Monday, April 6, 2015

Daily Crime Reports : 06-04-2015

ದೈನಂದಿನ ಅಪರಾದ ವರದಿ.

ದಿನಾಂಕ 06.04.2015 14:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ  

:

3

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

1

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ        

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

1.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಐದು ವರ್ಷ ಪ್ರಾಯದ ಹೆಣ್ಣು ಮಗು ಕಾಟಿಪಳ್ಳ ಗ್ರಾಮದ 9ನೇ ಬ್ಲಾಕ್ ಮಸೀದಿ ಆವರಣದಲ್ಲಿ ಆಟವಾಡಲು ಹೋಗುತ್ತಿದ್ದು ವಾಪಾಸು ಮನೆಗೆ ಬಂದಿದ್ದು, ಅವಳಲ್ಲಿ ತಾಯಿ ವಿಚಾರಿಸಿದಾಗ ಆರೋಪಿಗಳಾದ ಸುಹೈಬ್, ಸುಹೈಲ್, ತನ್ವೀರ್, ಸಫ್ವನ್ ಎಂಬವರುಗಳು ಲೈಗಿಂಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದು ಮಗಳ ವಿಚಾರವಾದ್ದರಿಂದ ಮಗುವಿನ ತಾಯಿ  ಯಾರಲ್ಲಿಯೂ ಹೇಳದೇ ಇದ್ದು ದಿನಾಂಕ 01-04-2015 ರಂದು ಸಂಜೆ ಸುಮಾರು 5-50 ಗಂಟೆಗೆ ಎಂದಿನಂತೆ ಮಗು ಆಟ ಆಡಲು ಹೋದವಳನ್ನು ತಾಯಿ ಹುಡುಕಿಕೊಂಡು ಹೋದಾಗ ಮಗುವಿನ ಮನೆಯ ಹಿಂದಿನ ಬಾಗಿಲ ಬಳಿ  ನಬೀಲ್ ಎಂಬಾತನು ಲೈಗಿಂಕ ಕಿರುಕುಳ ನೀಡುತ್ತಿದ್ದು, ಕೂಡಲೇ ಪಿರ್ಯಾದಿ ಮಗುವಿನ ತಾಯಿ ಆತನನ್ನು ಹಿಡಿದೆಳೆದು ಮಸೀದಿಯ ಗುರುಗಳಿಗೆ ಈ ವಿಚಾರ ತಿಳಿಸಿದ್ದು, ನಂತರ ಮನೆಯವರಿಗೆ ತಿಳಿಸಿ ದಿನಾಂಕ 05-04-2015 ರಂದು ಪಿರ್ಯಾದಿದಾರರು ತನ್ನ ತಮ್ಮನ ಸಹಾಯದಿಂದ  ಲೇಡಿಗೋಶನ್ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು  ಹೋಗಿ ವೈದ್ಯರಲ್ಲಿ ಪರೀಕ್ಷೆ ಒಳಪಡಿಸಿರುವುದಾಗಿದೆ.

 

