Monday, August 25, 2014

Daily Crime Reports 25-08-2014

ದೈನಂದಿನ ಅಪರಾದ ವರದಿ.

ದಿನಾಂಕ 25.08.201410:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

5

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23.08.2014 ರಂದು 13.00 ಗಂಟೆಗೆ  ಫಿರ್ಯಾದುದಾರರಾದ ಶ್ರೀ ರಾಜು ರವರು ಕೈಕಂಬ- ಮರೋಳಿ ಬಳಿಯ  ಕೊದಂಡರಾಮ ಹೋಟೆಲ್ ಕಡೆಗೆ ಹೋಗುವರೇ ನಂತೂರು ಕಡೆಯಿಂದ ಪಡೀಲ್ ಕಡೆಗೆ ಹೋಗುವ ರಸ್ತೆಯನ್ನು ದಾಟಿ ಪಡೀಲ್ ಕಡೆಯಿಂದ ನಂತೂರು ಕಡೆಗೆ ಬರುವ  ರಸ್ತೆ ದಾಟಲು ರಸ್ತೆ ಬದಿ ನಿಂತಿರುವಾಗ ಮಾರುತಿ ಒಮ್ನಿ ನಂಬ್ರ KA19-MB-1360 ನ್ನು ಅದರ ಚಾಲಕನು ಏಕಮುಖ ರಸ್ತೆಯಲ್ಲಿ ವಿರುದ್ದ ದಿಕ್ಕಿನಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಹಾಗೂ ಬಲ ಎದೆಗೆ  ಹಾಗೂ ಬೆನ್ನಿಗೆ ಗುದ್ದಿದ ಗಾಯಗೊಂಡು ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರಥಮ ಚಿಕೆತ್ಸೆ ಪಡೆದು ನಂತರ ಹೆಚ್ಚಿನ ಚಿಕೆತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 24.08.2014 ರಂದು ಸಮಯ ಸುಮಾರು 17.30 ಗಂಟೆಗೆ  ಕಾರು ನಂಬ್ರ KA02-P-8280 ನ್ನು ಅದರ ಚಾಲಕ ನಂತೂರು ಕಡೆಯಿಂದ ಕದ್ರಿ ಪಾರ್ಕು ಕಡೆಗೆ  ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಕೊಚ್ಚಿನ್ ಬೇಕರಿ ಎದುರು ಪಾರ್ಕು ಮಾಡಿದ್ದ ಫಿರ್ಯಾದುದಾರರಾದ ಶ್ರೀ ರಾಧಾಕೃಷ್ಣ ರಾವ್ ರವರ ಕಾರು ನಂಬ್ರ  KA19-MA-2125ಕ್ಕೆ ಡಿಕ್ಕಿ ಮಾಡಿದ ಪರಿಣಾಮ, ಕಾರಿನ ಹಿಂಭಾಗದ ಬಂಪರ್ ಮತ್ತು ಹಿಂಭಾಗದ ಟೈರ್ ಮೇಲ್ಗಡೆ ಜಖಂ ಉಂಟಾಗಿರುತ್ತದೆ.

 

3.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23.08.2014ರಂದು 15:00 ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಪೌಲ್ ಗೋವಿಯಸ್ ಎಂಬವರು ಹೊಸಬೆಟ್ಟು ಗ್ರಾಮದ ಕರಿಂಗಾಣ ಎಂಬಲ್ಲಿರುವ ತನ್ನ ಮನೆಯ ಅಂಗಳದಲ್ಲಿ ತನ್ನ ಮಗ ಸ್ವಾನೀ ಗೋವಿಯಸ್ ಎಂಬವರು ಜೊತೆಯಲ್ಲಿರುವಾಗ ಪಿರ್ಯಾದಿಯ ಕಡೆಯ ಮಗ ಆರೋಪಿ ಡಾಲ್ಪಿ ಗೋವಿಯಸ್ ಎಂಬವನು ಪಿರ್ಯಾದಿಯನ್ನು ಉದ್ದೆಶಿಸಿ ಅವಾಚ್ಯ ಶಬ್ದದಿಂದ ಬೈದು ಅವಮಾನಪಡಿಸಿ ಮುಂಗೈಯಿಂದ ಪಿರ್ಯಾದಿಯ ಬಲಕೈ ತೋಳಿಗೆ ಗುದ್ದಿ ನೋವನ್ನುಂಟು ಮಾಡಿ ಸ್ವಾನೀ ಗೋವಿಯಸ್ ಎಡ ಕೆನ್ನೆಗೆ ಕೈಯಿಂದ ಥಳಿಸಿ ಹಲ್ಲೆಯನ್ನು ಮಾಡಿದ್ದಲ್ಲದೆ ಮನೆಯೋಳಗೆ ಅಕ್ರಮ ಪ್ರವೇಶವನ್ನು ಮಾಡಿ ಕತ್ತಿಯಿಂದ ಕಡಿದು ಹಾಕುತ್ತೆನೆ ಎಂಬಿತ್ಯಾದಿ ಜಮೀನಿನ ವಿಚಾರದಲ್ಲಿ ಕೊಲೆ ಬೆದರಿಕೆಯನ್ನು ಒಡ್ಡಿರುವುದಾಗಿದೆ.

 

4.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23/08/2014 ರಂದು ರಾತ್ರಿ ಸುಮಾರು 22:15 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪಡುಮಾರ್ನಾಡು ಗ್ರಾಮದ ಕೇಪುಲು ಕಡೆಗೆ ಹೋಗುವ ಕ್ರಾಸ್ ಬಳಿ ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿದಾರರಾದ ಶ್ರೀ ಮಣಿಕಾಂತಾ ಎನ್. ರವರು ತನ್ನ ಸ್ನೇಹಿತ ಜಾನ್ ಕೊಡ್ದೆರೊ ಎಂಬವರೊಂದಿಗೆ, ಅವರ ಸ್ನೇಹಿತ ಚೇತನ್ ಪ್ರಸಾದರವರು ಹೊಸದಾಗಿ ಖರೀದಿಸಿದ ನಂಬ್ರ ಪ್ಲೇಟ್ ಇಲ್ಲದ ಮೋಟಾರು ಸೈಕಲ್ ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಮೋಟಾರು ಸೈಕಲ್ ನ್ನು ಜಾನ್ ಕೊಡ್ದೆರೊರವರು ಸವಾರಿ ಮಾಡುತ್ತಿದ್ದ ಮೋಟಾರು ಸೈಕಲ್  ಮಂಗಳೂರು ಕಡೆಯಿಂದ ಕಾರ್ಕಳ ಕಡೆ ಬರುತ್ತಿದ್ದ KA 19 AA 937 ನೇ ನಂಬ್ರದ ಇಂಡಿಕಾ ಕಾರು ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ, ರಸ್ತೆಯ ಬಲಬದಿಗೆ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿ ಮತ್ತು ಮೋಟಾರು ಸೈಕಲ್ ಸವಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಬಲಕೈಗೆ ಮತ್ತು ಬಲಕಾಲಿಗೆ ರಕ್ತ ಗಾಯ ಮತ್ತು ಗುದ್ದಿದ ಗಾಯ ಉಂಟಾಗಿದ್ದು, ಮೋಟಾರು ಸೈಕಲ್ ಸವಾರ ಜಾನ್ ಕೊಡ್ದೆರೊರವರಿಗೆ  ಬಲಕೈ ಹಾಗೂ ಬಲಕಾಲಿಗೆ ಮುರಿತದ ತೀವ್ರ ತರಹದ ಗಾಯ ಉಂಟಾಗಿದ್ದು, ಎಡ ಕೆನ್ನೆಗೆ ರಕ್ತಗಾಯವುಂಟಾಗಿದ್ದು,  ಗಾಯಾಳು ಪಿರ್ಯಾದಿದಾರರು ಇಂಡಿಯನ್ ಆಸ್ಪತ್ರೆಯಲ್ಲಿ ಚಿಕ್ಸಿತೆ ಪಡೆಯುತ್ತಿದ್ದು, ಗಾಯಾಳು ಮೋಟಾರು ಸೈಕಲ್ ಸವಾರ ಜಾನ್ ಕೊಡ್ದೆರೊರವರು ಹೆಚ್ಚಿನ ಚಿಕ್ಸಿತೆಯ ಬಗ್ಗೆ  ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ  ಅಲ್ಲದೇ ಅಘಾತದಿಂದ ವಾಹನಗಳೆರಡೂ ಜಖಂಗೊಂಡಿರುತ್ತವೆ.

 

5.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-08-2014 ರಂದು ರಾತ್ರಿ 8-00 ಗಂಟೆ ಸಮಯ ಪಿರ್ಯಾದಿದಾರರಾದ ಶ್ರೀ ಮಾಧವ ಕುಲಾಲ್ ರವರು ತನ್ನ ಬಾಬ್ತು ಮೋಟಾರ್ಸೈಕಲ್ಕೆಎ 19 ಯು 349 ನೇದರಲ್ಲಿ ಸಹ ಸವಾರ ರೋಶನ್ರವರನ್ನು ಕುಳ್ಳಿರಿಸಿಕೊಂಡು ತನ್ನ ಮನೆಯಾದ ಕೊಳಂಬೆಗೆ ಹೋಗುತ್ತಿರುವಾಗ ಕೆಂಜಾರು ಅಂತೋನಿಕಟ್ಟೆ ಎಂಬಲ್ಲಿ ತಲಪುತ್ತಿದ್ದಂತೆ ಎದುರು ಗಡೆಯಿಂದ ಅಂದರೆ ಬಜಪೆ ಕಡೆಯಿಂದ ಇನೋವಾ ಕಾರು ನಂಬ್ರ ಕೆಎ 16 ಎಂ 4456 ನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬಂದು ಪಿರ್ಯಾದುದಾರರು ಚಲಾಯಿಸುತ್ತಿದ್ದ ಮೋಟಾರ್ಸೈಕಲ್ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ಸೈಕಲ್ಸಮೇತ ಪಿರ್ಯಾದುದಾರರು ಮತ್ತು ಸಹಸವಾರ ರೋಶನ್ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿಯ ಬಲ ಕಾಲಿಗೆ, ಬಲ ತೊಡೆಗೆ ರಕ್ತಗಾಯವಾಗಿದ್ದು ಅಲ್ಲದೇ ಬಲ ಎದೆಗೆ ತರಚಿದ ಗಾಯವಾಗಿದ್ದು, ಸಹಸವಾರ ರೋಶನ್ಗೂ ಬಲ ಕೈ ಮತ್ತು ಬಲಕಾಲಿಗೆ ಗಾಯವಾಗಿರುತ್ತದೆ. ಡಿಕ್ಕಿ ಹೊಡೆಸಿದ ಇನೋವಾ ಕಾರು ಚಾಲಕನ ಹೆಸರು ಇರ್ಫಾನ್ಎಂಬುದಾಗಿ ತಿಳಿದು ಬಂದಿರುತ್ತದೆ.

 

6.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 24-08-2014 ರಂದು ಬೆಳಿಗ್ಗೆ 11-45 ಸಮಯಕ್ಕೆ ಮೂಡುಪೆರಾರ ಗ್ರಾಮದ ಈಶ್ವರಕಟ್ಟೆ ಹಳೇ ಬಸ್ಸು ನಿಲ್ದಾಣದ ಎಂಬಲ್ಲಿಗೆ ಪಿರ್ಯಾದಿದಾರರಾದ ಶ್ರೀಮತಿ ವಾಸಂತಿ ರವರು ತನ್ನ ಸೈಕಲ್ಲಿನಲ್ಲಿ ಕೈಕಂಬದ ಕಡೆಗೆ ಹೋಗುತ್ತಿರುವ ಸಮಯದಲ್ಲಿ ಪಿರ್ಯಾದಿದಾರರ ಎದುರುಗಡೆಯಿಂದ ಅಂದರೆ, ಕೈಕಂಬ ಕಡೆಯಿಂದ ಬಜಪೆ ಕಡೆಗೆ ಯಾವೂದೋ ಬೈಕ ಸವಾರನೂ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದುದರ ಪರಿಣಾಮ, ಪಿರ್ಯಾದಿದಾರರ ಬಲಬದಿಯ ತೆಲೆಗೆ, ಸೊಂಟಕ್ಕೆ ಹಾಗೂ ಬಲಬದಿಯ ಬುಜಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು ಕೂಡಲೇ 108 ಅಂಬ್ಯುಲೆನ್ಸನಲ್ಲಿ ಪದ್ಮನಾಭ ಎಂಬುವರು ಮಂಗಳೂರು ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಸಮಯದಲ್ಲಿ ಬೈಕ ಸವಾರನು ಅಪಘಾತ ಸ್ಥಳದಲ್ಲಿ ಬೈಕ್ ನಿಲ್ಲಿಸದೇ ಪರಾರಿಯಾಗಿರುತ್ತಾನೆ.

