Friday, April 3, 2015

Daily Crime Reports : 03-04-2015

ದೈನಂದಿನ ಅಪರಾದ ವರದಿ.
ದಿನಾಂಕ 03.04.201510:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.
 
ಕೊಲೆ  ಪ್ರಕರಣ
:
0
ಕೊಲೆ  ಯತ್ನ
:
1
ದರೋಡೆ ಪ್ರಕರಣ
:
0
ಸುಲಿಗೆ ಪ್ರಕರಣ
:
0
ಹಲ್ಲೆ ಪ್ರಕರಣ   
:
4
ಮನೆ ಕಳವು ಪ್ರಕರಣ
:
0
ಸಾಮಾನ್ಯ ಕಳವು
:
0
ವಾಹನ ಕಳವು
:
0
ಮಹಿಳೆಯ ಮೇಲಿನ ಪ್ರಕರಣ
:
0
ರಸ್ತೆ ಅಪಘಾತ  ಪ್ರಕರಣ
:
2
ವಂಚನೆ ಪ್ರಕರಣ        
:
0
ಮನುಷ್ಯ ಕಾಣೆ ಪ್ರಕರಣ
:
0
ಇತರ ಪ್ರಕರಣ
:
4
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 01-04-2015ರಂದು ಸಂಜೆ 6-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಹಾಜಿ ಜೆ. ಮೊಹಮ್ಮದ್ ರವರು ಮನೆಯಲ್ಲಿ ಇಲ್ಲದ ಸಮಯ ಬಿಳಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ  4 ಜನರು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರ ಹೆಂಡತಿಯಲ್ಲಿ  ಪಿರ್ಯಾದಿದಾರರನ್ನು ವಿಚಾರಿಸಿ, ಬಳಿಕ ಪಿರ್ಯಾದಿದಾರರಿಗೆ  ಮುತಾಲಿಬ್ ಎಂಬವರು ಫೋನ್ ಕರೆ ಮಾಡಿ ನಾವು ಮನ್ಸೂರ್ ಕಡೆಯವರು ಹಣ ವಸೂಲಿ ಮಾಡಲು ಬಂದವರು, ಈಗಲೇ ಹಣ ಕೊಡಬೇಕೆಂದು ಹೇಳಿ ಅಚಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ನೀಡಿರುತ್ತಾರೆಪಿರ್ಯಾದಿದಾರರ ಅಕ್ಕನ ಮಗ ಉಮ್ಮರ್ ಫಾರೂಕ್ ನು ಮನ್ಸೂರ್ ಎಂಬವರಿಗೆ ವ್ಯಾಪಾರದ ಬಾಬ್ತು ಹಣ ಕೊಡಲು ಬಾಕಿ ಇದ್ದು ಈ ಹಣದ ಹೊಣೆಗಾರಿಕೆಯನ್ನು ಪಿರ್ಯಾದಿದಾರರು ವಹಿಸಿಕೊಂಡಿದ್ದು ಕ್ಲಪ್ತ ಸಮಯಕ್ಕೆ ಹಣ ಕೊಡಲಾಗದೇ ಇರುವುದರಿಂದ ಮನ್ಸೂರ್ ನ ದುಷ್ಪ್ರೇರಣೆಯಿಂದ ಆರೋಪಿಗಳು ಈ ಕೃತ್ಯ ಮಾಡಿದ್ದಾಗಿದೆ.
 
2.ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಕುಶಿ ರವರು ಮಂಗಳಮುಖಿಯಾಗಿದ್ದು, ಅವರು ಬೇಡಿ ಸಂಪಾದಿಸಿದ ಹಣದಿಂದ ಆರೋಪಿತರಾದ ರಾಣಿ ಮಂಗಳಮುಖಿ ಕಡೆಯವರು ಹಿಂದಿನಿಂದಲೂ ಕೇಳುತ್ತಿದ್ದು ಇದನ್ನು ಪಿರ್ಯಾದಿದಾರರು ಕೊಡದ್ದರಿಂದ ರಾಣಿ ಕಡೆಯವರು ಹಗೆಯಲ್ಲಿದ್ದು ಇದೇ ಕಾರಣದಿಂದ ದಿನಾಂಕ 01-04-2015 ರಂದು ರಾತ್ರಿ 8-00 ಗಂಟೆಗೆ ಬಾಳ ಗ್ರಾಮದ ಬಿ ಎ ಎಸ್ ಎಪ್ ಬಳಿ ಯಮುನಾ, ಸಪ್ನ ಮತ್ತು ರಾಣಿ ರಿಕ್ಷಾದಲ್ಲಿ ಬಂದು ಯಮುನಾ ಜಲ್ಲಿಕಲ್ಲಿನಿಂದ ಪಿರ್ಯಾದಿದಾರರಿಗೆ ಹೊಡೆದು ಗಾಯವುಂಟು ಮಾಡಿರುವುದಾಗಿದೆ.
 
3.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-04-2015 ರಂದು ಪಿರ್ಯಾದಿದಾರರಾದ ಶ್ರೀ ನಾಸೀರ್ ರವರು ಎಂದಿನಂತೆ ಫರಂಗಿಪೇಟೆಯಿಂದ ಮಂಗಳೂರಿಗೆ ಕೆಲಸದ ನಿಮಿತ್ತ ಭಾರತ್ ಖಾಸಗಿ ಬಸ್ ನಲ್ಲಿ ಬರುತ್ತಿದ್ದು, ಸಮಯ ಬೆಳಿಗ್ಗೆ 9-30 ಗಂಟೆಗೆ ಸದ್ರಿ ಬಸ್ ಮಂಗಳೂರು ನಗರದ ಕಂಕನಾಡಿ ಕಾಂಚನ ಶೋ ರೂಮ್ ಮುಂಭಾಗ ತಲುಪುವಷ್ಟರಲ್ಲಿ  5 ಬೈಕ್ ನಲ್ಲಿ ಬಂದ 10 ಜನರು ಬಸ್ ನ್ನು ತಡೆದು ನಿಲ್ಲಿಸಿ  ಬಸ್ಸಿನಿಂದ ಇಳಿಸಿ, ಏಕಾಏಕಿ ಕಭ್ಭಿಣದ ರಾಡ್, ಸ್ಟಿಕ್, ಮರದ ಸೋಂಟೆಯಿಂದ ಪಿರ್ಯಾದಿದಾರರಿಗೆ ಹಲ್ಲೆ ನಡೆಸಿ  ಬೈದು ಕೊಲೆ ಬೆದರಿಕೆ ಹಾಕಿ ಪರಾರಿಯಾಗಿರುತ್ತಾರೆ.
 
4.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01.04.2015 ರಂದು ಸಮಯ ಸುಮಾರು ಬೆಳಿಗ್ಗೆ 08.00 ಗಂಟೆಗೆ   ಮೋಟರ್ ಸೈಕಲ್ ನಂಬ್ರ KA19-EK-3814ನ್ನು ಅದರ ಸವಾರ ಸಹ ಸವಾರರೊಬ್ಬರನ್ನು ಕುಳ್ಳಿರಿಸಿಕೊಂಡು ಕುಡುಪು ಕಡೆಯಿಂದ ನಂತೂರು ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಢು ಬಂದು ಕೈಕಂಬ ಪ್ಲಾಮಾ ಬಿಲ್ಡಿಂಗ್ ಎದುರು, ರಸ್ತೆಯ ಇನ್ನೊಂದಿ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಫಿರ್ಯಾದುದಾರರಾದ ಶ್ರೀ ಶಿವಪ್ಪ ಯಮುನಪ್ಪಾ ಲಮಾಣಿ ರವರ ಗೆಳೆಯ ಮಾಂತೇಶ್ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಎಡಕಾಲಿನ ಮೊಣಗಂಟಿಗೆ ಮೂಳೆ ಮುರಿತದ ಗಾಯ,ಹಾಗೂ ಹೊಟ್ಟೆಗೆ ಎದೆಗೆ ತರಚಿದ ಗಾಯ ಉಂಟಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಾಲಾಗಿರುತ್ತಾರೆ.
 
5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕಃ 02-04-2015 ರಂದು ಪಿರ್ಯಾದಿದಾರರಾದ ಶ್ರೀ ದಿನಕರ ರೈ ರವರ ಕುಟುಂಬದ ದೈವಸ್ಥಾನವಿರುವ ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ಕೌಡೂರು ಎಂಬಲ್ಲಿಗೆ ಬಂದವರು ಸಂಜೆ 3-00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ದೈವಸ್ಥಾನದ ಕಡೆಗೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದಾಗ, ಪಿರ್ಯಾದಿದಾರರನ್ನು ಚಂದ್ರಹಾಸ ಅಮೀನ್ ಎಂಬಾತ ಆತನ 4-5 ಜನರೊಂದಿಗೆ ಬಂದು ಲಾರಿಯೊಂದನ್ನು ರಸ್ತೆಗೆ ಅಡ್ಡವಾಗಿರಿಸಿ ಪಿರ್ಯಾದಿದಾರರ ಕಾರನ್ನು ತಡೆದು ನಿಲ್ಲಿಸಿ ನೀನು ಭಾರೀ ನೊಟೀಸು ಕೊಡತ್ತಿಯಾ? ನಿನ್ನನ್ನು ಪಿಸ್ತೂಲಿನಿಂದ ಗುಂಡು ಹಾಕಿ ಕೊಲ್ಲುತ್ತೇನೆ ಎಂದು ಬೆದರಿಸಿದ್ದಲ್ಲದೇ ತನ್ನ ಕೆಎ 19 ಎಎ 1988 , ಕೆಎ 19 ಬಿ 5273, ಕೆಎ 19 ಬಿ 3039 ಮತ್ತು ಕೆಎ 19 ಎಂಡಿ 477 ನಂಬ್ರದ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿಕೊಂಡು , ಪಿರ್ಯಾದಿದಾರರ ವಾಹನವನ್ನು ಅತ್ತಿಂದಿತ್ತ ತೆಗೆಯಲು ಸಾಧ್ಯವಾಗದ ರೀತಿಯಲ್ಲಿ ತಡೆದು ಬೆದರಿಕೆಯೊಡ್ಡಿರುತ್ತಾರೆ.
 
6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ಗಂಗಾಧರ ರವರು ಚಂದ್ರಹಾಸ ಅಮೀನ್ ರವರ ಕೋರೆಯಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 02-04-2015 ರಂದು ಮಂಗಳೂರಿಗೆ ಜಲ್ಲಿ ಲೋಡು ಮಾಡಿಕೊಂಡು ಹೋದವರು ಅಲ್ಲಿ ಅನ್ ಲೋಡ್ ಮಾಡಿ ಅಲ್ಲಿಂದ ವಾಪಸು ಬರುತ್ತಿದ್ದಾಗಪಿರ್ಯಾದಿದಾರರ ಪರಿಚಯದ ರಾಮಚಂದ್ರ ಎಂಬವರು ಕಾಣಸಿಕ್ಕಿದ್ದು, ಅವರನ್ನು ಟಿಪ್ಪರ್ ನಲ್ಲಿ ಕುಳ್ಳಿರಿಸಿಕೊಂಡು ಬರುತ್ತಿದ್ದವನು ಮಧ್ಯಾಹ್ನ ಸುಮಾರು 2-15 ಗಂಟೆಗೆ ಕಂದಾವರ ಗ್ರಾಮದ ಕೈಕಂಬ  ಎಂಬಲ್ಲಿರುವ ಕುಳವೂರು ಗ್ಯಾರೇಜಿನ ಎದುರು ಪಿರ್ಯಾದಿದಾರರ ಬಾಬ್ತು ಲಾರಿಗೆ ಕೆಎ 21 ಎನ್ 6457 ನಂಬ್ರದ ಕಾರನ್ನು ಅದರ ಚಾಲಕ ಅಡ್ಡವಾಗಿ ತಂದು ನಿಲ್ಲಿಸಿ ತಡೆದಾಗ, ಅದರಿಂದ ಕೆಳಗಿಳಿದ ಪಿರ್ಯಾದಿದಾರರಿಗೆ ಪರಿಚಯದ ದಿನಕರ್ ರೈ, ಪ್ರಸಾದ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಮತ್ತಿತರರು ಕಾರಿನಿಂದ ಕೆಳಗಿಳಿದು ಬಂದು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಬೆದರಿಕೆ ಒಡ್ಡಿರುವುದಾಗಿದೆ.
 
7.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರ ಮಹಿಳೆಯು ಮಂಗಳೂರು ವಿಮಾನ ನಿಲ್ದಾಣದಲ್ಲಿ ವುಡ್ಸ್ ವರ್ಥ್  ಬುಕ್ ಸ್ಟಾಲ್ ನಲ್ಲಿ  ಕೆಲಸ  ಮಾಡುತ್ತಿದ್ದು ತನ್ನ ಜೊತೆ ಕೆಲಸ ಮಾಡುತ್ತಿದ್ದ ಮಹಿಳೆಯು ಕಾಫಿ ಡೇ ಸ್ಠಾಲ್ ನಲ್ಲಿ ಕೆಲಸ ಮಾಡುವ ಅನ್ಸಾರ್ ಎಂಬಾತನಲ್ಲಿ ಹಣ ಕೇಳಿದಳೆಂಬ ವಿಚಾರವನ್ನು ಪಿರ್ಯಾದುದಾರರು ದಿನಾಂಕ 02/04/2015 ರಂದು ಬೆಳಗ್ಗೆ  ಮಹಿಳೆಯಲ್ಲಿ ವಿಚಾರಿಸಿದಾಗ ಆಕೆಯು ತಾನು ಆತನಲ್ಲಿ ಹಣ ಕೇಳಿಲ್ಲವಲ್ಲ ಎಂದು ತಿಳಿಸಿ ಆ ವಿಚಾರವಾಗಿ  ಅನ್ಸಾರ್ ನಲ್ಲು ಹೋಗಿ ವಿಚಾರಿಸಿದ್ದು ಆದನ್ನು ಕೇಳಿ ಕೋಪಗೂಂಡ ಅನ್ಸಾರ್ ನು ಸಂಜೆ 03-00 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ತನ್ನ ಸ್ಟಾಲ್ ನಲ್ಲಿ ವ್ಯಾಪಾರ ನಡೆಸುತ್ತಿದ್ದ ಪಿರ್ಯಾದುದಾರರ ಬಳಿ ಬಂದು "ನೀನು ಯಾಕೆ ಅವಳಲ್ಲಿ ಸುಳ್ಳು  ಹೇಳಿದ್ದಿ" ಎಂದು ಅವಾಚ್ಯವಾಗಿ  ಬೈದವನು  ಆಕೆಯನ್ನು ಮಹಿಳೆ ಎಂದು  ಕೂಡ ನೋಡದೆ ಮೈ ಮೇಲೆ ಕೈ ಹಾಕಿ ಎಳೆದಾಡಿ ಬಲ ಕೆನ್ನೆ ಗೆ ಹಾಗೂ ಕಿವಿಗೆ  ಕೈ ಯಿಂದ ಹೊಡೆದು ಜಖಂ ಉಂಟು ಮಾಡಿದಲ್ಲದೆ ಸಾಯಿಸದೆ ಬಿಡುವುದಿಲ್ಲವೆಂದು  ಜೀವ ಭಯದ ಬೆದರಿಕೆಯೂಡ್ಡಿರುವುದಾಗಿದೆ.
 
8.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-2015 ರಂದು ಮಧ್ಯಾಹ್ನ 3-30 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಫಾರೂಕ್ ಎಂ. ರವರು ತನ್ನ ಬಾಬ್ತು ಮೋಟಾರು ಬೈಕ್ ನಂ ಕೆ.. 19 .ಎನ್. 5921  ನೇದ ನ್ನು ತೋಡಾರಿನಿಂದ ಮಂಗಳೂರು ಕಡೆಗೆ ಚಲಾಯಿಸಿಕೂಂಡು ಹೋಗುತ್ತಿರುವಾಗ ಮಂಗಳೂರು ತಾಲ್ಲೂಕು ಬಡಗ ಎಡಪದವು ಗ್ರಾಮದ ಗರಡಿ ಬಳಿ ತಲಪುವಾಗೈ ಕೈಕಂಬದಿಂದ ಮೂಡಬಿದ್ರೆ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ನಂಬ್ರ  ಕೆ.. 20 . 6771  ನೇ ದರ ಚಾಲಕನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ತೀರ ಬಲ ಬದಿಗೆ ಬಂದು ಡಿಕ್ಕಿ ಹೂಡೆದ ಪರಿಣಾಮ ಮೋಟಾರು ಬೈಕ್ ಸಮೇತ ಪಿರ್ಯಾದುದಾರರು ರಸ್ತೆ ಮೇಲೆ ಬಿದ್ದ ಪರಿಣಾಮ ಎಡಕಾಲಿನ ಮೋಣಗಂಟಿಗೆ ರಕ್ತಗಾಯವಾಗಿದ್ದು, ಬಲಭುಜ, ತಲೆಯ ಮೇಲೆ, ಹೊಟ್ಟೆಯ ಬಳಿ, ಬಲಬದಿಯ ಮುಖದ ಮೇಲೆ ತರಚಿದ ಗಾಯವಗಿದ್ದು ಹಾಗೂ ಮೋಟಾರು ಬೈಕ್ ನ ಮುಂಭಾಗ ಸಂಪೊರ್ಣ ಜಖಂ ಆಗಿದ್ದು  ಈ ಅಪಘಾತ ಕ್ಕೆ ಕೆ.. 20 . 6771  ನೇ ದರ ಟಿಪ್ಪರ್ ಚಾಲಕನ ಚಾಲನೆಯೇ  ಕಾರಣವಾಗಿರುತ್ತದೆ.
 
9.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-04-2015 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದುದಾರರಾದ ಶ್ರೀ ಫರ್ಹಾನ್ ರವರು ಹಾಗೂ ಅವರ ಗೆಳೆಯರಾದ ಅಪ್ತಾಬ್, ತೌಸಿಫ್, ಮತ್ತು ಮುಜಾಂಬಿರ್ ರವರೊಂದಿಗೆ ಪಾಂಡೇಶ್ವರದ ಫಾರಂ ಮಾಲ್ ಗೆ ಇಂಗ್ಲೀಷ್ ಸಿನೆಮಾ ನೋಡಲು ತೆರಳಿದ್ದರು. ರಾತ್ರಿ 12-30 ಗಂಟೆಗೆ ಮೂವಿ ಮುಗಿದು ಮೆನಗೆ ಹೋಗಲು ರಸ್ತೆ ಬದಿಯ್ಲಲಿ ನಿಲ್ಲಿಸಿದ್ದ ಬೈಕ್ ಗಳ ಬಳಿಗೆ ಬಂದಾಗ ಗುರುತು ಪರಿಚಯದ ತಂಶೀರ್, ಅಭಿಷೇಕ್ ಮತ್ತು ನೀತು @ ನಿತೇಶ್ ರವರು ಅಕ್ರಮ ವಾಗಿ ತಡೆದು ನಿಲ್ಲಿಸಿ "ನಿಮಗೆ ಭಾರಿ ಅಹಂಕಾರವಾ, ನೀವು ಆವತ್ತು ನ್ಯೂ ಈಯರ್ ಪಾರ್ಟಿ ನಿಲ್ಲಿಸಿದ್ದಿರಾ, ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ" ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು, ಒಮ್ಮಲೆ ಎಲ್ಲರೂ ಸುತ್ತುವರಿದೂ ಕೈಗಳಿಂದ ಹೊಡೆದು, ಕಾಲಿನಿಂದ ತುಳಿದು, ಅಬಿಷೇಕನು ಅಲ್ಲಿಯೇ ಇದ್ದ ಒಂದು ಸಿಮೆಂಟಿನ  ಇಂಟರ್ ಲಾಕಿನ ತುಂಡಿನಿಂದ ಕೊಲೆ ಮಾಡುವ ಉದ್ದೇಶದಿಂದ ಫರ್ಹಾನ್ ರವರ ತಲೆಯ ಎಡಬದಿಗೆ ಹೊಡೆದು ರಕ್ತಗಾಯಗೊಳಿಸಿರುತ್ತಾನೆ. ನಂತರ "ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ನಮ್ಮ ತಂಟೆ ತಕರಾರಿಗೆ ಬಂದರೆ ಇದೇ ಗತಿ" ಎಂದು ಜೀವ ಬೆದರಿಕೆ ಹಾಕಿ ಆರೋಪಿಗಳು ಆಕ್ಟಿವಾ ಹೊಂಡಾದಲ್ಲಿ ಪರಾರಿಯಾಗಿರುತ್ತಾರೆ. ನಂತರ ತೌಸಿಫ್ ನು ಆತನ ಸ್ಕೂಟರಿನಲ್ಲಿ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾನೆಈ ಕೃತ್ಯಕ್ಕೆ ಕಾರಣವೇನೆಂದರೆ ಸುಮಾರು ಎರಡು ವರ್ಷದ ಮೊದಲು ತಂಶಿರ್ ನ ಕಡೆಯವರಿಗೂ ಫಿರ್ಯಾದುದಾರರ ನಡುವೆ ನಡೆದ ಗಲಾಟೆ ಕಾರಣವಾಗಿರುತ್ತದೆ.
 
10.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31-03-2015 ರಂದು ರಾತ್ರಿ ಸುಮಾರು 9-30 ಗಂಟೆ ಸಮಯಕ್ಕೆ ಮೊಂಟೆ ಪದವು, ಮಂಜನಾಡಿಯಲ್ಲಿ ರಸ್ತೆ ಅಪಘಾತದಲ್ಲಿ ಗಂಭೀರ ಸ್ಥಿತಿಯಲ್ಲಿ ಗಾಯಗೊಂಡ ಇಬ್ಬರು ಮಕ್ಕಳಾದ ತಮೀಮ್‌ (15) ಹಾಗು ಜಾಕೀರ್‌ (15) ರವರನ್ನು ಚಿಕಿತ್ಸೆಯ ಬಗ್ಗೆ  ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ತುರ್ತು ನಿಗಾ ಘಟಕಕ್ಕೆ  ದಾಖಲು ಮಾಡಿದ್ದುಈ ಇಬ್ಬರು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಸಮಯ ಸುಮಾರು 15 ಜನರ ಗುಂಪು ಏಕಾ ಏಕಿಯಾಗಿ ತುರ್ತು ನಿಗಾ ಘಟಕದ ಒಳಗಡೆ ಬಂದು  ಜಾಕೀರ್ಎಂಬ ಹೆಸರಿನ ಗಾಯಳುವನ್ನು ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯುವುದಾಗಿ ಹೇಳಿ, ವೈದ್ಯರ ಮಾತನ್ನು ಕೇಳದೆ ಒತ್ತಾಯ ಮಾಡಿ, ಇನ್ನು ಹೆಚ್ಚಿನ ಜನರ ಗುಂಪು ಆಸ್ಪತ್ರೆಯ ತುರ್ತು ನಿಗಾ ಘಟಕದ ಒಳಗೆ ಬಂದು ವೈದ್ಯರ ಜೊತೆ ಅಸಭ್ಯವಾಗಿ ವರ್ತಿಸಿ, ಬಾಗಿಲಿನ ಗಾಜಿನ ಫ್ರೇಮ್ಹಾಳುಗೆಡವಿರುತ್ತಾರೆಅಂಬುಲೆನ್ಸ್ವಾಹನದಲ್ಲಿ ಗಾಯಳುವನ್ನು ತುರ್ತು ನಿಗಾ ಘಟಕದ 03 ವೈದ್ಯರಾದ ಡಾ| ವಿರಾಜ್‌, ಡಾ| ವಿನಯ್, ಡಾ| ಬಿಜಿತ್ ರವರುಗಳು ಗಾಯಳುವನ್ನು ಅಂಬುಲೆನ್ಸ್ ವಾಹನಕ್ಕೆ ಶಿಫ್ಟ್ ಮಾಡಲು ಅಂಬುಲೆನ್ಸ್ವಾಹನದ ಒಳಗಡೆ ಹೋದಾಗ ಬಲವಂತವಾಗಿ  ಜನರ ಗುಂಪು ಅಂಬುಲೆನ್ಸ್ ವಾಹನದ ಬಾಗಿಲನ್ನು ಮುಚ್ಚಿ  ವೈದ್ಯರುಗಳನ್ನು ಇಳಿಯದಂತೆ ಹೆದರಿಸಿ, ನಂತರ ಅಂಬುಲೆನ್ಸ್ವಾಹನದ ಚಾಲಕನಿಗೆ ವಾಹನವನ್ನು ಚಲಾಯಿಸದಿದ್ದಲ್ಲಿ  ಕೊಂದು ಬಿಡುವುದಾಗಿ  ಹೆದರಿಸಿ ಇಂಡಿಯಾನ ಆಸ್ಪತ್ರೆಗೆ ಅಪಹರಿಸಿಕೊಂಡು ಹೋಗಿರುವುದಾಗಿದೆ.
 
11.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಫಿರ್ಯಾದಿದಾರರಾದ ಶ್ರೀ ವಿಜೇಂದ್ರ ಶೆಟ್  ಹಾಗೂ ಅವರ ಪತ್ನಿ ದೀಪಾ ಶೇಟ್ ರವರ ಮಧ್ಯೆ ಕೌಟುಂಬಿಕ ಕಲಹ ಇದ್ದು, ಈ ಬಗ್ಗೆ ಸಂಬಂಧಿಸಿ ಕುಟುಂಬ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಫಿರ್ಯಾದಿದಾರರ ಪತ್ನಿ ದೀಪಾ ಶೇಟ್ ರವರು ಫಿರ್ಯಾದಿದಾರರ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಒಳ ಸಂಚು ನಡೆಸಿ ಕೊಲೆ ಮಾಡಿಸುವುದಾಗಿ ಫಿರ್ಯಾದಿದಾರರ ಮ್ಯಾನೆಜರ್ ಗೆ ದೀಪಾ ರವರ ಮೊಬೈಲ್ ದೂರವಾಣಿಯಿಂದ ಕರೆ ಮಾಡಿ ತಿಳಿಸಿದ್ದು, ಈ ವಿಚಾರವನ್ನು ಫಿರ್ಯಾದಿದಾರರ ಮ್ಯಾನೆಜರ್ ರವರು ವಿಜೇಂದ್ರ ಶೇಟ್ ರವರಿಗೆ ತಿಳಿಸಿದ್ದು, ಇದರಿಂದ ಫಿರ್ಯಾದಿದಾರರು ಭಯಗೊಂಡು, ತನ್ನ ಪತ್ನಿ ದೀಪಾ ಮತ್ತು  ಅವರ ತಾಯಿ ಶಕುಂತಲಾ, ದೀಪಾರವರ ಅಕ್ಕ ಚಂದ್ರ ಕಲಾ  ರವರಿಂದ ಜೀವಕ್ಕೆ ಹಾಗೂ ಆಸ್ತಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂಬುದಾಗಿ ದೂರು ನೀಡಿರುವುದಾಗಿದೆ.
 

1 comment: