Friday, August 8, 2014

Daily Crime Reports 08-08-2014

ದೈನಂದಿನ ಅಪರಾದ ವರದಿ.

ದಿನಾಂಕ 08.08.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

0

ಹಲ್ಲೆ ಪ್ರಕರಣ   

:

0

ಮನೆ ಕಳವು ಪ್ರಕರಣ

:

1

ಸಾಮಾನ್ಯ ಕಳವು

:

1

ವಾಹನ ಕಳವು

:

0

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

2

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

2

ಇತರ ಪ್ರಕರಣ

:

0

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07-08-2014 ರಂದು  8.40 ಗಂಟೆ ಸಮಯ ಪಿರ್ಯಾದಿದಾರರಾದ ಶ್ರೀ ಯತಿರಾಜ್ ಡಿ. ಸಾಲಿಯಾನ್ ರವರು ಎಮ್.ಆರ್.ಪಿ.ಎಲ್ ಕಡೆಗೆ ಹೋಗುತ್ತಾ ಬಿ..ಎಸ್.ಎಫ್.ಗೇಟ್ ಮುಂಭಾಗ ಹೋಗುತ್ತಿರುವಾಗ ಎದುರಿನಿಂದ ಹೊಸ ಮೋಟಾರ್ ಸೈಕಲ್ ನ್ನು ವಿನೀತ್ ಹೆಚ್. ಎಂ. ಎಂಬವರು ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ನಿರ್ಲಕ್ಷತನದಿಂದ ಚಲಾಯಿಸಿ ಏಕಾಎಕಿ ರಸ್ತೆಯನ್ನು ಅಡ್ಡ ದಾಟುತ್ತಿದ್ದ ನಾಯಿಯನ್ನು ತಪ್ಪಿಸಲು ಹೋಗಿ ನಾಯಿಗೆ ಢಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸವಾರ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ಹೊತ್ತಿಗೆ ಮೃತಪಟ್ಡಿರುವುದಾಗಿದೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 07.08.2014 ರಂದು 15.00 ಗಂಟೆಗೆ ಬಿಕರ್ನಕಟ್ಟೆ ತುಳಿಸಿ ಅಂಗಡಿ ಎಂಬಲ್ಲಿ  KA19-V-115 ಸ್ಕೂಟರ್ ನ್ನು ಆರೋಪಿ ಸುದೇಶ್ ಎಂಬಾತನು ಬಿಕರ್ನಕಟ್ಟೆ  ಕೈಕಂಬ ಕಡೆಯಿಂದ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಡಿವೈಡರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ಸಹ ಸವಾರ ಪಿರ್ಯಾದುದಾರರಾದ ಉದಯ್ ಕುಮಾರ್ ರವರ ಅಣ್ಣ ದಿನಕರನ್ ಮುಖಕ್ಕೆ, ಬಲಕಾಲಿನ ಮೊಣಗಂಟಿಗೆ ರಕ್ತಗಾಯವಾಗಿದ್ದು, ಸ್ಕೂಟರ್ ಸವಾರ ಸುದೇಶನ ಹಣೆಗೆ, ಕಾಲಿಗೆ ರಕ್ತಗಾಯವಾಗಿದ್ದು, ಗಾಯಾಳುಗಳು ಮಂಗಳೂರು ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕೆತ್ಸೆಯಲ್ಲಿರುತ್ತಾರೆ.

 

3.ಪಣಂಬೂರು ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಮಹಮ್ಮದ್ ರಶೀದ್ ರವರ ತಮ್ಮನಾದ ಇಸ್ಮಾಯಿಲ್ (19) ದಿನಾಂಕ 07-08-2014 ರಂದು ಮಧ್ತಾಹ್ನ 2-00 ಗಂಟೆಗೆ ನೆರೆಕರೆಯ ಚಂದು ಯಾನೆ ಹಾರಿಸ್ ಎಂಬವರ ಜೊತೆ ಮೀನು ಹಿಡಿಯಲು ಹೋಗಿದ್ದು ಮೀನು ಹಿಡಿಯುವ ಬಲೆಯುನ್ನು ಕಸಬಾ ಬೆಂಗರೆ ಸುಮದ್ರ ಕಿನಾರೆಯಲ್ಲಿ ಸಮುದ್ರ ದಡದಿಂದ ಸ್ವಲ್ಲ ದೂರದಲ್ಲಿ ಬಿಡುತ್ತಿರುವ ಸಂಧರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕಾಣೆಯಾಗಿರುತ್ತಾನೆ. ಅವರ ಬಗ್ಗೆ ಕಸಬಾ ಬೆಂಗ್ರೆ ತೋಟ ಬೆಂಗರೆ ಸಮುದ್ರ ಕಿನಾರೆಯಲ್ಲಿ ಹುಡುಕಾಡಿದರೂ ತನಕ ಪತ್ತೆಯಾಗಿರುವುದಿಲ್ಲ.