2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 05-04-2015 ರಂದು ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರಿಲ್ವಾನ್ ರವರು ಮದ್ಯಾಹ್ನ ಕಾಟಿಪಳ್ಳ 2ನೇ ಬ್ಲಾಕ್ ನಲ್ಲಿರುವ ಸಾಜಿದ್ ಎಂಬವರ ಪ್ರಿನ್ಸ್ ಹೋಟೆಲ್ ನಲ್ಲಿ ಬಿರಿಯಾನಿ ತಿಂದು ಬಳಿಕ ಹಣ ಕೊಡುವರೇ ಹಣ ಇಲ್ಲದ್ದರಿಂದ ನಾಳೆ ಕೊಡುವುದಾಗಿ ತಿಳಿಸಿದಾಗ ಸಾಜಿದ್ ರವರು ನೀನು ಯಾವಾಗಲೂ ಹೀಗೆ ಮಾಡುವುದು ಎಂದು ಹೇಳಿದಾಗ ಅವರೊಳಗೆ ಬಾಯಿ ಮಾತಾಗಿದ್ದು ಈ ಸಮಯ ಪಿರ್ಯಾದಿದಾರರು ಸಾಜಿದ್ ರವರಿಗೆ ನಿನಗೆ ಮೊನ್ನೆ ಕೆಲವು ಹುಡುಗರು ಹೊಡೆದಿದ್ದಾರಲ್ಲಾ ನೀನು ಸರಿ ಇಲ್ಲ ಎಂದು ಹೇಳಿದಕ್ಕೆ ಆರೋಪಿ ಸಾಜಿದನು ನಿನಗೆ ಕಲಿಸುತ್ತೇನೆ ಎಂಬುದಾಗಿ ಹೇಳಿದ್ದು, ಅಲ್ಲಿಂದ ಪಿರ್ಯಾದಿದಾರರು ತೆರಳಿ ಬಳಿಕ ಸಂಜೆ ಸುಮಾರು 5-30 ಗಂಟೆಗೆ ಪಿರ್ಯಾದಿದಾರರು ಪ್ರಿನ್ಸ್ ಹೋಟೆಲ್ ಬಳಿ ತೆರಳುತ್ತಿದ್ದಾಗ ಸಾಜಿದ್ ರವರು ಹೋಟೆಲ್ ಬಳಿ ಕರೆದು ಬಿರಿಯಾನಿ ಹಣ ಎಲ್ಲೆಂದು ಕೇಳಿದಾಗ ಮತ್ತೆ ಕೊಡುತ್ತೇನೆ ಎಂದು ಹೇಳಿದಕ್ಕೆ ಆರೋಪಿ ಸಾಜಿದನು ಅವರ ಅಂಗಡಿ ಎದುರು ಇದ್ದ ತಂಪು ಪಾನಿಯ ಬಾಟಲಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು ಹಾಗೂ ಅಲ್ಲೆ ಇದ್ದ ರಶೀದ್ ರವರು ಪಿರ್ಯಾದಿದಾರರನ್ನು ತಂಪು ಬಾಟಲಿಯ ಮೇಲೆ ದೂಡಿ ಹಾಕಿರುತ್ತಾರೆಇದರಿಂದ ಪಿರ್ಯಾದಿದಾರರ ತಲೆಗೆ, ಎಡ ಹಣೆಗೆ, ಎಡ ಕೈ, ಅಂಗೈಗೆ, ಎಡ ಹಣೆಗೆ ಗಾಯವಾಗಿರುತ್ತದೆ.

 

