ದೈನಂದಿನ ಅಪರಾದ ವರದಿ.
ದಿನಾಂಕ 28.12.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ
|
:
|
0
|
ಕೊಲೆ ಯತ್ನ
|
:
|
0
|
ದರೋಡೆ ಪ್ರಕರಣ
|
:
|
0
|
ಸುಲಿಗೆ ಪ್ರಕರಣ
|
:
|
0
|
ಮನೆ ಕಳವು ಪ್ರಕರಣ
|
:
|
0
|
ಸಾಮಾನ್ಯ ಕಳವು
|
:
|
0
|
ವಾಹನ ಕಳವು
|
:
|
0
|
ಮಹಿಳೆಯ ಮೇಲಿನ ಪ್ರಕರಣ
|
:
|
0
|
ರಸ್ತೆ ಅಪಘಾತ ಪ್ರಕರಣ
|
:
|
1
|
ವಂಚನೆ ಪ್ರಕರಣ
|
:
|
0
|
ಮನುಷ್ಯ ಕಾಣೆ ಪ್ರಕರಣ
|
:
|
0
|
ಹಲ್ಲೆ ಪ್ರಕರಣ
|
:
|
4
|
ದನ ಕಳವು ಪ್ರಕರಣ
|
:
|
1
|
1.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಸದಾಶಿವ ಎಂಬವರು ಮಂಜುನಾಥ ಮೋಟಾರ್ಸ್ ನ ಬಸ್ಸಿನಲ್ಲಿ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದು ಉದುಪಿಯಿಂದ ಮಂಗಳೂರಿಗೆ ಹೋಗಲು ಕಟೀಲು ಬಸ್ಸು ನಿಲ್ದಾಣಕ್ಕೆ ಸಂಜೆ ಸುಮಾರು 3-20 ಗಂಟೆ ಸಮಯಕ್ಕೆ ತಲುಪಿದಾಗ, ಕಿನ್ನಿಗೋಳಿಯಿಂದ ಮಂಗಳೂರಿಗೆ ಹೋಗುವ ನವದುರ್ಗಾ ಬಸ್ಸು ಕೆಎ 19 ಸಿ 7170 ನೇದರ ಕಂಡಕ್ಟರ್ ಸುರೇಶ ಹಾಗೂ ಇತರ ಇಬ್ಬರು ಸಮಯದ ವಿಚಾರದಲ್ಲಿ ಪಿರ್ಯಾದಿದಾರರನ್ನು ಬಸ್ಸಿನಿಂದ ಎಳೆದು ಹಾಕಿ, ತಡೆದು ನಿಲ್ಲಿಸಿ ಕೈಯಿಂದ ಹೊಡೆದು, ಕಾಲಿನಿಂದ ಎದೆಗೆ ತುಳಿದು ರಕ್ತಗಾಯ ಉಂಟುಮಾಡಿದುದ್ದಲ್ಲದೇ, ಆತನ ಜೊತೆಗಿದ್ದ ಇತರ ಇಬ್ಬರೂ ಕೈಯಿಂದ ಎದೆಗೆ ಮತ್ತು ಬೆನ್ನಿಗೆ ಹೊಡೆದು, ನಿನ್ನನ್ನು ಬಸ್ಸಿನಲ್ಲಿ ದುಡಿಯಲು ಬಿಡುವುದಿಲ್ಲ, ಬೇರೆಯವರಿಂದ ಹೊಡೆಸುತ್ತೇನೆ ಹಾಗೂ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ
2.ಬಜಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 27-12-2013 ರಂದು ಸುರೇಶ್ ಎಂಬವರು ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ ಮೋಟಾರ್ಸ್ ಬಸ್ಸು ಕೆಎ 19 ಸಿ 1196 ನೇದರಲ್ಲಿ ಉದುಪಿಯಿಂದ ಮಂಗಳೂರಿಗೆ ಹೋಗಲು ಕಟೀಲು ಬಸ್ಸು ನಿಲ್ದಾಣಕ್ಕೆ ಸಂಜೆ ಸುಮಾರು 3-20 ಗಂಟೆ ಸಮಯಕ್ಕೆ ತಲುಪಿದಾಗ, ಕಿನ್ನಿಗೋಳಿಯಿಂದ ಮಂಗಳೂರಿಗೆ ಹೋಗುವ ನವದುರ್ಗಾ ಬಸ್ಸು ಕೆಎ 19 ಸಿ 7170 ನೇದರ ಕಂಡಕ್ಟರ್ ಸುರೇಶ ಹಾಗೂ ಇತರ ಇಬ್ಬರು ಸಮಯದ ವಿಚಾರದಲ್ಲಿ ಸುರೇಶ್ ಎಂಬವರನ್ನು ಬಸ್ಸಿನಿಂದ ಎಳೆದು ಹಾಕಿ, ತಡೆದು ನಿಲ್ಲಿಸಿ ಕೈಯಿಂದ ಹೊಡೆದು, ಕಾಲಿನಿಂದ ಎದೆಗೆ ತುಳಿದು ರಕ್ತಗಾಯ ಉಂಟುಮಾಡಿದುದ್ದಲ್ಲದೇ, ಆತನ ಜೊತೆಗಿದ್ದ ಇತರ ಇಬ್ಬರೂ ಕೈಯಿಂದ ಎದೆಗೆ ಮತ್ತು ಬೆನ್ನಿಗೆ ಹೊಡೆದು, ನಿನ್ನನ್ನು ಬಸ್ಸಿನಲ್ಲಿ ದುಡಿಯಲು ಬಿಡುವುದಿಲ್ಲ, ಬೇರೆಯವರಿಂದ ಹೊಡೆಸುತ್ತೇನೆ ಹಾಗೂ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 27.12.2013 ರಂದು ಸಂಜೆ 3.30 ಗಂಟೆ ಸಮಯಕ್ಕೆ ಮಹಮ್ಮದ್ ಆರೀಫ್ ರವರು ಜಯಶ್ರೀಗೇಟ್ ಬಳಿಯಿರುವ ಅಕಾಡೆಮಿ ಆಫ್ ಕ್ಯಾರಿಯರ್ ಗೈಡೆನ್ಸ್ ಆಂಡ್ ಇನ್ ಕಾರ್ಪೋರೇಷನ್ ಕಟ್ಟಡದಲ್ಲಿ ಸಹ ಕೆಲಸಗಾರರಾದ ಹಕೀಮ್, ಜುಬೇದ್, ಸಫಾನ್ ರವರ ಜೊತೆ ಕೆಲಸ ಮಾಡುತ್ತಿರುವ ಸಮಯ ಸಂತೋಷ್ ಎಂಬಾತನು ಸದ್ರಿ ಸಂಸ್ಥೆಯ ಕಂಪೌಂಡು ಒಳಗಡೆ ಆಕ್ರಮ ಪ್ರವೇಶ ಮಾಡಿ ಆತನ ಕೈಯಲ್ಲಿ ಕಬ್ಬಿಣದ ರಾಡ್ ನ್ನು