ದೈನಂದಿನ ಅಪರಾದ ವರದಿ.
ದಿನಾಂಕ 30.12.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ | : | 0 |
ಕೊಲೆ ಯತ್ನ | : | 0 |
ದರೋಡೆ ಪ್ರಕರಣ | : | 0 |
ಸುಲಿಗೆ ಪ್ರಕರಣ | : | 0 |
ಮನೆ ಕಳವು ಪ್ರಕರಣ | : | 2 |
ಸಾಮಾನ್ಯ ಕಳವು | : | 0 |
ವಾಹನ ಕಳವು | : | 0 |
ಮಹಿಳೆಯ ಮೇಲಿನ ಪ್ರಕರಣ | : | 0 |
ರಸ್ತೆ ಅಪಘಾತ ಪ್ರಕರಣ | : | 6 |
ವಂಚನೆ ಪ್ರಕರಣ | : | 1 |
ಮನುಷ್ಯ ಕಾಣೆ ಪ್ರಕರಣ | : | 0 |
ಹಲ್ಲೆ ಪ್ರಕರಣ | : | 0 |
ದನ ಕಳವು ಪ್ರಕರಣ | : | 0 |
ಅಕ್ರಮ ಜೂಜಾಟ ಪ್ರಕರಣ | : | 1 |
1.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 29..12.2013 ರಂದು ಬೆಳಿಗ್ಗೆ 8.30 ಗಂಟೆ ಸಮಯಕ್ಕೆ ಆರೋಪಿ ರಿಕ್ಷಾ ಚಾಲಕ ಲಕ್ಷ್ಮಣ ಎಂಬವರು ತಾನು ಚಲಾಯಿಸುತ್ತಿದ್ದ ಆಟೋ ರಿಕ್ಷಾ ಕೆಎ 19 ಡಿ 9934ನೇದನ್ನು ಪಕ್ಷಿಕೆರೆ ಕಡೆಯಿಂದ ಹಳೆಯಂಗಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ಕ್ಯೊಕುಡೆ ಗ್ರಾಮದ ಕ್ಯೋಕುಡೆ ತಿರುವು ರಸ್ತೆ ಬಳಿ ತಲುಪುವಾಗ್ಗೆ ಅತೀ ವೇಗದಲ್ಲಿದ್ದ ಆಟೋ ರಿಕ್ಷಾ ಚಾಲಕನ ಹತೋಟಿ ತಪ್ಪಿ ರಸ್ತೆಯ ಬಲಬದಿಯ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಜಖಂಗೊಂಡು ರಿಕ್ಷಾ ಚಾಲಕ ಲಕ್ಷ್ಮಣ ರವರ ತಲೆಗೆ ಪೆಟ್ಟಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರು ಇಂಡಿಯನ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ..
2.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 29/12/2013 ರಂದು ದುಬೈ ದೇಶದಿಂದ ಬಂದ ಪ್ರಯಾಣಿಕರಾದ ಕೊಟೆ ಕರಿಯಾತ್ ಅಬ್ದುಲ್ ರಹಿಮಾನ್ ಎಂಬಾತನ F3855052 ನಂಬ್ರದ ಪಾಸ್ ಪೊರ್ಟ್ ನ್ನು ತಪಾಸಣೆ ಮಾಡಿದಾಗ ಅತನು ಹೋರದೆಶಕ್ಕೆ ಹೋದಾಗ ಮುಂಬೈ ಇಮಿಗ್ರೆಷನ್ ಕಛೇರಿಯಲ್ಲಿ ಹಾಕಿದಂತೆಯು ಮತ್ತು ದುಬೈ ದೇಶದ ಇಮಿಗ್ರೆಷನ್ ಕಛೇರಿಯಲ್ಲಿ ಹಾಕಿದಂತೆ ದುಬೈ ದೇಶದಲ್ಲಿ ವಾಸವಿರುವ ರಫಿಕ್ ಬೇಗಂ ಬೇರಿ ಎಂಬಾತನ ಸಹಾಯದಿಂದ ನಕಲಿ ಸೀಲ್ ಗಳನ್ನು ಮಾಡಿಕೊಂಡು ಬಂದಿದ್ದು ಆರೋಪಿಯು ಈ ಹಿಂದೆ ಪ್ರಕರಣವೊಂರರಲ್ಲಿ ಕೇರಳ ರಾಜ್ಯದ ಪೊಲೀಸರಿಂದ LOC ಇದ್ದ ಕಾರಣದಿಂದ ತನ್ನ ಮೂಲ ಪಾಸ್ ಪೊರ್ಟ್ J0119322 ನ್ನು ಹಾಗೂ ತನ್ನ ಮೂಲ ಹೆಸರು ರಹಿಮಾನ್ ಚಿತ್ರಾರಿ ಅಹಮದ್ ಎಂಬುದನ್ನು ಮರೆಮಾಚಿ ವಿದೇಶದಿಂದ ಬಾರತ ದೇಶಕ್ಕೆ ಬಂದು ವಂಚಿಸಿರುವುದಾಗಿದೆ ಈ ರೀತಿ ಆರೋಪಿ ವಂಚಿಸಿದ್ದನ್ನು ದಿನಾಂಕ 29/12/2013 ರಂದು 17-30 ಗಂಟೆಗೆ ಮಂಗಳೂರು ತಾಲೂಕು, ಕೆಂಜಾರು, ಎಂಬಲ್ಲಿ ಇಮಿಗ್ರೆಷನ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಪತ್ತೆ ಮಾಡಿದ್ದಾಗಿದೆ.
3. ಮಂಗಳೂರು ದಕ್ಷಿಣ ಠಾಣೆಯಲ್ಲಿ ವರದಿಯಾದ ಮನೆ ಕಳವು ಪ್ರಕರಣ: ದಿನಾಂಕ 28-12-2013 ರಂದು 13-00 ಗಂಟೆಯಿಂದ ದಿನಾಂಕ 29-12-2013 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯಂತರದಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರದ ರೈಲ್ವೆ ಗೇಟ್ ಹತ್ತಿರದಲ್ಲಿರುವ ಹೆಚ್.ಎಂ.ಎಸ್ ಕಂಪೌಂಡ್ ನಲ್ಲಿರುವ ಫಿರ್ಯಾದುದಾರರಾದ ಪ್ರವೀಣ್ ಇಸಾಕ್ ಎಂಬವರ ತಂದೆಯ ಬಾಬ್ತು ವಾಸ್ತವ್ಯದ ಮನೆಯ ಎದುರು ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿ ಬೆಡ್ ರೂಮಿನ ಕಪಾಟುಗಳ ಬಾಗಿಲುಗಳನ್ನು ಬಲತ್ಕಾರವಾಗಿ ತೆರೆದು ವಿವಿದ ನಮೂನೆಯ 644 ಗ್ರಾಂ ಚಿನ್ನಾಭರಣ, ಭಾರತೀಯ ಹಣ ರೂ 45,000/-, ಸೌದಿ ರಿಯಲ್ 2100 ಮತ್ತು ಅಮೇರಿಕನ್ ಡಾಲರ್ 1150 ಹೀಗೆ ಒಟ್ಟು ರೂ 15,02,300/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.
4. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 29-12-2013 ರಂದು ಸಿಸಿಬಿ ಘಟಕದ ಪಿಎಸ್ಐ ಶ್ಯಾಮ್ ಸುಂದರ್ ರವರು ಸಿಸಿಬಿ ಕಚೇರಿಯಲ್ಲಿರುವಾಗ 15:00 ಗಂಟೆ ಸಮಯಕ್ಕೆ ಮಂಗಳೂರು ನಗರದ ಕೆ.ಎಸ್. ರಾವ್ ರಸ್ತೆಯ ಕರುಣಾಧಾಮ್ ಬಿಲ್ಡಿಂಗ್ ನಲ್ಲಿರುವ ಕದಳಿ ರಿಕ್ರಿಯೇಷನ್ ನಲ್ಲಿ ಹಲವಾರು ಜನರು ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದಾರೆಂದು ಖಚಿತ ವರ್ತಮಾನ ಮೇರೆಗೆ, ಈ ಮಾಹಿತಿ ಆಧಾರದ ಮೇರೆಗೆ ಮೇಲಾಧಿಕಾರಿಯವರಿಗೆ ತಿಳಿಸಿ, ಪಂಚಾಯತುದಾರರನ್ನು ಕಛೇರಿಗೆ ಬರಮಾಡಿಕೊಂಡು ಸಿಸಿಬಿ ಸಿಬ್ಬಂದಿಗಳಾದ ಹೆಚ್.ಸಿ. 1848, ಹೆಚ್.ಸಿ. 1145 ರವರನ್ನು ಖಾಸಗಿ ವಾಹನದಲ್ಲಿ ಸಿಸಿಬಿ ಕಛೇರಿಯಿಂದ ಮಧ್ಯಾಹ್ನ 3:30 ಗಂಟೆಗೆ ಹೊರಟು ಮಾಹಿತಿ ಬಂದ ಸ್ಥಳವಾದ ಕದಳಿ ರಿಕ್ರೀಯೇಷನ್ ತಲುಪಿದ್ದು, ಒಳಗೆ ಪ್ರವೇಶಿಸುತ್ತಿದ್ದಂತೆ ಕೋಣೆಯ ಒಳಗೆ ಕೋಣೆಯ ಮೇಲ್ಭಾಗದಲ್ಲಿ ಒಂದು ಕೋಣೆಯಲ್ಲಿ ಹಲವಾರು ಜನರು ನೆಲದ ಮೇಲೆ ಒಂದು ಚಾಪೆಯನ್ನು ಹಾಕಿಕೊಂಡು ವೃತ್ತಾಕಾರವಾಗಿ ಕುಳಿತು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಜೂಜಾಡುತ್ತಿದ್ದು, ಈ ಇಸ್ಪಿಟ್ ಆಟವನ್ನು ಯಾರು ನಡೆಸುತ್ತಿದ್ದಾರೆಂದು ಕೇಳಿದಾಗ ಕದ್ರಿ ದೇವಸ್ಥಾನದ ಬಳಿಯ ದಿನೇಶ್ ದೇವಾಡಿಗ ಎಂಬವರು ನಡೆಸುತ್ತಿದ್ದಾರೆಂದು ತಿಳಿದುಬಂದಿದ್ದು, ಬಳಿಕ ಅವರಲ್ಲಿ ಪರವಾನಿಗೆ ಇದೆಯೇ ಎಂದು ಕೇಳಿದಾಗ ಪರವಾನಿಗೆ ಇಲ್ಲ ಎಂದು ತಿಳಿಸಿರುತ್ತಾರೆ, ಅದರಲ್ಲಿ ದಿನೇಶ್ ದೇವಾಡಿಗ ಓಡಿಹೋಗಿದ್ದು, ಬಳಿಕ 4 ಜನರನ್ನು ದಸ್ತಗಿರಿ ಮಾಡಿದ್ದು, ಅವರ ಬಳಿ ಇದ್ದ 52 ಇಸ್ಪೀಟು ಎಲೆಗಳನ್ನು , ರೂ 9,500/- ಹಾಗೂ ಚಾಪೆಯನ್ನು ವಶಪಡಿಸಿಕೊಂಡಿರುತ್ತಾರೆ.
5. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 28-12-2013 ರಂದು ಸಂಜೆ 7-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ ಚೊಕ್ಕಬೆಟ್ಟು ನಲ್ಲಿರುವ ಮಸೀದಿಗೆಂದು ಪಿರ್ಯಾದಿದಾರರಾದ ಪಿ.ಎಂ. ಮನ್ಸೂರ್ ಎರಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅಂದರೆ ಕಾಟಿಪಳ್ಳ ಕಡೆಯಿಂದ ಚೊಕ್ಕಬೆಟ್ಟು ಕಡೆಗೆ ಕೆ.ಎ. 19.ಇಇ 2208 ನೇ ಮೋಟಾರು ಸೈಕಲಿನ ಸವಾರ ಸಲೀಂ ಎಂಬಾತನು ಸದ್ರಿ ಮೋಟಾರು ಸೈಕಲಿನಲ್ಲಿ ಅವರ ಹೆಂಡತಿ ಶ್ರೀಮತಿ ಝೀನತ್ ಮಕ್ಕಳಾದ ಸಮಾಜ್ ಹಾಗೂ ಸಪ್ನಾಜ್ ಎಂಬವರುಗಳನ್ನು ಕುಳ್ಳಿರಿಸಿ ಸದ್ರಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿಕೊಂಡು ಬಂದು ಚೊಕ್ಕಬೆಟ್ಟು ಎಂ.ಜೆ.ಎಂ ಹಾಲ್ ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ರಕ್ತ ಗಾಯ ವಾಗಿರುವುದಲ್ಲದೇ ಬೈಕಿನಲ್ಲಿದ್ದ ಸಲೀಂನ ಹೆಂಡತಿ ಮಕ್ಕಳಿಗೂ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.
6. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 29-12-2013 ರಂದು ಪಿರ್ಯಾದಿದಾರರಾದ ರಂಜಿತ್ ಎಂಬವರು ಅವರ ಬಾವ ಕೇಶವನವರ ಸ್ಕೂಟರ್ ನಂಬ್ರ ಕೆ.ಎ.19.ಇಡಿ 7974 ನೇದರಲ್ಲಿ ಸಹಸವಾರರಾಗಿ ಕೇಶವರವರು ಸವಾರರಾಗಿ ಮದ್ಯ ಕುಲಂಗಾಲ್ ದೇವಸ್ಥಾನಕ್ಕೆ ಹೋಗುವರೇ 9ನೇ ಬ್ಲಾಕ್ ಕೋರ್ದಬ್ಬು ದೈವಸ್ಥಾನ ರಸ್ತೆಯಿಂದಾಗಿ ಹೋಗುತ್ತಿರುವಾಗ ಎದುರಿನಿಂದ ಕೆ.ಎ. 19.ಎ 5802 ನೇ ಬಸ್ಸಿನ ಚಾಲಕ ಕೀರ್ತನ್ ಎಂಬವರು ಸದ್ರಿ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಂಜೆ 3-35 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಹಾಗೂ ಕೇಶವರವರು ರಸ್ತೆಗೆ ಬಿದ್ದು ರಕ್ತ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
7. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 27-12-2013 ರಂದು ಪಿರ್ಯಾದಿದಾರರಾದ ಹಜೀಮ್ ಎಂಬನವರು ತನ್ನ ಬಾಬ್ತು ಮೋಟರ್ ಸೈಕಲ್ ನಂಬ್ರ KA-19-EJ-5169 ನೇದರಲ್ಲಿ ಮಹಮ್ಮದ್ ಫಯಾಜ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ದೇರಳಕಟ್ಟೆಯಿಂದ ತೊಕ್ಕಟ್ಟು ಕಡೆಗೆ ಚಲಾಯಿಸಿಕೊಂಡು ಬರುತ್ತಾ ಮಂಗಳೂರು ತಾಲೂಕು ಪಂಡಿತ್ ಹೌಸ್ ಬಸ್ಸು ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಸಮಯ ಸುಮಾರು ರಾತ್ರಿ 9:45 ಗಂಟೆಗೆ ತೊಕ್ಕಟ್ಟು ಕಡೆಯಿಂದ ದೇರಳಕಟ್ಟೆ ಕಡೆಗೆ KA-19-EK-2107 ನೇ ಮೋಟರ್ ಸೈಕಲಿನ ಸವಾರನು ತನ್ನ ಬಾಬ್ತು ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯದಿದಾರರು ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸಮೇತ ರಸ್ತೆ ಬದಿಗೆ ಬಿದ್ದು, ಇದರ ಪರಿಣಾಮ ಪಿರ್ಯಾದಿದಾರರ ಮೊಣಗಂಟು ಮತ್ತು ಬಲಕಾಲಿನ ಮೊಣಗಂಟಿಗೆ ರಕ್ತ ಬರುವ ಗಾಯವಾಗಿರುತ್ತದೆ. ಅಲ್ಲದೇ ಸಹಸವಾರರಿಗೂ ಮುಖಕ್ಕೆ, ಕಿವಿಗೆ ರಕ್ತ ಬರುವ ಗಾಯವಾಗಿರುತ್ತದೆ.
8. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಹಗಲು ಮನೆ ಕಳವು ಪ್ರಕರಣ: ದಿನಾಂಕ 20/12/2013 ಮದ್ಯಾಹ್ನ 12-00 ಗಂಟೆಯಿಂದ ದಿನಾಂಕ 23/12/2013 ರಂದು ಮಧ್ಯಾಹ್ನ 3-30 ಗಂಟೆಯ ಮಧ್ಯೆ, ಮಂಗಳೂರು ತಾಲೂಕು, ಸೋಮೇಶ್ವರ ಗ್ರಾಮದ ಕೊಲ್ಯ ಕುಲಾಲ್ ಮಂದಿರದ ಬಳಿಯಿರುವ ಪಿರ್ಯಾದುದಾರರಾದ ಶ್ರೀ ಬಿ.ಎಂ. ಪುಷ್ಪರಾಜ್ ಎಂಬವರ ಮನೆಯ ಕಿಟಕಿಯನ್ನು ಮುರಿದು ಒಳಪ್ರವೇಶಿಸಿದ ಯಾರೋ ಕಳ್ಳರು ಗೋದ್ರೇಜ್ನಲ್ಲಿ ಇಟ್ಟಿದ್ದ ಸುಮಾರು 24,000/- ರೂಪಾಯಿ ಮೌಲ್ಯದ ಚಿನ್ನದ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
9. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 28-12-2013 ರಂದು 20:00 ಗಂಟೆಗೆ ಪಿರ್ಯಾದಿದಾರರಾದ ಮಹಮ್ಮದ್ ಅಶ್ರಫ್ ಎಂಬವರು ತನ್ನ ಬಾಬ್ತು ಕೆಎ-19-ಇಡಿ-5904 ನೇ ಮೋಟಾರ್ ಸೈಕಲ್ನಲ್ಲಿ ನಾಗೂರಿ ಕಡೆಯಿಂದ ತನ್ನ ಮನೆಕಡೆಗೆ ಹೋಗುತ್ತಾ ಅಳಪೆ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ ಕೆಎ-20-ವಿ-658 ನೇ ಮೋಟಾರ್ ಸೈಕಲನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲಿಗೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ಕೆಳಗೆ ಬಿದ್ದು ಬಲಕಾಲಿಗೆ ಮತ್ತು ಎಡ ಕೈಗೆ ಒಳಜಖಂ ಆಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದು.
10. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 29.12.2013 ರಂದು ಸಂಜೆ ಸುಮಾರು 18:00 ಗಂಟೆಗೆ ಪ್ರೀಮಿಯಮ್ ರೋಡ್ ಸ್ಟಾರ್ ಟೆಂಪೊ ಕೆಎ-19-ಸಿ-7562 ನೇ ವಾಹನವನ್ನು ಅದರ ಚಾಲಕ ನೆಲ್ಸನ್ ಬ್ಯಾಪ್ಟಿಸ್ಟ್ ಎಂಬವರು ತನ್ನ ಬಾಬ್ತು ವಾಹನವನ್ನು ಸಾರ್ವಜನಿಕ ರಸ್ತೆಯಾದ ವಾಮಂಜೂರು ಕಡೆಯಿಂದ ಕುಲಶೇಖರ ಕೈಕಂಬ ಕಡೆಗೆ ಮಾನವ ಜೀವಕ್ಕೆ ಅಪಾಯವಾಗುವಂತೆ ಅತೀ ವೇಗ ಮತ್ತು ಅಜಾಗುರೂಕತೆಯಿಂದ ಚಲಾಯಿಸಿ ಕುಲಶೇಖರ ನಂದಿನಿ ಮಿಲ್ಕ್ ಡೈರಿ ಕಡೆಗೆ ಹಾದು ಹೋಗುವ ರಸ್ತೆಯ ಸಮೀಪ ರಸ್ತೆಯ ಬಲಭಾಗದಲ್ಲಿ ನಿಲ್ಲಿಸಿದ್ದ ನಂದಿನಿ ಮಿಲ್ಕ್ ಸರಬುರಾಜು ಮಾಡುತ್ತಿದ್ದ ಗೂಡ್ಸ್ ಲಾರಿ ನಂಬ್ರ ಕೆಎ-18-ಎ-2054 ರ ಎಡಭಾಗಕ್ಕೆ ಡಿಕ್ಕಿ ಹೊಡೆದು ನಂದಿನಿ ಮಿಲ್ಕ್ ಡೈರಿ ಕಡೆಗೆ ಹಾದು ಹೋಗುವ ರಸ್ತೆಯಿಂದ ರಿಚ್ಚರ್ಡ್ ಕಾನ್ಸೇಸೋ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್ ಬೈಕ್ ನಂಬ್ರ ಕೆಎ-19-ಇಎ-7581 ಕ್ಕೆ ಡಿಕ್ಕಿ ಹೊಡೆದದ್ದರ ಪರಿಣಾಮ ಕೆಎ-19-ಸಿ-7562 ನೇ ಟೆಂಪೊ ವಾಹನ ಮತ್ತು ಮೋಟಾರ್ ಬೈಕ್ ಕೆಎ-19-ಇಎ-7581 ವಾಹನಗಳು ಮಗುಚಿ ಬಿದ್ದು ಮೋಟಾರು ಬೈಕ್ ಕೆಎ-19-ಇಎ-7581 ರ ಸವಾರ ರಿಚ್ಚರ್ಡ್ ಕಾನ್ಸೇಸೋ ರವರ ತಲೆಗೆ ಮುಖಕ್ಕೆ ಮತ್ತು ಬೆನ್ನಿಗೆ ರಕ್ತ ಬರುವ ಗಂಭೀರ ಸ್ವರೂಪದ ಗಾಯವಾಗಿರುವುದಲ್ಲದೆ ಕೆಎ-19-ಸಿ-7562 ರಲ್ಲಿ ಪ್ರಯಾಣಿಸುತ್ತಿದ್ದ ರೋನಾಲ್ಡ್ ಗೋವಿಯಸ್ಸ್ ರವರ ತಲೆಗೆ ಗಂಭೀರ ಸ್ವರೂಪದ ಗಾಯವುಂಟಾಗಿ ಬಾಯಿಂದ ಹಾಗೂ ಕಿವಿಯಿಂದ ರಕ್ತ ಸ್ರಾವ ವಾಗಿ ಮೃತಪಟ್ಟದ್ದಲ್ಲದೇ ಆರೋಪಿ ಕೆಎ-19-ಸಿ-7562ರ ಆರೋಪಿ ಚಾಲಕ ನೆಲ್ಸನ್ ಬ್ಯಾಪ್ಟಿಸ್ಟ ರವರ ತಲೆಗೆ ಮತ್ತು ಮುಖಕ್ಕೆ ರಕ್ತ ಬರುವ ಗಾಯವುಂಟಾಗಿ ಮೂರೂ ವಾಹನಗಳು ಕೂಡಾ ಹಾನಿಯಾಗಿದೆ.
No comments:
Post a Comment