ಸಂಚಾರಿ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಲಘು ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 12.12.2013 ರಂದು ರಾತ್ರಿ 9:00 ಗಂಟೆಗೆ ಪಿರ್ಯಾಧಿದಾರರು ಅವರ ಅತ್ತೆ ಶ್ರೀಮತಿ ಬಸಮ್ಮ, ಮತ್ತು ಮುತ್ತಪ್ಪರವರೊಂದಿಗೆ ಮಂಗಳೂರು ನಗರದ ಕೊಟ್ಟಾರಚೌಕಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ಬಳಿಯ ಎ.ಸಿ.ಸಿ. ಸಿಮೆಂಟ್ ಅಂಗಡಿಯ ಎದುರುಗಡೆಯ ರಸ್ತೆಯ ಬದಿಯಲ್ಲಿ ಕೋಡಿಕಲ್ ಗೆ ಹೋಗಲೆಂದು ನಡೆದುಕೊಂಡು ಹೋಗುತ್ತಿದ್ದಾಗ, ಕುಂಟಿಕಾನ ಕಡೆಯಿಂದ ಕೊಟ್ಟಾರಚೌಕಿ ಜಂಕ್ಷನ್ ಕಡೆಗೆ ಒಂದು ಮೋಟಾರು ಸೈಕಲನ್ನು ಅದರ ಚಾಲಕ ಜಮೀರ್ ಎಂವವರು, ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಶ್ರೀಮತಿ ಬಸಮ್ಮನವರಿಗೆ ಢಿಕ್ಕಿ ಹೊಡೆದ ಪರಿಣಾಮ ಶ್ರೀಮತಿ ಬಸಮ್ಮನವರು ರಸ್ತೆಗೆ ಬಿದ್ದು ಅವರ ಎಡಕಾಲಿಗೆ, ಬಲಗೈಯ ತೋಳಿಗೆ ಸಾದಾ ಸ್ವರೂಪದ ಗಾಯ ಉಂಟಾದವರನ್ನು ಎ.ಜೆ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಆದರೆ ಗಡಿಬಿಡಿಯಲ್ಲಿ ಅಪಘಾತ ಉಂಟು ಮಾಡಿದ ಮೋಟಾರು ಸೈಕಲ್ನ ನಂಬ್ರ ನೋಡಿರುವುದಿಲ್ಲ, ಆದರೆ ಸದ್ರಿ ಮೋಟಾರು ಸೈಕಲ್ನ ಹಿಂಬದಿ ಕೆಂಪು ಬಣ್ಣದ್ದಾಗಿದ್ದು, ಪೆಟ್ರೋಲ್ ಟ್ಯಾಂಕ್ ಕಪ್ಪು ಬಣ್ಣದ್ದಾಗಿರುತ್ತದೆ.
No comments:
Post a Comment