Thursday, June 13, 2013

Daily Crime Incidents For June 13, 2013

ಸುಲಿಗೆ ಪ್ರಕರಣ: 

ಮಂಗಳೂರು ಪೂರ್ವ ಠಾಣೆ;

  • ದಿನಾಂಕ 12-06-2013ರಂದು ಪಿರ್ಯಾದಿದಾರರು ತನ್ನ ಸ್ನೇಹಿತೆಯಾದ ಸವೀತಾ ಜೊತೆಯಲ್ಲಿ ವಾಸ್ಲೈನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾ ವಾಸ್ಲೈನ್ ಎನ್ಕ್ಲೇವ್ ಅಪಾಟರ್್ಮೆಂಟ್ ಬಳಿಗೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುಗಡೆಯಿಂದ ದ್ಚಿಚಕ್ರ ವಾಹನದಲ್ಲಿ ಬಂದ ಯುವಕರು ಪಿರ್ಯಾದಿದಾರರ ಬಳಿಗೆ ತಲುಪಿದಾಗ ಬೈಕ್ನ್ನು ನಿಧಾನ ಮಾಡಿದ್ದು ಬೈಕ್ನ ಹಿಂಬದಿ ಸವಾರ ಪಿರ್ಯಾದಿದಾರರ ಕುತ್ತಿಗೆಗೆ ಏಕಾಎಕಿಯಾಗಿ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 42,000/- ರೂ ಬೆಲೆ ಬಾಳುವ ಸುಮಾರು 14 ಗ್ರಾಂ ತೂಕದ ಚಿನ್ನದ ಸರವನ್ನು ಬಲತ್ಕಾರವಾಗಿ ಕಿತ್ತು ಲೂಟಿ ಮಾಡಿಕೊಂಡು ವಾಸ್ಲೈನ್ ರಸ್ತೆಯಲ್ಲಿ ಪರಾರಿಯಾಗಿದ್ದು ಪಿರ್ಯಾದಿದಾರರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದ ಯುವಕರು ಪ್ರಾಯ ಸುಮಾರು 22 ರಿಂದ 28 ವರ್ಷದೊಳಗಿನವರಾಗಿದ್ದು ಎಣ್ಣೆ ಕಪ್ಪು ಮೈಬಣ್ಣದವರಾಗಿರುತ್ತಾರೆ.  ಎಂಬುದಾಗಿ ಪಿರ್ಯಾದಿದಾರರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಠಾಣೆ ಅಪರಾದ ಕ್ರಮಾಂಕ .85-2013 ಕಲಂ 392 ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಅಸ್ವಾಬಾವಿಕ ಮರಣ ಪ್ರಕರಣ:

ಮಂ. ಉತ್ತರ ಠಾಣೆ;

  • ಫೀರ್ಯಾದಿದಾರರು ಸುಮಾರು 2 ತಿಂಗಳ ಹಿಂದೆ ಮಂಗಳೂರು ನಗರದ ಭವಂತಿಸ್ಟ್ರೀಟ್ನಲ್ಲಿರುವ ಹೋಟೇಲ್ ಸಿಟಿ ಪ್ಯಾಲೇಸ್ ಲಾಡ್ಜ್ ನಲ್ಲಿ ಸ್ವಾಗತಕಾರನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 10-06-2013 ರಂದು 21:00 ಗಂಟೆಗೆ ಹೆಸರು ಜಯಶೆಟ್ಟಿ, ಸರಪಾಡಿ, ಬಂಟ್ವಾಳ ಎಂಬವರು ಪಿರ್ಯಾದಿದಾರರ ಲಾಡ್ಜ್ ನಲ್ಲಿ ರೂಂ 12 ನ್ನು ಪಡೆದುಕೊಂಡಿದ್ದು, ದಿನಾಂಕ 12-06-2013 ರಂದು ಬೆಳಿಗ್ಗೆ ಹೊರಗೆ ಹೋಗಿದ್ದು, ನಂತರ ಸಂಜೆ ತಾನು ಪಡೆದುಕೊಂಡಿದ್ದ ರೂಂ ಗೆ ವಾಪಾಸ್ಸಾಗಿದ್ದು, ನಂತರ ಆತನನ್ನು ಪಿರ್ಯಾದಿದಾರರು ನೋಡದೇ ಇದ್ದು, ದಿನಾಂಕ 12-06-2013 ರಂದು 19:00 ಗಂಟೆಗೆ ಪಿರ್ಯಾದಿದಾರರು ಪ್ರತಿಯೊಂದು ರೂಮ್ ನ್ನು ಚೆಕ್ ಮಾಡಿ ರೂಂ ನಂಭ್ರ 12 ನ್ನು ತೆರೆಯುವಂತೆ ಬಾಗಿಲನ್ನು ಬಡಿದಾಗ ತೆರೆಯದೇ ಇದ್ದು, ಪದೇ ಪದೇ ಕರೆದಾಗಲೂ ಯಾವುದೇ ಪ್ರತಿಕ್ರಿಯೆ ಬಾರದೇ  ಇದ್ದುದರಿಂದ, ಈ ಬಗ್ಗೆ ಪೊಲೀಸ್ರಿಗೆ ಮಾಹಿತಿ ನೀಡಿದ್ದು, ಪೊಲೀಸ್ರು ಬಂದು ರೂಂ ನಂಬ್ರ 12 ರವರ ಹೆಸರನ್ನು ಹೇಳಿ ಕೂಗಿ ಕರೆದಾಗಲೂ ಬಾಗಿಲು ತೆರೆಯದೇ ಇದ್ದುದರಿಂದ ಪೊಲೀಸರು ಮತ್ತು ಪಿರ್ಯಾದಿದಾರರು ಹಾಗೂ ರೂಮ್ ಬಾಯ್ ಸೇರಿಕೋಂಡು ಬಲತ್ಕಾರದಿಂದ ಬಾಗಿಲನ್ನು ತೆರೆದಾಗ ರೂ ನಂಬ್ರ 12 ರಲ್ಲಿ ಉಳಕೊಂಡಿದ್ದ ಜಯಶೆಟ್ಟಿ ಸರಪಾಡಿ ಬಂಟ್ವಾಳ ರವರು ರೂಂ ನಂಬ್ರ 12 ರಲ್ಲಿ ಅಳವಡಿಸಿದ್ದ ಫ್ಯಾನ್ ನ ಬಳಿ ಇರುವ ಹುಕ್ ಗೆ ನೈಲಾನ್ ಹಗ್ಗದಿಂದ ಕಟ್ಟಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ್ಯದು ಕಂಡು ಬಂದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಧೂರಿನಂತೆ ಶೇಖ್ ಅಬ್ದುಲ್ಲಾ ಅಜೀಜ್, ಪ್ರಾಯ 46 ವರ್ಷ, ತಂದೆ: ಕೆ. ಪೀರ್ ಸಾಹೇಬ್, ವಾಸ: ಮುಡೈಕೋಡಿ ಬ್ರೆಟ್ಟು ಮನೆ, ಅಮ್ಮಂಜೆ ಅಂಚೆ, ಬಂಟ್ವಾಳ ತಾಲ್ಲೂಕು ರವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆ ಅಪರಾದ ಕ್ರಮಾಂಕ 22/2013 ಕಲಂ 174 ಸಿಆರ್ಪಿಸಿ ರಂತೆ ಪ್ರಕರಣ ದಾಖಲ;ಇಸಿ ತನಿಖೆ ಕೈಗೊಳ್ಳಲಾಗಿದೆ.