3.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 04-04-2015 ರಂದು ಪಿರ್ಯಾದಿದಾರರಾದ ಶ್ರೀ ಮಂಜುನಾಥ್ ರವರು ಅವರ ಬಾಬ್ತು ಟಿವಿಎಸ್ ಕಂಪನಿಯ ಮೋಟಾರು ಸೈಕಲ್ ನಂಬ್ರ ಕೆಎ 19 ಕ್ಯೂ 5052 ನೇದನ್ನು ಇಡ್ಯಾ ಗ್ರಾಮದ ಸುರತ್ಕಲ್ ನಟರಾಜ್ ಚಿತ್ರಮಂದಿರದ ಎದುರು ಪ್ಲೈ ಓವರ್ ಕೆಳಗಡೆ ಬೆಳಿಗ್ಗೆ 9-00 ಗಂಟೆಗೆ ನಿಲ್ಲಿಸಿ ಅಂಗಡಿ ಹೋಗಿದ್ದು ಬಳಿಕ ಮದ್ಯಾಹ್ನ 2-00 ಗಂಟೆಗೆ ಸದ್ರಿ ಸ್ಥಳಕ್ಕೆ ಬಂದು ನೋಡಿದಾಗ ಮೋಟಾರು ಸೈಕಲ್ ಇಲ್ಲದೇ ಇದ್ದು ಯಾರೋ ಅಪರಿಚಿತರು ಅದನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 04.04.2015 ರಂದು ಸಂಜೆ ಸುಮಾರು 7:00 ಗಂಟೆಯ ಸಮಯಕ್ಕೆ ಆರೋಪಿಗಳಾದ ರವೂಫ್, ರಫೀಕ್, ಅಶ್ರಫ್, ಖಲೀಲ್, ಶಫೀಕ್ ಎಂಬವರುಗಳು ಅಕ್ರಮ ಕೂಟ ಸೇರಿಕೊಂಡು ಫಿರ್ಯಾದಿ ಯುವತಿಯ ತಂದೆಯ ಬಾಬ್ತು ಜಾಗವಾದ ಕರಿಂಗಳ ಗ್ರಾಮದ ಮೊಂಟುಗೊಳಿ ಗೆ ಅಕ್ರಮವಾಗಿ ಪ್ರವೇಶ ಮಾಡಿ ಜಾಗದಲ್ಲಿ ಇಟ್ಟ ಕಲ್ಲುಗಳನ್ನು ಬಿಸಾಡಿ ಫಿರ್ಯಾದಿದಾರರ ಅಣ್ಣನನ್ನು ಹೊರಗೆ ಕರೆದು ಅಂಗಿಯ ಕಾಲರ್ಹಿಡಿದು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಆರೋಪಿ ಖಲೀಲ್ನು ಅವಾಚ್ಯವಾಗಿ ಬೈದು, ಆರೋಪಿಗಳು ಫಿರ್ಯಾದಿದಾರರ ತಾಯಿ ಹಾಗೂ ಯುವತಿಯನ್ನು ದೂರಕ್ಕೆ ಬಿಸಾಡಿದ್ದು ಅಲ್ಲದೇ ಫಿರ್ಯಾದಿದಾರರನ್ನು ಹಿಡಿದು ಮಾನಭಂಗ ಯತ್ನಕ್ಕೆ ಪ್ರಯತ್ನಿಸಿದ್ದು, ಇದನ್ನು ತಡೆಯಲು ಹೋದ ಫಿರ್ಯಾದಿದಾರರ ಅಣ್ಣ ನನ್ನು ಉದ್ದೇಶಿಸಿ ಜಾತಿ ನಿಂದನೆ ಮಾಡಿರುತ್ತಾರೆ. ಈ ಘಟನೆಯಿಂದ ಫಿರ್ಯಾದಿದಾರರು, ಇತರ ಇಬ್ಬರೂ ಮಹಿಳೆಯರು ಆಘಾತಗೊಂಡು ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ. ಈ ಘಟನೆಗೆ ಕಾರಣವೇನೆಂದರೆ, ಫಿರ್ಯಾದಿದಾರರ ಅಜ್ಜಿಯ ಹೆಸರಿನಲ್ಲಿ ಸರ್ವೆ ನಂಬ್ರ 64/1ಬಿ ರಲ್ಲಿ ಇರುವ ಜಾಗದಲ್ಲಿ ಸುಮಾರು ಎರಡು ವರ್ಷಗಳಿಂದ ಒಂದು ಕೋಮಿನವರು ರಸ್ತೆ ಮಾಡಬೇಕೆಂದು ಪ್ರಯತ್ನಿಸುತ್ತಿದ್ದು ಇದನ್ನು ಆಕ್ಷೇಪಿಸಿದಕ್ಕೆ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿದೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ: 05.04.2015 ರ ರಾತ್ರಿ 10-00 ಗಂಟೆಯಿಂದ 06.04.2015ರ ಬೆಳಿಗ್ಗೆ 07-30 ಗಂಟೆಯ ಮಧ್ಯೆ ಮಂಗಳೂರು ನಗರದ ಕರಂಗಲ್ಪಾಡಿಯಲ್ಲಿರುವ ಮೆಡಿ ಫೇರ್ ಕಾಂಪ್ಲೇಕ್ಸ್ ನ ತಳ ಅಂತಸ್ತಿನಲ್ಲಿರುವ ಸ್ಟೈಲ್ ಮೆನ್ಸ್ ಸಲೂನ್ ನ ಶೇಟರ್ ಡೋರ್ ಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮುರಿದು ಒಳ ಪ್ರವೇಶಿಸಿ ಸೆಲೂನ್ ಒಳಗಿದ್ದ ಸುಮಾರು 7,000/- ಬೆಲೆ ಬಾಳುವ ಹೊಂಡಾ ಕಂಪನಿಯ ಜನರೇಟರ್-1, ಸುಮಾರು 2,000/- ಬೆಲೆ ಬಾಳುವ ಹೇರ್ ಕಟಿಂಗ್ ಮೆಷಿನ್-3 ಹಾಗೂ ನಗದು ರೂ 15,000/- ವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತಿ ಒಟ್ಟು ಮೌಲ್ಯ ರೂ 24,000/- ಆಗಬಹುದು.

