Wednesday, August 13, 2014

Daily Crime Reports 13-08-2014

ದೈನಂದಿನ ಅಪರಾದ ವರದಿ.

ದಿನಾಂಕ 13.08.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

3

ಮನೆ ಕಳವು ಪ್ರಕರಣ

:

0

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

0

ಇತರ ಪ್ರಕರಣ

:

1

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-08-2014 ರಂದು 09: 15 ಗಂಟೆಗೆ ಪಿರ್ಯಾಧಿದಾರರಾದ ಶ್ರೀ ಸುಧೀರ್ ರವರು ಮೋಟಾರು ಸೈಕಲ್ ನಂಬ್ರ ಕೆ 19 ಬಿ 7951 ರಲ್ಲಿ ಸಹ ಸವಾರರಾಗಿದ್ದು ಸಮಿತ್  ಎಮ್ ಟಿ ರವರು ಮೋಟಾರು ಸೈಕಲನ್ನು ಸವಾರಿ ಮಾಡಿಕೊಂಡು ರಾ. ಹೆ 66 ರಲ್ಲಿ ಕೊಟ್ಟಾರ ಚೌಕಿ ಕಡೆಯಿಂದ ಕುಂಟಿಕಾನ ಕಡೆಗೆ ಹೋಗುತ್ತಿರುವಾಗ ಭಾರತ್ ಮೋಟಾರ್ಸ್ ಕುಂಟಿಕಾನದ ಬಳಿ ತಲುಪುತಿದ್ದಂತೆ ಎದುರಿನಿಂದ ಹೊಗುತ್ತಿದ್ದ ಕಾರು ನಂಬ್ರ ಕೆ ಎಲ್ 14 ಎನ್ 3949ನ್ನು ಚಾಲಕ ಗೀರಿಶ್ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಹಿಮ್ಮುಖ ವಾಗಿ ಚಲಾಯಿಸಿ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸವಾರ ಸಮಿತನ ಎಡಕೊಲು ಕೈಗೆ ಮೂಳೆ ಮುರಿತದ ಗಾಯವಾಗಿ ಮೊಟಾರು ಸೈಕಲ್ ಮುಂಭಾಗವು ಜಖಂಗೊಂಡಿರುವುದಾಗಿದೆ.

 