Monday, June 10, 2013

Daily Crime Incidents for June 10, 2013

ಅಸ್ವಾಭಾವಿಕ ಮರಣ ಪ್ರಕರಣ

ಮುಲ್ಕಿ ಠಾಣೆ


  • ಪಿರ್ಯಾದಿದಾರರಾದ ಹರೀಶ್ ಪ್ರಜಾರಿ  ಪ್ರಾಯ:29 ವರ್ಷ ತಂದೆ: ನಾರಾಯಣ   ಪ್ರಜಾರಿ ವಾಸ: ಪ್ಮಣ್ಕೆದಡಿ ಮನೆ, ಕೆಮ್ರಾಲ್  ಗ್ರಾಮ  ಮಂಗಳೂರು ತಾಲೂಕು ರವರ ತಮ್ಮ  ಸಂತೋಷ  ಪೂಜಾರಿ ಪ್ರಾಯ 25 ವರ್ಷ  ಎಂಬವರು  ದಿನಾಂಕ  06.06.2013 ರಂದು  ಬೆಳಿಗ್ಗೆ  6.00 ಗಂಟೆಯ ನಂತರ  ಕೂಲಿ  ಕೆಲಸಕ್ಕಾಗಿ ಕೆಮ್ರಾಲ್ ಗ್ರಾಮದ ಬೊಂಗೊಟ್ಟು ಕಂಬಳಗದ್ದೆ  ಎಂಬಲ್ಲಿರುವ  ಕೆರೆಯ ಪಕ್ಕದಲ್ಲಿ ನಡೆದುಕೊಂಡು  ಹೋಗುವಾಗ್ಗೆ  ಆಕಸ್ಮಿಕವಾಗಿ ಕಾಲುಜಾರಿ ನೀರು ತುಂಬಿದ ಕೆರೆಗೆ ಬಿದ್ದು  ನೀರಿನಲ್ಲಿ  ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದು  ಮೃತದೇಹವು  ದಿನಾಂಕ  9.06.2013 ರಂದು ಬೆಳಗ್ಗಿನ  ಜಾವ ಸುಮಾರು 7 ಗಂಟೆಗೆ  ಕೆರೆಯಲ್ಲಿ ತೇಲುತ್ತಿರುವುದು  ಕಂಡುಬಂದಿರುತ್ತದೆ ಎಂಬುದಾಗಿ ಹರೀಶ್ ಪ್ರಜಾರಿ  ರವರು ನೀಡಿದ ದೂರಿನಂತೆ ಮುಲ್ಕಿ ಠಾಣಾ ಯು.ಡಿ.ಆರ್  ನಂಬ್ರ  13/2013 ಕಲಂ: 174 ಸಿ.ಆರ್.ಪಿ;.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಕಾವೂರ್ ಠಾಣೆ


  • ಪಿರ್ಯಾದಿದಾರರಾದ ಐವನ್  ಡಿಸೋಜಾ  ಪ್ರಾಯ:36 ವರ್ಷ  ತಂದೆ:  ಜೆರಾಲ್ಡ್ ಡಿಸೋಜಾ  ವಾಸ: ವಿಲ್ಸನ್  ನಿವಾಸ, ಬೊಲ್ಪುಗುಡ್ಡೆ  ಅಶೋಕ ನಗರ ಅಂಚೆ  ಮಂಗಳೂರು ತಾಲೂಕು ರವರ ಅಣ್ಣನಾದ ರೋನಿ ಡಿಸೋಜಾರವರು  ಕಾವೂರು ಬೋಳ್ಪುಗುಡ್ಡೆ  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ ಬಳಿ ಒಬ್ಬಂಟಿಗರಾಗಿ  ವಾಸವಾಗಿದ್ದು ದಿನಾಂಕ 5.06.2013 ರಂದು ರೋನಿಡಿಸೋಜಾರವರು ಅಸ್ವಸ್ಥರಾಗಿದ್ದ  ವಿಷಯ ನೆರೆಕೆರಯವರಿಂದ  ತಿಳಿದು ಪಿರ್ಯಾದಿದಾರರು  ಅವರನ್ನು ಚಿಕಿತ್ಸೆ  ಬಗ್ಗೆ  ಎ.ಜೆ ಆಸ್ಪತ್ರೆಗೆ  ದಾಖಲಿಸಿದ್ದು  ನಂತರ  ತನ್ನ  ಮನೆಗೆ  ಕರೆದುಕೊಂಡು  ಹೋಗಿದ್ದು  ದಿನಾಂಕ 6.6.2013 ರಂದು  ಪುನಃ  ಅಸ್ವಸ್ಥರಾದವರನ್ನು  ಚಿಕಿತ್ಸೆ ಬಗ್ಗೆ  ಮಂಗಳೂರು ವೆನ್ಲಾಕ್  ಆಸ್ಪತ್ರೆಗೆ  ದಾಖಲಿಸಿದವರನ್ನು ಚಿಕಿತ್ಸೆ  ಫಲಕಾರಿಯಾಗದೇ  ಹೊಟ್ಟೆಗೆ ಆಹಾರವಿಲ್ಲದೇ ಯಾವುದೋ ಖಾಯಿಲೆಯಿಂದ  ದಿನಾಂಕ  9.06.2013 ರಂದು 2.30 ಗಂಟೆಗೆ  ಮೃತಪಟ್ಟಿರುವುದಾಗಿದೆ ಎಂಬುದಾಗಿ ಐವನ್  ಡಿಸೋಜಾ  ರವರು ನೀಡಿದ ದೂರಿನಂತೆ ಕಾವೂರ್ ಠಾಣಾ ಯು.ಡಿ.ಆರ್ ನಂಬ್ರ  17/12  ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ 09-06-2013 ರಂದು ಸಮಯ ಸುಮಾರು 00.05 ಗಂಟೆಗೆ ಕಾರು ನಂ ಏಂ-19 ಒಅ 1646 ನ್ನು ಚಾಲಕರಾಗಿದ್ದ ಇತಿಹಾಸ್ ಶೆಟ್ಟಿರವರು ಕಾರಿನಲ್ಲಿ ಚಂದ್ರಶೇಖರ್ ಮತ್ತು ಸುಮಂತ್, ಆದೇಶ್, ಶ್ರೀಮತಿ ಸತ್ಯ ಗೊಲ್ಲರಕೇರಿ ಹಾಗೂ ಕರಣ್ ಎಂಬವರನ್ನು ಕುಳ್ಳಿರಿಸಿಕೊಂಡು ಸಕ್ಯರ್ೂಟ್ ಹೌಸ್ ಜಂಕ್ಷನ್ ಕಡೆಯಿಂದ ಪದವು ಜಂಕ್ಷನ್ ಕಡೆಗೆ ಕದ್ರಿ ಪಾಕರ್್ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕದ್ರಿ ಬಾಲಭವನ ಬಳಿ ತಲಪುವಾಗ ಕಾರಿನ ವೇಗವನ್ನು ನಿಯಂತ್ರಿಸಲಾಗದೆ ಕಾರು ಸ್ಕಿಡ್ ಆಗಿ ಬಾಲಭವನದ ಕಾಂಪೌಂಡ್ ಗೋಡೆಗೆ ಡಿಕ್ಕಿಯಾಗಿದ್ದು ಚಾಲಕರಾಗಿದ್ದ ಇತಿಹಾಸ್ಶೆಟ್ಟಿರವರು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಮತ್ತು ಕಾರಿನಲ್ಲಿದ್ದ ಚಂದ್ರಶೇಖರ್ ಮತ್ತು ಸುಮಂತ್, ಆದೇಶ್, ಶ್ರೀಮತಿ ಸತ್ಯ ಗೊಲ್ಲರಕೇರಿ ಹಾಗೂ ಕರಣ್ರವರುಗಳು ರಕ್ತಗಾಯಗೊಂಡು ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಚಂದ್ರ ಶೇಖರ (20)ತಂದೆ- ಗುರುಬಸವರಾಜ್ ವಾಸ- ಸುರಕ್ಷಾ , ಬಿಜೈ ಕಾಪಿಕಾಡು, ಬಿಜೈ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆಮೊ.ನಂಬ್ರ 103/2013 ಕಲಂ-279,  337, 304(ಂ)ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


ಸಂಚಾರ ಪೂರ್ವ ಠಾಣೆ


  • ದಿನಾಂಕ: 08-06-2013 ರಂದು ಸಮಯ ಸುಮಾರು 21.15 ಗಂಟೆಗೆೆ ಜೀಪು ನಂಬ್ರ  ಏಂ-19 ಓ-4963 ನ್ನು ಅದರ ಚಾಲಕರು ಪಂಪ್ವೆಲ್  ಕಡೆಯಿಂದ  ಕಂಕನಾಡಿ ಸರ್ಕಲ್ ಕಡೆಗೆ ಕಂಕನಾಡಿ ಹಳೆ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕಂಕನಾಡಿ ಸರ್ಕಲ್ನಲ್ಲಿ ಮುಖ್ಯ ರಸ್ತೆಗೆ ಏಕಾಏಕಿ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಆರೀಫ್ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋ.ಸೈಕಲ್ ನಂಬ್ರ ಏಂ-18 ಇ-5377 ಕ್ಕೆ ಜೀಪು ಡಿಕ್ಕಿಯಾದ ಮಾಡಿದ ಪರಿಣಾಮ ಆರೀಫ್ರವರು ಮೋ.ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ಗಂಭೀರ ಸ್ವರೂಪದ ರಕ್ತಗಾಯ ಉಂಟಾಗಿ ಎ.ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ ಎಂಬುದಾಗಿ ಸುಶಾಂತ್ ಕುಮಾರ್ (37)ತಂದೆ- ಕೆ. ವಿಠಲ ವಾಸ- ರಾಜಗೃಹ, ಮೇಘಾ ನಗರ, ಪಡೀಲ್ ಆಳಪೆ, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 104/2013 ಕಲಂ-279,  338,ಐಪಿಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.