 

6.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 04.04.2015 ರಂದು ಸಮಯ ಸುಮಾರು ರಾತ್ರಿ 7.00 ಗಂಟೆಗೆ ಸ್ಕೂಟರ್ ನಂಬ್ರ KA19-Y-800 ಸವಾರ ಸಹ ಸವಾರೆಯೊಬ್ಬರನ್ನು ಕುಳ್ಳಿರಿಸಿಕೊಂಢು ಪಂಪ್ ವೆಲ್ ಕಡೆಯಿಂದ ನಂತೂರು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಂಪ್ ವೆಲ್-ತಾರೇತೋಟ ಬಳಿಯ ನ್ಯಾಷನಲ್ ಗ್ಯಾರೇಜ್ ಎದುರುಗಡೆ ರಸ್ತೆಯಲ್ಲಿ, ರಸ್ತೆ ದಾಟುತ್ತಿದ್ದ ಫಿರ್ಯಾದುದಾರರಾದ ಕು. ರಶ್ಮಿ ರವರ ತಂದೆ ವಿಶ್ವನಾಥ್ ಎಂಬುವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು ಮುಖಕ್ಕೆ, ಬಾಯಿಗೆ, ಮತ್ತು ತಲೆಗೆ ರಕ್ತಗಾಯ ಹಾಗೂ ಬಲಕಾಲಿಗೆ ಗಂಭೀರ ಸ್ವರೋಪದ ಮೂಳೆ ಮುರಿತದ ರಕ್ತಗಾಯ  ಮತ್ತು ಎರಡೂ ಕೈ ಗಳಿಗೆ ಮತ್ತು ಕಾಲುಗಳಿಗೆ ತರಚಿದ ರಕ್ತಗಾಯವುಂಟಾಗಿ AJ ಆಸ್ಪತ್ರೆಯಲ್ಲಿ ಪ್ರಜ್ನಾಹೀನ ಸ್ಥಿತಿಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ ಮತ್ತು ಸ್ಕೂಟರ್ ಸವಾರ ಮತ್ತು ಸಹ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತವೆ.

 

7.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 05-04-2015 ರಂದು ಸಮಯ ಸುಮಾರ ಬೆಳಿಗ್ಗೆ 7-45 ಗಂಟೆಗೆ ಪಿರ್ಯಾದುದಾರರಾದ ಶ್ರೀ ಜೆ. ಬೆನೊನಿ ಪಲನ್ನಾ ರವರು  ಬಿಕರ್ನಕಟ್ಟೆ ಬಾಲಯೇಸು ಚರ್ಚ ಬಳಿ ರಸ್ತೆ ದಾಟುತ್ತಿರುವಾಗ ಶಕ್ತಿನಗರ ಕಡೆಯಿಂದ ಬೈಕೊಂದನ್ನು  ಅದರ ಸವಾರ  ಸಹಸವಾರರೊಬ್ಬರನ್ನು ಹಿಂಬದಿಯಲ್ಲಿ  ಕುಳ್ಳಿರಿಸಿಕೊಂಡು ಅತೀ ವೇಗ ಮತ್ತು ಅಜಾಗರೂಕತೆಯಿಂದ  ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದುದಾರರು ಡಾಮಾರು ರಸ್ತೆಗೆ ಬಿದ್ದು ಪಿರ್ಯಾದುದಾರರ ಎಡಕಾಲಿನ ಮೊಣಗಂಟಿನ ಕೆಳಗೆ ರಕ್ತಗಾಯ ಎಡಕೈ ಕಿರಬೆರಳು ಉಂಗುರ ಬೆರಳಿಗೆ ರಕ್ತಗಾಯ,ಮೂಗಿಗೆ ರಕ್ತಗಾಯ, ಎಡ ಕಣ್ಣಿನ ಮೇಲ್ಬಾಗದಲ್ಲಿ ರಕ್ತಗಾಯ,ಬಲ ಕಣ್ಣಿಗೆ ಗುದ್ದಿದ ಗಾಯ, ಹಾಗೂ ಬಲ ಕೋಲು ಕಾಲಿಗೆ ಗಂಭೀರ ಸ್ವರೂಪದ ಮೂಳೆ ಮುರಿತದ ನೋವು ಉಂಟಾಗಿ ನಗರದ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಧಾಖಲಾಗಿ ಚಿಕಿತ್ಸೆಯಲ್ಲಿದ್ದು ಅಪಘಾತ ಪಡಿಸಿದ ಬೈಕ್ ಸವಾರ ಅಪಘಾತ ಸ್ಥಳದಿಂದ ಬೈಕ್ ಸಮೇತ ಪರಾರಿಯಾಗಿರುತ್ತಾನೆ.

