ದೈನಂದಿನ ಅಪರಾದ ವರದಿ.
ದಿನಾಂಕ 19..12.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗನಂತಿದೆ.
ಕೊಲೆ ಪ್ರಕರಣ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | | 0 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 1 |
ವಂಚನೆ ಪ್ರಕರಣ | : | 0 |
ಮನುಷ್ಯ ಕಾಣೆ ಪ್ರಕರಣ | : | 0 |
ಇತರ ಪ್ರಕರಣ | : | 0 |
1. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಅಪಘಾತ ಪ್ರಕರಣ : ದಿನಾಂಕ 17-12-2013 ರಂದು ಮದ್ಯಾಹ್ನ ಸುಮಾರು 03.10ಗಂಟೆಗೆ ಮೋ.ಸೈಕಲ್ ನಂಬ್ರ KA19-U-4388ನ್ನು ಅದರ ಸವಾರ ಕದ್ರಿ ಶಿವಭಾಗ್ ಕಡೆಯಿಂದ ಮಲ್ಲಿಕಟ್ಟೆ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಾಲಾಯಿಸಿಕೊಂಡು ಬಂದು ಮಲ್ಲಿಕಟ್ಟೆ ತರಕಾರಿ ಮಾರುಕಟ್ಟೆ ಎದುರುಗಡೆಯಿಂದ ರಸ್ತೆಯ ಇನ್ನೊಂದು ಬದಿ ಇರುವ ಬಸ್ಸು ನಿಲ್ದಾಣದ ಕಡೆಗೆ ಶ್ರೀಮತಿ ಶುಭಲಕ್ಷ್ಮಿ ಅವರ ಜೊತೆ ರಸ್ತೆ ದಾಟುತ್ತಿದ್ದ ಮಾಸ್ಟರ್ ರೂಪೇಶ್ ಎಂಬುವವರಿಗೆ ಡಿಕ್ಕಿ ಮಾಡಿದ ಪರಿಣಾಮ ರೂಪೇಶ್ ರಸ್ತೆಗೆ ಬಿದ್ದು ಹೊಟ್ಟೆಯ ಬಲಭಾಗಕ್ಕೆ ತೀವ್ರ ಸ್ವರೂಪದ ಗುದ್ದಿದ ಗಾಯ ಹಾಗೂ ಬಲಕಾಲಿನ ತೊಡೆಗೆ ತೀವ್ರ ಸ್ವರೂಪದ ಗಾಯ ಉಂಟಾಗಿ ಅತ್ತಾವರ KMC ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ
No comments:
Post a Comment