Monday, August 11, 2014

Daily Crime Reports 09-08-2014

ದೈನಂದಿನ ಅಪರಾದ ವರದಿ.

ದಿನಾಂಕ 09.08.201407:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

1

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-08-2014 ರಂದು ರಾತ್ರಿ ಪಿರ್ಯಾದಿದಾರರಾದ ಶ್ರೀ ಅದ್ರಾಮ್ ರವರು ಹಾಗೂ ಅವರ ತಮ್ಮ ಊಟ ಮಾಡಿ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಮರಕಾಡ್ ಕಂಬ್ಲಪದವು ಎಂಬಲ್ಲಿ ಮಲಗಿದ್ದು, ದಿನಾಂಕ 08-08-2014 ರಂದು ಬೆಳಿಗ್ಗೆ 06:00 ಗಂಟೆಗೆ ಎದ್ದು ನೋಡಿದಾಗ, ಮನೆಯ ಹಿಂದುಗಡೆಯ ಮಾಡಿನ ಹೆಂಚನ್ನು ತೆಗೆದು, ಗೋಡೆಗೆ ಅಳವಡಿಸಿದ ಏಣಿಯಿಂದ ಕೆಳಗೆ ಇಳಿದು, ಮಧ್ಯ ಕೋಣೆಯಲ್ಲಿ ಗೋಡೆಗೆ ಆಣಿಯಲ್ಲಿ ಇಟ್ಟಿರುವ ಕೀಯನ್ನು ತೆಗೆದು ಗೋಡ್ರೇಜ್ ಬಾಗಿಲನ್ನು ತೆಗೆದು, ಒಳಗಡೆ ಇದ್ದ ರೂ 500 100 ನೋಟಿನ ಕಂತೆ ಒಟ್ಟು 50,000/- ರೂ ನಗದು ಹಣ ಮತ್ತು ಸೇಮಿಗೆ ಮಣೆಯ ಹಿತ್ತಾಳೆಯ ಅಂಡೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರ ಹೆಂಡತಿ ಖತೀಜಮ್ಮಳ ನಾದಿನಿಯ ಇಬ್ಬರು ಮಕ್ಕಳ ಮೇಲೆ ಅನುಮಾನ ಇರುತ್ತದೆ.

 

2.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 08.08.2014 ರಂದು ಪಿರ್ಯಾದಿದಾರರಾದ ಶ್ರೀ ಜಯಾ ಗೌಡ ರವರು ಅವರ ಬಾಬ್ತು ಮೋಟಾರು  ಸೈಕಲ್ ನಂಬ್ರ: KA-19-EL-824 ರಲ್ಲಿ ಎಡಪದವು ಕಡೆಯಿಂದ ಅವರು ಕೆಲಸ ಮಾಡುತ್ತಿದ್ದ ಮೂಡಬಿದ್ರೆ ಮಾತೃ ಭೂಮಿ ವಿವಿದ್ದೋದ್ದೇಶ ಸೌಹಾರ್ಧ ಸಹಕಾರಿ ಸಂಸ್ಥೆಯ ಪಿಗ್ಮಿ ಕಲೆಕ್ಷ ನ್ ಬಗ್ಗೆ ಮೂಡಬಿದ್ರೆ ಗೆ ಬರುವ ಸಮಯ 12.15 ಗಂಟೆಗೆ ಮೂಡಬಿದ್ರೆ ನಿಶ್ಮಿತಾ ಟವರ್ರ್ಸ್ ಬಳಿ ಇರುವ ಪೆಟ್ರೋಲ್ ಪಂಪ್ ತಲುಪುವ ಸಮಯ ಮೂಡಬಿದ್ರೆ ಪೇಟೆ ಕಡೆಯಿಂದ KL-18E-6082 ಟೆಂಪೋ ಚಾಲಕನು ಅತೀವೇಗ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲ ಬದಿಗೆ ಬಂದು ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿಯ ಎಡಕಾಲ ಬೆರಳಿಗೆ ತರಚಿದ ಗಾಯ, ಎಡಕಾಲ ಮಂಡಿಗೆ ಗುದ್ದಿದ ಗಾಯ ಆಗಿದ್ದು, ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ  ದಾಖಲಿಸಲಾಗಿದ್ದು, , ಆರೋಪಿಯು ವಾಹನವನ್ನು ನಿಲ್ಲಿಸದೆ ಪರಾರಿ ಯಾಗಿರುವುದಾಗಿದೆ.

