Sunday, August 24, 2014

Daily Crime Reports 24-08-2014

ದೈನಂದಿನ ಅಪರಾದ ವರದಿ.

ದಿನಾಂಕ 24.08.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

1

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

3

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 23-08-2014ರಂದು  ಬೆಳಿಗ್ಗೆ ಫಿರ್ಯಾದಿದಾರರಾದ ಶ್ರೀ ಭಾಸ್ಕರ್ ಕೆ. ರವರು ಅವರ ಬಾಬ್ತು ಕೆ 19 ಎಸ್ 8208 ನೇ ನಂಬ್ರದ ಬೈಕಿನಲ್ಲಿ ಸವಾರರಾಗಿ ತನ್ನ ಬಾವ ವಿನೋದರವರನ್ನು ಸಹಸವಾರರನ್ನಾಗಿ  ಕುಳ್ಳಿರಿಸಿಕೊಂಡು ಪಣಂಬೂರು ದೀಪಕ್ ಪೆಟ್ರೋಲ್ ಬಂಕ್ ಬಳಿಯಿಂದ ಬೈಕಂಪಾಡಿಗೆ ಹೋಗಲು  ಎನ್  ಎಚ್ 66 ರಲ್ಲಿ ಹೋಗುತ್ತಾ ಬೆಳಿಗ್ಗೆ ಸುಮಾರು 08-30 ಗಂಟೆಗೆ ಬೈಕಂಪಾಡಿ ಸೇತುವೆ ಬಳಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಕೆ 19 ಡಿ3672 ನೇ ನಂಬ್ರದ ಟ್ಯಾಂಕರನ್ನು ಅದರ ಚಾಲಕ ನಾರಾಯಣ ಎಂಬುವರು ನಿರ್ಲಕ್ಷತನ ಹಾಗೂ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಫಿರ್ಯಾಧಿದಾರರ ಬೈಕಿಗೆ ಢಿಕ್ಕಿಪಡಿಸಿದ್ದು ಅಪಘಾತದಿಂದ ಫಿರ್ಯಾದಿದಾರರಿಗೆ ಯಾವುದೇ ಗಾಯವಾಗದೆ ವಿನೋದರವರ ಬಲಗಾಲಿಗೆ ಮೂಳೆಮುರಿದ ಗಾಯವಾಗಿ, ಎಡಗಾಲು ಹಾಗೂ ಕೈಗಳಿಗೂ ಗಾಯವಾಗಿ ಮಂಗಳೂರು ಸಿ ಟಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 22/082014 ರಂದು ಬೆಳಿಗ್ಗೆ 11-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು ಕಸಬಾ ಬೆಂಗ್ರೆ ಗ್ರಾಮದ ಬದ್ರಿಯ ಮಸೀದಿಯ ಬಳಿ ಇರುವ ಎಂ,ಜೆ.ಎಂ. 217ನೇ ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ಬಾವಾ ರವರ ಮನೆಯ ಒಳಗೆ ಆರೋಪಿಗಳಾದ ಅಜ್ಮಾಲ್, ಇಜ್ಜು, ಮಯ್ಯದ್ದಿ ಮತ್ತು ನೌಷದ್ ಇವರುಗಳು ಕೈಯಲ್ಲಿ ಮರದ ಸೋಂಟೆಯನ್ನು ಹಿಡಿದು ಅಕ್ರ ಪ್ರವೇಶ ಮಾಡಿ  ಪಿರ್ಯಾದಿಯ ಮಗ ಆಶಿಫ್ ಆರೋಪಿಗಳ ಮನೆಯನ್ನು ಫೈನಾನ್ಸ್  ರವರಿಗೆ ತೋರಿಸಿದನೆಂದು ಅದೇ ದ್ವೇಷದಿಂದ ಸಮಾನ ಉದ್ದೇಶ ಹೊಂದಿ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಕೈಯಲ್ಲಿದ್ದ ಸೋಂಟೆಯಿಂದ ಪಿರ್ಯಾದಿಗೆ ಮತ್ತು ಪಿರ್ಯಾದಿಯ ಮಗನಿಗೆ ಹೊಡೆದು ಬಳಿಕ ಕೈಯಿಂದ ಹೊಡೆದು ಸಮಯ ಪಿರ್ಯಾದಿಯ ಮೊಬೈಲ್ ಮತ್ತು 1000/- ರೂಪಾಯಿ ಕಾಣೆಯಾಗಿದ್ದು ಪಿರ್ಯಾದಿಯ ಬೊಬ್ಬೆ  ಕೇಳಿ  ನೆರೆ ಕರೆಯವರು ಬರುವುದನ್ನು ಕಂಡು ಪಿರ್ಯಾದಿ ಮತ್ತು ಅವರ ಮನೆಯವರಿಗೆ ಮುಂದಕ್ಕೆ ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಒಡ್ಡಿ ಪರಾರಿಯಾಗಿರುವುದಾಗಿದೆ.

