ದಿನಾಂಕ 18/19-08-2013 ರಂದು ರಾತ್ರಿ ಸಮಯ ಪಣಂಬೂರು ಎಸಿಪಿ ರವಿಕುಮಾರ್ . ಎಸ್ ರವರು ಹೆಚ್.ಸಿ. ಉಲ್ಲಾಸ್ , ಎಹಚ್.ಸಿ ಗೋಪಾಲ; ಕೃಷ್ಣ ರವರೊಂದಿಗೆ ರೌಂಡ್ಸ್ ನಲ್ಲಿ ಇರುವ ಸಮಯ ರಾತ್ರಿ ಸುಮಾರು 4-10 ಗಂಟೆಯ ವೇಳೆಗೆ ಮೂಡಬಿದ್ರೆ ಪೇಟೆಯಲ್ಲಿರುವ ಹನುಮಾನ್ ದೇವಸ್ಧಾನದ ಎದುರು ರಸ್ತೆಯಲ್ಲಿ ಇಬ್ಬರು ಅಪರಿಚಿತರು ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದು ಕೊಂಡು ಹೋಗುತ್ತಿರುವುದನ್ನು ಕಂಡು ಎಸಿಪಿ ಪಣಂಬೂರು ರವರು ಅವರನ್ನು ವಿಚಾರಿಸುವರೇ ಜೀಪನ್ನು ನಿಲ್ಲಿಸಿದಾಗ ಇಬ್ಬರು ಅಪರಿಚಿತರು ಅಲ್ಲಿಂದ ಓಡಿ ತಪ್ಪಿ ಕೊಂಡಿದ್ದು ಈ ವಿಚಾರವನ್ನು ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಿಗೆ ತಿಳಿಸಿ , ಪೊಲೀಸ್ ನಿರೀಕ್ಷಕ ಎ.ಕೆ. ತಿಮ್ಮಯ್ಯ ಮತ್ತು ಪಿಎಸ್ಐ ರಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಒಟ್ಟು ಸೇರಿ ಕೊಂಡು ಆರೋಪಿಗಳ ಹುಡುಕಾಟ ಮಾಡುವ ಸಮಯ ಎಸಿಪಿ ರವರಿಗೆ ಪೊದೆಯಲ್ಲಿ ಕಳ್ಳರು ಬಿಸಾಡಿ ಹೋದ ಎರಡು ಬ್ಯಾಗ್ ಗಳು ಪತ್ತೆಯಾಗಿದ್ದು ಈ ಬ್ಯಾಗ್ ನಲ್ಲಿ ಸುಮಾರು 675 ಗ್ರಾಂ ಚಿನ್ನಾಭರಣಗಳು ಪತ್ತೆಯಾಗಿದ್ದು ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಮೊ.ನಂಬ್ರ 174/2013 ಕಲಂ: 102 ಸಿಆರ್ ಪಿ ಯಂತೆ ಪ್ರಕರಣ ದಾಖಲಾಗಿರುತ್ತದೆ. ಪೊಲೀಸರು ಸ್ವಾದೀನ ಪಡಿಸಿದ ಚಿನ್ನಾಭರಣಗಳನ್ನು ಲಕ್ಷೀ ಜ್ಯುವೆಲರಿಯ ಮಾಲಕರು ಗುರುತಿಸಿದ್ದು ದಿ: 18/19-08-2013 ರ ರಾತ್ರಿ ಜುವೆಲರಿ ಅಂಗಡಿಯ ಹಿಂಬದಿಯಿಂದ ಕನ್ನ ಕೊರೆದು ಲಾಕರ್ ನ್ನು ಗ್ಯಾಸ್ ಕಟ್ಟರ್ ಮೂಲಕ ರಂದ್ರ ಕೊರೆದು ಒಳಗಿದ್ದ ಚಿನ್ನಾಭರಣಗಳನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಠಾಣಾ ಮೊ.ನಂಬ್ರ 174/2013 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ ಈ ಘಟನೆ ನಡೆದ ಒಂದೆರಡು ಗಂಟೆಗಳಲ್ಲಿ ಕಳವು ಸೊತ್ತುಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
No comments:
Post a Comment