2.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ. 12-08-2014ರಂದು 14-45 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಶಫೀಕ್ ರವರು ತಾನು ಕೆಲಸ ಮಾಡುವ  ಬೈಕಂಪಾಡಿ ಸನಿಲ್ ಕಾಂಪ್ಲೆಕ್ಸ್ ನಲ್ಲಿರುವ ಫಸ್ಟ್ ಫ್ಲೈಟ್ ಕೊರಿಯರ್ ಆಫೀಸ್ ನಿಂದ ಕೊರಿಯರ್ ಪಡೆದು ಬೈಕಂಪಾಡಿ ಇಂಡಸ್ಟ್ರೀಲ್ ಏರಿಯಾಕ್ಕೆ ಡೆಲಿವರಿ ಕೊಡುವರೇ ಬೈಕ್ ನಲ್ಲಿ ಹೊರಟು ಬೈಕಂಪಾಡಿ ಮೀನಕಳಿಯ ಕ್ರಾಸ್ ಸರ್ಕಲ್ ಬಳಿ 15-30ಗಂಟೆಗೆ ತಲುಪುತ್ತಿದ್ದಂತೆ ಪರಿಚಯದ ಸಂತೋಷ್ ರವರು ಬೈಕಿನೊಂದಿಗೆ ಅಲ್ಲಿ ನಿಂತುಕೊಂಡಿದ್ದು ಪಿರ್ಯಾದಿದಾರರನ್ನು ಕಂಡು ನಿಲ್ಲಲು ಹೇಳಿದಂತೆ ಪಿರ್ಯಾದಿ ಬೈಕನ್ನು ನಿಲ್ಲಿಸಿದ್ದು ಸಮಯ ಪಿರ್ಯಾದಿದಾರರ ಮಾಲಕರಾದ  ಜಾಕೀರ್ ರವರು ಕೂಡಾ ಬೈಕಿನಲ್ಲಿ ಅಲ್ಲಿಗೆ ಬಂದಿದ್ದು,  ಪಿರ್ಯಾದಿದಾರರು ಸಂತೋಷ್ ನಲ್ಲಿ  ವಿಷಯವೇನೆಂದು ಕೇಳಿದಾಗ ಒಂದು ವರ್ಷ ಹಿಂದಿನ ವಾಹನ ಕಾಂಟ್ರಾಕ್ಟ್ ಕೊಟ್ಟ ಬಗ್ಗೆ ಕಮಿಷನ್ ಹಣ ಕೊಡಲು ಬಾಕಿ ಇದೆಯೆಂದು ಹೇಳಿ ತಕರಾರು ತೆಗೆದಿದ್ದು, ಪಿರ್ಯಾದಿ ತಾನು ಈಗಾಗಲೇ ಹಣ ಕೊಟ್ಟಿರುತ್ತೇನೆ, ಇನ್ನೂ ಕೊಡಲು ಬಾಕಿ ಇರುವುದಿಲ್ಲವೆಂದು ಹೇಳಿ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಆರೋಪಿ ಸಂತೋಷನು ಪಿರ್ಯಾದಿದಾರರ ಬೈಕ್ ನ್ನು ಅಡ್ಡಗಟ್ಟಿ ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ತಲೆಯ ಬಲಭಾಗಕ್ಕೆ ಹೊಡೆದಾಗ ಕೆಳಗೆ ಬಿದ್ದ ಪಿರ್ಯಾದಿದಾರರ ಗಂಟಲಿಗೆ ಕಚ್ಚಿ  ಮತ್ತು ಬಲಕೈ ಕಿರುಬೆರಳಿಗೆ ಕಚ್ಚಿ ರಕ್ತಬರುವ ಗಾಯಗೊಳಿಸಿದ್ದು, ಪಿರ್ಯಾದಿದಾರರ ಮಾಲಕರು ಬಿಡಿಸಿದಾಗ ಸಂತೋಷನು ಬೈಕ್ ಸ್ಟಾರ್ಟ್ ಮಾಡಿ ನಿನ್ನನ್ನು ಬಿಡುವುದಿಲ್ಲವೆಂದು ಹೇಳಿ ಬೆದರಿಕೆ ಹಾಕಿ ಹೋಗಿರುತ್ತಾನೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-08-2014 ರಂದು ರಂದು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಚಲುವರಾಜು ಬಿ. ರವರು, ಇವರಿಗೆ ಮಾನ್ಯ ಪೊಲೀಸು ಆಯುಕ್ತಕರವರ ಕಛೇರಿಯಲ್ಲಿ ತರಬೇತಿಯಲ್ಲಿರುವಾಗ್ಗೆ ಸಮಯ ಸುಮಾರು 10-15  ಗಂಟೆ ಸಮಯಕ್ಕೆ ದೂರವಾಣಿ ಮುಖಾಂತರ ಮಂಗಳೂರು ನಗರದ ಬಲ್ಮಠ ರಸ್ತೆಯಲ್ಲಿರುವ ಸೂರ್ಯ ಲಾಡ್ಜ್‌‌ ನೆಲ ಅಂತಸ್ತಿನ ಕೊಠಡಿಯಲ್ಲಿ ಉಲಾಯಿ ಪಿದಾಯಿ ಎಂಬ ನಸೀಬಿನ ಆಟವನ್ನು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಗೆ ಬಂದು ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಕೇಂದ್ರ ಉಪವಿಭಾಗ, ಮಂಗಳೂರು ನಗರ ರವರಿಗೆ ಮಾಹಿತಿಯನ್ನು ತಿಳಿಸಿ  ಸರ್ಚ ವಾರಂಟ್‌‌ನ್ನು  ಕೋರಿಕೆ ಪತ್ರದೊಂದಿಗೆ ಪಡೆದು ಕೊಂಡು, ಪಂಚರನ್ನು ಠಾಣೆಗೆ ಬರಮಾಡಿಕೊಂಡು ಹಾಗೂ ಠಾಣಾ ಪಿಎಸ್ ಮತ್ತು ಸಿಬ್ಬಂಧಿಯವರೊಂದಿಗೆ ಇಲಾಖಾ ವಾಹನಗಳಲ್ಲಿ ಕರೆದುಕೊಂಡು ಮಂಗಳೂರು ನಗರದ ಬಲ್ಮಠ ರಸ್ತೆಯಲ್ಲಿರುವ ಸೂರ್ಯ ಲಾಡ್ಜ್‌‌ ಹೋಗಿ ಸಮಯ 10-45 ಗಂಟೆಗೆ ತಲುಪಿ ವಾಹನ ಪಾರ್ಕಿಂಗ್ ಮಾಡುವ ಸ್ಥಳದಲ್ಲಿರುವ ಸೂರ್ಯ ಲಾಡ್ಜ್ ನೆಲ ಅಂತಸ್ತಿನಲ್ಲಿರುವ ಕೊಠಡಿಯ ಹಾಲ್‌‌ ಬಳಿ ಇರುವ ಕೊಠಡಿಯ ಹೊರಗಡೆ ನಿಂತು ಬಾಗಿಲನ್ನು ಸರಿಸಿ ಗಮನಿಸಿದಾಗ ರೂಮ್ ಒಳಗಡೆ ಟೇಬಲ್‌‌  ಸುತ್ತ ಚೇರ್ ಗಳನ್ನು ಇಟ್ಟು ಕುಳಿತುಕೊಂಡು ಹಾಗೂ ಕೆಲವರು ನಿಂತುಕೊಂಡು ಇಸ್ಫೀಟ್ ಎಲೆಗಳನ್ನು ಹಾಕಿ ಹಣವನ್ನು ಪಣವಾಗಿಟ್ಟುಕೊಂಡು ಉಲಾಯಿ ಪಿದಾಯಿ ನಸೀಬಿನ ಜುಗಾರಿ ಆಟವಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಆಟ ಆಡುತ್ತಿರುವವರನ್ನು ಸಿಬ್ಬಂಧಿಯವರೊಂದಿಗೆ ಸುತ್ತುವರಿದು ದಾಳಿ ನಡೆಸಿ ವಿಚಾರಿಸಿದಾಗ 1) ರಘರಾಮ ಶೆಟ್ಟಿ (52) ತಂದೆ ದಿ. ಸೇಸಪ್ಪ ಶೆಟ್ಟಿ, ವಾಸ: ಬಲ್ಲ್ಲಾಳ್ಭಾಗ್ ಶ್ರೀ ಸಿದ್ದಿ, ಎಂ.ಜಿ. ರೋಡು, ಮಂಗಳೂರು 2) ಮಹಮ್ಮದ್ ಆಲಿ, (51) ತಂದೆ ದಿ. ಶೇಖ್ ಮಹಮ್ಮದ್, ವಾಸ: ಮಡಂತ್ಯಾರು, ಮಾಲಾಡಿ ಗ್ರಾಮ ಮತ್ತು ಅಂಚೆ ಬೆಳ್ತಂಗಡಿ 3) ರಾಘವೇಂದ್ರ ಜಿ.ಟಿ (26) ತಂದೆ ದಿ. ತಿಪ್ಪೆ ಸ್ವಾಮೀ, ವಾಸ: ಚಿತ್ರದುರ್ಗ ಚಳ್ಳಿಕೆರೆ ತಾಲೂಕು, ಗೋಪನ ಹಳ್ಳಿ ಗ್ರಾಮ. ಕ್ಯಾರ್ಅಫ್ ರಘರಾಮ ಶೆಟ್ಟಿ ವಾಸ: ಬಲ್ಲಳ್ಭಾಗ್ ಶ್ರೀ ಸಿದ್ದಿ, ಎಂ.