Monday, August 4, 2014

Daily Crime Reports 04-08-2014

ದೈನಂದಿನ ಅಪರಾದ ವರದಿ.

ದಿನಾಂಕ 04.08.201406:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌  ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು    ಕೆಳಗಿನಂತಿದೆ.

 

ಕೊಲೆ  ಪ್ರಕರಣ

:

0

ಕೊಲೆ  ಯತ್ನ

:

0

ದರೋಡೆ ಪ್ರಕರಣ

:

0

ಸುಲಿಗೆ ಪ್ರಕರಣ

:

1

ಹಲ್ಲೆ ಪ್ರಕರಣ   

:

2

ಮನೆ ಕಳವು ಪ್ರಕರಣ

:

2

ಸಾಮಾನ್ಯ ಕಳವು

:

0

ವಾಹನ ಕಳವು

:

2

ಮಹಿಳೆಯ ಮೇಲಿನ ಪ್ರಕರಣ

:

0

ರಸ್ತೆ ಅಪಘಾತ  ಪ್ರಕರಣ

:

7

ವಂಚನೆ ಪ್ರಕರಣ       

:

0

ಮನುಷ್ಯ ಕಾಣೆ ಪ್ರಕರಣ

:

1

ಇತರ ಪ್ರಕರಣ

:

2

 

 

 

 

 

 

 

 

 

 

 

 

 

 

 

 

 

 

 

 

 

 

 

 

1.ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-08-2014 ರಂದು ಪಿರ್ಯಾದಿದಾರರಾದ ಕೆ. ಅಬ್ದುಲ್ ರೆಹಮಾನ್ ರವರು ಮೀನು ಖರೀದಿಸಲು ಮೂಲ್ಕಿ ಮೀನು ಮಾರ್ಕೆಟ್ ಗೆ ಬಂದು ವಾಪಸು ಮನೆಗೆ ಹೋಗುತ್ತಾ ಬೆಳಿಗ್ಗೆ 09.30 ಗಂಟೆಗೆ ಮೂಲ್ಕಿ ಲಲಿತ್ ಬಾರ್ ಮುಂಭಾಗ ತಲುಪಿದಾಗ ಎನ್.ಹೆಚ್.66 ರಲ್ಲಿ ಕೆಎ.19.ಇಎಲ್.2797 ನೇ ನಂಬ್ರದ ಮೋಟಾರ್ ಸ್ಯೆಕಲ್ ನ್ನು ಅದರ ಸವಾರ ರಶ್ವಥ್ ಎಂಬವರು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗಿ ಚಲಾಯಿಸಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಪಿರ್ಯಾದಿದಾರರ ಅಳಿಯ ಫ್ಯೆಝಾಲ್ ಅಹಮ್ಮದ್ ಎಂಬವರು ಚಲಾಯಿಸುತ್ತಿದ್ದ  ಕೆಎ.20.ಇಡಿ.2368 ನೇ ನಂಬ್ರದ ಮೋಟಾರ್ ಸ್ಯೆಕಲ್ ಗೆ ಢಿಕ್ಕಿ ಪಡಿಸಿ ಇಬ್ಬರು ಸವಾರರು ಗಾಯಗೊಂಡದಲ್ಲದೇ ಬ್ಯೆಕ್ ಗಳೆರಡು ಜಖಂಗೊಂಡು ಗಾಯಾಳುಗಳು ಮುಕ್ಕ  ಶೀನಿವಾಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ.

 

2.ಮಂಗಳೂರು ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-08-2014 ರಂದು ಮಧ್ಯಾಹ್ನ ಸುಮಾರು  3.20 ಗಂಟೆಗೆ  ಏಳಿಂಜೆ ಲಕ್ಷೀಜನಾರ್ಧನ ದೇವಸ್ಥಾನದ ದ್ವಾರದ ಬಳಿ ಸಂಕಲ ಕರಿಯ ಸೇತುವೆ ಕಡೆಯಿಂದ ಕಿನ್ನಿಗೋಳಿ ಕಡೆಗೆ ಮಹಂತೇಶ್ ರವರು ತನ್ನ  ಅಣ್ಣ ಮಾರುತಿ ಎಂಬವರ ಹೊಸ ಮೋಟಾರ್ ಸೈಕಲ್ ನಲ್ಲಿ ಬಸವರಾಜು ಎಂಬವರನ್ನು ಕುಳ್ಳಿರಿಸಿಕೊಂಡು ಮಾನವ ಜೀವಕ್ಕೆ ಆಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯಲ್ಲಿ ಇದ್ದ ಕಲ್ಲಿಗೆ ಢಿಕ್ಕಿಹೊಡೆದು ಬಳಿಕ ಅಲ್ಲೇ ಬಳಿ ಇದ್ದ  ವಿದ್ಯುತ್ಕಂಬಕ್ಕೆ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸಮೇತ ಸವಾರರು ಬಿದ್ದಿದ್ದು ಸವಾರ ಮಹಂತೇಶ್ ತಲೆ ಒಡೆದು ಗಂಬೀರ ಗಾಯಗೊಂಡು ಮೃತಪಟ್ಟಿರುವುದಲ್ಲದೇ, ಸಹ ಸವಾರ ಬಸವರಾಜನ ತಲೆ, ಕೈಕಾಲುಗಳಿಗೆ ಗಂಬೀರ ಸ್ವರೂಪದ ಗಾಯವಾಗಿರುವುದಾಗಿದೆ.