 

4.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿ ಶ್ರೀಮತಿ ಜೆಸಿಂತಾ ರೊಡ್ರಿಗಸ್ ರವರ  ಗಂಡ ಪ್ರಾಯ 54 ವರ್ಷದ ಗ್ರೆಗರಿ ರೊಡ್ರಿಗಸ್ ಎಂಬವರು ಕೆಲಸದ ನಿಮಿತ್ತ  ಒಂದು ವಾರದಲ್ಲಿ ವಾಪಾಸು ಬರುತ್ತೇನೆಂದು ಹೇಳಿ ಮಂಗಳೂರು ನಗರದ ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ಮಠ ಗಾರ್ಡನ್ ಎಂಬಲ್ಲಿರುವ ತನ್ನ ಮನೆಯಿಂದ  ದಿನಾಂಕ: 19-05-2014 ರಂದು  ಬೆಂಗಳೂರಿಗೆ ಹೋದವರು ವರೆಗೂ ವಾಪಾಸು ಬಾರದೇ ಇದ್ದು ಕಾಣೆಯಾಗಿರುತ್ತಾರೆ.

 

5.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಇರುವೈಲಿನಲ್ಲಿ ಸೋಹಮ್ ಕಂಪನಿಯ ಹೈಡ್ರೋ ಪವರ್ ಪ್ಲಾಂಟ್ ಪ್ರಾಜೆಕ್ಟ್ ಇದರ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಗೆ ಉಪಯೋಗಿಸುತ್ತಿದ್ದ, ನವಕೇತನ್ ಕಂಪನಿಯ ವೆಲ್ಡಿಂಗ್ ಜನ್ ರೇಟರ್ ನ್ನು ಶೆಡ್ ಒಳಗೆ ದಿನಾಂಕ: 12.07.2014 ರಂದು ಇಟ್ಟು, ದಿನಾಂಕ: 28.07.2014 ರಂದು ಪಿರ್ಯಾದಿದಾರರಾದ ಶ್ರೀ ಬಾಲಸುಬ್ರಮಣ್ಯಂ ರವರು ಶೆಡ್ಡಿಗೆ ಬಂದು ನೋಡಿದಾಗ ಶೆಡ್ಡಿನಲ್ಲಿದ್ದ, ವೆಲ್ಡಿಂಗ್ ಜನರೇಟರ್ ಯರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿರುವುದಾಗಿದೆ. 2011 ನೆ ವರ್ಷದಲ್ಲಿ ವೆಲ್ಡಿಂಗ್ ಮಿಷಿನ್ ಖರೀದಿಸಿದ್ದು, ನಿಗದಿತ ಬೆಲೆಯನ್ನು ಮುಂದಕ್ಕೆ ತಿಳಿಸುವುದಾಗಿ ಪಿರ್ಯಾದಿ ನೀಡಿರುವುದಾಗಿದೆ.

 

6.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ರೋಹಿತ್ ಕುಲಾಲ್ ರವರು ಕಂಕನಾಡಿ ಗ್ರಾಮದ ನಾಗೂರಿ ಎಂಬಲ್ಲಿ ಸೆಲ್‌‌ ಪ್ಲಾನೆಟ್‌‌ ಎಂಬ ಮೊಬೈಲ್‌‌ ಅಂಗಡಿಯನ್ನು ನಡೆಸುತ್ತಿದ್ದು  ದಿನಾಂಕ 04.08.2014 ರಂದು ತನ್ನ ಸಂಬಂಧಿಕರ ಮನೆಗೆ ಮುಂಬೈಗೆ ಹೋಗಿದ್ದು, ದಿನಾಂಕ:06.08.2014 ರಂದು ಮಂಗಳೂರಿಗೆ ವಾಪಾಸು ಬರುತ್ತಿದ್ದು, ದಿನಾಂಕ: 07.08.2014 ರಂದು ಬೆಳಿಗ್ಗೆ 8.30 ಗಂಟೆಗೆ ಭಟ್ಕಳದಲ್ಲಿ ರೈಲಿನಲ್ಲಿ ಬರುತ್ತಿದ್ದಂತೆ ಪಿರ್ಯಾದಿದಾರರು ತಮ್ಮ ವಸಂತ ಎಂಬವರು ಪಿರ್ಯಾಧಿದಾರರಿಗೆ ಫೋನ್‌‌ ಮಾಡಿ ಅವರ ಬಾಬ್ತು ಮೊಬೈಲ್‌‌ ಅಂಗಡಿಯಲ್ಲಿ ಕಳ್ಳತನವಾದ ವಿಚಾರವನ್ನು ತಿಳಿಸಿದ್ದು ಪಿರ್ಯಾಧಿದಾರರು ನಾಗೂರಿಯಲ್ಲಿರುವ ಮೊಬೈಲ್‌‌ ಅಂಗಡಿಗೆ ಬಂದು ಪರಿಶೀಲಿಸಿದಲ್ಲಿ ವಿವಿಧ ಕಂಪೆನಿಗಳ ಒಟ್ಟು 9 ಮೊಬೈಲ್‌‌ ಫೋನ್‌‌ಗಳು ಕಳವಾಗಿದ್ದು ಕಳವಾದ ಸೊತ್ತುಗಳ ಒಟ್ಟು ಮೌಲ್ಯ 17500/- ಆಗಿರುತ್ತದೆ.

No comments:

Post a Comment