  • ದಿನಾಂಕ 09-06-2013 ರಂದು ಸಮಯ ಸುಮಾರು 18-45 ಗಂಟೆಗೆ ಕಾರು ನಂ ಏಂ-19-ಒಂ-924 ನ್ನು ಅದರ ಚಾಲಕ ಬಿಜೈ ನ್ಯೂ ರೋಡ್ ಕಡೆಯಿಂದ ಬಿಜೈ ನ್ಯೂ ರೋಡ್ ಜಂಕ್ಷನ್ ಕಡೆಗೆ  ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮುಖ್ಯ ರಸ್ತೆಗೆ ಪ್ರವೇಶಿಸುವ ವೇಳೆ ನಿಂತು ಕಾರನ್ನು ಮುಂದಕ್ಕೆ ಚಲಾಯಿಸದೇ ನೇರವಾಗಿ ಚಲಾಯಿಸಿದ ಪರಿಣಾಮ ಅ ಕಡೆಯಿಂದ ಬಿಜೈ ನ್ಯೂ ರೋಡ್ ಜಂಕ್ಷನ್ ಕಡೆಗೆ ಬರುತ್ತಿದ್ದ ಮೋಟಾರು ಸೈಕಲ್ ನಂಬ್ರ ಏಂ-01-ಇಏ-1914 ನೇಯದಕ್ಕೆ ಡಿಕ್ಕಿ ಮಾಡಿದ ಪರಿಣಾಮ ಮೋಟಾರು ಸೈಕಲ್ ಸವಾರ ಸ್ವರೂಣ್ ರಾಜ್ (28 ವರ್ಷ) ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ಸಮಯ ಸುಮಾರು 19-50 ಗಂಟೆಗೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ವರದರಾಜ್ ಶೆಣೈ (27) ತಂದೆ- ಜಿ.ಎ. ಶೆಣೈ.ವಾಸ- # 103, ಆನಂದ              ಅಪಾಟರ್್ಮೆಂಟ್.ಕೆಕೋಡಿಯಲ್ ಬೈಲ್, ಮಂಗಳೂರು ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 105/2013 ಕಲಂ-279,   304(ಂ)ಐಪಿಸಿ, &  ಆರ್ಆರ್ ರೂಲ್ 8 ಮೋಟಾರು ವಾಹನ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.


Sunday, June 9, 2013

Daily Crime Incidents for June 09, 2013

ಅಪಘಾತ ಪ್ರಕರಣ

ಸಂಚಾರ ಪೂರ್ವ ಠಾಣೆ


  • ದಿನಾಂಕ: 08-06-2013 ರಂದು ಸಮಯ ಬೆಳಿಗ್ಗೆ ಸುಮಾರು 05.30 ಗಂಟೆಗೆೆ ನೀರಿನ ಟ್ಯಾಂಕರ್ ಲಾರಿ ನಂಬ್ರ ಏಂ-19 ಂ- 1717 ನ್ನು ಅದರ ಚಾಲಕ ಶೇಖರ್ ಕುಲಾಲ್ ಎಂಬವರು ಕ್ಲೀನರ್ ಆಗಿ ತಾರಾನಾಥ ಎಂಬವರನ್ನು ಕುಳ್ಳಿರಿಸಿಕೊಂಡು ಬೊಳಾರ ಫೆರಿ ರಸ್ತೆ ಕಡೆಯಿಂದ ಒ-ಈಂಖ ಲೇಬರ್ ಕಾಲನಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಾ ಒ-ಈಂಖ ಲೇಬರ್ ಕಾಲನಿ ಗೇಟ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ಪಿರ್ಯಾದುದಾರರಾದ ಬುಲು ಸೇಟಿ ತಂದೆ: ಕೃಷ್ಣ ಸೇಟಿ, ಸುಕುಲ ಗ್ರಾಮ, ಗಂಜಮ್, ಓರಿಸ್ಸಾ.ಹಾಲಿ ವಾಸ: ಒ-ಈಂಖ ಲೇಬರ್ ಕಾಲನಿ, ಬೋಳಾರ,    ಮಂಗಳೂರು ರವರ ಜೊತೆ ನಡೆದುಕೊಂಡು ಹೋಗುತ್ತಿದ್ದ ಬಿಜಾಯ್ ಸಾಹು ಎಂಬವರಿಗೆ ಟ್ಯಾಂಕರ್ ಡಿಕ್ಕಿಯಾಗಿ ರಸ್ತೆಗೆ ಬಿದ್ದಾಗ ನೀರಿನ ಟ್ಯಾಂಕರ್ನ ಹಿಂಭಾಗದ ಚಕ್ರ ಬಿಜಾಯ್ ಸಾಹು ತಲೆಗೆ ತಾಗಿ ಗಂಭೀರ ಸ್ವರೂಪ ಗಾಯ ಉಂಟಾಗಿ ಸ್ಥಳದಲ್ಲೆ ಮೃತಪಟ್ಟಿರುವುದಾಗಿದೆ ಎಂಬುದಾಗಿ ಬುಲು ಸೇಟಿ ರವರು ನೀಡಿದ ದೂರಿನಂತೆ ಸಂಚಾರ ಪೂರ್ವ ಠಾಣೆ ಮೊ.ನಂಬ್ರ 102/2013 ಕಲಂ-279,  304(ಂ) ಐಪಿಸಿ, ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Saturday, June 8, 2013

Daily Crime Incidents For June 08, 2013

ಅಸ್ವಾಭಾವಿಕ ಮರಣ ಪ್ರಕರಣ:

ಬಕರ್ೆ ಠಾಣೆ;


  • ದಿನಾಂಕ 07-06-2013 ರಂದು ಪಿರ್ಯಾದಿದಾರರ ತಂದೆ ಶ್ರೀ ವಿಶ್ವನಾಥ(70)ರವರು ಮಂಗಳೂರು ನಗರದ ಲೇಡಿಗೋಶನ್ ಬಳಿ ಇರುವ ಲಿಂಕಿಂಗ್ ಟವರ್ಸ್ನಲ್ಲಿರುವ ಕೊಠಿಡಿಯಲ್ಲಿ ವಾಸವಾಗಿದ್ದು ಅವರು ಪ್ರತಿ ದಿನ ಬೆಳಿಗ್ಗೆ 05-00ಗಂಟೆಗೆ ಪಿರ್ಯಾದಿದಾರರು ವಾಸವಿದ್ದ  ಕಂಪೌಂಡಿನಲ್ಲಿರುವ ಪ್ಲೋರ್ ಮಿಲ್ಗೆ ಬಂದು 10-00ಗಂಟೆಯವರೆಗೆ ಕೆಲಸ ಮಾಡಿ ಹೋಗುತ್ತಿದ್ದರು ಪಿರ್ಯಾದಿದಾರರು ನೆರೆಕರೆಯವರಾದ ಶ್ರೀ ರವೀಂದ್ರರವರು ಪಿರ್ಯಾದಿದಾರರ ಬಳಿ ಬಂದು ತಂದೆಯವರು ಹಳೆ ಬಾಡಿಗೆ ಮನೆಯಲ್ಲಿ ಬಾವಿಯಿಂದ ನೀರು ಸೇದುವ ಹಗ್ಗವನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಹೋಗಿ ನೋಡಿದಾಗ ಪಿರ್ಯಾದಿದಾರರ ತಂದೆ ಮೃತಪಟ್ಟಿರುತ್ತಾರೆ.ಪಿರ್ಯಾದಿದಾರರ ತಂದೆಯವರು ಪ್ರಾಯಸ್ಥರಾಗಿದ್ದು ಮಾನಸಿಕ ಖಿನ್ನತೆಯಿಂದ ಬಳಸುತ್ತಿದ್ದು ಈ ಬಗ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಇದೇ ಕಾರಣಕ್ಕೆ ದಿನಾಂಕ 07-06-2013 ರಂದು ಬೆಳಿಗ್ಗೆ 05-00 ಯಿಂದ 07-30ರ ನಡುವೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಇವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ ಎಂಬುದಾಗಿ ಸುಧೀರ್.ವಿ.ರೈ.ಕೆ(40) ವಿಶ್ವನಾಥ ರೈ.ಕೆ ವಾಸ: ಸೋಮಕ್ಕ ಶೆಟ್ಟಿ ಕಂಪೌಂಡು ಕೊಡಿಯಲ್ಬೈಲ್ ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಅಪರಾದ ಕ್ರಮಾಂಕ ಯುಡಿಆರ್ ನಂ. 06/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ 

Thursday, June 6, 2013

Daily Crime Incidents for June 06, 2013

ಹಲ್ಲೆ ಪ್ರಕರಣ

ಸುರತ್ಕಲ್ ಠಾಣೆ


  • ದಿ 05-06-13  ರಂದು ಫಿರ್ಯಾಧಿದಾರರಾದ, ದಿನೇಶ  ಪುತ್ರನ್ (50) ತಂದೆ: ದಿ ರಾಮ ಸಾಲ್ಯಾನ್ ವಾಸ: ಜಾರಂದಾಯ ಕಾಲಾನಿ ಇಡ್ಯಾಗ್ರಾಂ, ಮಂಗಳೂರು ರವರು ಅವರ ತಾಯಿ ವಾಸವಾಗಿರುವ ಕುಳಾಯಿ ಗ್ರಾಮದ ಕುಳಾಯಿಯ ಮಾಸ್ಟರ್ ಐಸ್ ಪ್ಲಾಂಟ್ ಬಳಿಯ ಮನೆಯ ಚರಂಡಿಯನ್ನು ಕ್ಲೀನ್  ಮಾಡಲು ಬೆಳಿಗ್ಗೆ ಕೆಲಸದವರನ್ನು ಕರೆಯಿಸಿದಾಗ  ಪಕ್ಕದ ಮನೆಯ ಪರಮೇಶ್ವರ ಎಂಬವರು ಆಕ್ಷೇಪಿಸಿದ ವಿಚಾರವನ್ನು ತಂಗಿ ವೇದವತಿಯಿಂದ ತಿಳಿದು, ಈ ದಿನ ದಿ: 05-06-13ರ ಸಂಜೆ 5:00 ಗಂಟೆಗೆ  ಫಿರ್ಯಾಧಿದಾರರು ಮೇಲ್ಕಂಡ ಸ್ಥಳಕ್ಕೆ ಹೋಗಿ ಪರಮೇಶ್ವರ ರವರ ಮನೆಯ ಗೇಟ್ ನ ಬಳಿ  ಸದ್ರಿ ಪರಮೇಶ್ವರರವರಲ್ಲಿ  ಹೊರಗೆ ಬರುವಂತೆಯೂ ಮಾತನಾಡಲು ಇದ್ದೆ ಎಂದು ಹೇಳುತ್ತಿರುವಾಗ ಪರಮೇಶ್ವರ ಹಾಗೂ  ಅವರ ಹಿಂದಿನಿಂದ ಬಂದ ಹರ್ಷಿತ್ ಮತ್ತು ರಾಕೇಶ ಎಂಬವರು ಫಿರ್ಯಾಧಿದಾರರನ್ನು ಉದ್ದೇಶಿಸಿ ಬೇರ್ವಾಸಿ  ಗಲಾಟೆ ಮಾಡುತ್ತೀಯಾ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಹರ್ಷಿತ್ ಮತ್ತು ಪರಮೇಶ್ವರವರು ತಂಪು ಪಾನಿಯಾ ಬಾಟ್ಲಿಯಿಂದ ಫಿರ್ಯಾಧಿದಾರರ ತಲೆಗೆ ಹೊಡೆದು ಗಾಯಗೊಳಿಸಿದ್ದು, ರಾಕೇಶ್ ರವರು  ಎಕ್ಸೋ ಬ್ಲೇಡ್  ನಿಂದ ಫಿರ್ಯಾಧಿದಾರ ಬಲ ಕೈಯ ಮೊಣಗಂಟಿನ ಕೆಳಗಡೆ ಹಾಗೂ ಎಡಕಣ್ಣಿಗೆ ಚುಚ್ಚಿದ್ದು, ಫಿರ್ಯಾಧಿದಾರರ ತಾಯಿ ಹಾಗೂ ಸುರೇಶ ಎಂಬವರು ಗಲಾಟೆಯನ್ನು ಬಿಡಿಸಿ, ಗಾಯಗೊಂಡ ಫಿರ್ಯಾಧಿದಾರರನ್ನು ಸುರೇಶ ಎಂಬವರು ಚಿಕಿತ್ಸೆ ಬಗ್ಗೆ ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಾಗಿದ್ದು, ಚರಂಡಿ ವಿಚಾರಲ್ಲಿ ವೈಮಾನಸ್ಸಿದ ಮೇಲ್ಕಂಡ ಅಪಾದಿತರು ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ  ದಿನೇಶ  ಪುತ್ರನ್ ರವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣಾ ಅ.ಕ್ರ. 152/2013 ಕಲಂ 504, 324 ಜೊತೆಗೆ 34 ಭಾ.ದ.ಸಂ. ನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ  05-06-2013 ರಂದು ಬೆಳಿಗ್ಗೆ ಸುಮಾರು 10-30 ಗಂಟೆಫಿರ್ಯಾದಿದಾರರಾದ ಪರಮೇಶ್ವರ(58) ತಂದೆ: ದಿ| ಅಚ್ಚುತ ಕಕರ್ೇರಾ ವಾಸ: ಮನೆ ನಂಬ್ರ 6151/5, ಶ್ರೀ ರಕ್ಷಾ, ನಿವಾಸ, ಮಾಸ್ಟರ್ ಐಸ್ ಪ್ಲಾಂಟ್ ಬಳಿ, ಕುಳಾಯಿ ಅಂಚೆ, ಮಂಗಳೂರು ತಾಲೂಕು ರವರು ಅವರ ನೆರೆ ಮನೆಯ ರಾಜೀವಿಯವರಿಗೂ ಮಳೆಗಾಲದ ಸಮಯದಲ್ಲಿ ಸಾರ್ವಜನಿಕ ಹೊರ ಚರಂಡಿಯಲ್ಲಿ ನೀರು ಹೋಗುವ ವಿಚಾರದಲ್ಲಿ ಮಾತುಕತೆಯಾಗುತ್ತಿದ್ದು  ರಾಜೀವಿಯವರ ಕೆಲಸದವರು ಚರಂಡಿಯ ಹೊಯಿಗೆ ತೆಗೆಯುತ್ತಿದ್ದಾಗ ಫಿರ್ಯಾದಿದಾರರು ಹೊಯಿಗೆ ತೆಗೆಯುವಾಗ ಕಂಪೌಂಡು ಬಗ್ಗೆ ಜಾಗ್ರತೆ ವಹಿಸಿ ಎಂದು ರಾಜೀವಿಯವರ ಅಳಿಯನಲ್ಲಿ ಹೇಳಿದ್ದು ಕೆಲಸದವರು ಕೆಲಸ ಮಾಡದೇ ಹೋಗಿರುತ್ತಾರೆ. ಸಂಜೆ ಸುಮಾರು 4-50 ಗಂಟೆಗೆ ಆರೋಪಿ ದಿನೇಶ ಪುತ್ರನ್ ಎಂಬಾತನು ಫಿರ್ಯದಿದಾರರ  ಮನೆಯ ಒಳಗೆ ಬಂದು ಈಯೆನಾ, ಯಾನ್ ಏರುಂದ್ ಗೊತ್ತುಂಡ, ಈ ಎಂಕ್ಲೆಡ ಎಂಚಿನ ಲಪ್ಡಾ ಮಲ್ಪುನಾ ಬೇವಸರ್ಿ, ಸೂಳೆಮಗ ಎಂಬುದಾಗಿ ಅವ್ಯಾಚ್ಯ ಶಬ್ದಗಳಿಂದ ಬೈದು ಏಕಾಏಕಿ ಫಿರ್ಯಾದಿದಾರರ ಮೈಮೇಲೆ ಕೈಹಾಕಿ ಕೈಯಿಂದ ಕೆನ್ನೆಗೆ ಹೊಡೆದಾಗ ಫಿರ್ಯಾದಿದಾರರ ಹೆಂಡತಿ ಬಿಡಿಸಲು ಬಂದಾಗ ಆಕೆಗೂ ಕೈಯಿಂದ ಹೊಡೆದು ಆಕೆಯ ಕುತ್ತಿಗೆಗೆ ಕೈಹಾಕಿ ನೈಟಿಯನ್ನು ಹರಿದು ಹಾಕಿ ಫಿರ್ಯಾದಿದಾರರನ್ನು ಎಳೆದುಕೊಂಡು ಹೋಗಿ ಫಿರ್ಯಾದಿದಾರರ ಮನೆಯ ಎದುರು ಇರುವ ನಾಗೇಶ ಎಂಬವರ ಅಂಗಡಿಯಲ್ಲಿದ್ದ ಸೋಡಾ ಬಾಟ್ಲಿಯನ್ನು ತೆಗೆದು ಫಿರ್ಯಾದಿದಾರರ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು ತಡೆಯಲು ಬಂದ ಫಿರ್ಯಾದಿದಾರರ ಅಣ್ಣನ ಮಗ ರಾಕೆಶನಿಗೂ ಹೊಡೆದಿದ್ದು ರಂಡೆ ಬಾಲೆಲೆ ನಿಕ್ಲೆನು ಪೂರಾ ಕಡ್ತ್ದ್ ಪಾಡುವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ ಎಂಬುದಾಗಿ ಪರಮೇಶ್ವರ(58) ತಂದೆ: ದಿ| ಅಚ್ಚುತ ಕಕರ್ೇರಾ ವಾಸ: ಮನೆ ನಂಬ್ರ 6151/5, ಶ್ರೀ ರಕ್ಷಾ, ನಿವಾಸ, ಮಾಸ್ಟರ್ ಐಸ್ ಪ್ಲಾಂಟ್ ಬಳಿ, ಕುಳಾಯಿ ಅಂಚೆ, ಮಂಗಳೂರು ತಾಲೂಕು ರವರು ನೀಡಿದ ದೂರಿನಂತೆ ಸುರತ್ಕಲ್ ಠಾಣೆ ಅಪರಾದ ಕ್ರಮಾಂಕ 151/2013 ಕಲಂ: 448, 323, 354, 324, 504, 506  ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Wednesday, June 5, 2013

Daily Crime Incidents for June 05, 2013


ಅಸ್ವಾಬಾವಿಕ ಮರಣ ಪ್ರಕರಣ

ಬರ್ಕೆ ಠಾಣೆ


  • ದಿನಾಂಕ 04-06-2013ರಂದು 12-40 ಗಂಟೆಗೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿ ಸಂಖ್ಯೆ 208 ನೇ ನವೀನ್ ಪೂಜಾರಿ, (43) ತಂದೆ: ರಾಜೀವ ಪೂಜಾರಿ, ವಾಸ: ಲಕ್ಷ್ಮೀ ಗುಡ್ಡೆ, ಕುಂಪಳ, ಸೋಮೇಶ್ವರ, ಮಂಗಳೂರು ಎಂಬಾತನು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂಧಿ ಸಂಖ್ಯೆ 208 ನೇ ನವೀನ್ ಪೂಜಾರಿ, (43) ತಂದೆ: ರಾಜೀವ ಪೂಜಾರಿ, ವಾಸ: ಲಕ್ಷ್ಮೀ ಗುಡ್ಡೆ, ಕುಂಪಳ, ಸೋಮೇಶ್ವರ, ಮಂಗಳೂರು ತೀವ್ರ ಅಸ್ವಸ್ಥತೆಗೊಳಗಾದವನನ್ನು ಪಿರ್ಯಾದುದಾರರು ತುತರ್ಾಗಿ ಚಿಕಿತ್ಸೆ ಬಗ್ಗೆ ಕಾರಾಗೃಹದ ಸಿಬ್ಬಂದಿಗಳ ಮುಖೇನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವರೇ ಕೊಂಡು ಹೋಗಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿಯವರು ಸಮಯ ಸುಮಾರು 13-00 ಗಂಟೆಗೆ ತಪಾಸಣೆಮಾಡಿ  ದಾರಿ ಮಧ್ಯೆ ಮೃತ ಪಟ್ಟಿರುತ್ತಾರೆ ಎಂಬುದಾಗಿ ವೈದ್ಯರು ತಿಳಿಸಿರುತ್ತಾರೆ ಎಂಬುದಾಗಿ ಕೆ. ದೊಡ್ಡಕಾಮಯ್ಯ, ಅಧೀಕ್ಷಕರು ಜಿಲ್ಲಾ ಕಾರಾಗೃಹ ಕೊಡಿಯಾಲ್ಬೈಲ್, ಮಂಗಳೂರು ರವರು ನೀಡಿದ ದೂರಿನಂತೆ ಬಕರ್ೆ ಠಾಣೆ ಯುಡಿಆರ್ ನಂ. 05/2013 ಕಲಂ 174 ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ 

Tuesday, June 4, 2013

Daily Crime Incidents For June 04, 2013

ಅಸ್ವಾಭಾವಿಕ  ಮರಣ ಪ್ರಕರಣ:

ಉರ್ವಾ ಠಾಣೆ:
  • ಈ ಪ್ರಕರಣದ ಸಾರಂಶವೆನಂದರೆ ಪಿರ್ಯಾದಿದಾರರ ತಮ್ಮನಾದ ಪ್ರಭು (24) ಎಂಬುವವರು ಬಟ್ಟೆ ವ್ಯಾಪರ ಹಾಗೂ ಫೈನಾನ್ಸ್ ವ್ಯವಹಾರದಲ್ಲಿ ನಷ್ಟ ಆಗಿ ಮಾನಸಿಕ ಖಿನ್ನತೆಗೆ  ಒಳಗಾಗಿದ್ದವನು ದಿನಾಂಕ 02.06.2013 ರಂದು ರಾತ್ರಿ 23:00 ಗಂಟೆಗೆ ಆಫೀಸ್ ರೂಂನಲ್ಲಿ ಮಲಗಲು ಹೋಗಿದ್ದನ್ನು ಕಂಡು ಸಂಶಯಗೊಂಡ ಪಿರ್ಯಾದಿದಾರರು ನೋಡಲಾಗಿ ಒಳಗಿನಿಂದ ಲಾಕ್ ಮಾಡಿದ್ದು, ಕಿಟಕಿ ಮೂಲಕ ನೋಡಲಾಗಿ ಪ್ರಭು ತನ್ನ ಕುತ್ತಿಗೆಗೆ ಬೈರಾಸ್‌ನಿಂದ ಫ್ಯಾನ್‌ಗೆ ನೇಣು ಬಿಗಿದು ನೇತಾಡುತ್ತಿರುವುದನ್ನು ಕಂಡು ಸ್ನೇಹಿತ ಸಂತೋಷ್‌ನ ಜೊತೆ ಒಳಗೆ ಹೋಗಿ ನೇಣಿನಿಂದ ಬಿಡಿಸಿ ಎ.ಜೆ ಆಸ್ಪತ್ರೆಗೆ ಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪಿರ್ಯಾದಿದಾರರ ತಮ್ಮ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ಶಿವಕುಮಾರ (32) ವಾಸ: ಕೋಡಿಕಲ್ ಮಂಗಳೂರು ರವರು ನೀಡಿದ ದೂರಿನಂತೆ ಉರ್ವಾ ಠಾಣೆ ಯು.ಡಿ.ಅರ್ ನಂಬ್ರ 12/2013 ರಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ:

ಸಂಚಾರ ಪೂರ್ವ ಠಾಣೆ;

  • ಪ್ರ್ರಕರಣದ ಸಾರಾಂಶವೇನೆಂದರೆ, ದಿನಾಂಕ: 02-06-2013 ರಂದು ಸಮಯ ಸುಮಾರು 23.30 ಗಂಟೆಗೆೆ ಮಾರುತಿ ಒಮ್ನಿ ಕಾರು ನಂಬ್ರ  ಏಂ-19 ಓ- 7567 ನ್ನು ಚಾಲಕರಾಗಿದ್ದ ಲೊಕೇಶ್ ಎಂಬವರು ಕುಲಶೇಖರ ಕಡೆಯಿಂದ ನಂತೂರು ಜಂಕ್ಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಬಿಕರ್ನಕಟ್ಟೆಯ ವೈದ್ಯನಾಥ ಜ್ಯೂಸ್ ಸೆಂಟರ್ ಬಳಿ ತಲುಪುವಾಗ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಕಾರು ಡಿಕ್ಕಿಯಾದ ಪರಿಣಾಮ ಪಿರ್ಯಾದುದಾರರು ರಸ್ತೆಗೆ ಬಿದ್ದು ಹಣೆಗೆ, ಗದ್ದಕ್ಕೆ, ಎಡಕೈ ಕಿರುಬೆರಳಿಗೆ ರಕ್ತಗಾಯವಾಗಿ ಎಡಕಣ್ಣಿನ ಬಳಿ ಮತ್ತು ಕುತ್ತಿಗೆ ಕೆಳಭಾಗಕ್ಕೆ ಗುದ್ದಿದ ಗಾಯವಾಗಿ ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ. ಅಪಘಾತವನ್ನುಂಟು ಮಾಡಿದ ಬ್ಗೆ ಅರೋಪಿತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವುದಿಲ್ಲ ಎಂಬುದಾಗಿ ಜಗದೀಶ್ ಸೇಮಿತ್ (62) ತಂದೆ: ಕಾಂತು ಸೇಮಿತಾ ವಾಸ: ಶ್ರೀ ಸನ್ನಿಧಿ ಹೌಸ್, ಪದವು, ಅಳಕೆ, ಮಂಗಳೂರು ರವರು ನೀಡಿದ ದೂರಿನಂತೆ  ಸಂಚಾರ ಪೂರ್ವ ಠಾಣೆ ಅಪರಾದ ಕ್ರಮಾಂಕ   99/13  ಕಲಂ- 279337  ಐಪಿಸಿ, 134 (ಛ)  ಮೋ.ವಾ. ಕಾಯ್ದೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

  • ದಿನಾಂಕ: 01-06-2013 ರಂದು ಸಮಯ ಸುಮಾರು 21.00 ಗಂಟೆಗೆೆ ಸ್ಕೂಟರ್ ನಂಬ್ರ  ಏಂ-19 ಇಉ-8661 ನ್ನು ಸವಾರರಾಗಿದ್ದ ರೋಶನ್ ಲೊಬೊ ಎಂಬವರು ಬೆಂದೂರ್ವೆಲ್ನ ಸಾರ್ವಜನಿಕ ರಸ್ತೆಯಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಾ ರಸ್ತೆಯಲ್ಲಿದ್ದ ಡಿವೈಡರ್ಗೆ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಬಲಭುಜಕ್ಕೆ ಮತ್ತು ಬಲಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪ ಗಾಯವಾಗಿ  ಮತ್ತು ಮುಖಕ್ಕೆ ರಕ್ತಗಾಯವಾಗಿ  ತೇಜಶ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುವುದಾಗಿದೆ  ಎಂಬುದಾಗಿ ದಿಲೀಪ್ ಲೋಬೊ (32) ತಂದೆ: ಸಿರಿಲ್ ಲೋಬೊ. ವಾಸ: #6/186, ಲೋಬೋ ಕಾಂಪೌಚಿಡ್, ಜಪ್ಪಿನಮೊಗ್ರು, ಮಂಗಳೂರು ರವರು ನೀಡಿದ ದೂರಿನಂತೆ 98/13  ಕಲಂ-279338  ಐಪಿಸಿ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