 

3.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02.08.2014 ರಂದು ಮದ್ಯಾಹ್ನ 2:30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮಹಮ್ಮದ್ ಅಲಿ ರವರು ತನ್ನ ಮಗ ಮಸೂದ್‌ (10) ಎಂಬಾತನೊಂದಿಗೆ ಮಂಗಳೂರು ತಾಲೂಕು, ಬೋಳಿಯಾರು ಗ್ರಾಮದ ಪಲ್ಲಸೈಟ್ಎಂಬಲ್ಲಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೋಟಾರ್ಸೈಕಲ್ನಂಬ್ರ ಕೆಎ-19ವೈ-6381 ನೇಯದನ್ನು ಅದರ ಸವಾರ ಫಯಾಝ್ಎಂಬಾತನು ಕುರ್ನಾಡು ಕಡೆಯಿಂದ ಬೋಳಿಯಾರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರರ ಮಗ ಮಸೂದ್ಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಮಸೂದ್ರಸ್ತೆಗೆ ಬಿದ್ದು, ಮುಖಕ್ಕೆ ರಕ್ತಗಾಯ, ಹಲ್ಲಿನ ದವಡೆಗೆ ಮೂಳೆ ಮುರಿತದ ಗಾಯ, ಮೂಗು ಮತ್ತು ಕಣ್ಣಿನ ಹುಬ್ಬಿನ ಹತ್ತಿರ ತರಚಿದ ಗಾಯ ಹಾಗೂ ತಲೆಯ ಮೇಲ್ಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ಗಾಯಾಳು ಮಸೂದ್ದೇರಳಕಟ್ಟೆ ಕೆ.ಎಸ್‌.ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾನೆ.

 

4.ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 02-08-2014ರಂದು ಮದ್ಯಾಹ್ನ 2:00 ಗಂಟೆಗೆ ಬಂಟ್ವಾಳ ತಾಲೂಕು ಪಜೀರು ಗ್ರಾಮದ ಕಂಬ್ಲಪದವು ಎಂಬಲ್ಲಿ ಪಿರ್ಯಾದಿದಾರರಾದ ಶ್ರೀ ಮೊಹಮ್ಮದ್ ಕಬೀರ್ ರವರು ಕೆಲಸ ಮುಗಿಸಿ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ದೇರಳಕಟ್ಟೆ ಕಡೆಯಿಂದ ಮುಡಿಪು ಕಡೆಗೆ ಟಿ.ವಿ.ಎಸ್ ದ್ವಿಚಕ್ರ ವಾಹನ ಸಂಖ್ಯೆ ಕೆಎ-19-ಯು-6016 ಸವಾರನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಹಿಂದುಗಡೆಯಿಂದ ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದು, ಅವರ ಎಡ ಕಣ್ಣಿನ ಬಳಿ ಮತ್ತು ತಲೆಯ ಹಿಂಬದಿಯಲ್ಲಿ ರಕ್ತಗಾಯವಾಗಿದ್ದು, ಪಿರ್ಯಾದಿದಾರರನ್ನು ಅಲ್ಲಿ ಸೇರಿದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗ ದಾಖಲಿಸಿರುತ್ತಾರೆ.

 

5.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-08-2014 21-15 ಗಂಟೆಯಿಂದ ದಿನಾಂಕ: 03-08-2014ರಂದು 07-30 ಗಂಟೆಯ ಮಧ್ಯೆ ಮಂಗಳೂರು ನಗರದ ಪದುವ ಮಲ್ಲಿ ಕಂಪೌಂಡ್ ಎಂಬಲ್ಲಿರುವ ಪಿರ್ಯಾದಿದಾರರಾದ ಶ್ರೀಮತಿ ಗ್ರೇಸಿ ಸಲ್ದಾನಾ ರವರ ಜನರಲ್ ಸ್ಟೋರ್ ಅಂಗಡಿಯ ಶಟರ್ ಡೋರಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧವನ್ನು ಉಪಯೋಗಿಸಿ ಮೀಟಿ ತೆರದು ಮೂಲಕ ಒಳಪ್ರವೇಶಿಸಿ ಅಂಗಡಿಯೊಳಗಿದ್ದ  Nokia ಕಂಪನಿಯ ಒಟ್ಟು ಅಂದಾಜು ಮೌಲ್ಯ 2,500 ರೂ. ಬೆಲೆ ಬಾಳುವ Airtel ಕಂಪನಿಯ ನಂ.9901595885, BSNL ಕಂಪನಿಯ ನಂ.9448914500, Docomo ಕಂಪನಿಯ ನಂ.8123113354, Vodafone ಕಂಪನಿಯ ನಂ.8095094134 ಹಾಗೂ Idea ಕಂಪನಿಯ ನಂ.9164218184ನೇ ಸಿಮ್ ಕಾರ್ಡ್ ಗಳಿದ್ದ ಮೊಬೈಲ್ ಫೋನ್-5, ಸುಮಾರು ಒಟ್ಟು 2,000/- ರೂ ಬೆಲೆ ಬಾಳುವ FOGG ಕಂಪನಿಯ ಡಿಯೋಡ್ರೆಂಟ್ ಗಳು-15 ಹಾಗೂ ಅಂಗಡಿಯ ಟೇಬಲ್ ಡ್ರಾವರ್ ನಲ್ಲಿ ಇರಿಸಿದ್ದ ನಗದು ಹಣ ರೂ. 19,000/-. ಹೀಗೆ ಒಟ್ಟು ಸುಮಾರು 23,500/- ರೂ ಬೆಲೆ ಬಾಳುವ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ.