 

3.ಮುಲ್ಕಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಜಗದೀಶ್ ಬಾಳ ಅಸೊಶಿಯೇಟ್ ಪ್ರೊಫೆಸರ್, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಳೆಯಂಗಡಿ ಇವರ ಹೆಸರಿನಲ್ಲಿ ದಿನಾಂಕ 14-08-2014 ರಂದು ಅಪರಿಚಿತ ವ್ಯಕ್ತಿಗಳು ನಕಲಿ ಪೇಸ್ ಬುಕ್ ಖಾತೆಯನ್ನು ತೆರೆದು ಅದರಲ್ಲಿ ಅವರ ಪೊಟೊ ಮತ್ತು ಇತರ ಅಶ್ಲಿಲ ಚಿತ್ರಗಳನ್ನು ಅಪಲೋಡ್ ಮಾಡಿರುತ್ತಾರೆ.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 23-08-2014 ರಂದು ಬೆಳಿಗ್ಗೆ 08-45 ಗಂಟೆಗೆ ಮಂಗಳೂರು ತಾಲೂಕಿನ, ಬಜಪೆ ಪೊಲೀಸ್ ಠಾಣಾ ಸರಹದ್ದಾದ, ತೆಂಕ ಎಡಪದವು ಗ್ರಾಮದ ಬಂಡಸಾಲೆ ಎಂಬಲ್ಲಿ, ಕೈಕಂಬ, ಮೂಡಬಿದ್ರಿ ಎನ್.ಹೆಚ್. ರಸ್ತೆಯಲ್ಲಿ ಮೋಟಾರು ಸೈಕಲ್ ನಂ: ಕೆಎ 19 ಇಹೆಚ್ 4845 ಸವಾರ  ರಿಜ್ವಾನ್ ಅಹ್ಮದ್ ಎಂಬವರು ತನ್ನ ಹಿಂದೆ ಸಹ ಸವಾರನಾಗಿ  ಒಬ್ಬರನ್ನು ಕುಳ್ಳಿರಿಸಿ ಮೋಟಾರು ಸೈಕಲನ್ನು ಎಡಪದವು ಕಡೆಯಿಂದ ಮೂಡಬಿದ್ರಿ ಕಡೆಗೆ ಬಹಳ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗಿ ಅವರ ಎದುರಿನಿಂದ ಹೋಗುತ್ತಿದ್ದ ಟಿಪ್ಪರ್ ಲಾರಿಯನ್ನು ಓವರ್ ಟೇಕ್ ಮಾಡಿ ಎದುರಿನಿಂದ ಫಿರ್ಯಾದಿದಾರರಾದ ಶ್ರೀ ಸುರೇಂದ್ರ ನಾಯ್ಕ ರವರು ಮಂಗಳೂರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ  ಮೂಡಬಿದ್ರಿ ಪೊಲೀಸ್ ಠಾಣೆಯ ಸರಕಾರಿ ಜೀಪು ನಂ: ಕೆಎ 19 ಜಿ 541 ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಜೀಪಿನ ಗ್ಲಾಸು ಒಡೆದು ಹೋಗಿ ಜೀಪಿನಲ್ಲಿದ್ದ ಶಿವರಾಜ್ ಪಿ.ಸಿ. 616 ನೇಯವರ ಎಡ ಕಣ್ಣಿಗೆ ಗ್ಲಾಸಿನ ಚೂರು ತಾಗಿ ಜಖಂ ಆದುದಲ್ಲದೇ ಬೈಕ್ ಸವಾರರಿಬ್ಬರಿಗೆ ಕೂಡಾ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು, ಸರಕಾರಿ ಜೀಪಿಗೆ ಕೂಡಾ ಜಖಂ ಆಗಿದ್ದು, ಗಾಯಾಳುಗಳು ಮಂಗಳೂರು .ಜೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 20-08-2014 ರಂದು ಪಿರ್ಯಾದುದಾರರಾದ ಶ್ರೀ ದಿನೇಶ್ರವರು ಉಳ್ಳಾಲದಿಂದ ತನ್ನ ಮನೆಗೆ ರಂಜಿತ್ಎಂಬವರ ಜೊತೆ ಮನೆ ಕಡೆಗೆ ಕೆಎ 19 ಸಿ 1030 ನೇ ಆಟೋ ರಿಕ್ಷಾದಲ್ಲಿ  ಪ್ರಯಾಣಿಸುತ್ತಿದ್ದು, ಅಟೋ ರಿಕ್ಷಾವನ್ನು ಅದರ ಚಾಲಕ ರುಪೇಶ್ಎಂಬವರು ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಉಳ್ಳಾಲ ಗ್ರಾಮದ ತಾಜ್ಮಹಲ್ಹಾಲ್ಬಳಿ 22-15 ಗಂಟೆ ಸಮಯಕ್ಕೆ ತಲುಪುತ್ತಿದ್ದಂತೆ ರಸ್ತೆಯಲ್ಲಿ ನಾಯಿಗಳೆರಡು ಅಡ್ಡವಾಗಿ ಬಂದುದರಿಂದ ಆಟೋ ಚಾಲಕ ರೂಪೇಶ್ಒಮ್ಮೆಲೇ  ಬ್ರೇಕ್ಹಾಕಿರುವುದರಿಂದ ಆಟೋ ರಿಕ್ಷಾ ಮಗುಚಿ ಬಿತ್ತು. ಪಿರ್ಯಾದುದಾರರ ಎಡಕೈಗೆ ತೀವ್ರ ತರಹದ ಗಾಯವಾಗಿದ್ದು, ರಂಜಿತ್ರವರಿಗೂ ಗಾಯವಾಗಿರುತ್ತದೆ. ಪಿರ್ಯಾದುದಾರರನ್ನು ಮತ್ತು ರಂಜಿತ್ರವರನ್ನು ಅಲ್ಲಿ ಸೇರಿದ ಜನರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದು, ರಂಜಿತ್ಹೊರರೋಗಿಯಾಗಿಯೂ, ಪಿರ್ಯಾದುದಾರರು ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿರುತ್ತಾರೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 19-8-2014 ರಂದು ರಾತ್ರಿ 10-00 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿರುವ ಫಿರ್ಯಾದಿದಾರರಾದ ಶ್ರೀಮತಿ ರಮ್ಯಾ ರವರ ವಾಸ್ತವ್ಯದ ಮನೆಯ ಅಂಗಳಕ್ಕೆ ಆರೋಪಿಗಳಾದ ಗಿರೀಶ್‌‌ ಉಳ್ಳಾಲ, ಜಯಂತ್‌‌ ಹಾಗೂ ಶಶಿಕಾಂತ್‌‌ ರವರುಗಳು ಬಂದು ಅಶ್ಲೀಲ ಶಬ್ದದಿಂದ ಬೈದು, ಫಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಮತ್ತು ನಿನ್ನ ಸಂಸಾರವನ್ನು ನೆಮ್ಮದಿಯಿಂದ ಬಾಳಲು ಬಿಡುವುದಿಲ್ಲ, ನಿನ್ನನ್ನು ಊರು ಬಿಟ್ಟು ಓಡಿಸುತ್ತೇನೆ ಹಾಗೂ ನಿನ್ನನ್ನು ಮಾನಭಂಗ ಮಾಡಿ ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿರುವುದಾಗಿದೆ.

No comments:

Post a Comment