 

8.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 5/04/2015 ರಂದು ಸಮಯ ಸುಮಾರು ಸಂಜೆ 19:00 ಗಂಟೆಗೆ ಫಿರ್ಯಾದುದಾರರಾದ ಶ್ರೀ ನಾಸೀರ್ ಹುಸೈನ್ ರವರು ತಮ್ಮ ಭಾಬ್ತು ಕಾರು ನಂಬ್ರ KA-04-MK-7926 ನೆ ದರಲ್ಲಿ ಮಂಗಳೂರು ನಗರದ ಬಿ ಸಿ ರೋಡ ಕಡೆಯಿಂದ ತಲಪಾಡಿ ಹೋಗುವರೇ ಪಂಪವೆಲ್ ವೃತ್ತದ ಬಳಿ ತಲುಪಿದಾಗ ಫಿರ್ಯಾದುದಾರರ ಕಾರಿನ ಹಿಂದಿನಿಂದ KSRTC ಬಸ್ಸು ನಂಬ್ರ KA-19-F-2959 ನೇ ದರ ಚಾಲಕ ಬಸ್ಸನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರ ಕಾರಿನ ಬಲಬದಿಯ ಹಿಂದಿನ ಬಾಗಿಲಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಬಾಗಿಲು  ಸಂಪೂರ್ಣ ಜಖಂ ಗೊಂಡಿರುತ್ತದೆ.

 

9.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 05-4-2015 ರಂದು ಬೆಳಿಗ್ಗೆ 07.45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮಲ್ಲಪ್ಪ ರವರು ತನ್ನ ಬಾಬ್ತು ಕೆಎ-37-ಯು-7313 ನೇ ನಂಬ್ರದ ಬ್ಯೆಕಿನಲ್ಲಿ ಲಿಂಗರಾಜ್ ಎಂಬವರನ್ನು ಸಹ ಸವಾರರನ್ನಾಗಿ ಕರೆದುಕೊಂಡು ಬ್ಯೆಕಂಪಾಡಿಯಿಂದ ಮಂಗಳೂರು ರಿಗೆ ರಾ,ಹೆ.66 ರಲ್ಲಿ ಮಂಗಳೂರು ಕಡೆಗೆ ಹಾದುಹೋಗುವ ಎಕಮುಖ ರಸ್ತೆಯ ಬಂಗ್ರ ಕುಳೂರಿನ ಕಿರು ಸೇತುವೆ ದಾಟಿ ಸ್ವಲ್ಪ ಮುಂದೆ ಕರಾವಳಿ ಕಾಲೇಜಿನ ಎದುರಿನ ರಸ್ತೆಯ ಸಮೀಪ ಏಕ ಮುಖ ರಸ್ತೆಗೆ ವಿರುದ್ದ ದಿಕ್ಕಿನಲ್ಲಿ ಕೆಎ-20-ಸಿ-9634 ನೇ ನಂಬ್ರದ ದುರ್ಗಾಂಬ ಹೆಸರಿನ ಬಸ್ಸಿ ನ ಚಾಲಕನು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಾಲಯಿಸಿಕೊಂಡು ಬಂದು ಬ್ಯೆಕಿಗೆ ಢಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರು ಬ್ಯೆಕ್ ಸಮೇತ ರಸ್ತೆಗೆ ಬಿದ್ದು ತನ್ನ ಬಲಗಾಲಿನ ಮೊಣ ಗಂಟಿನ ಮೂಳೆಮುರಿತದ ಗಾಯವಾಗಿ ಚಿಕಿತ್ಸೆಗಾಗಿ ಮಂಗಳೂರು ಎಜೆ ಆಸ್ಪತ್ರೆ ದಾಖಲಾಗಿರುತ್ತಾರೆ.

 

10.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ದಿನಾಂಕ 04-04-2015 ರಂದು ಮಹಿಳೆ, ಪ್ರಾಯ 38 ವರ್ಷ ಎಂಬವರು ಸಂಜೆ 4-30 ಗಂಟೆಗೆ ಮಂಗಳೂರು ಜೆಪ್ಪು ಮಾರ್ಕೆಟ್ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋಗಿದ್ದು, ನಂತರ ಫಿರ್ಯಾದುದಾರರು ಫಿರ್ಯಾದುದಾರರ ಹೆಂಡತಿಯನ್ನು ಪಕ್ಕದ ಮನೆಯಲ್ಲಿ ಹಾಗೂ ಸಂಬಂದಿಕರ ಮನೆಯಲ್ಲಿ ವಿಚಾರಿಸಿಕೊಂಡರೂ ಪತ್ತೆಯಾಗದೇ ಇದ್ದು, ನಂತರ ಫಿರ್ಯಾದುದಾರರ ಭಾವನೊಂದಿಗೆ ಸಂಬಂದಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.

