Friday, December 20, 2013

Daily Crime Report 19-12-2013

ದೈನಂದಿನ ಅಪರಾದ ವರದಿ.

ದಿನಾಂಕ 20..12.2013 ರ 16:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗನಂತಿದೆ.

ಕೊಲೆ  ಪ್ರಕರಣ   
:
0
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಮನೆ ಕಳವು ಪ್ರಕರಣ

1
ಸಾಮಾನ್ಯ ಕಳವು
:
0
ವಾಹನ ಕಳವು   
:
0
ಮಹಿಳೆಯ ಮೇಲಿನ ಪ್ರಕರಣ         
:
0
ರಸ್ತೆ ಅಪಘಾತ  ಪ್ರಕರಣ   
:
0
ವಂಚನೆ ಪ್ರಕರಣ
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
2


 

  ಮಂಗಳೂರು ಉತ್ತರ ;ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಹಲ್ಲೆ ಪ್ರಕರಣ  19-12-2013 ರಂದು ಸಂಜೆ 7:30 ಗಂಟೆಗೆ ಮೊಹಮ್ಮದ್‌  ನವಾಜ್‌  ಆಲ್ಟೋ ಕಾರು ನಂಬ್ರ ಕೆಎ-19-ಝಡ್-852 ನೇದರಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ಮಂಗಳೂರು ಜಿ.ಹೆಚ್.ಎಸ್. ರಸ್ತೆಯಲ್ಲಿರುವ ಭಾರತ್ ಫ್ಯಾನ್ಸಿ ಅಂಗಡಿಗೆ ಬಂದಿದ್ದು, ಹೆಂಡತಿ ಮಕ್ಕಳನ್ನು ಭಾರತ್ ಫ್ಯಾನ್ಸಿ ಅಂಗಡಿ ಬಳಿ ಇಳಿಸಿ, ಕಾರನ್ನು ಪಾರ್ಕ್‌  ಮಾಡಿದ ಸಂದರ್ಭ ಅಲ್ಲಿ ಇದ್ದ ಕಾಮತ್‌ ಕ್ಯಾಶ್ಯೂ ಪಾಕ್ಟರಿ ಕಂಪನಿಯ ಸೆಕ್ಯೂರಿಟಿ  ಗಾರ್ಡ್‌ ಕಾರು ಪಾರ್ಕ್‌ ಮಾಡಿದ್ದನ್ನು  ತೆಗೆಯುವಂತೆ ಹೇಳಿದಾಗ ಮೊಹಮ್ಮದ್‌ ನವಾಜ್‌‌ ಮತ್ತು ಸೆಕ್ಯೂರಿ ಗಾರ್ಡ್‌ ಮದ್ಯ  ಮಾತಿನ ಚಕಮಕಿಯಾಗಿ  ಸೆಕ್ಯೂರಿಟಿ ಗಾರ್ಡ್‌ ಮೊಹಮ್ಮದ್ ನವಾಜ್‌ ಅವರಿಗೆ ಹಲ್ಲೆ ಮಾಡಿರುವುದಾಗಿದೆ.

. ಮಂಗಳೂರು ಉತ್ತರ ;ಪೊಲೀಸ್‌  ಠಾಣೆಯಲ್ಲಿ  ವರದಿಯಾದ ಕಳವು ಪ್ರಕರಣ  ರೋಶನ್‌ ಪ್ರಕಾಶ್‌  ಸಿಕ್ವೆರಾ ಎಂಬವರು  ಮಂಗಳೂರು ನಗರದ ಮಿಲಾಗ್ರೀಸ್ ಒಂದನೆ ಮಹಡಿಯಲ್ಲಿ ರೈಟ್ ಕ್ಲಿಕ್ ಸೈಬರ್ ಕೆಫೆಯನ್ನು ಯನ್ನು ನಡೆಸಿಕೊಂಡು ಬರುತ್ತಿದ್ದು, ನಿನ್ನೆ ದಿನಾಂಕ 19-12-2013 ರಂದು ಎಂದಿನಂತೆ ರಾತ್ರಿ ಅಂಗಡಿ ಬಂದು ಮಾಡಿ ಹೋಗಿದ್ದು, ಬಾಗಿಲಿಗೆ ಹಾಕಿದ ಬೀಗದ ಕೊಂಡಿಯನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಬಲವಾಗಿ ಮೀಟಿ ಮುರಿದಿರುವುದು ಕಂಡು ಬಂದಿದ್ದು, ಕಂಪ್ಯೂಟರ್-1, ಎಒಸಿ ಕಂಪೆನಿಯ ಎಲ್.ಇ.ಡಿ. ಮಾನಿಟರ್-1, ಕಂಪ್ಯೂಟರ್ ಬಿಡಿ ಭಾಗಗಳಾದ -8, ಹಾರ್ಡ್ ಡಿಸ್ಕ್-3, ಪ್ರೊಸೆಸರ್-3, ಪೆಡ್ರೈವ್-2, ಸಿಡಿ-1 ಬಾಕ್ಸ್, ಡಿವಿಡಿ-1 ಬಾಕ್ಸ್ ಗಳನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ.

No comments:

Post a Comment