ಜಿ. ರೋಡು,. ಮಂಗಳೂರು 4) ಸಲೀಂ ಬಜಾಲ್, (39) ತಂದೆ ಹೈದರ್ ಸಾಬ್, ವಾಸ: ಸಪ್ರೀನಾ ಹೌಸು, ಬಜಾಲ್ ಪಕ್ಕಲಡ್ಕ ಶಾಫಿ ಕ್ಲಿನಿಕ್ ಬಳಿ, ಮಂಗಳೂರು 5) ಬಾಬು ಕುದುರೆಮುಖ, (51) ತಂದೆ ದಿ. ಸೋಮು, ವಾಸ: ವಿನೋಭ ನಗರ, ಕುದುರೆಮುಖ ಅಂಚೆ, ಕುದುರೆಮುಖ. 6) ಆರ್. ಅಚ್ಚುತ ಭಟ್ (41) ತಂದೆ : ದಿ. . ಪಿ. ಆರ್ ಭಟ್, ವಾಸ: ಆರಾಧನ, ಕಕ್ಕೆಬೆಟ್ಟು, ಕುಲಶೇಖರ, ಮಂಗಳೂರು ಎಂಬುದಾಗಿ ತಿಳಿಸಿರುತ್ತಾರೆ. ನಂತರ ಸದ್ರಿ ಆರೋಪಿಗಳನ್ನು ಸ್ಥಳದಲ್ಲಿಯೇ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಜ್ಞಾಪನ ಜ್ಯಾರಿ ಮಾಡಿ, ಉಲಾಯಿ ಪಿದಾಯಿ  ಅಟಕ್ಕೆ ಉಪಯೋಗಿಸಿದ ರೂ. 5,010-00 ಮತ್ತು 52 ಇಸ್ಪಿಟ್ ಎಲೆಗಳನ್ನು ಹಾಗೂ ಕಡು ಕಂದು ಬಣ್ಣದ ಟೇಬಲ್-1 ಮತ್ತು ನೀಲಿ ಉದ್ದ ಗೆರೆಯಿರುವ ಬೆಡ್‌‌ಶೀಟ್‌‌ ಹಾಗೂ 6 ಚೇರಗಳನ್ನು ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡು ಕ್ರಮ ಕೈಗೊಮಡಿರುವುದಾಗಿದೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-08-2014 ರಂದು ಮಂಗಳೂರು ನಗರದ ಬಂಟ್ಸ್ ಹಾಸ್ಟೇಲ್ ಬಳಿ ಇರುವ ವಿಜಯ ಕ್ಲಿನಿಕ್ ನಲ್ಲಿ ಪಿರ್ಯಾದಿದಾರರಾದ ಶ್ರೀಮತಿ ನಸ್ರತ್ ರವರ ಅಣ್ಣ ಸಿರಾಜುದ್ದೀನ್ ಎಂಬವರು ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುವ ಸಮಯ 15:30 ಗಂಟೆಗೆ ಪಿರ್ಯಾದಿದಾರರ ಅಣ್ಣನ ಹೆಂಡತಿಯಾದ ಶ್ರೀಮತಿ ಅನಿಷಾ, ರಹಿಮಾನ್, ಜಮ್ಸೀರ್ ಎಂಬವರು ಆಸ್ಪತ್ರೆಯ ಒಳಗೆ ಬಂದು, ಜಮ್ಸೀರ್ ಪಿರ್ಯಾದಿದಾರರ ಅಣ್ಣ ಸಿರಾಜುದ್ದೀನ್ ರವರ ಕಾಲನ್ನು ಎಳೆದು ಕೆಳಗೆ ಹಾಕಿದ್ದು, ರಹಿಮಾನ್ ಎಂಬಾತನು ಚಪ್ಪಲ್ ನ್ನು ಪಿರ್ಯಾದಿದಾರರ ಮೇಲೆ ಎಸೆದು ಶ್ರೀಮತಿ ಅನಿಷಾ ಪಿರ್ಯಾದಿದಾರರಿಗೆ ಹಾಗೂ ಅವರ ತಾಯಿಗೆ ಉಗುಳಿ ಅವಮಾನ ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಬಯ್ದು, "ನಿಮ್ಮನ್ನು ಕೂಡಾ ಇದೇ ತರ ಮಾಟ ಮಾಡಿ ಮಲಗಿಸಲಿಕ್ಕೆ ಉಂಟು" ಎಂದು ಹೇಳಿ ಜೀವ ಬೆದರಿಕೆ ಒಡ್ಡಿದ್ದಾಗಿದೆ.