 

11.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ: ಪಿರ್ಯಾದುದಾರರಾದ ಶ್ರೀ ಗೋವಿಂದ ಮತ್ತು ಅವರ ಸ್ನೇಹಿತ ರವಿ ಎಂಬವರು ಕೆಲಸದ ನಿಮಿತ್ತ ದಿನಾಂಕ 03-04-2015 ರಂದು ಮಂಗಳೂರಿಗೆ ಹೋದವರು, ಅದೇ ದಿನ ವಾಪಾಸು ಕೋಣಾಜೆ ಕಡೆಗೆ ಹೋಗುವ ಕೆಎಸ್ಆರ್ಟಿ ಬಸ್ಸು ನಂಬ್ರ KA 40 F 906 ನೇಯದರಲ್ಲಿ ಪ್ರಯಾಣಿಸುತ್ತಿದ್ದು, ಬಸ್ಸು ರಾತ್ರಿ 8-15 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು, ಕೋಟೆಕಾರು ಗ್ರಾಮದ ಪನೀರ್ಎಂಬಲ್ಲಿ ತಲುಪುತ್ತಿದ್ದಂತೆ, ಅಲ್ಲಿ ಕ್ಯಾಂಟೀನ್ವೊಂದರಲ್ಲಿ ಕೆಲಸದ ಬಗ್ಗೆ ಮಾತನಾಡುವರೇ ಬಸ್ಸು ನಿಂತಾಗ ರವಿ ಬಸ್ಸಿನಿಂದ ಮೊದಲಾಗಿ ಇಳಿದ ಬಳಿಕ, ಪಿರ್ಯಾದುದಾರರು ಇಳಿಯುತ್ತಿದ್ದಂತೆ ಬಸ್ಸಿನ ಚಾಲಕ ಒಮ್ಮಲೇ ಬಸ್ಸನ್ನು ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಾಲಾಯಿಸಿರುವುದರಿಂದ ಪಿರ್ಯಾದುದಾರರು ಬಸ್ಸಿನಿಂದ ಕೆಳಕ್ಕೆ ಬಿದ್ದು, ತಲೆಗೆ ಗುದ್ದಿದಗಾಯ, ಎಡ ಕಣ್ಣಿನ ಬಳಿ ರಕ್ತಗಾಯ, ಎಡಭುಜಕ್ಕೆ ತರಚಿದ ಗಾಯ ಉಂಟಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರನ್ನು ಬಸ್ಸು ಚಾಲಕ ಕೆ.ಎಸ್ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿರುವುದಾಗಿದೆ.

 

12.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ:  ದಿನಾಂಕ. 5-4-2015 ರಂದು ರಾತ್ರಿ ಹೊತ್ತಿಗೆ ಫಿರ್ಯಾದಿದಾರರಾದ ಶ್ರೀ ಅಬ್ದುಲ್ ಸತ್ತಾರ್ ರವರು ತೊಕ್ಕೊಟು ಅನುರಾಗ್ ಬಾರ್ ನಲ್ಲಿ ಊಟ ಮಾಡಿ ನಂತರ ಅವರಿಗೆ ಬಸ್ಸು ತಪ್ಪಿ ತಲಪಾಡಿ ಕಡೆಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸಿದವರು 10-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕೊಲ್ಯ ಎಂಬಲ್ಲಿ ಬಸ್ಸಿನಿಂದ ಇಳಿದು ತೊಕ್ಕೊಟು ಕಡೆಗೆ ತಿರುಗಿ ಬರುವ ಬಗ್ಗೆ ರಸ್ತೆಯಲ್ಲಿದ್ದ ಸಾರ್ವಜನಿಕರಲ್ಲಿ ಫಿರ್ಯಾದಿದಾರರು ಮಾತಾಡಿದಾಗ ಅವರೊಳಗೆ ಮಾತಿಗೆ ಮಾತಾಗಿ ಗುರುತು ಪರಿಚಯವಿಲ್ಲದ ಆರೋಪಿಗಳು ಫಿರ್ಯಾದಿದಾರರನ್ನು ಅತ್ತಿತ್ತ ಹೋಗದಂತೆ  ಸುತ್ತುವರಿದು ಅವಾಚ್ಯಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿರುತ್ತಾರೆ.

 

1 comment: