Sunday, December 29, 2013

Daily Crime Reports 29.12.2013

ದೈನಂದಿನ ಅಪರಾದ ವರದಿ.

ದಿನಾಂಕ 29.12.201316:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

1

ರಸ್ತೆ ಅಪಘಾತ  ಪ್ರಕರಣ

:

1

ವಂಚನೆ ಪ್ರಕರಣ

:

0

ಮನುಷ್ಯ ಕಾಣೆ ಪ್ರಕರಣ

:

0

ಹಲ್ಲೆ ಪ್ರಕರಣ

:

1

ದನ ಕಳವು ಪ್ರಕರಣ

:

0

ಎಸ್.ಸಿ.& ಎಸ್.ಟಿ. ದೌರ್ಜನ್ಯ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್‌  ಠಾಣೆಯಲ್ಲಿ ವರದಿಯಾದ ಮನೆ ಕಳವು ಪ್ರಕರಣ ಪ್ರಕರಣ:  ಪಿರ್ಯಾದಿದಾರರಾದ ಲಕ್ಷ್ಮೀನಾರಾಯಣ ಎಂಬವರು ಕುಟುಂಬ ಸಮೇತ ಉಡುಪಿಗೆ ದಿನಾಂಕ 28-12-2013 ರಂದು ಬೆಳಿಗ್ಗೆ 10.45 ಗಂಟೆಗೆ ಹೋಗಿದ್ದವರು ಮದ್ಯಾಹ್ನ 3.30 ಗಂಟೆಗೆ ವಾಪಾಸು ಬಂದಾಗ ಮನೆಯ ಮುಂದಿನ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿದ್ದು ಒಳಗೆ ಬಂದು ನೋಡಿದಾಗ ಒಂದು ಬೆಡ್ರೂಮ್ನಲ್ಲಿದ್ದ ಕಬ್ಬಿಣದ ಅಲ್ಮೇರಾ ಕೆಳಗೆ ಬಿದ್ದಿದ್ದು, ಮತ್ತೊಂದು ಬೆಡ್ರೂಮ್ನಲ್ಲಿದ್ದ ಮರದ ಕಪಾಟಿನ ಒಳಗಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದು ಕಂಡು ಬಂದಿದ್ದು ಯಾರೋ ಕಳ್ಳರು ಮನೆಯ ಸ್ನಾನಗೃಹದ ಕಿಟಕಿಯ ಮೂಲಕ ಒಳಬಂದು ಮನೆಯ ಒಳಗಡೆ ಒಂದು ಬೆಡ್ರೂಮಿನಲ್ಲಿದ್ದ  ಮರದ ಕಪಾಟಿನಿಂದ  ಹೆಂಡತಿಯ 1). ಸುಮಾರು 16 ಗ್ರಾಂ ತೂಕದ ಬಂಗಾರದ ಕರಿಮಣಿ ಪೋಣಿಸಿರುವ ನೆಕ್ಲೆಸ್-1, 2). ಸುಮಾರು 24 ಗ್ರಾಂ ತೂಕದ ಚಿನ್ನದ ಹವಳ ಪೋಣಿಸಿರುವ ನೆಕ್ಲೇಸ್‌  -1, 3) ಸುಮಾರು 24 ಗ್ರಾಂ ತೂಕದ ಬಂಗಾರದ ಕೈಬಳೆ -2, 4) ಸುಮಾರು 24 ಗ್ರಾ ತೂಕದ ಚಿನ್ನದ ಕಿವಿಯ ಬೆಂಢೋಲೆಜೊತೆ ಮತ್ತು ನಗದು ಹಣ ರೂ.  4,000/- ಕಾಣೆಯಾಗಿದ್ದು, ಕಾಣೆಯಾದ ಚಿನ್ನಾಭರಣಗಳ ಮತ್ತು ನಗದಿನ ಅಂದಾಜು ಮೌಲ್ಯ 2,50,400/-

 

2.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ:.  ಜಿಲ್ಲಾ  ಮಂಗಳೂರು ತಾಲೂಕು  ಮುಲ್ಕಿ ಹೋಬಳಿ 14ನೇ  ತಾಳಿಪ್ಪಾಡಿ ಗ್ರಾಮದ  ಸರ್ವೆ  ನಂಬರ್  354/3E ಯಲ್ಲಿ  56 ಸೆಂಟ್ಸ್  ಜಾಗ  ಫಿರ್ಯಾದಿದಾರರ ಚಂದು ರವರ ತಂದೆ ಬೊಗ್ರಾ ರವರಿಗೆ ಮಂಜೂರಾಗಿದ್ದು ಸದ್ರಿ  ಜಮೀನನ್ನು  ಸಂಜೀವನಾಥ ಐಕಳ  ಇವರು ಕಾನೂನಿಗೆ  ವಿರುದ್ದವಾಗಿ  ತನ್ನ ಹೆಸರಿಗೆ  ಮಾಡಿಸಿದ್ದು ಸದ್ರಿ  ಪರಭಾರೆಯ ವಿರುದ್ದ ಫಿರ್ಯಾದಿದಾರರು ಮಾನ್ಯ ಸಹಾಯಕ ಕಮೀಷನರ್ ರವರಿಗೆ  ಮಾನ್ಯ ನ್ಯಾಯಾಲಯಕ್ಕೆ  ಮೇಲ್ಮನವಿ ಸಲ್ಲಿಸಿದ್ದು  ಪ್ರಕರಣ  ಪರಿಶೀಲಿಸಿದ  ನ್ಯಾಯಾಲಯವು  ಪರಭಾರೆಯು ಕಾನೂನು  ಬಾಹಿರ  ಆದೇಶ ನೀಡಿರುತ್ತದೆ  ಮತ್ತು  ಮೂಲ ದೂರು ಅರ್ಜಿದಾರರ  ಹೆಸರಿನಲ್ಲಿ ಜಮೀನನ್ನು  ಖಾತೆ  ಬದಲಾವಣೆಗೊಳಿಸುವರೇ ಆದೇಶಿಸಿದ್ದು, ಸದ್ರಿ ಜಾಗದ ಆದೇಶದ  ತರುವಾಯ ಸದ್ರಿ ಜಮೀನನ್ನು ಬಿಟ್ಟುಕೊಡುವಂತೆ ಫಿರ್ಯಾದಿದಾರರು  ಕೋರಿಕೊಂಡಾಗ ಆರೋಪಿ 1ನೇಯವರು ಫಿರ್ಯಾದಿದಾರರನ್ನು ಉದ್ದೇಶಿಸಿ ಜಾತಿ ನಿಂದನೆಯನ್ನು ಮಾಡಿ ಬೆದರಿಕೆ  ಹಾಕಿದ್ದು  ಈ ಬಗ್ಗೆ  ಫಿರ್ಯಾದಿದಾರರ  ಮಗ  ದೇವುಪ್ರಸಾದ್ ಎಂಬವರು ದಿನಾಂಕ  18.7.2013  ರಂದು ಸಂಜೀವನಾಥ ಐಕಳರ  ಮಗ  ವಿನೋಭಾ ಇವರಲ್ಲಿ ಜಾಗವನ್ನು ಬಿಟ್ಟುಕೊಡುವಂತೆ  ಕೋರಿಕೊಂಡಾಗ  ಆರೋಪಿ 2ನೇಯವರು  ಫಿರ್ಯಾದಿದಾರರ ಮಗ ದೇವುಪ್ರಸಾದ್ ಇವರನ್ನು ಉದ್ದೇಶಿಸಿ ಬೆದರಿಕೆ ಹಾಕಿದ್ದು, ಈ ಬಗ್ಗೆ  ಜಾಗವನ್ನು  ಫಿರ್ಯಾದಿದಾರರ ಹೆಸರಿಗೆ  ಮಾಡಿಕೊಡುವುದಾಗಿ ಒಪ್ಪಿದ್ದು ಆದರೂ ಈವರೆಗೆ  ಜಾಗವನ್ನು  ಫಿರ್ಯಾದಿದಾರರ ಹಸರಿಗೆ  ಮಾಡದೇ  ಇದ್ದುದ್ದರಿಂದ  ಫಿರ್ಯಾದಿದಾರರ  ಮಗ ದೇವುಪ್ರಸಾದ್ ರವರು ದಿನಾಂಕ  26.12.2013  ರಂದು  ಆರೋಪಿತರಲ್ಲಿ  ಈ ಮೊದಲು ತಿಳಿಸಿದಂತೆ  ಜಾಗವನ್ನು  ನಮ್ಮ  ಹೆಸರಿನಲ್ಲಿ  ಮಾಡಿಕೊಡುವಂತೆ   ಕೋರಿಕೊಂಡಾಗ ಆರೋಪಿತರು  ಜಾಗ  ನಮ್ಮ  ಶಾಲೆ ಹೆಸರಿನಲ್ಲಿದೆ, ನಿನ್ನಿಂದ   ಏನೂ  ಮಾಡಲಿಕ್ಕೆ  ಆಗುತ್ತದೆಯೋ ಮಾಡು  ಎಂದು ಬೆದರಿಕೆ  ಹಾಕಿರುವುದಾಗಿದೆ.

 

 3.ಮುಲ್ಕಿ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಪ್ರಕರಣ: ದ.ಕ ಜಿಲ್ಲಾ  ಮಂಗಳೂರು ತಾಲೂಕು  ಮುಲ್ಕಿ ಹೋಬಳಿ 14ನೇ  ತಾಳಿಪ್ಪಾಡಿ ಗ್ರಾಮದ  ಸರ್ವೆ  ನಂಬರ್  354/3E ಯಲ್ಲಿ  56 ಸೆಂಟ್ಸ್  ಜಾಗ  ಫಿರ್ಯಾದಿದಾರರ ಚಂದು ರವರ ತಂದೆ ಬೊಗ್ರಾ ರವರಿಗೆ ಮಂಜೂರಾಗಿದ್ದು ಸದ್ರಿ  ಜಮೀನನ್ನು ಸಂಜೀವನಾಥ ಐಕಳ  ಇವರು ಕಾನೂನಿಗೆ  ವಿರುದ್ದವಾಗಿ  ತನ್ನ ಹೆಸರಿಗೆ  ಮಾಡಿಸಿದ್ದು ಸದ್ರಿ  ಪರಭಾರೆಯ ವಿರುದ್ದ ಫಿರ್ಯಾದಿದಾರರು ಮಾನ್ಯ ಸಹಾಯಕ ಕಮೀಷನರ್ ರವರಿಗೆ  ಮಾನ್ಯ ನ್ಯಾಯಾಲಯಕ್ಕೆ  ಮೇಲ್ಮನವಿ ಸಲ್ಲಿಸಿದ್ದು  ಪ್ರಕರಣ  ಪರಿಶೀಲಿಸಿದ  ನ್ಯಾಯಾಲಯವು  ಪರಭಾರೆಯು ಕಾನೂನು  ಬಾಹಿರವಾಗಿ ಆದೇಶ ನೀಡಿರುತ್ತದೆ  ಮತ್ತು  ಮೂಲ ದೂರು ಅರ್ಜಿದಾರರ  ಹೆಸರಿನಲ್ಲಿ ಜಮೀನನ್ನು  ಖಾತೆ  ಬದಲಾವಣೆಗೊಳಿಸುವರೇ ದಿನಾಂಕ 8.3.1982 ರಂದು ಆದೇಶಿಸಿದ್ದುಆದರೂ  ತಹಶೀಲ್ದಾರರು, ಕಂದಾಯ ನಿರೀಕ್ಷಕರು  ಹಾಗೂ  ತಾಳಿಪ್ಪಾಡಿ ಗ್ರಾಮದ  ಗ್ರಾಮ  ಕರಣೀಕರು  ನಿರ್ಲಕ್ಷತೆ ವಹಿಸಿ  ನ್ಯಾಯಾಲಯದ ಆದೇಶವನ್ನು  ಜ್ಯಾರಿಗೊಳಿಸದೇ ಸಂಜೀವನಾಥ  ಐಕಳರವರಿಗೆ  ನೇರವಾಗುವಂತೆ  ಕಾರ್ಯ  ನಿರ್ವಹಿಸಿ  ದಲಿತ ದೌರ್ಜನ್ಯ  ಎಸಗಿದ್ದು   ಸದ್ರಿ ಜಮೀನನ್ನು ಮಾನ್ಯ ನ್ಯಾಯಾಲಯದ  ಆದೇಶದಂತೆ  ತಮ್ಮ ಹೆಸರಿಗೆ  ನೊಂದಾಯಿಸಿ ವಶಕ್ಕೆ ನೀಡುವಂತೆ ಕೋರಿ  ಫಿರ್ಯಾದಿದಾರರು ಸಲ್ಲಿಸಿದ  ಅರ್ಜಿಗೆ  ಸಂಬಂಧಿಸಿದಂತೆ  ಸದ್ರಿ ಜಾಗಕ್ಕೆ ಬೇಟಿ ನೀಡಿದ  ಸಹಾಯಕ  ಕಮೀಷನರ್ ರವರು ಸುಳ್ಳು  ವರದಿ ನೀಡಿ ಜಾಗವನ್ನು  ಸಂಜೀವನಾಥ  ಐಕಳ ರವರ  ಹೆಸರಿನಲ್ಲಿ ನೀಡಿ  ದೌರ್ಜನ್ಯ  ಎಸಗಿರುವುದಾಗಿದೆ.