ಹಿಡಿದುಕೊಂಡು ಮಹಮ್ಮದ್ ಆರೀಫ್ ಹಾಗೂ ಇತರರಿಗೆ ಕೆಲಸವನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದಾಗ ಪಿರ್ಯಾದಿದಾರರು ನಿರಾಕರಿಸಿವುದರಿಂದ ಅವಾಚ್ಯ ಶಬ್ದದಿಂದ ಬೈದು, ಸಹ ಕೆಲಸಗಾರರನ್ನು ತಡೆದು ನಿಲ್ಲಿಸಿ ಕಬ್ಬಿಣದ ರಾಡಿನಿಂದ ಹಾಗು ಕೈಯಿಂದ ಏಕಾಎಕಿಯಾಗಿ ಹಲ್ಲೆ ಮಾಡಿ ರಕ್ತ ಬರುವ ಗಾಯವನ್ನು ಉಂಟು ಮಾಡಿ ಜೀವ ಬೆದರಿಕೆ ಹಾಕಿ ಸಂಸ್ಥೆಯ ಕೊಠಡಿ ಕಿಟಕಿ ಗಾಜುನ್ನು ಓಡೆದು ಸುಮಾರು 30,000 ರೂ. ನಷ್ಟ ಉಂಟು ಮಾಡಿರುವುದಾಗಿದೆ,
4.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 27-12-2013 ರಂದು ಕಿರಣ್ ಕುಮಾರ್ ರವರು ತನ್ನ ಬಾಬ್ತು ಕೆಎ-19-ಇಜಿ-4945ನೇ ಡಿಯೋ ಸ್ಕೂಟರಿನಲ್ಲಿ ಮುಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಾ ಸಂಜೆ ಸುಮಾರು 4-45 ಗಂಟೆಗೆ ಕಾರ್ನಾಡು ಗ್ರಾಮ ಕೋಟ್ಯಾನ್ ಚಿಕನ್ ಸೆಂಟರ್ ಬಳಿ ತಲುಪುವಾಗ್ಯೆ ಎದುರಿನಿಂದ ರಸ್ತೆಯ ಎಡಪಾರ್ಶ್ವದಲ್ಲಿ ನಿಂತಿದ್ದ ಮೋಟಾರ್ ಸೈಕಲೊಂದನ್ನು ಅದರ ಸವಾರ ಒಮ್ಮೆಲೆ, ಕಿರಣ್ ರ ದ್ವಿಚಕ್ರವಾಹನಕ್ಕೆ ಅಡಲಾಗಿ ಬಂದಾಗ , ಕಿರಣ್ ರ ತನ್ನ ದ್ವಿಚಕ್ರವಾಹವನ್ನು ನಿಲ್ಲಿಸಿ ಯಾಕೆ ಹೀಗೆ ಚಲಾಯಿಸಿ ಬಂದೆ ಎಂದು ಪ್ರಶ್ನಿಸಿದಾಗ , ಅಲ್ಲೆ ಇದ್ದ ಇನ್ನೊಬ್ಬನು ಸೇರಿ ಅವಾಚ್ಯ ಶಬ್ದಗಳಿಂದ ಬೈದು ಸ್ಕೂಟರಿನಿಂದ ಕೆಳಗೆ ದೂಡಿ ಕಾಲಿನಿಂದ ತಲೆಗೆ , ಮುಖಕ್ಕೆ , ಕೈಗಳಿಗೆ , ಎದೆಗೆ ತುಳಿದಿರುತ್ತಾರೆ. ಆರೋಪಿಗಳ ಹೆಸರು ಫಯಾಜ್ ಮತ್ತು ಇಮ್ತಿಯಾಜ್ ಎಂದಾಗಿರುತ್ತದೆ.
5. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ರಮೇಶ್ ಹೆಚ್ ಹಾನಪುವರ ಪಿಎಸ್‌ಐರವರು ತಾರೀಕು 27-12-2013 ರಂದು ಬೆಳಿಗ್ಗೆ ಸಮಯ 6-00 ಗಂಟೆಗೆ ಖಚಿತ ವರ್ತಮಾನದ ಮೇರೆಗೆ, ಉಳ್ಳಾಲ ಠಾಣಾ ಅಪರಾಧ ವಿಭಾಗದ ಪಿಎಸ್‌ಐ ಶ್ರೀ. ಸತೀಶ್ ಎಮ್.ಪಿ. ಮತ್ತು ಸಿಬ್ಬಂದಿಗಳೊಂದಿಗೆ ಮಂಗಳೂರು ತಾಲೂಕು, ತಲಪಾಡಿ ಗ್ರಾಮದ ತಲಪಾಡಿ ಸೇತುವೆಯ ಬಳಿ ಕೆಎ 21 ಎ 7585 ನೇ ನಂಬ್ರದ ಲಾರಿಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ ಅತೀವೇಗದಲ್ಲಿ ಲಾರಿಯನ್ನು ಚಾಲಾಯಿಸಿಕೊಂಡು ಬಂದ ಚಾಲಕನು ಲಾರಿಯನ್ನು ನಿಲ್ಲಿಸದೇ ಸ್ವಲ್ಪ ಮುಂದಕ್ಕೆ ಹೋಗಿ ನಿಲ್ಲಿಸಿ, ಲಾರಿಯಿಂದ ಹಾರಿ ಪರಾರಿಯಾಗಿರುತ್ತಾನೆ. ಲಾರಿಯನ್ನು ಪರಿಶೀಲಿಸಲಾಗಿ, ಲಾರಿಯ ಒಳಗಡೆ ಸುಮಾರು 23 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡಿರುವುದು ಕಂಡು ಬಂತು. ಈ ಜಾನುವಾರುಗಳನ್ನು ಆರೋಪಿತ ಎಲ್ಲಿಂದಲೋ ಕಳವು ಮಾಡಿಕೊಂಡು ಕರ್ನಾಟಕ ರಾಜ್ಯದಿಂದ ಕೇರಳ ರಾಜ್ಯಕ್ಕೆ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಿಸಿರುವುದಾಗಿದೆ. ಜಾನುವಾರುಗಳ ಮೌಲ್ಯ ಅಂದಾಜು ಸುಮಾರು ರೂ 1,00,000.
6. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರಿಯಾದ ಪ್ರಕರಣ : ದಿನಾಂಕ 27/12/2013 ರಂದು ಮದ್ಯಾಹ್ನ 3.00 ಗಂಟೆಗೆ ಆಟೊರಿಕ್ಷಾ ನಂಬ್ರ KA19-C-2864 ನ್ನು ಅದರ ಚಾಲಕ ಅಶೋಕ ಕುಮಾರ ಎಂಬುವರು ಕೊಲಾಸೊ ಆಸ್ಪತ್ರೆ ಜಂಕ್ಷನ್ ಕಡೆಯಿಂದ ಹಾರ್ಟಿಕಲ್ಚರ್ ಜಂಕ್ಷನ್ ಕಡೆಗೆ ಚತುಪ್ಷಥ ರಸ್ತೆಯಲ್ಲಿ ವಾಹನಗಳು ಏಕಮುಖವಾಗಿ ಸಾಗಲು ಇರುವ ವ್ಯವಸ್ಥೆಗೆ ವಿರುದ್ದವಾಗಿ ಚಲಾಯಿಸಿಕೊಂಡು ಬಂದು ಕೊಲಾಸೊ ಆಸ್ಪತ್ರೆ ಬಳಿ ಹಾರ್ಟಿಕಲ್ಚರ್ ಜಂಕ್ಷನ್ ಕಡೆಯಿಂದ ಬೆಂದೂರ್ ಕಡೆಗೆ ಬರುತ್ತಿದ್ದ ಸ್ಕೂಟರ್ ನಂಬ್ರ KA19-EE-9723 ಕ್ಕೆ ಡಿಕ್ಕಿ ಮಾಡಿದ ಪರಿಣಾಮ ಸವಾರ ದಿನೇಶ ಪೂಜಾರಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲ ಭುಜಕ್ಕೆ ಗುದ್ದಿದ ಗಾಯವುಂಟಾಗಿ ಕೊಲಾಸೊ ಆಸ್ಪತ್ರೆಯಲ್ಲಿ ಒಳರೋಗಿಯಾಗಿರುವುದಾಗಿದೆ.
No comments:
Post a Comment