ದಿನಾಂಕ 23.12.2013 ರ 16:00 ಗಂಟೆ ವರೆಗಿನ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣಗಳು ಈ ಕೆಳಗಿನಂತಿದೆ.
ಕೊಲೆ ಪ್ರಕರಣ 0
ಕೊಲೆ ಯತ್ನ : 0
ದರೋಡೆ ಪ್ರಕರಣ : 0
ಸುಲಿಗೆ ಪ್ರಕರಣ : 0
ಮನೆ ಕಳವು ಪ್ರಕರಣ 0
ಸಾಮಾನ್ಯ ಕಳವು : 0
ವಾಹನ ಕಳವು 0
ಮಹಿಳೆಯ ಮೇಲಿನ ಪ್ರಕರಣ 0
ರಸ್ತೆ ಅಪಘಾತ ಪ್ರಕರಣ 2
ವಂಚನೆ ಪ್ರಕರಣ : 0
ಮನುಷ್ಯ ಕಾಣೆ ಪ್ರಕರಣ 0
ಇತರ ಪ್ರಕರಣ : 1
1. ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22.12.2013 ರಂದು ರಾತ್ರಿ 19.00 ಗಂಟೆಗೆ ಎಂ.ಬನಿ ಭಾಸ್ಕರ ಎಂಬವರು ಮಂಗಳೂರು ನಗರದ ಕೊಟ್ಟಾರ ಎಂಬಲ್ಲಿ ಬಸ್ಸಿನಿಂದ ಇಳಿದು ಕೊಟ್ಟಾರ ಚೌಕಿ ಉರ್ವಾಸ್ಟೋರ್ ಸಾರ್ವಜನಿಕ ಕಾಂಕ್ರೀಟು ರಸ್ತೆಯನ್ನು ದಾಟಿ ರಸ್ತೆಯ ಅಂಚಿಗೆ ತಲುಪಿದಾಗ ಕೊಟ್ಟಾರ ಚೌಕಿ ಕಡೆಯಿಂದ ಉರ್ವಾಸ್ಟೋರ್ ಕಡೆಗೆ ಆರೋಪಿ ಸ್ಕಾರ್ಪಿಯಾ ಕಾರು ಚಾಲಕ ಪ್ರದೀಪ್ ಎಂಬರು ಸ್ಕಾರ್ಪಿಯಾ ಕಾರು ನಂಬ್ರ ಕೆಎ.19.ಎಂಎ.6614ನೇದನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಎಂ.ಬಿ ಭಾಸ್ಕರರವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡ ಕೈ ತೋಳಿನಲ್ಲಿ ಗುದ್ದಿದ ಗಾಯವಾಗಿ ಚಿಕಿತ್ಸೆ ಬಗ್ಗೆ ಕುಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ.
2. ಬರ್ಕೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ರವಿದಾಸ್ ನಾಯ್ಕ್ ಎಂಬವರು ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಚಾಲಕರಾಗಿದ್ದು, 22-12-2013ರಂದು ಕಾಸರಗೋಡಿನಿಂದ ಮಂಗಳೂರಿಗೆ ಬಸ್ಸನ್ನು ಚಲಾಯಿಸಿಕೊಂಡು ಬಂದು, ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಲ್ಲಿ ಬಂದು ಡಿಪೋದಲ್ಲಿ ಬಸ್ಸನ್ನು ಇಡಲು ಚಲಾಯಿಸಿಕೊಂಡು ಬರುತ್ತಿದ್ದ ಸಮಯ ಹೀರೋ ಹಾಂಡಾ ಮೋಟಾರು ಸೈಕಲ್ ನಂಬ್ರ ಕೆ.ಎ. 19ಇಎಫ್-6325ನೇದ್ದರ ಸವಾರನು ಏಕಾಏಕಿ ರವಿದಾಸ್ ನಾಯ್ಕ್ ಬಸ್ಸಿಗೆ ತನ್ನ ಬೈಕ್ನ್ನು ಅಡ್ಡ ಇಟ್ಟು, ಬಸ್ಸಿನ ಡ್ರೈವರ್ ಸೈಡಿನ ಬಾಗಿಲನ್ನು ತೆರೆದು, ರವಿದಾಸ್ ನಾಯ್ಕ್ ಕೈಯಿಂದ ಹೊಡೆದು, ಕೆಳಗೆ ಎಳೆದು, ಬಲ ಕೈಗೆ ನೋವುಂಟುಮಾಡಿರುವುದಲ್ಲದೇ, ಕೆಳಗೆ ಬಿದ್ದ ರವಿದಾಸ್ ನಾಯ್ಕ್ ರವರಿಗೆ ಆರೋಪಿ ಬೈಕ್ ಸವಾರನು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದುದ್ದಲ್ಲದೇ ಸಾರ್ವಜನಿಕರ ಕರ್ತವ್ಯ ಅಡ್ಡಿಪಡಿಸಿರುತ್ತಾನೆ ಎಂಬುದಾಗಿದೆ.
3. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿ ಆದ ಪ್ರಕರಣ :ದಿನಾಂಕ.22-12-2013ರಂದು ರಾತ್ರಿ 08-00 ಗಂಟೆ ಸಮಯಕ್ಕೆ KA-19-EK-835 ನೇ ನಂಬ್ರದ ಹೊಂಡಾ ಆಕ್ಟಿವಾವನ್ನು ಅದರ ಸವಾರ ಟಾಯ್ಸನ್ ಡಿಸೋಜ ಎಂಬಾತನು ಸಹಸವಾರನಾಗಿ ಮಹಮದ್ ಸುಹೇಲ್ ಎಂಬುವವನನ್ನು ಕುಳ್ಳಿರಿಸಿಕೊಂಡು ಮಂಚಿಲ ಕಡೆಯಿಂದ ತೊಕ್ಕೊಟ್ಟು ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ತೊಕ್ಕೊಟ್ಟು ಕಡೆಯಿಂದ ಮಂಚಿಲ ಕಡೆಗೆ ವಿ.ಬಿ.ಮೈಂದನ್ ಎಂಬುವವರು ಚಲಾಯಿಸಿಕೊಂಡು ಹೋಗುತ್ತಿದ್ದ KA-19-U-3069 ನೇ ಬೈಕಿಗೆ ಮಂಚಿಲ ಸಫರ್ ಕ್ಲಬ್ ಎಂಬಲ್ಲಿ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ ಸವಾರರು ವಾಹನಗಳ ಸಮೇತ ರಸ್ತೆಗೆ ಬಿದ್ದು ವಿ.ಬಿ.ಮೈಂದನ್ ಬಲಕೈಯ ತಟ್ಟಗೆ ಬಲ ಭುಜಕ್ಕೆ ಬಲ ಕೋಲುಕಾಲಿಗೆ ಮತ್ತು ಸುಹೈಲ್ರವರ ಬಲ ಕೋಲು ಕೈಗೆ ಗಾಯಗೊಂಡು ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ.
No comments:
Post a Comment