 

4.ಸಂಚಾರ ಪೂರ್ವ ಪೊಲೀಸ್‌ ಠಾಣೆಯಲ್ಲಿ ವರದಿಯಾದ ರಸ್ತೆ ಅಪಘಾತ ಪ್ರಕರಣ: ದಿನಾಂಕ 27-12-2013 ರಂದು ಸಂಜೆ ಸುಮಾರು 5-20 ಗಂಟೆಗೆ ಕುಲಶೇಖರ ಅಂಚೆ ಕಚೇರಿ ಎದರು  ಮಾರುತಿ ಒಮ್ನಿ ಕಾರ್ ನಂಬ್ರ KA19-MA-715ನ್ನು ಅದರ   ಚಾಲಕ  ಸಾರ್ವಜನಿಕ  ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ಅಂಚೆ ಕಛೇರಿ ಎದರು ಕೈಕಂಬ ಕಡೆಯಿಂದ ಕಲ್ಪನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ  ವಿಕ್ಟರ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ವಿಕ್ಟರ್ ರಸ್ತೆಗೆ ಬಿದ್ದು ತಲೆಗೆ ಗುದ್ದಿದ ಗಾಯವಾಗಿ ನಗರದ ಕೂಲಾಸೊ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾ ,ಚಿಕಿತ್ಸೆ ಪಲಕಾರಿಯಾಗದೇ ದಿನಾಂಕ 28-12-2013 ರಂದು ಮದ್ಯಾಹ್ನ 3.00 ಗಂಟೆಗೆ ಆಸ್ಪತ್ರೆಯಲ್ಲಿ  ಮೃತಪಟ್ಟಿರುತ್ತಾರೆ.

 

5. ಮೂಡಬಿದ್ರೆ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಹಲ್ಲೆ ಪ್ರಕರಣ: ದಿನಾಂಕ 29-11-2013 ರಂದು ಬೆಳ್ಳಿಗೆ 7.30 ಮಂಗಳೂರು ತಾಲುಕು ತೋಡಾರ್  ಎಸ್ ವಿ ಟಿ ಮ್ಯದಾನದಲ್ಲಿ ಎಪ್  ಸಿ ಟಿ  ಪುತ್ತಿಗೆ ಮತ್ತು ಗ್ಯಾಲಕ್ಷಿ ಜೋಕಟ್ಟೆ ತಂಡಗಳು ಕ್ರಿಕೆಟ್  ಆಟ ಆಡುತ್ತಿದ್ದು ಗ್ಯಾಲಕ್ಷಿ ಜೊಕಟ್ಟೆ ತಂಡವು ಬ್ಯಾಟಿಂಗ್  ಮಾಡುತ್ತಿದ್ದು ರನ್  ವಿಷಯದಲ್ಲಿ ಇತ್ತಂಡದವ ಬೆಂಬಲಿಗರು ಜೋರಾಗಿ ಮಾತನಾಡುತ್ತಿದ್ದು ಈ ಸಮಾಯ ಪಿರ್ಯಾದಿದಾರರಾದ ಸಂಶುದ್ದೀನ್ ಎಂಬವರು ಎನೆಂದು ತಿಳಿಯುವ ಬಗ್ಗೆ ಅವರ ಬಳಿ ಹೋದಾಗ ಅಲ್ಲಿಗೆ ಜೋಕಟ್ಟೆ ಸಲಾಂ ಎಂಬತಾನು ಬಂದು ಪಂದ್ಯಾ ಮುಗಿಯಲು ಇನ್ನು 7 ರನ್ನಗಳು ಬೇಕೇಂದು ಎಪ್ ಸಿ ಟಿ ಪುತ್ತಿಗೆ ತಂಡದವರು ಜೋರಾಗಿ ಹೇಳುತ್ತ ಮಾತನ್ನು ಸಮರ್ಥನೆ ಮಾಡಿಕೊಳ್ಳುತ್ತಿದಂತೆ ಆಟವು ನಿಂತು ಹೋಯಿತು ಆಗ ಪಿರ್ಯಾಧಿದಾರರು ಸಲಾಂ ನಲ್ಲಿ ಒಂದು ರನ್ನಿನ ಬಗ್ಗೆ ಚರ್ಚಿಸುವುದು ಬೇಡ ಎಂದು ಹೇಳಿದಾಗ ಸಲಾಂನ್ನು ಅವಾಚ್ಯ ಶಬ್ದದಿಂದ ಬೈದು ಕೈಯಲ್ಲಿ ಇದ್ದ ಚೂರಿಯನ್ನು ತೋರಿಸಿ ನಿನ್ನನು ಕೊಂದು ಬಿಡುತ್ತೇನೆ ಎಂದು ಹೇಳಿ ಕಣ್ಣಿನ ಎಡಬದಿಗೆ ಗಂಬೀರ ಸ್ವರೂಪ ಗಾಯಗೊಳಿಸಿ  ಪಿರ್ಯಾಧಿದಾರರ ಎದೆಗೆ ಎಡತೊಡೆಯ ಸಂದಿಗೆ ಚೂರಿಯಿಂದ ತಿವಿದು ಗಾಯಗೊಳಿಸಿ ಅಲ್ಲದೇ ಅಲ್ಲಿ ಇದ್ದ ಇತರರಿಗೊ ಚೂರಿ ತೋರಿಸಿ ಒಡಿ ಪರಾರಿಯಾಗಿರುವುದು ಎಂಬಿತ್ಯಾದಿ.

 

6. ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಮನೆ ಕಳವು ಪ್ರಕರಣ ಪ್ರಕರಣ: ದಿನಾಂಕ 28-12-2013 ರಂದು 13-00 ಗಂಟೆಯಿಂದ ದಿನಾಂಕ 29-12-2013 ರಂದು ಬೆಳಿಗ್ಗೆ 6-00 ಗಂಟೆಯ ಮಧ್ಯಂತರದಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಪಾಂಡೇಶ್ವರದ ರೈಲ್ವೆ ಗೇಟ್ ಹತ್ತಿರದಲ್ಲಿರುವ ಹೆಚ್.ಎಂ.ಎಸ್ ಕಂಪೌಂಡ್ ನಲ್ಲಿರುವ ಫಿರ್ಯಾದುದಾರರಾದ ಪ್ರವೀಣ್ ಎಸಾಕ್ ರವರ ತಂದೆಯ ಬಾಬ್ತು ವಾಸ್ತವ್ಯದ ಮನೆಯ ಎದುರು ಬಾಗಿಲನ್ನು ಮುರಿದು ಒಳಗಡೆ ಪ್ರವೇಶಿಸಿ ಬೆಡ್ ರೂಮಿನ ಕಪಾಟುಗಳ ಬಾಗಿಲುಗಳನ್ನು ಬಲತ್ಕಾರವಾಗಿ ತೆರೆದು ವಿವಿದ ನಮೂನೆಯ 644 ಗ್ರಾಂ ಚಿನ್ನಾಭರಣ, ಭಾರತೀಯ ಹಣ ರೂ 45,000/-, ಸೌದಿ ರಿಯಲ್ 2100 ಮತ್ತು ಅಮೇರಿಕನ್ ಡಾಲರ್ 1150 ಹೀಗೆ ಒಟ್ಟು ರೂ 15,02,300/- ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

7. ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ವರದಿಯಾದ ಮಹಿಳೆಯ ಮೇಲಿನ ಪ್ರಕರಣ: ದಿನಾಂಕ 23-12-13 ರಂದು ಮದ್ಯಾಹ್ನ 12-00 ಗಂಟೆ ಸಮಯಕ್ಕೆ ಯುವತಿಯೋರ್ವಳು ಮಾರ್ನಮಿಕಟ್ಟೆಯಲ್ಲಿರುವ ಸೈಬರ್ ಕೆಫೆಗೆ  ಅಸೈನ್ ಮೆಂಟ್ ತಯಾರಿಸುವರೇ ಹೋಗಿದ್ದು, 12-30 ಗಂಟೆ ಸಮಯಕ್ಕೆ ಸೈಬರ್ ಕೆಫೆ ನೋಡಿಕೊಳ್ಳುತ್ತಿದ್ದ ಸಾಲಿ ಎಂಬ ಯುವಕನು ಫಿರ್ಯಾದುದಾರರ ಸಮೀಪಕ್ಕೆ ಬಂದು ನಿಂತು ಫಿರ್ಯಾದುದಾರರ ಕಣ್ಣುಗಳನ್ನು ಕೈಗಳಿಂದ ಮುಚ್ಚಿ ಬಳಿಕ ಅಪ್ಪಿ ಹಿಡಿದು ಮಾನ ಹರಣ ಮಾಡಲು ಉದ್ದೇಶ ಪೂರ್ವಕವಾಗಿ ಪ್ರಯತ್ನಿಸಿದ್ದು, ಫಿರ್ಯಾದುದಾರರು ಅವನಿಂದ ತಪ್ಪಿಸಿಕೊಂಡು ಹೊರಗಡೆ ಓಡಿ ಬಂದು ಬಳಿಕ ತನ್ನ ಮನೆಗೆ ಬಂದು ತಾಯಿಯವರಲ್ಲಿ ವಿಚಾರ ತಿಳಿಸಿ ಠಾಣೆಗೆ ಬಂದು ದೂರು ನೀಡಿರುತ್ತಾರೆ.

No comments:

Post a Comment