 

6.ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 30-07-2014 ಸಂಜೆ 18-30 ಗಂಟೆಯಿಂದ ದಿನಾಂಕ: 31-07-2014ರಂದು ಬೆಳಿಗ್ಗೆ 07-45 ಗಂಟೆಯ ಮಧ್ಯೆ ಮಂಗಳೂರು ನಗರದ ಕೆ.ಪಿ.ಟಿ. ಹಿಂದುಗಡೆ ಉದಯನಗರ ಎಂಬಲ್ಲಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿಟ್ಟಿದ್ದ ಪಿರ್ಯಾದಿದಾರರಾದ ಶ್ರೀ ಶ್ರೀನಾಥ್ ರವರ ಬಾಬ್ತು ಚಾಸೀಸ್ ನಂಬ್ರ: ME4JC445798107898, ಇಂಜಿನ್ ನಂಬ್ರ; JC44E0107352ನೇ KA 19EA 0680ನೇ ನೋಂದಣಿ ಸಂಖ್ಯೆಯ 2009ನೇ ಮೊಡೆಲಿನ ಹೋಂಡಾ ಕಂಪನಿಯ ಆಕ್ಟಿವಾ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ದ್ವಿ-ಚಕ್ರ ವಾಹನವನ್ನು ಕಳವಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಿದಲ್ಲಿ ಪತ್ತೆಯಾಗದೇ ಇರುವುದಾಗಿದೆ.

 

7.ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ವಿನಿತ್ ಕುಮಾರ್ ರವರು ಮಂಗಳೂರು ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಸುಮಾರು 20 ವರ್ಷಗಳಿಂದ ದೇವಸ್ಥಾನದ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 02-08-2014 ರಂದು ಬೆಳಿಗ್ಗೆ ದೇವಸ್ಥಾನದಲ್ಲಿರುವ ಸಮಯ ಮಂಗಳೂರು ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಶ್ರೀ ಪದ್ಮರಾಜ್ ರವರ ಮೊಬೈಲ್ ಗೆ ಮೊಬೈಲ್ ಅಪರಿಚಿತ ನಂಬ್ರವೊಂದರಿಂದ ವಾಟ್ಸ್ ಅಪ್ ಮುಖೇನ ಶ್ರೀ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಭಾವಚಿತ್ರದೊಂದಿಗೆ "ಶ್ರೀ ಜನಾರ್ಧನ ಪೂಜಾರಿ ಎಂಬ ಧರ್ಮದ್ರೋಹಿ ಕುದ್ರೋಳಿ ದೇವಸ್ಥಾನದ ಆವರಣದಲ್ಲಿ ಶಾಂತಿ ದೂತರಿಗೆ ಚಿಕನ್ ಮಟನ್ ಬಿರಿಯಾನಿ ಮಾಡಿ ಉಣ್ಣಿಸಿ, ದೇವಸ್ಥಾನದ ಪಾವಿತ್ರತೆಯನ್ನು ಹಾಳುಗೆಡವಿದ್ದಾರೆ", ಹಾಗೆಯೇ ದಪ್ಪ ಅಕ್ಷರಗಳಲ್ಲಿ "ಇಫ್ತಾರ್ ಕೂಟ ಇದಕ್ಕೆ ಏನು ಹೇಳುತ್ತೀರಿ" ಎಂಬದಾಗಿ ಶಿರ್ಷಿಕೆಯನ್ನು ವಾಟ್ಸಪ್ ಮೂಲಕ ಪ್ರಕಟ ಗೊಳಿಸಿದ್ದನ್ನು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ರವರು ದೇವಸ್ಥಾನದ ಆವರಣದಲ್ಲಿ ಇದ್ದ ಸಮಯ ಪಿರ್ಯಾದಿದಾರರು ನೋಡಿದ್ದು, ರೀತಿ ಕ್ಷೇತ್ರದ ಬಗ್ಗೆ ಅಪಪ್ರಚಾರವನ್ನು ವಾಟ್ಸಪ್ ಮೂಲಕ ಪ್ರಚಾರ ಮಾಡಿದ ಸಮಾಜ ಘಾತುಕರನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈ ಗೊಳ್ಳುವಂತೆ ಪಿರ್ಯಾದಿ ನೀಡಿರುವುದಾಗಿದೆ.