 

3.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 08-08-2014 ರಂದು ಪಿರ್ಯಾದಿದಾರರಾದ ಶ್ರೀ ಮೆಲ್ವಿನ್ ಪಿಂಟೋ ಎಂಬವರು ಪಳ್ನೀರು ರಸ್ತೆಯಲ್ಲಿರುವ ತನ್ನ ಅಂಗಡಿಯಾದ ಜನದ್ವನಿ ಸಂಪರ್ಕ ಕೇಂದ್ರ ಕ್ಕೆ ಮುಂಜಾನೆ ಸುಮಾರು 3.30 ಗಂಟೆಗೆ ಬಂದು ನೋಡಿದಾಗ ತನ್ನ ಜನದ್ವನಿ ಸಂಪರ್ಕ ಕೇಂದ್ರದ ಬೀಗವನ್ನು ಯಾರೋ ಕಳ್ಳರು ಕತ್ತರಿಸಿ ಒಳಗೆ ಪ್ರವೇಶಿಸಿ ಕ್ಯಾಶ್ ನಲ್ಲಿದ್ದ ಬಾಕ್ಸ್ ಗಳನ್ನು  ಹೊರತೆಗೆದು ಕಳ್ಳತನ ಮಾಡಿರುವುದಾಗಿದೆ.

 

4.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಕಪಿಲ್ ಭಾರ್ಗವ ರವರು ಮಂಗಳೂರು ಬಂದರು ಅಜೀಜುದ್ದೀನ್ ರಸ್ತೆಯ 4 ನೇ ಕ್ರಾಸ್, ಗಾಂಧಿಸನ್ಸ್ ಬಳಿ ಆಫೀಸ್ ಇರುವ ಪೈ & ಸ್ಟೀಲ್ಸ್ ಕಾರ್ಪೊರೇಶನ್ ಕಂಪೆನಿಯ ಮಾಲಕರಾಗಿದ್ದು, ಸದ್ರಿ ಕಂಪೆನಿಯಲ್ಲಿ ವ್ಯಾಪಾರ ವಹಿವಾಟು ಕಲೆಕ್ಷನ್ ಬಗ್ಗೆ ಆರೋಪಿತ ದಿನಕರ ಆಚಾರ್ಯ ಎಂಬವರನ್ನು ನೇಮಕ ಮಾಡಿದ್ದು, ಅದರಂತೆ ಕಲೆಕ್ಷನ್ ಹಣವನ್ನು ದಿನಕರ ಆಚಾರ್ಯ ರವರು ಸಂಸ್ಥೆಗೆ ತಂದು ಕೊಡುತ್ತಿದ್ದರು. ಹೀಗಿರುತ್ತಾ ದಿನಾಂಕ 28-07-2014 ನಂತರದ ದಿನಗಳಲ್ಲಿ ಪೈ & ಸ್ಟೀಲ್ ಕಾರ್ಪೊರೇಶನ್ ಕಂಪೆನಿಯಿಂದ ಸರಕು ಸಾಮಾನುಗಳನ್ನು ನೀಡಿದ ಬೆಳ್ತಂಗಡಿಯ ಜೇಮ್ಸ್ ಡಿ'ಸೋಜಾ, ಬೆಳ್ತಂಗಡಿಯ ಲಿಮಾ ಪಿಂಟೋ, ಸುಳ್ಯದ ಅಪರ್ಣಾ ಇಂಡಸ್ಟ್ರೀಟ್, ಸುಳ್ಯದ ಅಂಬಿಕಾ ಮೋಟಾರ್ ವರ್ಕ್ಸ್, ಸುಳ್ಯದ ಜಗನ್ನಾಥ್, ಪ್ರಗ್ಜೋತಿ ಇಂಡಿಸ್ಟ್ರೀಟ್ ಸುಳ್ಯ ಸಂಸ್ಥೆಗಳಿಂದ ಬಾಕಿ ಇರುವ ಹಣವನ್ನು ಪಿರ್ಯಾದಿದಾರರು ಕೇಳಿದಾಗ ಸಂಸ್ಥೆಯವರು ತಾವು ಹಣವನ್ನು ಆರೋಪಿತ ದಿನಕರ ಆಚಾರ್ಯ ರಲ್ಲಿ ನೀಡಿರುತ್ತೇವೆ, ಅಲ್ಲದೇ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತೇವೆ ಎಂದು ಹೇಳಿದ ಸಮಯ ಪಿರ್ಯಾದಿದಾರರು ಆರೋಪಿತರನ್ನು ಕೇಳಿದಾಗ ಆರೋಫಿತನು ಪಿರ್ಯಾದಿ ಹಾಗೂ ಸಂಸ್ಥೆಗೆ  ವಂಚನೆ ಹಾಗೂ ಮೋಸವನ್ನು ಮಾಡುವ ಉದ್ದೇಶವನ್ನಿರಿಸಿಕೊಂಡು ನಕಲಿ ಬಿಲ್ಲ್ ನ್ನು ತಯಾರಿಸಿ, ದಿನಾಂಕ 28-07-2014 ರಂದು ಪಿರ್ಯಾದಿದಾರರಿಗೆ ಎರಡು ಲಕ್ಷ ಹಣವನ್ನು ನೀಡಿ ಬಾಕಿ ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ದಿನಾಂಕ 30-08-2014 ರಂದು ಬಾಕಿ ಉಳಿದ ಹಣವನ್ನು ಕೇಳಿದಾಗ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿದಲ್ಲದೇ ದೂರವಾಣಿ ಮೂಲಕ ಬೆದರಿಕೆಯನ್ನೊಡ್ಡಿ, ಸುಮಾರು 13 ಲಕ್ಷ ರೂಪಾಯಿಗಳಷ್ಟು ವಂಚನೆಯನ್ನು ಮಾಡಿರುತ್ತಾರೆ.