 

7.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-08-2014 ರಂದು ರಾತ್ರಿ 9 ಗಂಟೆ ಸಮಯಕ್ಕೆ ಫಿರ್ಯಾದಿದಾರರಾದ ಸುಲೋಚನಾ ರವರು ಕೆಲಸ ಮಾಡುವ  ಪೆರ್ಮನ್ನೂರು ಗ್ರಾಮದ ನಮಿತಾ ಎಂಬುವವರ ಮನೆಯಿಂದ ಕೆಲಸ ಮುಗಿಸಿಕೊಂಡು ಹೋಗುತ್ತಿರುವಾಗ ಆರೋಪಿಗಳಾದ ರಮ್ಯಾ ಹಾಗೂ ಆಕೆಯ ಗಂಡ ಅಣ್ಣಪ್ಪ ರವರು ಫಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು "ದೇಹವನ್ನು ತುಂಡು ತುಂಡು ಮಾಡುತ್ತೇನೆ. ಅಷ್ಟಕ್ಕೂ ಬಗ್ಗದಿದ್ದರೆ ಕೊಲೆ ಮಾಡುವುದಾಗಿ"  ಬೆದರಿಕೆ ಹಾಕಿರುವುದು.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ:23/8/2014 ರಂದು 22-45 ಗಂಟೆ ಸುಮಾರಿಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಶ್ರೀ ಎಂ.ಡಿ.ಮಡ್ಡಿ. ರವರಿಗೆ ಠಾಣೆಯಲ್ಲಿದ್ದಾಗ ಯಾರೋ ಒಬ್ಬರು ಠಾಣಾ ಸ್ಥಿರ ದೂರವಾಣಿಗೆ ಕರೆ ಮಾಡಿ  ಪಂಪ್ ವೆಲ್ ಜಂಕ್ಷನ್ ಬಳಿಯಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿರುವ ವಾಹನವನ್ನು ಕೆಲವರು ತಡೆದು ನಿಲ್ಲಿಸಿ ಗಲಾಟೆ ಮಾಡುತ್ತಿದ್ದಾರೆ ಎಂಬುದಾಗಿ ಮಾಹಿತಿ ನೀಡಿದ ಮೇರೆಗೆ ಠಾಣೆಯಲ್ಲಿದ್ದ ಪಿಸಿ 1072, ಪಿಸಿ 531, ಪಿಸಿ 564 ರವರುಗಳನ್ನು ಇಲಾಖಾ ಜೀಪು ನಂಬ್ರ ಕೆಎ 19, ಜಿ 289ನೇ ದರಲ್ಲಿ  ಕರೆದುಕೊಂಡು 23.00 ಗಂಟೆಗೆ ಪಂಪ್ವೆಲ್ಜಂಕ್ಷನ್ಬಳಿ ತಲುಪಿ ನೋಡಲಾಗಿ ಸದ್ರಿ ಸ್ಥಳದಲ್ಲಿ ಕೆಲವು ಸಾರ್ವಜನಿಕರು ಸೇರಿದ್ದು,  ಅಲ್ಲಿ ನಿಂತಿದ್ದ ಟಾಟಾ ಪಿಕಪ್ವಾಹನ ನಂಬ್ರ ಕೆಎಲ್ 14 ಪಿ 923ನೇ ದರಲ್ಲಿ ಜಾನುವಾರುಗಳನ್ನು ಹಗ್ಗದಿಂದ ಕಟ್ಟಿ ಹಿಂಸತ್ಮಾಕವಾಗಿ ತುಂಬಿಸಿರುವುದು ಕಂಡು ಬಂದಿದ್ದು, ಬಗ್ಗೆ ಸ್ಥಳದಲ್ಲಿದ್ದ ಸಾರ್ವಜನಿಕರಲ್ಲಿ ವಿಚಾರಿಸಲಾಗಿ  ಸದ್ರಿ ವಾಹನದಲ್ಲಿದ್ದ, 3 ಜನರಿಗೆ ಸುಮಾರು 6-7 ಜನರ ಗುಂಪು ಹಲ್ಲೆ ನಡೆಸಿದ್ದು, ಅವರಲ್ಲಿ ಇಬ್ಬರನ್ನು ಚಿಕಿತ್ಸೆ ಬಗ್ಗೆ ವೆನ್ಲಾಕ್ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದರಿಂದ ಸದ್ರಿ ಗಾಯಾಳುಗಳ ವಿವರ ತಿಳಿದುಕೊಳ್ಳುವರೇ ನಮ್ಮ ಜೊತೆಯಲ್ಲಿದ್ದ ಪಿಸಿ 564 ಬೀರಪ್ಪರವರನ್ನು ವೆನ್ಲಾಕ್ಆಸ್ಪತ್ರೆಗೆ ಕಳುಹಿಸಿ ನಂತರ ಸ್ಥಳದಲ್ಲಿದ್ದ ಸಾರ್ವಜನಿಕರ ಪೈಕಿ ಇಬ್ಬರನ್ನು ಪಂಚಾಯತ್ದಾರರನ್ನಾಗಿ ಬರ ಮಾಡಿಸಿ ಅವರುಗಳ ಸಮಕ್ಷಮ ಮೇಲೆ ತಿಳಿಸಿದ ವಾಹನದಲ್ಲಿದ್ದ 12 ಜಾನವಾರುಗಳ ಮುಖ ಹಾಗೂ ಕೈಕಾಲುಗಳನ್ನು ಕಟ್ಟಿದ್ದ ಹಗ್ಗಗಳನ್ನು ಬಿಡಿಸಿರುತ್ತೇನೆ. ಸದ್ರಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳು ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಬಗ್ಗೆ ವೆನ್ಲಾಕ್ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ  ಅವರುಗಳ ವಿವರವನ್ನು ಪಡೆಯುವರೇ ಕಳುಹಿಸಿಕೊಟ್ಟಿದ್ದ ಪಿಸಿ  564 ನೇ ಯವರಿಗೆ ಪೋನ್ಮಾಡಿ ವಿಚಾರಿಸಿದಾಗ ಅವರು ಆರೋಪಿ ಸೌಕತ್ಆಲಿ ಎಂಬವನು ವೆನ್ಲಾಕ್ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದು, ಆತನೊಡನೆ ತಾನು  ವಿಚಾರಿಸಿದಾಗ ತನ್ನೊಂದಿಗೆ ಇದ್ದ ಅಬ್ದುಲ್ಸಮೀರ್ಎಂಬವನಿಗೆ ಆರೋಪಿಗಳು ನಡೆಸಿದ ಹಲ್ಲೆಯಿಂದ ತೀವೃ ಗಾಯವಾಗಿದ್ದು ಆತನನ್ನು ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆಯೆಂದು ಇನ್ನೋರ್ವ ಪಯಾಜ್ಎಂಬವನು ಗಲಾಟೆ ಮಧ್ಯೆ ತಪ್ಪಿಸಿಕೊಂಡಿದ್ದಾನೆಂದು ಮತ್ತು ತಾವು ಸದ್ರಿ ಜಾನುವಾರುಗಳನ್ನು ಕಡಿದು ಮಾಂಸ ಮಾಡುವ ಸಲುವಾಗಿ  ಟಾಟಾ ಪಿಕಪ್ವಾಹನದಲ್ಲಿ ಸಾಗಿಸುತ್ತಿದ್ದು, ಬಗ್ಗೆ ತಮ್ಮಲ್ಲಿ ಯಾವುದೇ ಪರವಾನಿಗೆ ಇಲ್ಲವೆಂದು ತಿಳಿಸಿದ್ದು, ಸದ್ರಿ ಜಾನುವಾರುಗಳನ್ನು ಎಲ್ಲಿಂದ ತಂದಿರುವುದೆಂದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಿರುವುದಿಲ್ಲ ಎಂಬುದಾಗಿ ಪಿಸಿ 564 ನೇ ಯವರು ತಿಳಿಸಿರುತ್ತಾರೆ. ಇದರಿಂದಾಗಿ ಸದ್ರಿ ಆರೋಪಿಗಳು ಮೇಲೆ ತಿಳಿಸಿದ 12 ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿ ಸದ್ರಿ ಪಿಕಪ್ವಾಹನದಲ್ಲಿ  ಹಿಂಸಾತ್ಮಕವಾಗಿ ತುಂಬಿಸಿ ಮಾಂಸ ಮಾಡುವ ಸಲುವಾಗಿ  ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ದೃಢಪಟ್ಟಿದ್ದರಿಂದ ಸದ್ರಿ 12 ಜಾನುವಾರುಗಳನ್ನು ಹಾಗೂ ಅವುಗಳನ್ನು ಕಟ್ಟಲು ಉಪಯೋಗಿಸಿದ್ದ ನೈಲಾನ್ಮತ್ತು ಹುರಿ ಹಗ್ಗದ ತುಂಡುಗಳನ್ನು,  ಸದ್ರಿ ಜಾನುವಾರುಗಳನ್ನು ಸಾಗಾಟ ಮಾಡುವರೇ ಉಪಯೋಗಿಸಿದ್ದ ಟಾಟಾ ಪಿಕಪ್ವಾಹನ ನಂಬ್ರ ಕೆ.ಎಲ್ 14 ಪಿ 923ನೇದ್ದನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮುಖೇನ ಸ್ವಾದೀನಪಡಿಸಿಕೊಂಡು ಆರೋಪಿಗಳಾದ 1) ಸೌಕತ್ಆಲಿ 2) ಅಬ್ದುಲ್ಸಮೀರ್‌ 3) ಪಯಾಜ್ಎಂಬವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

 

9.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 19.08.2014 ರಂದು ಸಂಜೆ ಸುಮಾರು 5:15 ಗಂಟೆಗೆ ಪಿರ್ಯಾದುದಾರರಾದ ಶ್ರೀ ಸಿರಾಜುದ್ದೀನ್ ರವರನ್ನು ಆರೋಪಿಗಳಾದ ಅಜೀಜ್, ಸೈಯದ್ ಮತ್ತು ಶಶಿ ಎಂಬವರು ಮಂಗಳೂರು ಮಹಾಕಾಳಿ ಪಡ್ಪು ಕ್ರಾಸಿನ ಗ್ಯಾರೇಜ್ ಎದುರಿನಿಂದ ಒಂದು ಕಪ್ಪು ಬಣ್ಣದ ಕಾರಿನಲ್ಲಿ ಅಪಹರಿಸಿ ಮಲ್ಪೆ ಬಂದರಿಗೆ ಕರೆದುಕೊಂಡು ಹೋಗಿ ಅಲ್ಲಿನ ರೂಂನಲ್ಲಿ ಪಿರ್ಯಾದುದಾರರನ್ನು ಅಕ್ರಮ ಬಂಧನದಲ್ಲಿ ಕೂಡಿ ಹಾಕಿ ಪಿರ್ಯಾದುದಾರರ ಮೇಲೆ ಸದ್ರಿ ಆರೋಪಿಗಳು ದೈಹಿಕ ಹಲ್ಲೆ ನಡೆಸಿ " ವಿಷಯವನ್ನು ಯಾರಲ್ಲಾದರೂ ತಿಳಿಸಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ " ಎಂದು ಜೀವ ಬೆದರಿಕೆಯೊಡ್ಡಿದ್ದು, ಸದ್ರಿ ಆರೋಪಿಗಳಲ್ಲಿ ಶಶಿ ಎಂಬವನ ಕಂಪೆನಿಯಲ್ಲಿ ಪಿರ್ಯಾದುದಾರರ ತಂದೆ ಕೆಲಸ ಮಾಡುತ್ತಿದ್ದವರು ಕೆಲಸ ಬಿಟ್ಟು ಹೋಗಿದ್ದು, ಪಿರ್ಯಾದುದಾರರನ್ನು ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡಿದರೆ ಪಿರ್ಯಾದುದಾರರ ತಂದೆ ವಾಪಾಸ್ಸು ಆರೋಪಿ ಶಶಿಯ ಕಂಪೆನಿಗೆ ಕೆಲಸಕ್ಕೆ ಬರುತ್ತಾರೆ ಎಂಬ ಉದ್ಧೇಶದಿಂದ ಆರೋಪಿಗಳ ಕೃತ್ಯವನ್ನು ಎಸಗಿರುವುದಾಗಿದೆ.

No comments:

Post a Comment