Monday, August 18, 2014

Daily Crime Reports 18-08-2014

ದೈನಂದಿನ ಅಪರಾದ ವರದಿ.

ದಿನಾಂಕ 18.08.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

1

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಉರ್ವಾ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-08-2014 ರಂದು ಮದ್ಯಾಹ್ನ 15-00  ಗಂಟೆ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಪುನೀತ್ ರವರು ಅವರ ಮನೆಯಾದ ಮಂಗಳೂರು ಉರ್ವಾ ಹೊಯ್ಗೆಬೈಲ್ ಶ್ರೀ ಭಗವತಿ ಸುಂದರ ನಿವಾಸ ಎಂಬಲ್ಲಿ ತಂದೆ ತಾಯಿ ಹಾಗೂ ಸ್ನೇಹಿತರಾದ ಅಲೋಕ್, ಹಾಗೂ ಸುಮೇದ್ ನೊಂದಿಗೆ ಮಾತನಾಡಿಕೊಂಡಿದ್ದಾಗ ಪಿರ್ಯಾದಿಯು ಹಿಂದೆ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪದಲ್ಲಿದ್ದು ಕೊಲೆಯಾದ ಸಂಜಯ್ ಯಾನೆ ವರುಣ್ ತಂದೆ ಜಗ್ಗ ಯಾನೆ  ತಲವಾರು ಜಗದೀಶ ಮತ್ತು ಬೋಳೂರಿನ ಮೋಕ್ಷಿತ್ ಹಾಗೂ ಸುಲ್ತಾನ್ ಭತ್ತೇರಿಯ ರಾಜೇಶ್ ಎಂಬವರು ಬೈಕಿನಲ್ಲಿ ಬಂದಿದ್ದು ಮನೆಯ ಎದುರುಗಡೆ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಅದರಲ್ಲಿ ಮೋಕ್ಷಿತ್ ಎಂಬವನು ಅವನ ಕೈಯಲ್ಲಿದ್ದ ತಲವಾರಿನಿಂದ ಕಡಿಯಲು ಬಂದಾಗ ಪಿರ್ಯಾದಿದಾರರ ತಂದೆ ತಾಯಿ, ಮತ್ತು ಗೆಳೆಯರು ಪಿರ್ಯಾದಿದಾರರನ್ನು ಮನೆಯ ಒಳಗಡೆ ಹಾಕಿ, ಬಾಗಿಲು ಹಾಕಿ ಆರೋಪಿಗಳನ್ನು ಬರಲು ಬಿಡದಾಗ ಆರೋಪಿಗಳು ಪಿರ್ಯಾದಿಯ ಮನೆಯ ಗ್ಲಾಸ್ ನ್ನು ಪುಡಿ ಮಾಡಿದಲ್ಲದೇ, ನೆರೆಮನೆಯ ಸುರೇಶ್ ಎಂಬವರು ನಿಲ್ಲಿಸಿದ ಕಾರಿನ ಗ್ಲಾಸ್ ನ್ನು ಜಖಂಗೊಳಿಸಿದ ನಂತರ  ಅಲ್ಲಿಂದ ಪರಾರಿಯಾಗಿರುತ್ತಾರೆ. ಪಿರ್ಯಾದಿದಾರರು ಹಿಂದೆ ಸಂಜಯ್ ಯಾನೆ ವರುಣ ಕೊಲೆ ಕೃತ್ಯದಲ್ಲಿ ಭಾಗಿ ಯಾಗಿರುವ ಆರೋಪಿಯಾದ ಕಾರಣ ಎಲ್ಲಾ ಆರೋಪಿಗಳು ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕೃತ್ಯ ಮಾಡಿರುತ್ತಾರೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17.08.2014 ರಂದು ಮೂಡಬಿದ್ರೆ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭ ರವರು, ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಮಂಗಳೂರು ತಾಲೂಕು ಪಡು ಮಾರ್ನಾಡು ಗ್ರಾಮದ ಬೊಳಿಯಾರು ಮಾರಂಡೆ ಎಂಬಲ್ಲಿನ ಸರಕಾರಿ ಕಾಡು ಪ್ರದೇಶದಲ್ಲಿ ಕೆಲವು ಜನ ಸೇರಿ ಹಣವನ್ನು ಪಣವಾಗಿಟ್ಟು ಕೋಳಿ ಜೂಜಾಟ ಆಡುತ್ತಿದ್ದಾರೆಂದು ದೊರೆತ ಖಚಿತ ಮಾಹಿತಿಯಂತೆ, ಪಿಎಸ್ ರಮೇಶ್ ಕುಮಾರ್, ಎಎಸ್ ಐತಪ್ಪ, ಸಿಬ್ಬಂದಿಯವರಾದ ಪಿಸಿ 612 ಸಂತೋಷ್, ಪಿಸಿ 878 ಮಹಮ್ಮದ್ ಹುಸೈನ್, ಪಿಸಿ 616 ಶಿವರಾಜ್, ಪಿಸಿ 949 ಪ್ರಮೋದ್, ಪಿಸಿ 891 ಚಂದ್ರ ಹಾಸ್ ರೈ, ಎಹೆಚ್.ಸಿ. 38 ಸುರೇಂದ್ರ ರವರೊಂದಿಗೆ ಪಂಚರನ್ನು ಕರೆಸಿ, ಪಡು ಮಾರ್ನಾಡು ಗ್ರಾಮದ ಬೊಳಿಯಾರು ಮಾರಂಡೆ ಎಂಬಲ್ಲಿನ ಸರಕಾರಿ ಕಾಡು ಪ್ರದೇಶದಲ್ಲಿ ಸುಮಾರು 15 ರಿಂದ 20 ಜನ ಹುಂಜಕೋಳಿಗಳ ಕಾಲಿಗೆ ಬಾಲನ್ನು ಕಟ್ಟಿ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು, ಜೂಜಾಟವಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, 15.00 ಗಂಟೆಗೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದು, ಹೆಚ್ಚಿನವರು ಕಾಡು ಗುಡ್ಡೆಯಲ್ಲಿ ಓಡಿ ಹೋಗಿದ್ದು, ಏಳು ಜನ ಆರೋಪಿಗಳಾದ ಸುರೇಶ್ ಆಚಾರಿ, ಗಂಗಾಧರ ಮೊಗೇರಾ, ಕೃಷ್ಣಪ್ಪಾ ಪೂಜಾರಿ, ಶ್ಯಾಮ್ ಪೂಜಾರಿ, ರಘುನಾಥ್ ಪೂಜಾರಿ, ಕೃಷ್ಣಪ್ಪಾ ಪೂಜಾರಿ, ಆನಂದ ಶೆಟ್ಟಿ ಎಂಬವರುಗಳನ್ನು ಹಾಗೂ 2 ಕೋಳಿ ಬಾಲುಗಳು, ಅದಕ್ಕೆ ಕಟ್ಟುವ 2 ಹಗ್ಗ, ನಗದು ರೂಪಾಯಿ 700/, ವಿವಿಧ ಬಣ್ಣದ ಅವುಗಳಲ್ಲಿ ಕೆಲವು ಗಾಯಗೊಂಡಿರುವ 7 ಕೋಳಿ ಹುಂಜಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.