 

8.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-08-2014 ರಂದು ಸಂಜೆ 5.45 ಗಂಟೆಯ ಸಮಯಕ್ಕೆ ಪಿರ್ಯಾದಿದಾರರಾದ ಶ್ರೀ ಲೋಕೇಶ್ ರವರಿಗೆ ಆರೋಪಿ ಗೋಪಾಲ್ ಎಂಬವರು ಮನೆಯ ಪಕ್ಕದಲ್ಲಿದ್ದ ಹಲಸಿನ ಮರ ಕಡಿದ ವಿಚಾರದಲ್ಲಿ ಮತಿಗೆ ಮಾತು ಬೆಳೆದು ಪಿರ್ಯಾಧಿದಾರರಿಗೆ "ನಿನ್ನ ತಂದೆಯ ಮರವ?" ಎಂಬಿತ್ಯಾದಿ ಅವಾಚ್ಯ ಶಬ್ದದಿಂದ ಬೈದು ಹಾಗೊ ಅಲ್ಲೇ ಪಕ್ಕದಲ್ಲಿದ್ದ ಮರದ ಸೊಂಟೆಯಿಂದ ಪಿರ್ಯಾದಿದಾರರ ಕೈಗೆ ಹಾಗೂ ಮರ್ಮಾಂಗಕ್ಕೆ ಸೊಂಟೆಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ.

 

9.ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 02-08-2014 ರಂದು ಸಂಜೆ 5.45 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಪ್ರಾಂತ್ಯ ಗ್ರಾಮದ ಮಸ್ತಿಕಟ್ಟೆ  ಶಾಲಾ ಬಳಿ ಎಂಬಲ್ಲಿ ಪಿರ್ಯಾಧಿದಾರರಾದ ಶ್ರೀ ಗೋಪಾಲ ರವರನ್ನು ಆರೊಪಿ ಲೋಕೇಶ್ ಎಂಬವರು ತಡೆದು ನಿಲ್ಲಿಸಿ "ನೀನು ಬರೀ ಹಲಸಿನ ಮರ ಕಡಿದ ಬಗ್ಗೆ ನನಗೆ ಕೇಳುತ್ತೀಯ ನಿನ್ನ ಅಪ್ಪನ ಮರನ" ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಪಿರ್ಯಾಧಿದಾರರ ಬಲ ಕೆನ್ನೆಗೆ ಹೊಡೆದು ಇದನ್ನು ನೋಡಿದ ಪಿರ್ಯಾಧಿದಾರರ ಮಗಳು ವಸಂತಿ ಎಂಬವಳು ತಡೆಯಲು ಹೋದಾಗ ಅವಳಿಗೊ ಕೂಡಾ ಬಲವಾಗಿ ಎಡಕುತ್ತಿಗೆಗೆ ತಲೆಯ ಜುಟ್ಟನ್ನು ಹಿಡಿದು ಹೊಡೆದಿರುತ್ತಾನೆ, ಅಲ್ಲದೇ ನಿಮ್ಮನು ಮುಂದಕ್ಕೆ ನೋಡಿಕೋಳ್ಳುತ್ತೇನೆ ಎಂಬುದಾಗಿ ಜೀವಬೆದರಿಕೆ ಹಾಕಿರುವುದಾಗಿದೆ.

 

10.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದಿದಾರರಾದ ಶ್ರೀ ಉಮೇಶ್ ಕುಮಾರ್ ರವರ ತಮ್ಮ ಮಧುಸೂಧನ್ 25 ವರ್ಷ ಎಂಬವರು ದಿನಾಂಕ: 01/08/2014 ರಂದು ಸಂಜೆ 4.00 ಗಂಟೆಗೆ ತನ್ನ ಮನೆಯಾದ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಹನುಮಂತ ದೇವಸ್ಥಾನದ ಬಳಿ ಇರುವ ಮಾರದಾಂಬಿಕಾ ನಿಲಯ ಎಂಬಲ್ಲಿಂದ ಮಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದವನು ರಾತ್ರಿಯಾದರೂ ಮನೆಗೆ ಬಾರದೇ ಇದ್ದು, ಬಗ್ಗೆ ಆತನ ಸ್ನೇಹಿತರಲ್ಲಿ, ಸಂಬಂಧಿಕರಲ್ಲಿ ವಿಚಾರಿಸಿದಾಗ ಆತನ ಬಗ್ಗೆ ಯಾವುದೇ ಸುಳಿವು ಸಿಗದೇ ಇದ್ದು, ಅಲ್ಲದೇ ದಿನಾಂಕ 02-08-2014 ರಂದು ಬೆಳಿಗ್ಗೆ ಕೂಡಾ ಹುಡುಕಾಡಿ ಪತ್ತೆಯಾಗದೇ ಇರುವುದಾಗಿದೆ.

 

11.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 31/07/2014 ರಂದು ಪಿರ್ಯಾಧಿದಾರರಾದ ಶ್ರೀ ಇಬ್ರಾಹಿಂ ರಝೀನ್ ರವರು ಮಂಗಳೂರಿನಿಂದ ಗುರುಪುರ ಕೈಕಂಬ ಕಡೆಹೋಗುವ ಜಯರಾಜ ಬಸ್ಸೊಂದು  ಬಂಟ್ಸ್ ಹಾಸ್ಟೆಲ್ ಬಸ್ಸು ನಿಲ್ದಾಣದ ಬಳಿ ಬಂದು ನಿಂತಾಗ  ಮನೆಗೆ ಹೋಗುವರೇ ಕೆಎ 19 ಡಿ 3809ನೇ ನಂಬರಿನ ಬಸ್ಸಿನಲ್ಲಿ  ಮಂಗಳೂರಿನಿಂದ ಹತ್ತಿದ್ದು, ಬಸ್ಸಿನಲ್ಲಿ ಸೀಟು ಇಲ್ಲದೇ ಇದ್ದುದರಿಂದ ಬಸ್ಸಿನ ಹಿಂಬಾಗಿಲಿನ ಬದಿಯ ಒಳರಾಡನ್ನು ಹಿಡಿದು ನಿಂತು ಪ್ರಯಾಣಿಸಿಕೊಂಡು ಬರುತ್ತಿರುವಾಗ ಬಸ್ಸಿನ ಚಾಲಕನು ತನ್ನ ಬಾಬ್ತು ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಮಂಗಳೂರಿನಿಂದ  ಗುರುಪುರ-ಕೈಕಂಬ ಕಡೆಗೆ ಬರುತ್ತಿರುವಾಗ ಗುರುಪುರ ಅಣೆ (ಸೇತುವೆ) ಎಂಬಲ್ಲಿನ ತಿರುವುನಲ್ಲಿ ಸಂಜೆ ಸುಮಾರು 4-30 ಘಂಟೆಗೆ ಒಮ್ಮೆಲೇ ವೇಗವಾಗಿ ಚಲಾಯಿಸಿದ ಪರಿಣಾಮ ಬಸ್ಸಿನ ಒಳಗಿನಿಂದ ಕೆಳಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ, ಕೆನ್ನೆಗೆ, ಕಣ್ಣಿನ ಬದಿಗೆ, ಬಲಗೈ, ಕಾಲುಗಳಿಗೆ ತರಚಿದ ಹಾಗೂ ರಕ್ತಗಾಯವಾಗಿದ್ದು ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಹಾಗೂ. ಪಿರ್ಯಾಧಿದಾರರಿಗೆ ಬಸ್ಸಿನವರು ಖರ್ಚಿಗೆ ಹಣ ನೀಡುವುದಾಗಿ ಹೇಳಿ ಇದೂವರೆಗೂ ಬಾರದೇ ಇದ್ದುದರಿಂದ ದೂರು ನೀಡುವರೇ ತಡವಾಗಿರುತ್ತದೆ.

 

12.ಬಜ್ಪೆ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 01-08-2014 ರಂದು ಪಿರ್ಯಾದಿದಾರರಾದ ಶ್ರೀ ಚಂದ್ರಶೇಖರ ರವು ತನ್ನ ಬಾಬ್ತು ಮೋಟಾರು ಸೈಕಲ್ ಕೆಎ 19 ಇಕೆ 9861 ನೇದರಲ್ಲಿ ತನ್ನ ಮಗ ದಿಶಾಂತ (3.5 ವರ್ಷ) ಎಂಬುವನನ್ನು ಕುಳ್ಳಿರಿಸಿ ಗುರುಪುರದಿಂದ ಮಿಜಾರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸೂರಲ್ಪಾಡಿ ಎಂಬಲ್ಲಿಗೆ ಸುಮಾರು 11-00 ಗಂಟೆಗೆ ತಲುಪುವಾಗ ಮೂಡಬಿದ್ರೆ ಕಡೆಯಿಂದ ಮಂಗಳೂರು ಕಡೆಗೆ ಓಮ್ನಿ ಕಾರು ಚಾಲಕನು ತನ್ನ ಬಾಬ್ತು ಕೆಎ 19 ಎಮ್ಎ-4289 ನೇ ಓಮ್ನಿ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಮೋಟಾರು ಸೈಕಲಿಗೆ ಡಿಕ್ಕಿ ಹಡೆದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ, ಬಲಕೈ ಕಾಲಿಗೆ ರಕ್ತಗಾಯವಾಗಿದ್ದು, ಮಗನಾದ ದಿಶಾಂತ ಎಂಬಾತನಿಗೆ ತಲೆಗೆ, ಬಲಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ  ತೇಜಸ್ವಿನಿ ಆಸ್ಪತ್ರೆ ಮಂಗಳೂರಿನಲ್ಲಿ ಒಳರೋಗಿಯಾಗಿ ದಾಖಲಾಗಿತ್ತಾರೆ.  ಅಲ್ಲದೆ ಪಿರ್ಯಾದಿದಾರರು ಓಮ್ನಿ ಕಾರಿನಲ್ಲಿದ್ದ ಜೀನತ್ ಎಂಬುವವರಿಗೂ ಗಾಯವಾದ ಬಗ್ಗೆ ತಿಳಿದು ಬಂದಿರುತ್ತದೆ.

 

13.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ 03-8-2014 ರಂದು ಪಿರ್ಯಾದಿದಾರರಾದ ಶ್ರೀಮತಿ ಪ್ರೇಮಾ ಶೆಟ್ಟಿ ರವರು ತೊಕ್ಕೊಟ್ಟು ಚಾವಡಿ ಹಾಲ್ನಲ್ಲಿ ಆಟಿ ತಿಂಗಳ ಪ್ರಯುಕ್ತ ಬಂಟ್ಸ್ರವರ ಆಟಿ ಕಾರ್ಯಕ್ರಮ ಇದ್ದುದರಿಂದ ಬೆಳಿಗ್ಗೆ ತೊಕ್ಕೊಟ್ಟು ಚಾವಡಿ ಹಾಲ್ಗೆ ಬಂದಿದ್ದು ಚಾವಡಿ ಹಾಲ್ನಲ್ಲಿ ಕಾರ್ಯಕ್ರಮ ಮುಗಿಸಿ ಪಿರ್ಯಾಧಿ ಮತ್ತು ಪಿರ್ಯಾದಿ  ಗಂಡನ  ತಮ್ಮನ ಪತ್ನಿಯಾದ ಶ್ರೀಮತಿ  ಪ್ರೇಮಾವತಿ ರವರೊಂದಿಗೆ ವಾಪಸ್ ಮನೆಗೆ ಹೋಗಲು ಬಸ್‌‌ನಲ್ಲಿ ಕೋಟೆಕಾರ್ನೂರ್ಮಹಲ್ಬಸ್ಸ್ಟಾಪ್ನಲ್ಲಿ ಇಳಿದು ನಡೆದುಕೊಂಡು  ಹೋಗುತ್ತಾ ಮಾಡೂರು ಭಗವತಿ ದೇವಸ್ಥಾನದ ಕಡೆಗೆ  ಹೋಗುವ ರಸ್ತೆಯಲ್ಲಿ  ಸಮಯ ಸುಮಾರು ಸಂಜೆ 3-00 ಗಂಟೆಗೆ ಪಿರ್ಯಾದಿಯ ಹಿಂದಿನಿಂದ ಮುಂದುಗಡೆ ಮೋಟಾರ್ಬೈಕನ್ನು ಇಬ್ಬರು ಚಲಾಯಿಸಿಕೊಂಡು ಹೋದವರು ವಾಪಸ್ ಮೋಟಾರ್ಬೈಕನ್ನು ಹಿಂದಕ್ಕೆ ತಿರುಗಿಸಿ ಪಿರ್ಯಾಧಿ ಹತ್ತಿರಕ್ಕೆ ಬಂದು ಮೋಟಾರ್ಬೈಕ್ನಲ್ಲಿ ಹಿಂದೆ ಕುಳಿತಿದ್ದವನು ಪಿರ್ಯಾದಿ  ಕುತ್ತಿಗೆಗೆ  ಕೈ ಹಾಕಿ  ಕುತ್ತಿಗೆಯಲ್ಲಿ ಧರಿಸಿಕೊಂಡಿದ್ದ ಕರಿಮಣಿ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿರುತ್ತಾರೆ.  ಅವರುಗಳು ಮೋಟಾರ್ಬೈಕನ್ನು ಚಲಾಯಿಸಿಕೊಂಡು ರಾಷ್ರ್ಷೀಯ ಹೆದ್ದಾರಿಯಲ್ಲಿ  ಪರಾರಿಯಾಗಿರುತ್ತಾರೆ. ಪಿರ್ಯಾದಿ  ಕುತ್ತಿಗೆಯಿಂದ ಎಳೆದುಕೊಂಡು ಹೋದ ಚಿನ್ನದ ಕರಿಮಣಿ ಸರವು ಎರಡು ಎಳೆಯ ಹಾಗು ಎರಡು ಚಿಕ್ಕ ಚಿಕ್ಕ ಲಕ್ಷ್ಮೀ ದೇವರ ಪೆಂಡೆಂಟ್ ಇರುವ  ಚಿನ್ನದ ಕರಿಮಣಿ ಸರ ಆಗಿದ್ದು, ಇದರ ತೂಕ ಅಂದಾಜು ಸುಮಾರು 5 ಪವನು ಆಗಬಹುದು ಹಾಗು ಅಂದಾಜು ಮೌಲ್ಯ ರೂ 1,20,000/- ಆಗ ಬಹುದು.

 

