ್ ಎಂಬವರು ಎದುರುಗಡೆಯಿಂದ ಅಂದರೆ ಕೆಲ್ರಾಯ್ ಕಡೆಯಿಂದ ಕೆಎ-19-ಎಂ-2925 ನೇ ಕಾರನ್ನು ಚಾಲಯಿಸಿಕೊಂಡು ಬಂದು ಗಣೇಶ್ ಬಂಡಾರಿ ಯವರ ಕಾರಿಗೆ ಅಡ್ಡ ಇಟ್ಟು ಮುಂದಕ್ಕೆ ಹೋಗದಂತೆ ತಡೆ ಮಾಡಿ ಪಿರ್ಯಾದಿದಾರರನ್ನು ಕಾರಿನಿಂದ ಹೊರಗೆಳೆದು ಕೈಗಳಿಂದ ಮುಖಕ್ಕೆ ಹೊಡೆದುದಲ್ಲದೆ ಅಲ್ಲಿಂದ ಹೋಗುತ್ತಾ ಬೇವರ್ಸಿ ನನ್ನಲ್ಲಿ ನಿನ್ನ ಅಹಂಕಾರ ತೋರಿಸಬೇಡ ಎಂದು ಬೈದಿರುತ್ತಾನೆ ಎಂಬುದಾಗಿದೆ
7. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿ ಆದ ಪ್ರಕರಣ : ಅಪ್ರಾಪ್ತ ಬಾಲಕಿಯನ್ನು ಆರೋಪಿ ರಂಜಿತ್ ಎಂಬವನು ಆಗಾಗ ಪೋನ್ ಮಾಡಿ ಲವ್ ಮಾಡುವಂತೆ ತಿಳಿಸಿ ಅದಕ್ಕೆ ಬಾಲಕಿ ಇಷ್ಟವಿಲ್ಲವೆಂದು ಹೇಳಿದಾಗ ಸ್ನೇಹಿತರಾಗಿರುವ ಎಂದು ತಿಳಿಸಿ ಬಾಲಕಿ ಅವರ ಕಷ್ಟದ ಬಗ್ಗೆ ರೂ 2000/- ಹಣವನ್ನು ನೀಡುವಂತೆ ರಂಜಿತ್ ನಿಗೆ ಪೋನ್ ಮಾಡಿ ತಿಳಿಸಿದ್ದು 25-12-2013 ರಂದು ಆಪಾದಿತ ರಂಜಿತನು ಬಾಲಕಿಗೆ ಪೋನ್ ಮಾಡಿ ಸುರತ್ಕಲ್ ಬಸ್ ನಿಲ್ದಾಣದಲ್ಲಿ ಸಿಗುವಂತೆ ತಿಳಿಸಿ ಬೆಳಿಗ್ಗೆ 11-30 ಬಸ್ ನಿಲ್ದಾಣದಲ್ಲಿ ಜನ ಇರುವುದರಿಂದ ಎನ್ ಐ ಟಿ ಕೆ ಬೀಚ್ ನಲ್ಲಿ ಹಣ ಕೊಡುವುದಾಗಿ ತಿಳಿಸಿ ಅವನು ಬಂದಿದ್ದ ಕೆ ಎ 19 ಇಎಚ್ 5879 ನೋಂದಣಿ ಸಂಖ್ಯೆ ಮೋಟಾರು ಸೈಕಲ್ ನಲ್ಲಿ ಕರೆದುಕೊಂಡು ಎನ್ ಐ ಟಿ ಕೆ ಬೀಚಿನ ಗಿಡದ ಬಳಿಗೆ ಹೋಗಿ ನೆಲದ ಮೇಲೆ ಕುಳಿತು ಬಳಿಕ ಆತ ಬಾಲಕಿಯ ಹತ್ತಿರ ಹೋಗಿ ಟೀ ಶರ್ಟ್ ಕಳಚಿ ಪ್ಯಾಂಟಿನ ಜಿಪ್ ಕೂಡ ಜಾರಿಸಿ ಆರೋಪಿ ತನ್ನ ಜೀನ್ಸ್ ಪ್ಯಾಂಟ್ ನ್ನು ಅರ್ಧ ಜಾರಿಸಿ ಬಾಲಕಿ ಮೈಮೇಲೆ ಮಲಗಿ ಎದೆಗೆ ಹಾಗೂ ಇತರ ಭಾಗಗಳಿಗೆ ಕೈ ಹಾಕಿ ತುಟಿಗೆ ಕಿಸ್ ಕೊಟ್ಟು ಗಾಯಗೊಳಿಸಿದ್ದು ಆಗ ಬಾಲಕಿ ಬೊಬ್ಬೆ ಹಾಕಿದಾಗ ಅಲ್ಲಿ ಸೇರಿದವರು ಆತನಿಂದ ಬಾಲಕಿಯನ್ನು ಬಿಡಿಸಿದ್ದು ಆಪಾದಿತನ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ. ಆರೋಪಿಯನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
8. ಕಾವೂರು ಪೊಳಿಸ್ ಠಾಣೆಯಲ್ಲಿ ವರದಿಯಾದ ಪ್ರಕರಣ ದಿನಾಂಕ 25.12.2013 ರಂದು ಮದ್ಯಾಹ್ನ 3:0 ಗಂಟೆ ಮಂಗಳೂರು ತಾಲೂಕು ಮೂಡುಶೆಡ್ಡೆ ಗ್ರಾಮದ ಪಿಲಿಕುಲ ಎಂಬಲ್ಲಿರುವ ಸಾರ್ವಜನಿಕ ರಸ್ತೆಯಲ್ಲಿ ಸಹಪಾಠಿಯೊಂದಿಗೆ ಮಾತನಾಡುತ್ತಾ ನಡೆದುಕೊಂಡು ಹೋಗುತ್ತಿರುವಾಗ ಆರೋಪಿಗಳು ಪಲ್ಸರ್ ಮತ್ತು ಓಮಿನಿ ಕಾರಿನಲ್ಲಿ ಬಂದ ಆರೋಪಿಗಳು ಶ್ರೀ ಮೊಹಮ್ಮದ್ ಸೈಫುದ್ದೀನ್ (18) ಎಂಬವನನ್ನು ತಡೆದು ಹಲ್ಲೆ ನಡೆಸಿರುವುದಾಗಿದೆ ಈ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಶಿಘ್ರವಾಗಿ ಬಂದಿಸಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
No comments:
Post a Comment