 

3.ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 16-08-2014 ರಂದು 22-00 ಗಂಟೆಯಿಂದ ದಿನಾಂಕ 17-08-2014 ರಂದು ಬೆಳಿಗ್ಗೆ 08-35 ಗಂಟೆಯ ಮದ್ಯೆ  ಅವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ ವೈಧ್ಯನಾಥ ನಗರದಲ್ಲಿರುವ ಪಿರ್ಯಾದಿದಾರರಾದ ಶ್ರೀ ಜಿ. ಮುರಲಿಧರ್ ಪೈ ಎಂಬವರ ಮನೆಯ ಎದುರು ಬಾಗಿಲನ್ನು ಬಲತ್ಕಾರವಾಗಿ ಮೀಟಿ ತೆರೆದು ಒಳಗಡೆ ಪ್ರವೇಶಿಸಿ ಒಳಗಡೆ ಬೆಡ್ ರೂಮ್ ಮರದ ಕಪಾಟುಗಳಲ್ಲಿ ಇದ್ದ ವಿವಿಧ ನಮೂನೆಯ 80 ಗ್ರಾಂ ಚಿನ್ನಾಭರಣ 1250 ಗ್ರಾಂ ವಿವಿಧ ನಮೂನೆಯ ಬೆಳ್ಳಿಯ ಸೊತ್ತುಗಳು ನಗದು ಹಣ 6000/- ಸೋನಿ ಕಂಪನಿಯ ಡಿಜಿಟಲ್ ಕ್ಯಾಮರಾ-1 ಹಾಗೂ ಡಿಜಿಟಲ್ ಸೇಪ್ ಲಾಕರ್ ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ.2,36,000/- ಆಗಬಹುದು.

