ದಿನಾಂಕ: 18-08-2013 ರಂದು 1900 ಘಂಟೆ ಸಮಯಕ್ಕೆ ಮಂಗಳೂರು ದಕ್ಷಿಣ ಪೊಲೀಸುಠಾಣೆಯಲ್ಲಿ ಅ.ಕ್ರ. 190/2013 ಕಲಂ 394 ಬಾದಂಸಂ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ಸಾರಾಂಶವೇನೆಂದರೆ, ಶ್ರೀ ವಲೇರಿಯನ್ ಚಾರ್ಲ್ಸ್ ಅಲೆಲೂಯ ರವರು ಮಂಗಳೂರು ಮೂಡುಶೆಡ್ಡೆ ನಿವಾಸಿ ಆಗಿದ್ದು, ಸುಮಾರು 5 ವರ್ಷಗಳಿಂದ ಕುವೈಟ್ ನಲ್ಲಿ ಉದ್ಯೋಗದಲ್ಲಿರುವುದಾಗಿದೆ. ತಾ: 18-08-2013 ರಂದು ಸಂಜೆ 5.00 ಘಂಟೆಗೆ ಮಂಗಳೂರು ಪಾಂಡೆಶ್ವರದಲ್ಲಿರುವ ರೊಸಾರಿಯೋ ಚರ್ಚ್ ಗೆ ಪ್ರಾರ್ಥನೆಗೆಂದು ಬಂದಿದ್ದರು. ಚರ್ಚ್ ನ ಗೇಟ್ ಬಳಿ ತಲುಪಿದಾಗ ಓರ್ವ ಅಪರಿಚಿತ ವ್ಯಕ್ತಿಯು ತನ್ನನ್ನು ತಮ್ಮ ಕ್ಲಾಸ್ ಮೇಟ್ ಎಂದು ಪರಿಚಯಿಸಿಕೊಂಡು ಮಾತನಾಡುತ್ತಾ ಸಂಜೆ ಸುಮಾರು 5.30 ಘಂಟೆ ಸಮಯಕ್ಕೆ ಹೊಯಿಗೆ ಬಜಾರ್ ರೈಲ್ವೇ ಗೇಟ್ ಬಳಿಗೆ ಕರೆದುಕೊಂಡು ಹೋದನು. ಅಲ್ಲಿ ಆತನ ಮೂರು ಜನ ಸಹಚರರು ಇದ್ದು ಅವರು ಸದ್ರಿ ವಲೇರಿಯನ್ ರಿಗೆ ಕೈಯಿಂದ ಹಲ್ಲೆ ನಡೆಸಿ ಅವರ ಬಳಿ ಇದ್ದ ಸುಮಾರು ರೂ.65,000-00 ಮೌಲ್ಯದ 2 ಕಾಲು ಪವನು ತೂಕದ ಕ್ರಾಸ್ ಪೆಂಡೆಂಟ್ ಇರುವ ತೆಂಡುಲ್ಕರ್ ಮಾದರಿಯ ಚಿನ್ನದ ಸರವನ್ನು ಬಲತ್ಕಾರವಾಗಿ ಕಸಿದು ಕಿಸೆಯಲ್ಲಿದ್ದ ಸುಮಾರು 25,000-00 ಮೌಲ್ಯದ ಸ್ಯಾಮ್ ಸಂಗ್ ಎಸ್ 3 ಮಾದರಿಯ ಮೊಬೈಲ್ ಹ್ಯಾಂಡ್ ಸೆಟ್ ಹಾಗು ಸುಮಾರು 5000-00 ರೂ. ನಗದು ಹಣ, ಐಸಿಐಸಿಐ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದ ಪರ್ಸನ್ನು ಕಸಿದುಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಅಂದಾಜು ಮೌಲ್ಯ ರೂ,. 95000-00 ಆಗಬಹುದು ಎಂಬಿತ್ಯಾದಿ.
ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸು ನಿರೀಕ್ಷಕರು ಪೊಲೀಸು ಆಯುಕ್ತರ ಆದೇಶ, , ಸಹಾಯಕ ಪೊಲೀಸು ಆಯುಕ್ತ ಮಾರ್ಗದರ್ಶನದಂತೆ ಕಾನೂನು ಸುವ್ಯವಸ್ಥೆಯ ಉಪ ನಿರೀಕ್ಷಕರಾದ ಹೆಚ್. ಎಂ. ಪೂವಪ್ಪ, ಸಿಬ್ಬಂದಿಗಳಾದ ಹೆಚ್.ಸಿ. 1904,ವಿಶ್ವನಾಥ, ಪಿ.ಸಿ. 351ದಾಮೋದರ, , 591,ಶಾಜು ಕೆ ನಾಯರ್,ಪಿ.ಸಿ.391 ಜಯಪ್ರಕಾಶ್ ಪಿ.ಸಿ.. 953 ಭರಣಿ ದೀಕ್ಷಿತ್ ರವರ ನುರಿತ ಸಿಬ್ಬಂದಿಗಳ ತಂಡವನ್ನು ರಚಿಸಿ ಸದ್ರಿ ತಂಡವು ಆರೋಪಿಗಳ ಪತ್ತೆಗೆ ವ್ಯಾಪಕ ಬಲೆ ಬೀಸಿ ಪರಿಶ್ರಮದಿಂದ ಈ ದಿನ ತಾರೀಖು: 21-08-2013 ರಂದು ಬೆಳಿಗ್ಗೆ ಮೂರು ಜನ ಯುವಕರು ಕೆ.ಎಂ.ಸಿ. ಆಸ್ಪತ್ರೆಯ ಹಿಂದುಗಡೆ ಪರಿಸರದಲ್ಲಿ ಅನುಮಾನಾಸ್ಪದವಾಗಿ ನಿಂತುಕೊಂಡು ಯಾರನ್ನೋ ಕಾಯುತ್ತಿರುವಂತೆ ಕಂಡು ಬರುತ್ತಿದೆ ಎಂದು ತಿಳಿಸಿದರು. ತಕ್ಷಣ ನಾವು ಕೆಎಂಸಿ. ಆಸ್ಪತ್ರೆಯ ವಠಾರಕ್ಕೆ ತಲುಪುತ್ತಿದ್ದಂತೆಯೇ ನಮ್ಮನ್ನು ಕಂಡ ಮೂರು ಜನ ಯುವಕರು ಓಡುವುದಕ್ಕೆ ತೊಡಗಿದರು. ಅವರುಗಳನ್ನು ಸ್ವಲ್ವ ದೂರದವರೇಗೆ ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದಾಗ ಕೊಡವಿ ಎದ್ದು ಬಿದ್ದು ಓಡುತ್ತಿದ್ದವರನ್ನು ಬೆನ್ನಟ್ಟಿ ಹಿಡಿದು ಬೆಳಿಗ್ಗೆ 0830 ಘಂಟೆಗೆ ಅತ್ತಾವರ ರೈಲ್ವೇ ಟ್ರಾಕ್ ಬಳಿ 1.ಶಾರೂಕ್ 2. ಸೌಕತ್ ಮತ್ತು 3. ಮಹಮ್ಮದ್ ಹಮೀರ್ ಎಂಬವರನ್ನು ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆತಂದು ಹಾಜರುಪಡಿಸಿರುತ್ತಾರೆ. ಸದ್ರಿ ಆರೋಪಿಗಳಿಂದ ತಕ್ಷೀರಿನ ಸಮಯ ಸುಲಿಗೆ ಮಾಡಿದ್ದ ಚಿನ್ನಾಭರಣವನ್ನು ಆರೋಪಿ ಶೌಕತ್ ನಿಂದಲೂ, ವಾಚ ನ್ನು ಆರೋಪಿ ಮೊಹಮ್ಮದ್ ಹಮೀರ್ ನಿಂದ ಮತ್ತು ಮೊಬೈಲ್ ಸೆಟ್ಟನ್ನು ಆರೋಪಿ ಸೌಕತ್ ನಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಾಗು ಕೃತ್ಯಕ್ಕೆ ಉಪಯೋಗಿಸಿದ ಮೋಟಾರು ಸೈಕಲು ಮತ್ತು ಮೊಬೈಲು ಪೋನುಗಳನ್ನು ಕೂಡಾ ಆರೋಪಿಗಳಿಂದ ಸ್ವಾಧಿನ ಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ತಂಜೀಲ್ ತಲೆಮರೆಸಿಕೊಂಡಿರುತ್ತಾನೆ.
No comments:
Post a Comment