 

5.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.08.2014 ರಂದು ಪಿರ್ಯಾದುದಾರರಾದ ಶ್ರೀ ಕೇಶವ ರವರು ತಮ್ಮ ಬಾಬ್ತು KA-19-X-3523ನೇ ನಂಬ್ರದ ಮೊಟಾರ್ ಸೈಕಲ್ಲನ್ನು ತಮ್ಮ ಮನೆಯ ಕಡೆಯಿಂದ ಮಂಗಳೂರು ಕಡೆಗೆ ಹಿಂಬದಿ ಸವಾರರನ್ನಾಗಿ ದಿನಕರ ಎಂಬವರನ್ನು ಕುಳ್ಳಿರಿಸಿ ಸವಾರಿಮಾಡಿಕೊಂಡು ಹೋಗುತ್ತಿರುವ ಸಮಯ ಬೆಳಿಗ್ಗೆ ಸುಮಾರು 09:00 ಗಂಟೆಗೆ ಕೆಲರಾಯ್ ಜಂಕ್ಷನ್ ಬಳಿಗೆ ತಲುಪುತ್ತಿದ್ದಂತೆ KA-19-W-8314ನೇ ನಂಬ್ರದ ಮೋಟಾರ್ ಸೈಕಲ್ಲನ್ನು ಅದರ ಸವಾರನು ಮಂಗಳೂರು ಕಡೆಯಿಂದ ನೀರುಮಾರ್ಗ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದುದಾರರ ಮೊಟಾರ್ ಸೈಕಲ್ಲಿನ ಹಿಂದಿನ ಬೈಕ್ ಪೆಡಲಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರು ಮತ್ತು ಸಹಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರ ಬಲಕಾಲಿನ ಪಾದಕ್ಕೆ ಗುದ್ದಿದ ರಕ್ತ ಗಾಯವಾಗಿ ಜಖಂಗೊಂಡವರು ಚಿಕಿತ್ಸೆಯ ಬಗ್ಗೆ ನಗರದ ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಂಡಿರುವುದಲ್ಲದೇ ಸದ್ರಿ ಅಪಘಾತದಿಂದ  ಸಹಸವಾರ ದಿನಕರ ರವರ ಕಾಲಿಗೆ ತರಚಿದ ಗಾಯಗೊಂಡಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 07.08.2014 ರಂದು 18.00 ಗಂಟೆಗೆ ಅಳಪೆ ಗ್ರಾಮದ ಸರಸ್ವತೀ ನಗರ ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಕಮಲಾಕ್ಷ ರವರ ತಂದೆ  ಗೋಪಾಲಕೃಷ್ಣ (65) ಎಂಬವರು ಮನೆಯಿಂದ  ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಅವರ ಪತ್ತೆಯ ಬಗ್ಗೆ ನೆರೆಕರೆಯವರಲ್ಲಿ ಮತ್ತು ಸಂಬಂಧಿಕರಲ್ಲಿ ವಿಚಾರಿಸಿದಲ್ಲಿ ಪತ್ತೆಯಾಗಿರುವುದಿಲ್ಲ.

No comments:

Post a Comment