 

4.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 17-08-2014 ರಂದು ಪಿರ್ಯಾದಿದಾರರಾದ ಶ್ರೀ ಹರಿಪ್ರಕಾಶ್ ರೈ ರವರು ತನ್ನ ಗೆಳೆಯ ವಿಶ್ವಾಸ್ಎಂಬವರ ಜೊತೆ ಕೆಎ 19 ಬಿ 7075 ನೇ ನಂಬ್ರದ ಮೋಟಾರ್ಸೈಕಲ್‌‌ನಲ್ಲಿ ಮಿಜಾರಿಗೆ ಹೋದವರು ಅಲ್ಲಿಂದ ವಾಪಾಸು ಬರುತ್ತಿದ್ದಾಗ ಬೆಳಿಗ್ಗೆ ಸುಮಾರು 8-30 ಗಂಟೆಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿ ಎಂಬಲ್ಲಿ ಕೈಕಂಬ ಕಡೆಯಿಂದ ಮೂಡಬಿದ್ರೆ ಕಡೆಗೆ ಕೆಎ 19 ಎಂ ಬಿ 2791 ನಂಬ್ರದ ಮಾರುತಿ ರಿಡ್ಜ್ಕಾರನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯ ಮೇಲೆ ಬಿದ್ದ ಪಿರ್ಯಾದಿ ಹಾಗೂ ಅವರ ಗೆಳೆಯ ವಿಶ್ವಾಸ್ರವರಿಗೆ ತಲೆ ಹಾಗೂ ದೇಹದ ಇತರ ಕಡೆಗಳಿಗೆ ಸಾದಾ ತರದ ಗಾಯಗಳುಂಟಾಗಿ ಮಂಗಳೂರು ಕೆ. ಎಂ.ಸಿ. ಹಾಗೂ ಸಿ.ಟಿ. ಆಸ್ಪತ್ತೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ.

 

5.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-08-2014 ರಂದು ಪಧ್ಮನಾಭ ಎಂಬವರು ತನ್ನ ಸೈಕಲ್ನಂಬ್ರ ಕೆಎ 19 ಇಎಪ್‌ 0498 ನೇಯದರಲ್ಲಿ ಪಿರ್ಯಾದುದಾರರಾದ ಶ್ರೀ ಅಶೋಕ್ ರವರನ್ನು ಕುಳ್ಳಿರಿಸಿಕೊಂಡು ತೊಕ್ಕೊಟ್ಟಿನಿಂದ ಕೋಟೆಕಾರು ಕಡೆಗೆ ರಾ.ಹೆ. 66 ರಲ್ಲಿ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಹೋಗುತ್ತಾ ಕೋಟೆಕಾರು ಪಾರೆಸ್ಟ್ಅಫೀಸ್ಬಳಿ 18-30 ಗಂಟೆಗೆ ತಲುಪುತ್ತಿದ್ದಂತೆ ರಸ್ತೆಯಲ್ಲಿ ಒಂದು ನಾಯಿ ಅಡ್ಡ ಬಂದುದರಿಂದ ಪದ್ಮನಾಭರವರು ಒಮ್ಮಲೇ ಬೈಕಿಗೆ ಬ್ರೇಕ್ಹಾಕಿರುವುದರಿಂದ ಪಿರ್ಯಾದುದಾರರು ಮತ್ತು ಪದ್ಮನಾಭರವರು ರಸ್ತೆಗೆ ಬೈಕ್ಸಮೇತ ಬಿದ್ದ ಪರಿಣಾಮ ಪದ್ಮನಾಭವರ ಕೈಕಾಲುಗಳಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದುದಾರರ ಕೈ ಕಾಲುಗಳಿಗೆ ತರಚಿದ ಗಾಯ ಮತ್ತು ಕುತ್ತಿಗೆಯ ಬಳಿ ತೀವ್ರ ತರಹದ ರಕ್ತಗಾಯವಾಗಿರುತ್ತದೆ. ಗಾಯಗೊಂಡ ಪಿರ್ಯಾದುದಾರರು ದೇರಳಕಟ್ಟೆ ಕೆ.ಎಸ್ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡು ಚಿಕಿತ್ಸೆಯಲ್ಲಿದ್ದು, ಪದ್ಮನಾಭರವರು ತೊಕ್ಕೊಟ್ಟು ನೇತಾಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ. ಅಪಘಾತಕ್ಕೆ ಪದ್ಮನಾಭರವರ ಅತೀವೇಗ ಹಾಗೂ ತೀರಾ ನಿರ್ಲಕ್ಷ್ಯತನದ ಸವಾರಿಯೇ ಕಾರಣವಾಗಿರುತ್ತದೆ. ತೀವ್ರವಾಗಿ ಗಾಯಗೊಂಡ ಪಿರ್ಯಾದುದಾರರು 12-08-2014 ರಂದು ದೂರು ನೀಡುವ ಸ್ಥಿತಿಯಲ್ಲಿ ಇಲ್ಲದೇ ಇದ್ದು, ದಿನಾಂಕ 17-08-2014 ರಂದು ದೂರು ನೀಡಿರುವುದಾಗಿದೆ.

No comments:

Post a Comment