 

5.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಸೈಯದ್ ಸಾಗಿಲ್ ರವರು ಮಂಗಳೂರು ನಲ್ಲಿ ಮ್ಯಾಕಾನಿಕಲ್ ವಿದ್ಯಾಬ್ಯಾಸ ಮುಗಿಸಿ, ಆನ್ ಲೈನ್ ಮೂಲಕ ಉದ್ಯೋಗದ ಬಗ್ಗೆ ಅರ್ಜಿ ಸಲ್ಲಿಸಿದ್ದು, ಹೀಗಿರುವಾಗ ದಿನಾಂಕ 11-06-2014 ರಂದು ಪಿರ್ಯಾದಿದಾರರಿಗೆ SIGN4NAUKARI.COM ನಿಂದ ಉದ್ಯೋಗದ ಕುರಿತು ಅಲಿಯಾ ಎಂಬ ಮಹಿಳೆಯಿಂದ ದೂರವಾಣಿ ಕರೆ ಬಂದಿದ್ದು, ಹಲವು ವಿದೇಶಿ ಕಂಪೆನಿಗಳಲ್ಲಿ ಉದ್ಯೋಗ ಖಾಲಿ ಇದ್ದ ಬಗ್ಗೆ ತಿಳಿಸಿದ್ದು, ಅದರಲ್ಲಿ ಪಿರ್ಯಾದಿದಾರರು 3 ಕಂಪೆನಿಗಳನ್ನು ಆಯ್ಕೆ ಮಾಡಿದ್ದು, ತದನಂತರ SIGN4NAUKARI.COM ದೀಪಕ್, ರಾಜ್ ಲಾಂಬಾ, ಎಜಾಜ್, ರಾಹುಲ್ ಶರ್ಮಾ, ಪ್ರಶಾಂತ್, ಶರ್ಮಾಜಿ, ಅಮಿತ್, ಸೌರವ್ ಎಂಬವರುಗಳು ಒಬ್ಬರಾದ ಮೇಲೆ ಒಬ್ಬರಂತೆ ದೂರವಾಣಿ ಮುಖಾಂತರ ಮಾತನಾಡಿ, ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ಮೇರೆಗೆ ಪಿರ್ಯಾದಿದಾರರು ಐಡಿಬಿಐ ಬ್ಯಾಂಕ್, ಕೊಡಿಯಾಲ್ ಬೈಲ್, ಮಂಗಳೂರು & ಕೊಟಕ್ ಮಹಿಂದ್ರಾ ಬ್ಯಾಂಕ್ ಕೊಡಿಯಾಲ್ ಬೈಲ್  ಮಂಗಳೂರು  ನೇದರ ಮೂಲಕ ಹಂತಹಂತವಾಗಿ ಆರೋಪಿತರುಗಳ ಬ್ಯಾಂಕ್ ಅಕೌಂಟ್ ಗೆ ಒಟ್ಟು ರೂ. 41,330/- ಜಮಾ ಮಾಡಿದ್ದು, ಇಲ್ಲಿಯವರೆಗೂ ಉದ್ಯೋಗ ಕೊಡಿಸದೇ ಮೋಸ ಮಾಡಿರುವುದಾಗಿದೆ.

 

6.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 12-08-2014 ರಂದು ಪಿರ್ಯಾದುದಾರರಾದ ಶ್ರೀ ಅಬ್ದುಲ್ ಖಾದರ್ ರವರು ತನ್ನ ಬಾಬ್ತು ಕೆಎಲ್‌ 14 ಜೆ 3363 ನೇ ಕಾರನ್ನು ಚಲಾಯಿಸಿಕೊಂಡು ಮುಡಿಪುವಿನಿಂದ ತೊಕ್ಕೊಟ್ಟು ಕಡೆಗೆ ಬರುತ್ತಾ ಸಮಯ ಸುಮಾರು 11-30 ಗಂಟೆಗೆ ದೇರಳಕಟ್ಟೆ ಕೆ.ಎಸ್ಹೆಗ್ಡೆ ಆಸ್ಪತ್ರೆಯಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಅವರ ಎದರಿನಿಂದ ಅಂದರೆ ತೊಕ್ಕೊಟ್ಟು ಕಡೆಯಿಂದ ಕೆಎ 19 ಸಿ 9222 ನೇ ಟಿಪ್ಪರ್ನ್ನು ಅದರ ಚಾಲಕ ಅತೀವೇಗ ಹಾಗು ತೀರಾ ನಿರ್ಲಕ್ಷ್ಯತನದಿಂದ ಚಾಲಾಯಿಸಿಕೊಂಡು ಬಂದು ಪಿರ್ಯಾದುದಾರರ ಎದುರಿನಿಂದ ಹೋಗುತ್ತಿದ್ದ ಕೆಎ 19 ಇಡಿ 5144 ನೇ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ನಂತರ ಪಿರ್ಯಾದುದಾರರ ಕಾರಿಗೆ ಡಿಕ್ಕಿ ಹೊಡೆದನು.  ಅಪಘಾತದಿಂದ ಪಿರ್ಯಾದುದಾರರ ಕಾರು ಜಖಂಗೊಂಡು ಪಿರ್ಯಾದುದಾರರಿಗೆ ಗುದ್ದಿದ ಗಾಯವಾಗಿರುತ್ತದೆ. ದ್ಚಿಚಕ್ರವಾಹನ ಸವಾರ ನವೀನ್ಆಶೀರ್ವಾದ್‌‌ @ ಆಶೀರ್ವಾದ್ರವರ ಬಲಕಾಲಿಗೆ ಬಲಕೈಗೆ ಮತ್ತು ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿರುತ್ತದೆ. ಗಾಯಾಳು ಆಶೀರ್ವಾದ್ರವರು ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಗೊಂಡು ಚಿಕಿತ್ಸೆಯಲ್ಲಿರುತ್ತಾರೆ. ಗಾಯಾಳು ಪಿರ್ಯಾದುದಾರರು ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ  ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.

 

7.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 09.08.2014 ರಂದು ಪಿರ್ಯಾದಿದಾರರರಾದ ಶ್ರೀ ಪ್ರಸಾದ್ ಎಂಬವರು ತನ್ನ ಬಾಬ್ತು ಮೊಟಾರ್ ಸೈಕಲ್ಲಿನಲ್ಲಿ ಕೆಲಸಕ್ಕೆ ಹೋಗುತ್ತಿರುವ ಸಮಯ ಮದ್ಯಾಹ್ನ ಸುಮಾರು 12:30 ಗಂಟೆ ಸಮಯಕ್ಕೆ ಅಳಪೆ ಗ್ರಾಮದ ಸರಿಪಳ್ಳ ಎಂಬಲ್ಲಿ ಆರೋಪಿ ವಸಂತ ಎಂಬವನು ಪಿರ್ಯಾದುದಾರರ ಬೈಕನ್ನು ತಡೆದು ನಿಲ್ಲಿಸಿ ಪಿರ್ಯಾದುದಾರರ ಕೆನ್ನೆಗೆ ಹೊಡೆದು 'ನನ್ನ ತಂಗಿಗೆ ಮೆಸೇಜ್ ಮಾಡಿದ್ದಿ' ಎಂದು ಹೇಳಿ ಪಿರ್ಯಾದುದಾರರ ತಂದೆ ತಾಯಿಗೆ ಬೈದು, ಪಿರ್ಯಾದುದಾರರನ್ನುದ್ದೇಶಿ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರಿಗೆ ಹಾಗೂ ಪಿರ್ಯಾದುದಾರರ ಜಾತಿಗೆ ನಿಂದನೆ ಮಾಡಿರುವುದಾಗಿದೆ.

