Wednesday, December 25, 2013

Daily crime Report 25.12.2013

ದೈನಂದಿನ ಅಪರಾದ ವರದಿ.

ದಿನಾಂಕ 25.12.201316:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗನಂತಿದೆ.

 

ಕೊಲೆ  ಪ್ರಕರಣ           0

ಕೊಲೆ  ಯತ್ನ    :         0

ದರೋಡೆ ಪ್ರಕರಣ        :0

ಸುಲಿಗೆ ಪ್ರಕರಣ :         0

ಮನೆ ಕಳವು ಪ್ರಕರಣ    0       

ಸಾಮಾನ್ಯ ಕಳವು        :0

ವಾಹನ ಕಳವು            0       

ಮಹಿಳೆಯ ಮೇಲಿನ ಪ್ರಕರಣ     0                

ರಸ್ತೆ ಅಪಘಾತ  ಪ್ರಕರಣ 3                

ವಂಚನೆ ಪ್ರಕರಣ         :         0

ಮನುಷ್ಯ ಕಾಣೆ ಪ್ರಕರಣ 0       

ಇತರ ಪ್ರಕರಣ :         0



1.ಮಂಗಳೂರು ಸಂಚಾರ ಪೂರ್ವ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಪ್ರಕರಣ :  ದಿನ ದಿನಾಂಕ 25/12/2013 ರಂದು ಮುಂಜಾನೆ 01.45 ಗಂಟೆಗೆ ವಿಜೇತ ಎಂಬುವರು ತನ್ನ ಮೋಟಾರ ಸೈಕಲ್ ನಂಬ್ರ KA19-EJ-7742 ರಲ್ಲಿ ಸವಾರರಾಗಿ ಹಿಂಬದಿ ಸವಾರರಾಗಿ ಶ್ರೇಯಸ್ಸ ಎಂಬುವರನ್ನು ಕುಳ್ಳಿರಿಸಿಕೊಂಡು ಪದವು ಕಡೆಯಿಂದ ಯೆಯ್ಯಾಡಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜಿವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಯೆಯ್ಯಾಡಿ ಬಳಿಯಿರುವ ಪುರುಷೋತ್ತಮ ಸಾಮಂತ ಎಂಬುವರ ಮನೆಯ ಬಳಿ ಇರುವ ರಸ್ತೆ ವಿಭಾಜಗಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭಿರ ಸ್ವರೂಪದ ಗಾಯಗೊಂಡು A J ಆಸ್ತತ್ರೆಗೆ ದಾಖಲಾಗಿ ಸವಾರ ವಿಜೇತ್ A J ಆಸ್ತತ್ರೆಯಲ್ಲಿ ಬೆಳಗ್ಗೆ 07.00 ಗಂಟೆಗೆ A J ಆಸ್ತತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುತ್ತಾರೆ ಸಹಸವಾರ ಶೇಯಸ್ಸ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ

 

2.ಪಣಂಬೂರು  ಪೊಲೀಸ್‌  ಠಾಣೆಯಲ್ಲಿ ವರದಿಯಾದ ಪ್ರಕರಣ :ಕಮಲಾಕ್ಷ ಎಂಬವರು ದಿನಾಂಕ 24-12-2013 ರಂದು ಮಧ್ಯಾಹ್ನ 12-30 ಬೈಕಾಂಪಾಡಿಕೈಗಾರಿಕ ಪ್ರದೇಶದಲ್ಲಿರುವ ಜಯ ದುರ್ಗ ಕ್ಯಾಂಟೀನ್ಗೆ ನರಸಪ್ಪ ಎಂಬರ ಮೋಟಾರ್ ಸೈಕಲ್ ನಂಬ್ರ ಕೆಎ-19/ಇಜಿ-1060 ನೇ ದರಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದಾಗ  ಹಿಂದುಗಡೆಯಿಂದ ಕೆಎ-19/ಎಂಬಿ. 8842 ನೇ ನಂಬ್ರದ ಕಾರನ್ನು ಅದರ ಚಾಲಕ ಅತೀ ವೇಗಹಾಗೂ ಅಜಾಗರು ಕತೆಯಿಂದ ಚಲಾಯಿಸಿಕೊಂಡು ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದರು ಡಿಕ್ಕಿ ಹೊಡೆದ ಪರಿಣಾಮ ನರಸಪ್ಪ ನವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದುದ್ದರಿಂದ ನರಸಪ್ಪ ರವರ ತಲೆಗೆ ರಕ್ತಗಾಯವಾಗಿದ್ದು ಕೈಕಾಲುಗಳಿಗೆ ಗೀರಿದ ತರಚಿದ ಗಾಯವಾಗಿರುತ್ತದೆ. ನರಸಪ್ಪರವರು ಎ.ಜೆ. ಆಸ್ಪತ್ರೆಗೆ ಆಸಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

 

3.ಬಜಪೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23/12/2013 ರಂದು ರಾತ್ರಿ ಸುಮಾರು 10-00 ಗಂಟೆಗೆ ಫಿರ್ಯಾಧಿದಾರರಾದ ಶ್ರೀ ಅಪ್ಪು ಗೌಡ  ಎಂಬವರು ಮೋಟಾರು ಸೈಕಲ್ ನಂಬ್ರ: KA-19-EJ-3214 ನೇದರಲ್ಲಿ ಸಹ ಸವಾರನಾಗಿ ಕುಳಿತು ಮೋಟಾರು ಸೈಕಲ್ ನ್ನು ರಾಜೇಶ್ ಎಂಬವರು ಕಿನ್ನಿಗೋಳಿ ಕಡೆಯಿಂದ ಕೊಂಪದವು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಮಂಗಳೂರು ತಾಲ್ಲೂಕು ಕೊಂಪದವು ಗ್ರಾಮದ ಮಂಜನಕಟ್ಟೆ ಎಂಬಲ್ಲಿಗೆ ತಲುಪಿದಾಗ ದನವೊಂದು ಅಡ್ಡ ಬಂದ ಪರಿಣಾಮ ಮೋಟಾರು ಸೈಕಲಿನ ನಿಯಂತ್ರಣ ತಪ್ಪಿ ಸ್ಕಿಡಾಗಿ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರನಾದ ಅಪ್ಪು ಗೌಡ  ಎರಡು ಹಲ್ಲುಗಳು ಉದುರಿ ಹೋಗಿದಲ್ಲದೇ ಎಡ ಕಾಲಿನ ಮೊಣಗಂಟಿಗೆ ತರಚಿದ ಗಾಯಾವುಂಟಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಕಂಕನಾಡಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ

 

No comments:

Post a Comment