14.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾದುದಾರರಾದ ಶ್ರೀ ರಮೇಶ್ ರವರ ಅಕ್ಕನ 3ನೇ ಹೆಣ್ಣುಮಗು ಸ್ವಲ್ಪ ಹುಷಾರಿಲ್ಲದ ಕಾರಣ ಮಗುವನ್ನು ಉಜಿರೆ ಎಸ್ಡಿಎಂ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಿ ಅಲ್ಲಿ ಗುಣಮುಖ ಹೊಂದದೆ ಇರುವುದರಿಂದ ದಿನಾಂಕ 03/08/2014 ರಂದು ಸಂಜೆ 05-00 ಗಂಟೆಗೆ ಸರಿಯಾಗಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯಲ್ಲಿರುವ ಕೆಎಸ್ಹೆಗ್ಡೆ ಆಸ್ಪತ್ರೆಗೆ ತಂದು ತೋರಿಸಿದ್ದು ನಂತರ ರಶೀದಿಯನ್ನು ಮಾಡಿಸಿದ್ದು ಮಗುವನ್ನು ತಪಾಸಣೆ ಮಾಡುವರೇ ನರ್ಸ್ಮತ್ತು ಡಾಕ್ಟರ್ರವರುಗಳು ರೂಮ್ಗೆ ಕರೆದುಕೊಂಡು ಹೋಗಿ ಅಲ್ಲಿ ಮಗುವನ್ನು ತಪಾಸಣೆ ಮಾಡಿ ಇಂಜೆಕ್ಷನ್ಮುಖಾಂತರ ಯಾವುದೋ ಔಷದಿಯನ್ನು ನೀಡಿದ್ದರು ಕೆಲವೇ ಕ್ಷಣಗಳಲ್ಲಿ ಮಗುವಿನ ಬಾಯಿಯಿಂದ ಬಿಳಿ ನೊರೆ ಹಾಗೂ ಹೊಟ್ಟೆಯು ಉಬ್ಬರಿಸಿ ಕಣ್ಣುಗಳು ಮುಚ್ಚಿಕೊಂಡವು ನಂತರ ಪಿರ್ಯಾದುದಾರರು ಮತ್ತು ಅವರ ಅಕ್ಕ ಹಾಗೂ ಬಾವ, ಅಣ್ಣಂದಿರುಗಳನ್ನು ಕೂಡಲೇ ಹೊರಗೆ ಹೊಗುವಂತೆ ತಿಳಿಸಿದ್ದು ಇವರುಗಳು ಹೊರಗೆ ಬಂದಿರುತ್ತಾರೆ ನಂತರ ನರ್ಸ್ಒಬ್ಬಳು ಬಂದು ಇವರ ಮಗು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮಗುವಿನ ಮರಣಕ್ಕೆ ಸದ್ರಿ ಆಸ್ಪತ್ರೆಯ ಕರ್ತವ್ಯ ನಿರತ ನರ್ಸ್ಹಾಗೂ ವೈದ್ಯರು ಕಾರಣರಾಗಿದ್ದು ಅವರ ನಿರ್ಲಕ್ಷತನದಿಂದ ಮಗು ಮೃತಪಟ್ಟಿರುವುದಾಗಿದೆ.

 

15.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 29.07.2014 ರಂದು ಮಂಗಳೂರು ನಗರದ ಬೊಂಡಂತಿಲ ಗ್ರಾಮದ ವಾಮಂಜೂರು ನಿರಳ್ಳ ಎಂಬಲ್ಲಿ ಮೆಕ್ವಿನ್ ಕೊರ್ಡೇರೋ ಎಂಬವರ ಮನೆಯ ಮುಂಭಾಗ ರಸ್ತೆಯ ಬದಿಯಲ್ಲಿ ಪಿರ್ಯಾದಿದಾರರಾದ ಶ್ರೀ ಚಿತ್ರಾಕ್ಷ ಎಂಬವರು ತನ್ನ ಬಾಬ್ತು ಹೋಂಡಾ ಆಕ್ಟೀವಾ ಸ್ಕೂಟರ್ KA-19-X-4022ನೇ ದ್ವಿಚಕ್ರ ವಾಹನವನ್ನು ಪಾರ್ಕ್ ಮಾಡಿ ಮರುದಿನ ತಾರೀಕು 30.07.2014 ರಂದು ಬೆಳಿಗ್ಗೆ ಸುಮಾರು 07:00 ಗಂಟೆ ಸಮಯಕ್ಕೆ ನೋಡಿದಾಗ ತನ್ನ ಬಾಬ್ತು ದ್ವಿಚಕ್ರ ವಾಹನ ಕಾಣೆಯಾಗಿರುವುದಾಗಿಯೂ ಅಕ್ಕಪಕ್ಕದಲ್ಲಿ ವಿಚಾರಿಸಿ ನಂತರ ದಿನದ ತನಕ ವಾಮಂಜೂರು, ಗುರುಪುರ, ಮಂಗಳೂರು ನಗರ, ಬಂಟ್ವಾಳ, ಬೆಂಜನಪದವು ಹಾಗೂ ನೀರು ಮಾರ್ಗ ಪರಿಸರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದುದರಿಂದ ಇದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿಯೂ ಕಳವಾದ ದ್ವಿಚಕ್ರ ವಾಹನದ ಅಂದಾಜು ಮೌಲ್ಯು ಸುಮಾರು 20000 ರೂ. ಆಗಬಹುದು.

 

16.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ಪಿರ್ಯಾಧಿದಾರರಾದ ಶ್ರೀ ನಿರಂಜನ್‌‌‌ ಶೆಟ್ಟಿ ಯವರು  ಉಳಾಯಿಬೆಟ್ಟು ಸಾಲೆ ಶ್ರೀ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದು  ದಿನಾಂಕ: 02.08.2014 ರಂದು ದೇವಸ್ಥಾನದ ಮೆನೇಜರ್‌‌ ಆದ ಕೃಷ್ಣ ಕಾಂಚನ್‌‌ ರವರು  ದೇವಸ್ಥಾನಕ್ಕೆ ಬೆಳಿಗ್ಗೆ  ಬಂದು ಪೂಜೆ ಪುರಸ್ಕಾರ ಆದ ನಂತರ ರಾತ್ರಿ ಸುಮಾರು 8.00 ಗಂಟೆಗೆ  ಬೀಗ ಹಾಕಿ ಹೋಗಿದ್ದು ದಿನಾಂಕ:03.08.2014  ರಂದು ಬೆಳಿಗ್ಗೆ ಸುಮಾರು  5.45 ಗಂಟೆಗೆ  ಮನೆಯಲ್ಲಿದ್ದಂತೆ ದೇವಸ್ಥಾನದ ಮ್ಯಾನೇಜರ್‌‌ ಆದ ಕೃಷ್ಣ ಕಾಂಚನ್‌‌ ರವರು ಪಿರ್ಯಾಧಿದಾರರಿಗೆ ಫೋನ್‌‌ ಮಾಡಿ  ದೇವಸ್ಥಾನದ ಮುಂಬಾಗದ  ಬೀಗವನ್ನು ಯಾರೋ ಕಳ್ಳರು ಮುರಿದು ಒಳ ಪ್ರವೇಶಿಸಿ  ಹರಿಕೆ ಡಬ್ಬಿಯ ಬೀಗವನ್ನು ಮತ್ತು ದೇವಸ್ಥಾನಕ್ಕೆ ಸಂಬಂಧಪಟ್ಟ ಕಚೇರಿಯ  ಬೀಗವನ್ನು ಕೂಡ  ಯಾವುದೋ ಬಲವಾದ ಆಯುಧದಿಂದ ಮುರಿದು  ಕಚೇರಿಯ ಕಪಾಟಿನ ಬಾಗಿಲು ಮತ್ತು ಲಾಕರ್‌‌ ಬೀಗವನ್ನು ಬಲಾತ್ಕಾರವಾಗಿ ತೆರೆದು  ಲಾಕರ್ನಲ್ಲಿದ್ದ  ರೂ   70000/-  ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಮಾಹಿತಿ ನೀಡಿದಂತೆ ಪಿರ್ಯಾದಿದಾರರು ತಕ್ಷೀರು ಸ್ಥಳಕ್ಕೆ ಭೇಟಿ ನೀಡಿ ಬಗ್ಗೆ ಠಾಣೆಯಲ್ಲಿ ಹಾಜರಾಗಿ ದೂರು ನೀಡಿರುವುದಾಗಿದೆ.

 

17.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ ಪ್ರಕರಣ : ದಿನಾಂಕ: 03.08.2014 ರಂದು ಪಿರ್ಯಾದುದಾರರಾದ ಶ್ರೀ ಲತೀಶ್ ಎಂಬವರು ಆತನ ಗೆಳೆಯ ಮನೋಜ್ ಎಂಬಾತನ KA-19-W-8991 ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಸದ್ರಿ ಬೈಕನ್ನುಮನೋಜನು ಅತೀವೇಗ ಹಾಗೂ ಅಜಾಗರೂಕತೆಯತಿಂದ ಚಲಾಯಿಸುತ್ತಾ ಪಡೀಲಿನಿಂದ ಬಜಾಲ್ ಪಕ್ಕಲಡ್ಕ ಕಡೆಗೆ ಹೋಗುತ್ತಿರುವ ಸಮಯ ಸಂಜೆ 4:00 ಗಂಟೆಗೆ ಬಜಾಲ್ ಆದರ್ಶ ಶಾಲೆ ಎದುರುಗಡೆ ತಲುಪಿದಾಗ ತಿರುವಿನಲ್ಲಿ ಮನೋಜನು ಒಮ್ಮೇಲೆ ಬೈಕಿನ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಅದರಲ್ಲಿದ್ದವರ ಸಮೇತ ರಸ್ತೆಗೆ ಮಗುಚಿ ಬಿದ್ದಿದ್ದು ಸ್ಕಿಡ್ ಆದ ಬೈಕ್ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಒಂದು ಜೀಪಿಗೆ ಢಿಕ್ಕಿ ಹೊಡೆದಿದ್ದು, ಅಪಘಾತದ ಪರಿಣಾಮ ಪಿರ್ಯಾದಿದಾರರ ತಲೆಗೆ, ಎಡಕೈಗೆ, ಕಾಲಿಗೆ ತರಚಿದ ರಕ್ತ ಗಾಯ ಹಾಗೂ ಆರೋಪಿ ಮನೋಜ್ ರವರ ತಲೆಗೆ ತೀವ್ರ ತರಹದ ಗುದ್ದಿದ ಗಾಯ ಮತ್ತು ಕಾಲಿಗೆ ರಕ್ತ ಗಾಯಗೊಂಡಿದ್ದು, ಸ್ಥಳೀಯರು ಉಪಚರಿಸಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲುಗೊಳಿಸಿರುತ್ತಾರೆ.

No comments:

Post a Comment