 

8.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 12.08.2014 ರಂದು ಸಂಜೆ ಸುಮಾರು 4:15 ಗಂಟೆ ಸಮಯಕ್ಕೆ ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ಇಂದಿರಾ ರವರು ಸಹಶಿಕ್ಷಕಿಯಾಗಿದ್ದು, ಶಾಲೆಯಿಂದ ತನ್ನ ಮನೆಯಾದ ಕುಲಶೇಖರಕ್ಕೆ ಹೋಗುವರೇ ಬಸ್ಸಿಗಾಗಿ ಕುಡುಪು ಗ್ರಾಮದ ಭಟ್ರಕೋಡಿ ಬಸ್ಸು ತಂಗುದಾಣದ ಮುಂಭಾಗ ನಿಂತುಕೊಂಡಿದ್ದಂತೆ, ನೀರುಮಾರ್ಗ ಕಡೆಯಿಂದ ಸುಮಾರು 22 ರಿಂದ 25 ವರ್ಷ ವಯಸ್ಸಿನ ಅಪರಿಚಿತ ಯುವಕರು ಮೋಟಾರು ಬೈಕಿನಲ್ಲಿ ಬಂದು ಪಿರ್ಯಾದಿದಾರರ ಬಳಿ ಮೋಟಾರು ಬೈಕನ್ನು ನಿಲ್ಲಿಸಿ ರಾಣಿಬೆನ್ನೂರಿಗೆ ಎಲ್ಲಿ ? ಎಂದು ಕೇಳಿದಾಗ ಪಿರ್ಯಾದಿದಾರರು ರಾಣಿ ಬೆನ್ನೂರು ಇಲ್ಲಿಲ್ಲ ಎಂಬುದಾಗಿ ಉತ್ತರಿಸುತ್ತಿದ್ದಂತೆ, ಮೋಟಾರ್ ಬೈಕಿನಲ್ಲಿದ್ದ ಸಹಸವಾರ ಪಿರ್ಯಾದಿದಾರರು ಕುತ್ತಿಗೆಯಲ್ಲಿ ಧರಿಸಿದ್ದ ಸುಮಾರು 6 ಪವನ್ ತೂಕದ ಬಂಗಾರದ ಎರಡೆಳೆಯ ಮುಷ್ಠಿ ಸರವನ್ನು ಎಳೆದಾಗ ಪಿರ್ಯಾದಿದಾರರು ನೆಲ್ಲಕ್ಕೆ ಬಿದ್ದ ಸಂದರ್ಭ ಮೋಟಾರ್ ಬೈಕಿನ ಸವಾರ ಮತ್ತು ಸಹಸವಾರರು ಸೇರಿ ಕರಿಮಣಿ ಸರವನ್ನು ಬಲವಾಗಿ ಎಳೆದುಕೊಂಡು ಬೈತುರ್ಲಿ ಕಡೆಗೆ ಮೋಟಾರ್ ಬೈಕಿನಲ್ಲಿಯೇ ಪರಾರಿಯಾಗಿರುವುದಾಗಿಯೂ, ಕರಿಮಣಿ ಸರದ ಅಂದಾಜು ಮೌಲ್ಯ ರೂಪಾಯಿ 1,50,000/- ಆಗಬಹುದು.

No comments:

Post a Comment